ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಪರಿಹಾರ ಗಿಫ್ಟ್?
ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಶುಭ ಸುದ್ದಿ ಸಿಕ್ಕಿದ್ದರೂ ತುಟ್ಟಿಭತ್ಯೆ ಪರಿಹಾರ (DA arrear) ಬಾಕಿ ಎಂದಿಗೆ ಸಿಗಬಹುದು ಎಂಬ ನಿರೀಕ್ಷೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಆದರೆ, ವರ್ಷಾಂತ್ಯದೊಳಗೆ ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂಬ ಸುದ್ದಿಯಿದೆ. ಬಹುತೇಕ ಡಿಸೆಂಬರ್ ತಿಂಗಳಿನಲ್ಲೇ ಡಿಆರ್ ಬಾಕಿ ಮೊತ್ತ ಪಾವತಿ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಲಿದೆ ಎಂಬ ಮಾಹಿತಿ ಸಿಕ್ಕಿದೆ.
ಈ ಮೂಲಕ ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿಯ ಸುದ್ದಿ ಸಿಗುವ ಸಾಧ್ಯತೆಯಿದೆ. 18 ತಿಂಗಳ ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ.
ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ಈ ವರ್ಷ ಜುಲೈ ಮೊದಲು, ಇದು 17 ಪ್ರತಿಶತದಷ್ಟಿತ್ತು, ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಡಿಎ ಶೇ 28ರಿಂದ ಶೇ 31ಕ್ಕೇರಿಕೆಯಾಗಲಿದೆ. ತುಟ್ಟಿಭತ್ಯೆ ಪರಿಹಾರ(ಡಿಆರ್) ಕೂಡಾ ಶೇ 3ರಷ್ಟಿದೆ.

ಸಂಪುಟ ಕಾರ್ಯದರ್ಶಿಯವರೊಂದಿಗೆ ನಡೆಯಲಿರುವ ಸಭೆ
ಸಂಪುಟ ಕಾರ್ಯದರ್ಶಿಯವರೊಂದಿಗೆ ನಡೆಯಲಿರುವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಈ ತಿಂಗಳಾಂತ್ಯದಲ್ಲಿ ಸಂಪುಟ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಯಲಿದ್ದು, ಈ ಕುರಿತು ಚರ್ಚೆ ನಡೆಯಲಿದೆ. ಕೇಂದ್ರ ನೌಕರರಿಗೆ ಡಿಎ ಬಾಕಿ ನೀಡುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಜುಲೈನಲ್ಲಿ ಸ್ಪಷ್ಟಪಡಿಸಿತ್ತು. ಆದರೆ, ನಿರಂತರ ಬೇಡಿಕೆ ಹಾಗೂ ಪಿಂಚಣಿದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.

18 ತಿಂಗಳ ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಬೇಡಿಕೆ
ನೌಕರರ 18 ತಿಂಗಳ ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಬೇಡಿಕೆಯನ್ನು ಸರಕಾರ ಪರಿಗಣಿಸುವ ಸಾಧ್ಯತೆ ಇದೆ. 7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಶೇ.31 ತುಟ್ಟಿಭತ್ಯೆ ಹಾಗೂ ಹಲವು ದೊಡ್ಡ ಸವಲತ್ತುಗಳನ್ನು ನೀಡಿದ್ದರೂ ಬಾಕಿ ವೇತನದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಜೆಸಿಎಂ ಕಾರ್ಯದರ್ಶಿ ಶಿವಗೋಪಾಲ್ ಮಿಶ್ರಾ ಅವರು ಕೂಡ ನಿರಂತರವಾಗಿ ಬಾಕಿ ಪಾವತಿಗೆ ಬೇಡಿಕೆ ಇಡುತ್ತಿದ್ದು, 18 ತಿಂಗಳಿಂದ ಬಾಕಿ ಇರುವ ಡಿಎ ಪರಿಹಾರ ಬಾಕಿಯನ್ನು ಒಂದೇ ಬಾರಿಗೆ ಇತ್ಯರ್ಥಗೊಳಿಸಬೇಕು ಎಂಬ ಬೇಡಿಕೆಯೂ ಇದೆ. ಈ ಕುರಿತು ಡಿಸೆಂಬರ್‌ನಲ್ಲಿ ಸಂಪುಟ ಕಾರ್ಯದರ್ಶಿ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಭಾರತೀಯ ಪಿಂಚಣಿದಾರರ ವೇದಿಕೆಯಿಂದ ಮೋದಿಗೆ ಪತ್ರ
ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ.
ಪಿಂಚಣಿದಾರರಿಗೆ ಡಿಆರ್ ನಿಲ್ಲಿಸುವ ನಿರ್ಧಾರ ಸರಿಯಲ್ಲ ಎಂದು ಭಾರತೀಯ ಪಿಂಚಣಿದಾರರ ವೇದಿಕೆ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಪಿಂಚಣಿದಾರರ ಜೀವನೋಪಾಯಕ್ಕೆ ಹಣ ಬಹಳ ಮುಖ್ಯವಾಗಿದ್ದು, ಅದನ್ನು ನಿಲ್ಲಿಸುವುದು ಪಿಂಚಣಿದಾರರ ಹಿತದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಸಂಪುಟ ಕಾರ್ಯದರ್ಶಿಯೊಂದಿಗಿನ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬೇಕಾಗಿದ್ದರೂ, ಪ್ರಧಾನಿ ಮೋದಿ ಬಾಕಿಯಿರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಈ ವಿಚಾರದಲ್ಲಿ ಪಿಂಚಣಿದಾರರು ಮಧ್ಯಪ್ರವೇಶಿಸುವಂತೆ ಅವರಿಗೆ ಪತ್ರ ಬರೆದಿದ್ದರು. ಬಾಕಿದಾರರಿಗೆ ಗ್ರೀನ್ ಸಿಗ್ನಲ್ ಸಿಕ್ಕರೆ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಭಾರಿ ಮೊತ್ತ ಬರಲಿದೆ.

ಡಿಎ ಬಾಕಿ ಮೊತ್ತ ನಿರೀಕ್ಷೆ ಎಷ್ಟಿದೆ?
ಜೆಸಿಎಂನ ರಾಷ್ಟ್ರೀಯ ಕೌನ್ಸಿಲ್‌ನ ಶಿವ ಗೋಪಾಲ್ ಮಿಶ್ರಾ ಪ್ರಕಾರ, ಲೆವೆಲ್-1 ನೌಕರರ ಡಿಎ ಬಾಕಿ 11,880 ರೂ.ನಿಂದ 37,554 ರೂ. ಆದರೆ, ಹಂತ-13 ಅಥವಾ ಹಂತ-14ಕ್ಕೆ, ಡಿಎ ಬಾಕಿ ಕ್ರಮವಾಗಿ 1,44,200 ಮತ್ತು 2,18,200 ರೂ ಮೊತ್ತ ಸಿಗಬೇಕಿದೆ.
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಸ್ಥಗಿತಗೊಳಿಸಲಾಗಿತ್ತು.

ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್
ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ತುಟ್ಟಿಭತ್ಯೆ ಹೆಚ್ಚಳ ಮಾಡುವುದು ಹೇಗೆ?
ಕೇಂದ್ರ ಸರ್ಕಾರಿ ನೌಕರರ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕಳೆದ 12 ತಿಂಗಳಿಗೆ 115.76/115.76X100.
ಸಾರ್ವಜನಿಕ ವಲಯದ ಸಿಬ್ಬಂದಿ ಡಿಎ ಪರ್ಸಂಟೇಜ್: ಅಖಿಲ ಭಾರತ ಗ್ರಾಹಕ ದರ ಸೂಚಿ ಸರಾಸರಿ (ಬೇಸ್ ವರ್ಷ -2001=100) ಕೊನೆ 3 ತಿಂಗಳಿಗೆ 126.33/126.33X100.ತುಟ್ಟಿಭತ್ಯೆ ಇತಿಹಾಸ: 2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. ಅಂದಿನ ಇಂದಿನವರೆಗೂ(ಈಗ ದರ ಶೇ 31ಕ್ಕೇರಿದೆ) ಬೇಡಿಕೆ ಮುಂದಿಡಲಾಗುತ್ತಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ ಎಂದು ವಾದಿಸುತ್ತಿದ್ದಾರೆ.












Click it and Unblock the Notifications