ಪದ ತಂತ್ರಾಂಶ-ಹೊಚ್ಚ ಹೊಸ ಆವೃತ್ತಿಯಲ್ಲಿ ಏನೇನಿದೆ?
ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ 'ಪದ' ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ಗೆ ಲಭ್ಯವಿದೆ. ಈ ತಂತ್ರಾಂಶದ ಹೊಸ ಆವೃತ್ತಿ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಕಂಪ್ಯೂಟರಲ್ಲಿ ನೇರವಾಗಿ ಕನ್ನಡ ಟೈಪಿಸಲು ಮತ್ತು ವರ್ಡ್ ಪ್ರೊಸೆಸಿಂಗ್ ಮಾಡಲು ಬೇರೆ ಬೇರೆ ತಂತ್ರಾಂಶಗಳು ಅನೇಕ ವರ್ಷಗಳಿಂದ ಬಳಕೆಯಾಗುತ್ತಿವೆ. ತಮ್ಮ ಅನುಕೂಲಕ್ಕೆ ಹೊಂದಿಕೆಯಾಗುವಂತೆ ಜನರು ಅವುಗಳನ್ನು ಬಳಸುತ್ತಿದ್ದಾರೆ. ಈ ಸಾಲಿನಲ್ಲಿ ಬಳಕೆಯಾಗುತ್ತಿರುವ ಜನಪ್ರಿಯ ತಂತ್ರಾಂಶ 'ಪದ'.
ಸುಮಾರು ಹತ್ತು ವರ್ಷಗಳ ಹಿಂದೆ ವಿಂಡೋಸ್‌ಗಾಗಿ ಬಿಡುಗಡೆಯಾದ 'ಪದ' ತಂತ್ರಾಂಶವು ಬಹಳಷ್ಟು ಅನುಕೂಲಕರ ಸೌಲಭ್ಯಗಳನ್ನು ಹೊಂದಿತ್ತು. ನಂತರದ ವರ್ಷಗಳಲ್ಲಿ ಲಿನಕ್ಸ್ ಆವೃತ್ತಿ ಕೂಡ ಬಿಡುಗಡೆಯಾಗಿತ್ತು. ಇದೀಗ ಆ ತಂತ್ರಾಂಶದ ಹೊಸ ಆವೃತ್ತಿಯು ಬಿಡುಗಡೆಯಾಗಿದೆ. ವಿವಿಧ ಕ್ಷೇತ್ರಗಳ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಹಲವು ಹೊಸ ಸೌಲಭ್ಯಗಳನ್ನು ಇದರಲ್ಲಿ ಅಳವಡಿಸಲಾಗಿರುವುದು ಇದರ ವಿಶೇಷ. ಈ 5.x.1 ಆವೃತ್ತಿಯಲ್ಲಿ ಹೊಸದಾಗಿ ಬಂದಿರುವ ಕೆಲವು ಮುಖ್ಯ ಸೌಲಭಗಳೆಂದರೆ

1. ಇನ್ ಸ್ಕ್ರಿಪ್ಟ್ ಕೀಬೋರ್ಡ್
2. IMEಯಲ್ಲಿ ಯುನಿಕೋಡ್ ಜೊತೆ ANSI ಆಯ್ಕೆ
3. IMEಯಲ್ಲೆ ನೇರ ANSI ಯಿಂದ ಯುನಿಕೋಡ್ ಪರಿವರ್ತನೆಗೆ ಅವಕಾಶ
4. ಪದ ಪ್ಯಾಡ್ ಮೂಲಕ ಹಳೆಯ ANSI ಪಠ್ಯದ ಫೈಲುಗಳನ್ನು ಒಟ್ಟಿಗೇ ಯುನಿಕೋಡ್ ಪಠ್ಯದ ಫೈಲುಗಳಾಗಿ ಪರಿವರ್ತಿಸುವ ಸೌಲಭ್ಯ.
5. ಟೈಪಿಂಗ್ ಕಲಿಕೆಗೆ ಟ್ಯೂಟರ್
ಕೆಲವೊಂದು ಗ್ರಾಫಿಕ್ ಡಿಸೈನಿಂಗ್ ಟೂಲುಗಳಲ್ಲಿ ಮತ್ತು ಮುಖ್ಯವಾಗಿ ಮುದ್ರಣಕ್ಕೆ ಬೇಕಾಗುವಂತೆ ಪುಸ್ತಕ ವಿನ್ಯಾಸದ ಹಳೆಯ ಡಿಟಿಪಿ ತಂತ್ರಾಂಶಗಳಿಗೆ ಹಳೆಯ 'ನುಡಿ' ತಂತ್ರಾಂಶದಲ್ಲಿ ಅಥವಾ ಇತರೆ ANSI ಫಾಂಟುಗಳಲ್ಲಿ ಬರೆದ ಪಠ್ಯವೇ ಬೇಕಾಗಿರುವುದರಿಂದ 'ಪದ'ದಲ್ಲಿ ಕೊಡಲಾಗಿರುವ 'ANSI' ಆಯ್ಕೆಯು ಪ್ರಯೋಜನವಾಗುತ್ತದೆ.
ಪೋರ್ಟೆಬಲ್ ಆವೃತ್ತಿಯ ವಿಶೇಷವೇನು?:
ಈ ಪೋರ್ಟೆಬಲ್ ಆವೃತ್ತಿಯ ವಿಶೇಷವೆಂದರೆ ಇದನ್ನು ಕಂಪ್ಯೂಟರಲ್ಲಿ ಇನ್ ಸ್ಟಾಲ್ ಮಾಡಿಕೊಳ್ಳುವ ಅಗತ್ಯವಿಲ್ಲ. ಡೌನ್ಲೋಡ್ ಮಾಡಿಟ್ಟುಕೊಂಡರೆ ಸಾಕು. ಅದರಲ್ಲೇ ತೆರೆದು ಬಳಸಬಹುದು. ಬೇಕಾದರೆ ಒಂದು ಪೆನ್ ಡ್ರೈವಲ್ಲಿ ಹಾಕಿಟ್ಟುಕೊಂಡರೆ ಯಾವ ಕಂಪ್ಯೂಟರಲ್ಲಾದರೂ ನೇರವಾಗಿ ಬಳಸಿಕೊಳ್ಳಬಹುದು. ಹಾಗಂತ ಇನ್ ಸ್ಟಾಲ್ ಮಾಡಿಕೊಳ್ಳುವ ಆವೃತ್ತಿ 4.1 ಸಹ ಬೇಕಾದರೂ ಇದೆ. ವಿಂಡೋಸ್ & ಲಿನಾಕ್ಸ್ ಎರಡಕ್ಕೂ ಇದೆ. ಅದರ ಹೊಸ ಆವೃತ್ತಿಯೂ ಅಭಿವೃದ್ಧಿಗೊಳ್ಳುತ್ತಿದೆ.
ಪ್ರಸ್ತುತ ಇದರಲ್ಲಿ ನುಡಿ (ಕೆಪಿ ರಾವ್), ಪೊನೆಟಿಕ್, ಟ್ರಾನ್ಸ್ಲಿಟೆರೇಶನ್, ಇನ್ ಸ್ಕ್ರಿಪ್ಟ್ ಕೀಬೋರ್ಡ್ ಲೇಔಟುಗಳಿವೆ, ನೇರ ಪಿಡಿಎಫ್ ಕನ್ವರ್ಶನ್ ಮಾಡಬಹುದು, ವಿವಿಧ ಫಾಂಟುಗಳನ್ನು ಹಾಕಿಕೊಳ್ಳಬಹುದು.
ಇದರ ಹೊರತಾಗಿ ಇನ್ನಿತರ ಸೌಲಭ್ಯಗಳೆಂದರೆ ಸ್ಪೆಲ್ ಚೆಕರ್, ಪದ ಅರ್ಥ, ಆಟೋ ಕಂಪ್ಲೀಟ್, ನಿಘಂಟು , ಹಲವು ಫೈಲ್ ಮಾದರಿಗಳಲ್ಲಿ ಉಳಿಸಲು(save as) ಅವಕಾಶ, ಹುಡುಕು ಮತ್ತು ಬದಲಿಸು, ಲಿಪಿ ಪರಿವರ್ತಕ (Font convert) ಮುಂತಾದವು. ಬರಹ, ನುಡಿ ಮುಂತಾದ ತಂತ್ರಾಂಶಗಳಲ್ಲಿ ಉಳಿಸಿಟ್ಟಿರುವ ಕಡತಗಳನ್ನು ನೇರವಾಗಿ ಇದರಲ್ಲಿ ತೆರೆಯಬಹುದು. ಅದು ಯುನಿಕೋಡ್ ಅಕ್ಷರಗಳಾಗಿ ತೆರೆದುಕೊಳ್ಳುತ್ತದೆ. ಕನ್ನಡ ಮಾತ್ರವಲ್ಲದೆ ಇತರ ಹಲವು ಭಾಷೆಗಳ ಲಿಪಿಗಳನ್ನೂ ಟೈಪಿಸಬಹುದು.
ಒಟ್ಟಾರೆ ಬಹುತೇಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ಸೌಲಭ್ಯಗಳು ಈ ತಂತ್ರಾಂಶದಲ್ಲಿ ಇವೆ. ಯಾವ ತೊಂದರೆಯಿಲ್ಲದೆ ಎಲ್ಲೆಡೆ ಬಳಸಬಹುದು ಎಂದು ಹಲವು ವರ್ಷಗಳಿಂದ ಇದರ ಬಳಸುತ್ತಿರುವವರ ಅಭಿಪ್ರಾಯವಾಗಿದೆ. ಈ ತಂತ್ರಾಂಶದ ಅಭಿವೃದ್ಧಿಗಾರರು ಕನ್ನಡಿಗ ಲೋಹಿತ್ ಡಿ. ಎಸ್. ಅವರು ದಾವಣಗೆರೆ ಮೂಲದ ಸಾಫ್ಟ್‌ವೇರ್ ತಂತ್ರಜ್ಞ. https://www.pada.pro/ ತಾಣದಿಂದ ತಂತ್ರಾಂಶವನ್ನುಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಬಳಸಿಕೊಳ್ಳಬಹುದು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications