India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Chandra Arya: ಕೆನಡಾದಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ!

|
Google Oneindia Kannada News

ಕೆನಡಾ, ಮೇ 20: ವಿದೇಶಗಳಲ್ಲಿ ಕನ್ನಡಿಗರು ತಮ್ಮ ಮಾತೃ ಭಾಷೆಯಾದ ಕನ್ನಡದಲ್ಲಿ ಮಾತನಾಡಿ ತಮ್ಮ ಭಾಷಾಪ್ರೇಮ ಮೆರೆಯುತ್ತಿದ್ದಾರೆ.

ಈಗ ಅದೇ ಸಾಲಿಗೆ ಕೆನಡಾದ ಸಂಸದ ಕನ್ನಡಿಗರಾದ ಚಂದ್ರ ಆರ್ಯ ಅವರು ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಭಾಷಾ ಪ್ರೇಮ ಮೆರೆದಿದ್ದಾರೆ. ಸಂಸತ್ತಿನಲ್ಲಿ ಮಾತನಾಡಿದ ಅವರು, ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.

ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದ ಮತ್ತು ನಟಸಾರ್ವಭೌಮ ಡಾ. ರಾಜ್‌ಕುಮಾರ್‌ ಹಾಡಿರುವ ಭಾವಗೀತೆ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಗಳನ್ನು ಮಗಿಸುತ್ತಿದ್ದೇನೆ, ಎಲ್ಲಾದರೂ ಇರು ಎಂತಾದರೂ ಇರು ಎಂದ್ದೆಂದಿಗೂ ಕನ್ನಡವಾಗಿರು, ಧನ್ಯವಾದಗಳು ಸಭಾಪತಿ ಎಂದು ಅವರು ತಮ್ಮ ಭಾಷಣದಲ್ಲಿ ಮತನಾಡಿದರು. ಇದಕ್ಕೆ ಎಲ್ಲ ಸದಸ್ಯರು ಚಪ್ಪಾಳೆ ಮೂಲಕ ಅಭಿನಂದಿಸಿದರು.

ಏಷ್ಯಾದ ತಿಂಗಳ ಆಚರಣೆ:
ನೂರಾರು ಜನರು ಭಾಗವಹಿಸಿದ್ದ ಏಷ್ಯಾದ ತಿಂಗಳ ಆಚರಣೆ ಎಂಬ ಕಾರ್ಯಕ್ರಮವನ್ನು ಆಯೋಜಿದ್ದ ಚಂದ್ರ ಆರ್ಯ ಅವರು, ವಿಭಿನ್ನ ಸಂಸ್ಕೃತಿ ಮತ್ತು ಏಷ್ಯಾದ ವಿವಿಧ ಭಾಗಗಳ ಜನರು ತಮ್ಮ ಕಲೆಗಳನ್ನು ಪ್ರದರ್ಶಿಸಲು ನಡೆದ ಕಾರ್ಯಕ್ರಮದ ರೂವಾರಿಯಾಗಿದ್ದರು. ಇದು ಜನರ ಮೆಚ್ಚುಗೆ ಪಡೆದಿತ್ತು.

MP speaking in Kannada in Canada!

ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ಭಾರತ, ಇರಾನ್, ಪಾಕಿಸ್ತಾನ, ಶ್ರೀಲಂಕಾ, ತಮಿಳು, ತೈವಾನ್, ವಿಯೆಟ್ನಾಂ ಪರಂಪರೆಯ ಕೆನಡಿಯನ್ನರು. ಭಾಗವಹಿಸಿದ್ದಕ್ಕಾಗಿ ಬಾಂಗ್ಲಾದೇಶ, ಭಾರತ, ಇಂಡೋನೇಷ್ಯಾ, ಜಪಾನ್, ನೇಪಾಳ, ಮಲೇಷ್ಯಾ, ಮಂಗೋಲಿಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಶ್ರೀಲಂಕಾ, ತೈವಾನ್‌ನ ರಾಜತಾಂತ್ರಿಕರಿಗೆ ಧನ್ಯವಾದಗಳು ಎಂದು ಅವರು ಈ ಸಂದರ್ಭದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಅಲ್ಲದೆ ಹಿಂದೂ ಪರಂಪರೆಯ ತಿಂಗಳು ಎಂಬ ಕಾರ್ಯಕ್ರಮವನ್ನು ಅವರು ಹಿಂದೆ ಆಯೋಜಿದ್ದರು.

ಯಾರು ಈ ಚಂದ್ರ ಆರ್ಯ:
ಚಂದ್ರಕಾಂತ್‌ ಆರ್ಯ ಅಥವಾ ಚಂದ್ರ ಆರ್ಯ ಅವರು 1963ರಲ್ಲಿ ಜನಿಸಿದರು. ತುಮಕೂರು ಜಿಲ್ಲೆ, ಶಿರಾ ತಾಲೂಕಿನ ದ್ವಾರಾಳು ಗ್ರಾಮದವರಾದ ಅವರು ಪ್ರಸ್ತುತ ಕೆನಡಾದಲ್ಲಿ ರಾಜಕಾರಣಿ ಆಗಿರುವ ಅವರು, ನೆಪೆನ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2015ರ ಫೆಡರಲ್‌ ಚುನಾವಣೆ ಮತ್ತು 2019ರಲ್ಲಿ ನಡೆದ ಚುನಾವಣೆಗಳಲ್ಲಿ ಪುನಾರಾಯ್ಕೆಯಾಗಿದ್ದಾರೆ. ಪ್ರಸ್ತುತ ಕೆನಡಾದ ಅಂತಾರಾಷ್ಟ್ರಿಯ ವ್ಯಾಪಾರ ಸಮಿತಿ ಸದಸ್ಯರು ಆಗಿದ್ದಾರೆ. 58 ವರ್ಷದ ಚಂದ್ರ ಆರ್ಯ ಅವರು ಸದ್ಯ ಕೆನಡಾದ ಓಂಟಾರಿಯೋದಲ್ಲಿ ನೆಲೆಸಿದ್ದಾರೆ.

English summary
Chandra Arya, a Canadian MP, spoke in Kannada at the Parliament of Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X