ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Enforcement Directorate ಅಂದರೇನು, ಅದು ಹೇಗೆ ಕೆಲಸ ಮಾಡುತ್ತದೆ?

|
Google Oneindia Kannada News

ಜಾರಿ ನಿರ್ದೇಶನಾಲಯ ಅಥವಾ ಇಂಗ್ಲಿಷ್ ನಲ್ಲಿ ಹೇಳಬೇಕು ಅಂದರೆ Directorate of Enforcement (ಇ. ಡಿ). ಈ ಸಂಸ್ಥೆಯ ಹೆಸರನ್ನು ಈಚೆಗೆ ಹಲವು ಸಲ ಕೇಳಿರುತ್ತೀರಿ. ಆದರೆ ಈ ಸಂಸ್ಥೆ ಆರಂಭವಾಗಿದ್ದು ಯಾವಾಗ, ಅದು ಹೇಗೆ ಕೆಲಸ ಮಾಡುತ್ತದೆ, ಯಾವ ಪ್ರಕರಣಗಳ ವಿಚಾರಣೆಯನ್ನು ಇ. ಡಿ. ಕೈಗೆತ್ತಿಕೊಳ್ಳುತ್ತದೆ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇದು.

ಉದಾಹರಣೆಗೆ ಡಿ. ಕೆ. ಶಿವಕುಮಾರ್ ಬಂಧನದ ವಿಚಾರ. ಮಾಜಿ ಸಚಿವರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಇ. ಡಿ. ಇದೀಗ ಅವರ ವಿಚಾರಣೆ ನಡೆಸುವುದು ಇ. ಡಿ. ವಿಶೇಷ ನ್ಯಾಯಾಲಯ. ಯಾಕೆ ಹೀಗೆ ಎಂಬ ಪ್ರಶ್ನೆ ಸಹಜ ಅಲ್ಲವೆ?

619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?619 ಕೋಟಿ ಒಡೆಯ ಡಿಕೆಶಿ; 8 ಕೋಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ಯಾಕೆ?

ಆರ್ಥಿಕ ಅಪರಾಧಗಳ ತನಿಖೆ, ವಿಚಾರಣೆ ಮಾತ್ರ ಮಾಡುವ ಜಾರಿ ನಿರ್ದೇಶನಾಲಯ ಆರಂಭವಾದದ್ದು 1956ರಲ್ಲಿ. ಅದರ ಮುಖ್ಯ ಕಚೇರಿ ಇರುವುದು ನವದೆಹಲಿಯಲ್ಲಿ. ಈ ಸಂಸ್ಥೆಯ ಮುಖ್ಯ ಜವಾಬ್ದಾರಿ ಏನೆಂದರೆ, Foreign Exchnge Managemet Act 1999 (FEMA) ಪರಿಣಾಮಕಾರಿಯಾಗಿ ಜಾರಿ ಆಗುವಂತೆ ನೋಡಿಕೊಳ್ಳುವುದು. ಅದರ ಜತೆಗೆ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯ ಕೆಲವು ಜವಾಬ್ದಾರಿಗಳು ಇ. ಡಿ. ಪಾಲಿಗೆ ಇವೆ.

Oneindia Explainer: What is Enforcement Directorate, How It Functions?

ಜಾರಿ ನಿರ್ದೇಶನಾಲಯದ ಕೆಲಸ ಹೇಗೆ ಅಂದರೆ, PML (ಅಕ್ರಮ ಹಣ ವರ್ಗಾವಣೆ ತಡೆ) ಪ್ರಕರಣಗಳು ಜಾರಿ ನಿರ್ದೇಶನಾಲಯಕ್ಕೆ ಬರುತ್ತವೆ. ಅವುಗಳ ತನಿಖೆ ಹಾಗೂ ವಿಚಾರಣೆ ಮಾಡಬೇಕಾಗುತ್ತದೆ. ಕಾರ್ಯ ನಿರ್ವಹಣೆ ದೃಷ್ಟಿಯಿಂದ ಜಾರಿ ನಿರ್ದೇಶನಾಲಯವು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ.

ಇನ್ನು FEMA ನೀತಿ ನಿರೂಪಣೆ ಬಗ್ಗೆ ಹೇಳುವುದಾದರೆ, ಅದರ ಕಾನೂನು, ತಿದ್ದುಪಡಿಗಳು ಆರ್ಥಿಕ ವ್ಯವಹಾರಗಳ ಇಲಾಖೆ ವ್ಯಾಪ್ತಿಗೆ ಬರುತ್ತವೆ. PML ಕಾಯ್ದೆಯ ನೀತಿ ನಿರೂಪಣೆ ವಿಚಾರಗಳಂತೂ ಕಂದಾಯ ಇಲಾಖೆ ಜವಾಬ್ದಾರಿಯೇ. FEMA ಜಾರಿಗೆ ಬರುವ ಮುನ್ನ (1ನೇ ಜೂನ್, 2000) ಜಾರಿ ನಿರ್ದೇಶನಾಲಯದ ನಿಯಮಾವಳಿಗಳು Foreign Exchange Regulation Act, 1973 ('ಫೆರಾ') ಅಡಿ ಇದ್ದವು.

ಜಾರಿ ನಿರ್ದೇಶನಾಲಯಕ್ಕೆ ಸುಧೀರ್ ನಾಥ್ ನಿರ್ದೇಶಕರು. ಹೆಚ್ಚುವರಿ ವಿಶೇಷ ಮಟ್ಟದ ಅಧಿಕಾರಿ ಅವರು. ಇಬ್ಬರು ವಿಶೇಷ ನಿರ್ದೇಶಕರು ಮುಖ್ಯ ಕಚೇರಿಯಲ್ಲಿ ಇರುತ್ತಾರೆ. ಒಬ್ಬರು ವಿಶೇಷ ನಿರ್ದೇಶಕರು ಮುಂಬೈನಲ್ಲಿ ಇರುತ್ತಾರೆ. ಇ. ಡಿ. ಗೆ ಒಟ್ಟು ಹತ್ತು ವಲಯ ಕಚೇರಿಗಳಿವೆ. ಅವುಗಳನ್ನು ಡೆಪ್ಯೂಟಿ ನಿರ್ದೇಶಕರು ಮುನ್ನಡೆಸುತ್ತಾರೆ. ಹನ್ನೊಂದು ಉಪ ವಲಯ ಕಚೇರಿಗಳಿವೆ. ಅವುಗಳ ನೇತೃತ್ವವನ್ನು ಸಹಾಯಕ ನಿರ್ದೇಶಕರು ವಹಿಸುತ್ತಾರೆ.

ಏನಿದು ಹವಾಲ ವ್ಯವಹಾರ, ಇದು ಯಾಕಿಷ್ಟು ಕುಖ್ಯಾತಿ?ಏನಿದು ಹವಾಲ ವ್ಯವಹಾರ, ಇದು ಯಾಕಿಷ್ಟು ಕುಖ್ಯಾತಿ?

ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಚಂಡೀಗಡ, ಲಖನೌ, ಕೊಚ್ಚಿ, ಅಹ್ಮದಾಬಾದ್, ಬೆಂಗಳೂರು ಹಾಗೂ ಹೈದರಾಬಾದ್ ನಲ್ಲಿ ಜಾರಿ ನಿರ್ದೇಶನಾಲಯದ ವಲಯ ಕಚೇರಿಗಳಿವೆ.

ಜೈಪುರ್, ಜಲಂಧರ್, ಶ್ರೀನಗರ್, ವಾರಾಣಸಿ, ಗುವಾಹತಿ, ಕಲ್ಲಿಕೋಟೆ (ಕ್ಯಾಲಿಕಟ್), ಇಂದೋರ್, ನಾಗಪುರ್, ಪಾಟ್ನಾ, ಭುವನೇಶ್ವರ್, ಮದುರೈನಲ್ಲಿ ಉಪ ವಲಯ ಕಚೇರಿಗಳಿವೆ.

ಜಾರಿ ನಿರ್ದೇಶನಾಲಯದ ಕಾರ್ಯ ನಿರ್ವಹಣೆ ಹೇಗೆ?

* ರಾಜ್ಯ, ಕೇಂದ್ರ ಗುಪ್ತಚರ ಇಲಾಖೆ ಮೂಲಕ ಫೆಮಾ ಕಾಯ್ದೆ ಉಲ್ಲಂಘನೆಯ ಬಗ್ಗೆ ಮಾಹಿತಿ, ದೂರು ಇತ್ಯಾದಿಗಳನ್ನು ಸ್ವೀಕರಿಸುವುದು. ಫೆಮಾ ಕಾಯ್ದೆ ಉಲ್ಲಂಘನೆ ಬಗ್ಗೆ ಮಾಹಿತಿ ಸಂಗ್ರಹ ಹಾಗೂ ಜಾಗೃತಿ ಮೂಡಿಸಲು ಜಾಲ ರೂಪಿಸುವುದು.

* ವಿದೇಶಿ ವಿನಿಮಯದ ಹವಾಲಾ, ಫೆಮಾ ಕಾಯ್ದೆ ಉಲ್ಲಂಘನೆಯ ಶಂಕಿತ ಪ್ರಕರಣಗಳು, ರಫ್ತು ಮಾಡಿದ ವಸ್ತುಗಳಿಗೆ ಹಣ ಬಾರದೆ ಇರುವುದು. ಫೆಮಾ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಬರುವ ಎಲ್ಲಾ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತದೆ.

'ಕ್ರಾಸ್ ಬಾರ್ಡರ್ ಹವಾಲ': ಆಪ್ತರಿಗೇ ಅಚ್ಚರಿ ತಂದ ಡಿಕೆಶಿ ಬಂಧನಕ್ಕೆ ಬಿಜೆಪಿ ನೀಡಿದ ಟ್ವಿಸ್ಟ್ ಇದು!'ಕ್ರಾಸ್ ಬಾರ್ಡರ್ ಹವಾಲ': ಆಪ್ತರಿಗೇ ಅಚ್ಚರಿ ತಂದ ಡಿಕೆಶಿ ಬಂಧನಕ್ಕೆ ಬಿಜೆಪಿ ನೀಡಿದ ಟ್ವಿಸ್ಟ್ ಇದು!

* ಫೆರಾ, ಫೆಮಾ ಕಾಯ್ದೆ ಉಲ್ಲಂಘನೆ ಪ್ರಕರಣಗಳ ವ್ಯಾಜ್ಯಗಳ ಇತ್ಯರ್ಥ ಮಾಡುತ್ತದೆ.

* ವ್ಯಾಜ್ಯಗಳ ಇತ್ಯರ್ಥವಾದ ಪ್ರಕರಣಗಳಲ್ಲಿ ವಿಧಿಸುವ ದಂಡಗಳನ್ನು ವಸೂಲಿ ಮಾಡುತ್ತದೆ.

* ಫೆರಾ ಕಾಯ್ದೆ ಅಡಿಯಲ್ಲಿನ ವ್ಯಾಜ್ಯ ಪರಿಹಾರ, ಪ್ರಕರಣಗಳ ಅರ್ಜಿ, ಕೋರ್ಟ್ ಕಲಾಪಗಳನ್ನು ನಿರ್ವಹಿಸುತ್ತದೆ.

* ವಿದೇಶಿ ವಿನಿಮಯ ದುರುಪಯೋಗ ಹಾಗೂ ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಪ್ರಕರಣದ ಅಡಿಯಲ್ಲಿ ಪ್ರಕ್ರಿಯೆಗಳಿಗೆ ಚಾಲನೆ ನೀಡುವುದು ಹಾಗೂ ಮುಂಜಾಗ್ರತಾ ಬಂಧನ ಮಾಡುತ್ತದೆ.

* ಅಕ್ರಮ ಹಣ ವರ್ಗಾವಣೆ (Prevention Of Money Laundering Act) ಪ್ರಕರಣದ ಅಡಿಯಲ್ಲಿ ಆರೋಪಿಗಳ ಸಮೀಕ್ಷೆ, ಶೋಧ, ವಶ, ಬಂಧನ, ವಿಚಾರಣೆ ಮುಂತಾದವುಗಳನ್ನು ಮಾಡುತ್ತದೆ.

* ಆಯಾ ಸರಕಾರಗಳಿಂದ/ ಸರಕಾರಗಳಿಗೆ ಅಗತ್ಯ ಪರಸ್ಪರ ಕಾನೂನು ನೆರವು. ಇದು ಅಪರಾಧಗಳ ಅಥವಾ ಪಿಎಂಎಲ್ ಎ ಅಡಿ ಆರೋಪಿಯ ವರ್ಗಾವಣೆ ಅಥವಾ ಜಪ್ತಿಗೆ ಅನ್ವಯಿಸುತ್ತದೆ.

English summary
Enforcement Directorate (E. D.) is the central agency investigate about financial crimes. Here is an explainer about E. D. Directorate of Enforcement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X