ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷದ ಹೊಸ್ತಿಲಲ್ಲಿ ವಿಚ್ಛೇದನಕ್ಕೇಕೆ ಹುಡುಕಾಟ?

By Prasad
|
Google Oneindia Kannada News

ಹೊಸವರ್ಷ ತನ್ನ 365 ದಿನಗಳ ಪಯಣವನ್ನು ಆರಂಭಿಸುತ್ತಿದ್ದಂತೆ ಜನರು ಕೂಡ ಹೊಸ ಆಶಯ, ಹೊಸ ಕನಸುಗಳೊಂದಿಗೆ ಒಟ್ಟೊಟ್ಟಿಗೆ ಹೆಜ್ಜೆ ಹಾಕುತ್ತಾರೆ. ವರ್ಷಾಂತ್ಯದ ಬಿಸಿ ಅಪ್ಪುಗೆಯ ಜೊತೆ ಜೀವನವನ್ನು ಮತ್ತಷ್ಟು ಸಮೃದ್ಧವಾಗಿ ಕಳೆಯುವ ಆಶಯವೂ ಕುಡಿಯೊಡೆದಿರುತ್ತದೆ.

ಈ ವರ್ಷ ಬೇಕಾದ್ದಾಗಲಿ ತೆಳ್ಳಗಾಗಲೇಬೇಕು, ಸಿಗರೇಟೆಂಬ ಕೆಟ್ಟ ಚಟಕ್ಕೆ ಚಟ್ಟ ಕಟ್ಟಬೇಕು, ಡಿಸೆಂಬರ್ 31ರೊಳಗೆ ಮನೆ ಕಟ್ಟಿ ಒಂದು ಮದುವೆಯನ್ನೂ ಆಗಬೇಕು, ಆಕಾಶ ಕಳಚಿ ಬಿದ್ದರೂ ಚಿಂತೆಯಿಲ್ಲ ನನ್ನವಳಿಗೆ ಐ ಲವ್ ಯೂ ಹೇಳಲೇಬೇಕು, ಸಾಕಷ್ಟು ಹಣ ಉಳಿಸಿ ಒಂದು ವರ್ಲ್ಡ್ ಟೂರ್ ಹೊಡೆಯಬೇಕು...

ಜನರ ಕನಸುಗಳಿಗೆ ಕೊನೆಯೆಲ್ಲಿ? ಬದುಕೆಂದರೆ ಇಷ್ಟೇ ಅಲ್ಲ. ಏನೇನೋ ಹುಡುಕಾಟ, ಮದುವೆಯಾದವರಿಗೆ ಹೆಂಡತಿಯ ಕಾಟ, ತೆವಲು ತೀರಿಸಿಕೊಳ್ಳಲು ತಿಣುಕಾಟ, ಬದುಕು ಸರಿದೂಗಿಸಿಕೊಳ್ಳಲು ಹೆಣಗಾಟ, ಏನೇನೂ ಸಾಧಿಸಲಿಲ್ಲವೆಂಬ ಗೋಳಾಟ, ನೆಟ್ಟಿಗರನ್ನು ಹುಚ್ಚೆಬ್ಬಿಸಿರುವ ಸನ್ನಿ ಲಿಯೋನ್ ಮೈಮಾಟ!

ಬದುಕನ್ನು ಸುಂದರವಾಗಿಸಿಕೊಳ್ಳಲು, ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಅಂತರ್ಜಾಲದಲ್ಲಿ ಹುಡುಕಾಟ ನಡೆದೇ ಇರುತ್ತದೆ. ಹೆಂಡತಿಯನ್ನು ಸಂಪ್ರೀತಗೊಳಿಸುವುದು ಹೇಗೆ ಎಂಬ ಹುಡುಕಾಟಕ್ಕೂ ಉತ್ತರಗಳು ಗೂಗಲ್ ನಲ್ಲಿ ಸಿಗುತ್ತವೆ. ಆದರೆ, 'ಅಮಿಕೇಬಲ್' ಎಂಬ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಜನವರಿಯಲ್ಲಿ ಅತಿಹೆಚ್ಚು ಹುಡುಕಲಾಗುವ ಪದ ಯಾವುದು ಗೊತ್ತೆ?

ಡೈವೋರ್ಸ್ ಪದಕ್ಕಾಗಿ ಹೆಚ್ಚು ಹುಡುಕಾಟ!

ಡೈವೋರ್ಸ್ ಪದಕ್ಕಾಗಿ ಹೆಚ್ಚು ಹುಡುಕಾಟ!

ಡೈವೋರ್ಸ್ ಅಂದ್ರೆ ವಿಚ್ಛೇದನ, ತಲಾಖ್ ತಲಾಖ್ ತಲಾಖ್ ಅಲ್ಲ! ಇದು ಅಚ್ಚರಿ ಬೀಳಿಸುವ ಸಂಗತಿಯಾದರೂ ವಸ್ತುಸ್ಥಿತಿ ಹೀಗೆಯೇ ಇದೆ. ಗೂಗಲ್ ಟ್ರೆಂಡ್ ಪ್ರಕಾರ, 40 ಸಾವಿರಕ್ಕೂ ಹೆಚ್ಚು ಜನರು 'ವಿಚ್ಛೇದನ' ಎಂಬ ಪದಕ್ಕಾಗಿ ಗೂಗಲ್ ನಲ್ಲಿ ಸಾಕಷ್ಟು ಹುಡುಕಾಟ ನಡೆಸುತ್ತಾರೆ. ಡೈವೋರ್ಸ್ ಪದದ ಹುಡುಕಾಟ ಸರಳವಾಗಿದ್ದರೂ, ಅದಕ್ಕಾಗಿ ಜನರು ತೆರುತ್ತಿರುವ ಬೆಲೆ ಮಾತ್ರ ಸಿಕ್ಕಾಪಟ್ಟೆ ದುಬಾರಿ!

ಬದುಕು ಮುರಿದುಕೊಳ್ಳುವ ತವಕವೇಕೆ?

ಬದುಕು ಮುರಿದುಕೊಳ್ಳುವ ತವಕವೇಕೆ?

ಜನವರಿ ಮಾತ್ರವಲ್ಲ, ಕಾಲದ ಗಡಿಯಾರ ಟಿಕ್ ಟಿಕ್ ಅಂತ ಡಿಸೆಂಬರ್ ಕೊನೆಯ ಹಂತ ತಲುಪಿಲುವ ಸಂದರ್ಭದಲ್ಲಿಯೂ ಡೈವೋರ್ಸಿಗಾಗಿ ನೆಟ್ಟಿಗರು ಕುಟ್ಟುತ್ತಿರುತ್ತಾರೆ. ಈ ಟ್ರೆಂಡ್ ಮೇ, ಜೂನ್ ನಲ್ಲಿಯೂ ಕಂಡುಬರುತ್ತಿದೆ. ಅದೇಕೆ ಹೀಗೆ, ಹೊಸವರ್ಷದ ಸಂಭ್ರಮದಲ್ಲಿ ಹೊಸಜೀವನದ ತುಡಿತವಿರಬೇಕಾದಾಗ, ಬದುಕು ಮುರಿದುಕೊಳ್ಳುವ ತವಕವೇಕೆ ಜನರಿಗೆ?

ಕನಸನ್ನು ತಲೆಬುಡ ಮಾಡುವ ಒತ್ತಡಗಳು

ಕನಸನ್ನು ತಲೆಬುಡ ಮಾಡುವ ಒತ್ತಡಗಳು

ಇದಕ್ಕೆ ಕಾರಣಗಳೂ ಇಲ್ಲದಿಲ್ಲ, ಅಮಿಕೇಬಲ್ ನಡೆಸಿರುವ ಅಧ್ಯಯನದ ಪ್ರಕಾರ, ಕ್ರಿಸ್ಮಸ್ ಸಂದರ್ಭದಲ್ಲಿ ಏನೇನೋ ಆಶಯಗಳು ಗರಿಗೆದರಿರುತ್ತವೆ. ಆ ಆಶಯಗಳನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಗಳು ನಡೆದಿರುತ್ತವೆ. ಹೊಸ ಟಾರ್ಗೆಟ್ಟುಗಳು, ವರ್ಷ ಮುಗಿಯುವುದರೊಳಗೆ ಮಾಡಿ ಮುಗಿಸಬೇಕಾದ ಕೆಲಸದ ಒತ್ತಡಗಳು, ಅಸಾಧ್ಯವಾದ ಹಣಕಾಸಿನ ಒತ್ತಡಗಳು ಎಲ್ಲವನ್ನೂ ತಲೆಬುಡ ಮಾಡಿಬಿಡುತ್ತವೆ.

ಹೊಸ ಸಂಬಂಧಗಳು ಟಿಸಿಲೊಡೆದಿರುತ್ತವೆ

ಹೊಸ ಸಂಬಂಧಗಳು ಟಿಸಿಲೊಡೆದಿರುತ್ತವೆ

ಹೊಸವರ್ಷ ಕಾಲಿಡುತ್ತಿದ್ದಂತೆ, ಹೊಸ ಸ್ನೇಹಿತರು ಹುಟ್ಟಿಕೊಂಡಿರುತ್ತಾರೆ, ಅಪ್ಪುಗೆಯ ಮೈಬಿಸಿಗೆ ಹೊಸ ಸಂಬಂಧಗಳು ಟಿಸಿಲೊಡೆದಿರುತ್ತವೆ. ಹಲವಾರು ತಿಂಗಳುಗಳಿಂದ ಹೆಪ್ಪುಗಟ್ಟಿದ್ದ ಅಸಮಾಧಾನ ಸ್ಫೋಟಗೊಂಡಿರುತ್ತದೆ. ಅನುಮಾನದ ಹುತ್ತ ದೊಡ್ಡದಾಗುತ್ತಿದ್ದಂತೆ ಸಂಬಂಧ ಹಳಿಸಲು ಆರಂಭಿಸುತ್ತದೆ. ಇನ್ನೇನು? Divorce ಎಂಬ ಪದಕ್ಕೆ ಹುಡುಕಾಟ ಆರಂಭವಾಗುತ್ತದೆ.

ಭಾರತದ ವಿವಾಹ ವ್ಯವಸ್ಥೆಯ ಬೇರು ಭದ್ರ

ಭಾರತದ ವಿವಾಹ ವ್ಯವಸ್ಥೆಯ ಬೇರು ಭದ್ರ

ಇಂಥ ಪ್ರಾಕ್ಟೀಸುಗಳು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು. ಅಲ್ಲಿನ ವಿಚ್ಛೇದನ ವ್ಯವಸ್ಥೆಯಿಂದಾಗಿ ಸಂಬಂಧಗಳು ಯಾವಾಗಲೂ ಸಡಿಲುಸಡಿಲಾಗಿರುತ್ತವೆ. ಭಾರತದ ಸಂಸ್ಕೃತಿಯಲ್ಲಿಯೇ ವಿವಾಹ ವ್ಯವಸ್ಥೆಯ ಬೇರು ಭದ್ರವಾಗಿರುವುದರಿಂದ ಇದು ಅಷ್ಟು ಸುಲಭವಲ್ಲ. ಆದರೆ, ಏನು ಮಾಡುವುದು, ನಮ್ಮವರೂ ಪಾಶ್ಚಾತ್ಯ ಸಂಸ್ಕೃತಿಗೆ ಮರಳಾಗುತ್ತಿದ್ದಾರಲ್ಲ?

ಬೆಂಗಳೂರಿನಲ್ಲಿ ವಿಚ್ಛೇದನಕ್ಕೆ ಹುಡುಕುತ್ತಿರುವವರು ಹೆಚ್ಚು

ಬೆಂಗಳೂರಿನಲ್ಲಿ ವಿಚ್ಛೇದನಕ್ಕೆ ಹುಡುಕುತ್ತಿರುವವರು ಹೆಚ್ಚು

ಕರ್ನಾಟಕದ ಮಂದಿಯೂ ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ಬೆಂಗಳೂರಿನ ಜನರು ಈ 'ವಿಚ್ಛೇದನ' ಎಂಬ ಪದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನ ಹಿಂದೆ ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯ ಮಂದಿ ಕೂಡ ಡೈವೋರ್ಸ್ ಪದವನ್ನು ಹುಡುಕಿದ್ದಾರೆ. ನಗರಗಳಲ್ಲಿ ಬದುಕೇ ಸಂಕೀರ್ಣವಾಗುತ್ತಿರುವಾಗ, ಗಂಡುಹೆಣ್ಣಿನ ಬಂಧ ತೆಳುವಾಗುತ್ತಿರುವಾಗ ಇದು ಅಚ್ಚರಿಯ ಸಂಗತಿಯೂ ಅಲ್ಲ.

English summary
Online searches for divorce more in January than any other month, Why? Here is an interesting study done by Amicable, divorce and separation website and date provided by Google Trends. Marriage break ups rampant immediately after New Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X