Operation Ganga: ಉಕ್ರೇನ್‌ನಿಂದ ಭಾರತೀಯರು ಕರೆತರುವ 46 ವಿಮಾನಗಳ ಪೂರ್ಣ ವಿವರ ಇಲ್ಲಿದೆ
ನವದೆಹಲಿ, ಮಾರ್ಚ್ 02: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಮಧ್ಯೆ, ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತವು ಕನಿಷ್ಠ 46 ವಿಮಾನಗಳನ್ನು ಕಳುಹಿಸುತ್ತಿದೆ. ಸಭಾರತದ ಸ್ಥಳಾಂತರಿಸುವ ಯೋಜನೆ, "ಆಪರೇಷನ್ ಗಂಗಾ" ಅಡಿಯಲ್ಲಿ, 46 ವಿಮಾನಗಳನ್ನು ಮಾರ್ಚ್ 8 ರವರೆಗೆ ನಿಗದಿಪಡಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಬುಕಾರೆಸ್ಟ್‌ನಿಂದ 29, ಬುಡಾಪೆಸ್ಟ್‌ನಿಂದ 10, ರ್ಜೆಸ್ಜೋವ್‌ನಿಂದ ಆರು ಮತ್ತು ಕೊಸಿಸ್‌ನಿಂದ ಒಂದು ವಿಮಾನ ಭಾರತೀಯರನ್ನು ಹೊತ್ತು ಬರಲಿದೆ. ಭಾರತೀಯ ವಾಯುಪಡೆಯ (IAF) C-17 ವಿಮಾನವು ಭಾರತೀಯ ನಾಗರಿಕರನ್ನು ವಾಪಸು ಕರೆತರಲು ರೊಮೇನಿಯಾಗೆ ಬುಧವಾರ ಬೆಳಿಗ್ಗೆ 4 ಗಂಟೆಗೆ ಹಾರಾಟ ನಡೆಸಿದೆ. ಏರ್ ಇಂಡಿಯಾ (250), ಏರ್ ಇಂಡಿಯಾ ಎಕ್ಸ್‌ಪ್ರೆಸ್ (180), ಇಂಡಿಗೋ (216), ಮತ್ತು ಸ್ಪೈಸ್‌ಜೆಟ್ (180) ಈ "ಆಪರೇಷನ್ ಗಂಗಾ" ಯೋಜನೆಯಲ್ಲಿ ಜೊತೆಯಾಗಿದೆ.
ನಿನ್ನೆ, ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಿಂದ ಮೂರು ವಿಮಾನಗಳು 616 ಭಾರತೀಯ ಪ್ರಜೆಗಳೊಂದಿಗೆ ಭಾರತಕ್ಕೆ ಬಂದವು. ಫೆಬ್ರವರಿ 24 ರಂದು ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ, ಸಂಘರ್ಷ ಪೀಡಿತ ಉಕ್ರೇನ್‌ನಿಂದ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಭಾರತ ಸರ್ಕಾರವು 'ಆಪರೇಷನ್ ಗಂಗಾ'ವನ್ನು ಪ್ರಾರಂಭಿಸಿತು. 'ಆಪರೇಷನ್ ಗಂಗಾ' ಮಿಷನ್‌ನ ಭಾಗವಾಗಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್‌ನಲ್ಲಿ ಬಾಕಿಯಾಗಿರುವ ಭಾರತೀಯರನ್ನು ಉಚಿತವಾಗಿ, ಸರ್ಕಾರದ ವೆಚ್ಚದಲ್ಲಿ ವಾಪಾಸ್ ಕರೆತರಲಾಗುತ್ತದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 219 ಭಾರತೀಯ ಪ್ರಜೆಗಳನ್ನು ಹೊತ್ತು ಮೊದಲ ವಿಮಾನ ಫೆಬ್ರವರಿ 26 ರಂದು ಮುಂಬೈಗೆ ಬಂದಿಳಿಯಿತು. ಸದ್ಯ ಹಲವಾರು ಬಾರಿ ಈ ಕಾರ್ಯಾಚರಣೆ ನಡೆದಿದೆ.

ಪೋಲೆಂಡ್, ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ಗಡಿ ದಾಟಿದ ಬಳಿಕ ಭಾರತೀಯ ಪ್ರಜೆಗಳನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು 24×7 ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಲ್ಡೊವಾ ಮೂಲಕ ಹೊಸ ಮಾರ್ಗವನ್ನು ತೆರೆಯಲಾಗಿದೆ. ಈಗಾಗಲೇ ಎಂಇಎ ತಂಡವು ಮೊಲ್ಡೊವಾದಲ್ಲಿದೆ. ರೊಮೇನಿಯಾ ಮೂಲಕ ಭಾರತೀಯರನ್ನು ಸ್ಥಳಾಂತರಿಸಲು ತಂಡವು ಸಹಾಯ ಮಾಡಲಿದೆ. ಆಪರೇಷನ್ ಗಂಗಾ ಕಾರ್ಯಾಚರಣೆಗೆ ಸಹಾಯ ಮಾಡಲು ಟ್ವಿಟ್ಟರ್ ಖಾತೆಯನ್ನು ಕೂಡಾ ಆರಂಭ ಮಾಡಲಾಗಿದೆ. (@opganga). ಈ ಟ್ವಿಟ್ಟರ್ ಖಾತೆಯಲ್ಲಿ ಯಾವುದೇ ತುರ್ತು ಮಾಹಿತಿಯನ್ನು ನೀಡಲಾಗುತ್ತದೆ.
ಆಪರೇಷನ್ ಗಂಗಾ ವಿಮಾನದ ವೇಳಾಪಟ್ಟಿ:
ಮಾರ್ಚ್ 2
AI 1942 (ಬುಕಾರೆಸ್ಟ್‌ನಿಂದ) 1130 ಗಂಟೆಗೆ (ಸ್ಥಳೀಯ ಸಮಯ)
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
IAF (ಬುಕಾರೆಸ್ಟ್‌ನಿಂದ) 1130 ಗಂಟೆಗೆ (ಸ್ಥಳೀಯ ಸಮಯ)
SG 9522 (ಬುಡಾಪೆಸ್ಟ್‌ನಿಂದ) 0500 ಗಂಟೆಗೆ (ಸ್ಥಳೀಯ ಸಮಯ)
SG 9524 (ಕೋಸಿಸೆಯಿಂದ) 1750 ಗಂಟೆಗೆ (ಸ್ಥಳೀಯ ಸಮಯ)
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)
6E 12 (ಬುಡಾಪೆಸ್ಟ್‌ನಿಂದ) 1725 ಗಂಟೆಗೆ (ಸ್ಥಳೀಯ ಸಮಯ)
6E 16 (ಬುಡಾಪೆಸ್ಟ್‌ನಿಂದ) 1925 ಗಂಟೆಗೆ (ಸ್ಥಳೀಯ ಸಮಯ)
6E 8386 (ರ್ಜೆಸ್ಜೋವ್‌ನಿಂದ) 1850 ಗಂಟೆಗೆ (ಸ್ಥಳೀಯ ಸಮಯ)
6E 9451 (ರ್ಜೆಸ್ಜೋವ್‌ನಿಂದ) 2050 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಕಾರೆಸ್ಟ್‌ನಿಂದ) 1430 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಕಾರೆಸ್ಟ್‌ನಿಂದ) 1530 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 3
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
IX 1204 (ಬುಕಾರೆಸ್ಟ್‌ನಿಂದ) 1730 ಗಂಟೆಗೆ (ಸ್ಥಳೀಯ ಸಮಯ)
SG 9529 (ಬುಕಾರೆಸ್ಟ್‌ನಿಂದ) 2350 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಡಾಪೆಸ್ಟ್‌ನಿಂದ) 1445 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಡಾಪೆಸ್ಟ್‌ನಿಂದ) 1545 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ರ್ಜೆಸ್ಜೋವ್‌ನಿಂದ) 1850 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ರ್ಜೆಸ್ಜೋವ್‌ನಿಂದ) 2050 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಕಾರೆಸ್ಟ್‌ನಿಂದ) 1430 ಗಂಟೆಗೆ (ಸ್ಥಳೀಯ ಸಮಯ)
ಇಂಡಿಗೋ (ಬುಕಾರೆಸ್ಟ್‌ನಿಂದ) 1530 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 4
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)
SG 9527 (ಬುಕಾರೆಸ್ಟ್‌ನಿಂದ) 2050 ಗಂಟೆಗೆ (ಸ್ಥಳೀಯ ಸಮಯ)
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 5
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 6
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 7
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)
AI 1946 (ಬುಕಾರೆಸ್ಟ್‌ನಿಂದ) 2315 ಗಂಟೆಗೆ (ಸ್ಥಳೀಯ ಸಮಯ)
ಮಾರ್ಚ್ 8
IX 1202 (ಬುಕಾರೆಸ್ಟ್‌ನಿಂದ) 1320 ಗಂಟೆಗೆ (ಸ್ಥಳೀಯ ಸಮಯ)

Click it and Unblock the Notifications