ಓಮಿಕ್ರಾನ್ ರೂಪಾಂತರ: ಭಾರತಕ್ಕೆ ಆಗಮಿಸುವವರಿಗೆ ಹೊಸ ನಿಯಮ: ಇಲ್ಲಿದೆ ವಿವರ
ನವದೆಹಲಿ, ನವೆಂಬರ್ 29: ಕೊರೊನಾ ವೈರಸ್‌ನ ಹೊಸ ರೂಪಾಂತರ ಕಾಣಿಸಿಕೊಂಡ ದೇಶದಿಂದ ಭಾರತಕ್ಕೆ ಬರುವವರಿಗೆ ಹೊಸ ನಿಯಮವನ್ನು ಭಾನುವಾರ ಭಾರತದಲ್ಲಿ ಜಾರಿ ಮಾಡಲಾಗಿದೆ. ಈ ಹೊಸ ರೂಪಾಂತರದ ಕಾರಣದಿಂದಾಗಿ ದೇಶದಲ್ಲಿ ಮೂರನೇ ಕೋವಿಡ್ ಅಲೆಯು ಉಂಟಾಗದಂತೆ ಭಾರತ ಸರ್ಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಹಾಂಗ್ ಕಾಂಗ್ ಮತ್ತು ಇಸ್ರೇಲ್ ಸೇರಿದಂತೆ ಯುರೋಪ್‌ನ ದೇಶಗಳನ್ನು ಅಪಾಯ ದೇಶಗಳು ಎಂದು ವಿಂಗಡನೆ ಮಾಡಿದೆ.
"ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಬೇರೆ ದೇಶಗಳ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಿಂದಾಗಿ ಈಗ ದೇಶದಲ್ಲಿ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಲಾಗಿದೆ. ವಿಶ್ವ ಆರೋಗ್ಯ ಸಂಸ್ತೆಯು ಈಗಾಗಲೇ ಈ ಓಮಿಕ್ರಾನ್ ಅನ್ನು ಕಾಳಜಿಯುತ ರೂಪಾಂತರ ಎಂದು ಕರೆದಿದೆ," ಎಂದು ಆರೋಗ್ಯ ಸಚಿವಾಲಯವು ಹೇಳಿದೆ. ಹಾಗಾದರೆ ಆ ಹೊಸ ನಿಯಮಗಳು ಏನು ಎಂದು ತಿಳಿಯಲು ಮುಂದೆ ಓದಿ..

ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ ಜಾರಿಯಾದ ಹೊಸ ನಿಯಮ
* ವಿದೇಶದಿಂದ ಭಾರತಕ್ಕೆ ಬರುವ ಎಲ್ಲಾ ಜನರು ಸೆಲ್ಫ್ ಡಿಕ್ಲೆರೇಷನ್ ಫಾರ್ಮ್ ಅನ್ನು ಫಿಲ್ ಮಾಡಬೇಕಾಗುತ್ತದೆ
* ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿದ ನೆಗೆಟಿವ್ ವರದಿಯನ್ನು ಹೊಂದಿರಬೇಕು
* ಈ ಮೇಲಿನ ಎರಡು ನಿಯಮವನ್ನು ಪಾಲನೆ ಮಾಡದಿದ್ದರೆ ವಿದೇಶದಿಂದ ಭಾರತಕ್ಕೆ ಬರಲು ಅನುಮತಿ ನೀಡಲಾಗುವುದಿಲ್ಲ
* ದಕ್ಷಿಣ ಆಫ್ರಿಕಾದಂತಹ ಅಪಾಯದಲ್ಲಿ ಇರುವ ದೇಶಗಳಿಂದ ಭಾರತಕ್ಕೆ ಆಗಮಿಸುವವರಾದರೆ ಭಾರತಕ್ಕೆ ತಲುಪಿದ ಬಳಿಕ ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿಯನ್ನು ಸಲ್ಲಿಕೆ ಮಾಡಬೇಕು
* ಭಾರತಕ್ಕೆ ಬಂದ ಬಳಿಕ ಮಾಡಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ
* ಪಾಸಿಟಿವ್ ಬಂದ ಜನರ ಮಾದರಿಯನ್ನು ಜೀನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ
* ಪಾಸಿಟಿವ್ ಬಂದ ವ್ಯಕ್ತಿಗೆ ಓಮಿಕ್ರಾನ್ ಇದೆ ಎಂದು ದೃಢಪಟ್ಟರೆ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಲಾಗುತ್ತದೆ
* ದಕ್ಷಿಣ ಆಫ್ರಿಕಾದಂತಹ ಅಪಾಯಯುತ ದೇಶ ಎಂದು ಪಟ್ಟಿ ಮಾಡಲಾದ ದೇಶದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಬಂದರೂ ಕೂಡಾ ಏಳು ದಿನ ಕಡ್ಡಾಯ ಕ್ವಾರಂಟೈನ್
* ಏಳು ದಿನಗಳ ಕ್ವಾರಂಟೈನ್ ಬಳಿಕ ಎಂಟನೇ ದಿನ ಮತ್ತೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ
* ಅಪಾಯವಲ್ಲ ಎಂದು ಪರಿಗಣಿಸಲಾದ ದೇಶದಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾತ್ರ ಮಾಡಲಾಗುತ್ತದೆ
* ಆದರೆ ಈ ಪೈಕಿ ಯಾರಾದಾದರೂ ಕೋವಿಡ್ ವರದಿ ಪಾಸಿಟಿವ್ ಬಂದರೆ ಅದನ್ನು ಜೀನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ
* ಅಪಾಯವಲ್ಲ ಎಂದು ಪರಿಗಣಿಸಲಾದ ದೇಶದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಆದರೆ ಕ್ವಾರಂಟೈನ್ ಮಾಡಲಾಗುತ್ತದೆ
* ಅಪಾಯವಲ್ಲ ಎಂದು ಪರಿಗಣಿಸಲಾದ ದೇಶದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ವರದಿ ನೆಗೆಟಿವ್ ಬಂದರೆ, ಹದಿನಾಲ್ಕು ದಿನಗಳ ಕಾಲ ಸ್ವಯಂ ನಿಗಾ ವಹಿಸಲು ತಿಳಿಸಲಾಗಿದೆ
ವಿಶ್ವ ಸಂಸ್ಥೆ ಎಚ್ಚರಿಕೆ
ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಅತ್ಯಂತ ಅಪಾಯಕಾರಿ," ಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯು "ಜಾಗತಿಕವಾಗಿ ಅತ್ಯಂತ ಗಂಭೀರ ಪರಿಣಾಮವನ್ನು ಈ ಹೊಸ ರೂಪಾಂತರವು ಉಂಟು ಮಾಡಲಿದೆ," ಎಂಬ ಎಚ್ಚರಿಕೆಯನ್ನು ಸೋಮವಾರ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ಓಮಿಕ್ರಾನ್ ಎಷ್ಟು ಅಪಾಯಕಾರಿ ಎಂಬುವುದನ್ನು ವಿವರಿಸಿದೆ. ಈ ಹೊಸ ರೂಪಾಂತರ ಓಮಿಕ್ರಾನ್ B.1.1.529 ಹೆಚ್ಚು ವಿಭಿನ್ನವಾದ ರೂಪಾಂತರವಾಗಿದೆ ಎಂದು ತಿಳಿಸಿದೆ. "ಈ ಓಮಿಕ್ರಾನ್‌ನಲ್ಲಿ ಬಹಳಷ್ಟು ಪ್ರಭೇದಗಳು ಕಂಡು ಬಂದಿದೆ. ಈ ಪೈಕಿ ಕೆಲವು ಅತೀ ಅಧಿಕ ಅಪಾಯಕಾರಿ ಆಗುವ ಸಾಧ್ಯತೆಗಳು ಇದೆ. ಒಟ್ಟಾರೆಯಾಗಿ ಈ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕವಾಗಿ ಒಂದು ಎಚ್ಚರಿಕೆಯ ಕರೆಗಂಟೆ," ಎಂದು ತಿಳಿಸಿದೆ.












Click it and Unblock the Notifications