ನಾವು ಮಾಡಿದ ಅನಾಚಾರಕ್ಕೆ ಪ್ರಕೃತಿ ಕಂದಾಯ ಕೇಳುತ್ತಿದೆಯಾ?
ನಾವೆಷ್ಟೇ ಮುಂದುವರೆದರೂ ನಮ್ಮ ವೇಗಕ್ಕೆ ಬ್ರೇಕ್ ಹಾಕಲೆಂದೇ ಆಗೊಮ್ಮೆ, ಈಗೊಮ್ಮೆ ಪ್ರಕೃತಿ ಬೇರೆ, ಬೇರೆ ರೀತಿಯ ಪಾಠ ಕಲಿಸುತ್ತದೆ. ಜತೆಗೆ ಪ್ರಕೃತಿಯನ್ನು ಸಮತೋಲನಗೊಳಿಸಿಕೊಳ್ಳುವುದು ಕೂಡ ಅದಕ್ಕೆ ಗೊತ್ತಿದೆ. ಪ್ರಕೃತಿ ಸಮತೋಲನದಲ್ಲಿದ್ದರೆ ಮಾತ್ರ ನಾವು ನೆಮ್ಮದಿಯಾಗಿರಲು ಸಾಧ್ಯ. ವೈಜ್ಞಾನಿಕತೆಯಿಂದ ನಮಗೆ ಬಹಳಷ್ಟು ಅನುಕೂಲವಾಗಿದ್ದರೂ ಎಲ್ಲೋ ಒಂದು ಕಡೆ ನಾವು ಪ್ರಕೃತಿಯ ರಕ್ಷಣೆಯತ್ತ ಗಮನಹರಿಸದಿರುವುದು ನಮಗೆ ನಾವು ಮಾಡುವ ಅಭಿವೃದ್ಧಿಯೇ ಮುಂದೊಂದು ದಿನ ಶಾಪವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.
ಅಭಿವೃದ್ಧಿ ಎನ್ನುವುದು ನಮಗೆ ಗೊತ್ತಿಲ್ಲದಂತೆ ಪ್ರಕೃತಿ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ವಾತಾವರಣದಲ್ಲಿ ಏರುಪೇರುಗಳನ್ನು ಕಾಣುತ್ತಿದ್ದೇವೆ. ಹೀಗಾಗಿ ಮೊದಲಿನಂತೆ ನಾವು ನಿರೀಕ್ಷೆ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ. ಎಲ್ಲೋ ಒಂದು ಕಡೆ ಸದ್ದಿಲ್ಲದಂತೆ ನಿಸರ್ಗದಲ್ಲಿ ಬದಲಾವಣೆ, ವಾತಾವರಣದಲ್ಲಿ ಏರುಪೇರಾಗುತ್ತಿದೆ. ಮಳೆಗಾಲದಲ್ಲಿ ಮಳೆಯಿಲ್ಲ.. ಚಳಿಗಾಲದಲ್ಲಿ ಚಳಿಗೂ ಬರ.. ಬೇಸಿಗೆಯಲ್ಲಂತು ಹೊರಗೆ ಕಾಲಿಡಲಾಗದಷ್ಟು ಧಗೆ.. ಇದೆಲ್ಲವೂ ಪ್ರಕೃತಿಗೆ ನಾವು ಮಾಡಿದ ಅನ್ಯಾಯದ ಪರಿಣಾಮಗಳು ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

ಪ್ರಕೃತಿಯಿಂದ ನಾವೆಷ್ಟು ತೆಗೆದುಕೊಂಡಿದ್ದೇವೆಯೋ ಒಂದಷ್ಟನ್ನಾದರೂ ಕೊಟ್ಟಿಲ್ಲವೆಂದರೆ ಮುನಿಯದೆ ಇರುತ್ತಾ? ಆದರೆ ನಾವ್ಯಾರು ಆ ಬಗ್ಗೆ ಮಾತನಾಡುವುದೇ ಇಲ್ಲ. ಮಳೆಗಾಲದಲ್ಲಿ ಗಿಡನೆಟ್ಟು ಪ್ರಚಾರ ತೆಗೆದುಕೊಳ್ಳುವವರು ಬೇಸಿಗೆಯಲ್ಲಿ ಅದಕ್ಕೆ ನೀರು ಹಾಕಬೇಕೆಂಬುದನ್ನೇ ಮರೆಯುತ್ತಾರೆ. ಹೀಗಾಗಿ ಪ್ರತಿವರ್ಷ ವನಮಹೋತ್ಸವ ಆಚರಣೆ ಮಾಡುತ್ತಿದ್ದರೂ ಹಸಿರು ಕಾಣಿಸುತ್ತಿಲ್ಲ. ಇವತ್ತಿನ ಬಿಸಿಲಿನ ಧಗೆ ಬಗ್ಗೆ ಮಾತನಾಡುವ ನಾವು ಯಾವತ್ತಾದರೂ ಒಂದು ಗಿಡನೆಟ್ಟು ಬೆಳೆಸೋಣ ಎಂದು ಯೋಚಿಸಿದ್ದೇವೆಯಾ? ಗಿಡನೆಡುವುದು ಬರೀ ಅರಣ್ಯ ಇಲಾಖೆಯ ಕೆಲಸವೇ?
ಇವತ್ತಿನ ದುಸ್ಥಿತಿಗೆ ಕಾರಣರು ಯಾರು?
ನಾವೇನಾದರೂ ಹಿರಿಯರನ್ನು ಮಾತನಾಡಿಸಿದರೆ ಅಯ್ಯೋ ಮೊದಲು ಹೀಗಿರಲಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿತ್ತು. ಇಷ್ಟೊಂದು ಬಿಸಿಲಿನ ಧಗೆಯಿರಲಿಲ್ಲ. ಮೈಮರಗಟ್ಟುವ ಚಳಿಯಿದ್ದರೂ ಯಾರಿಗೂ ತೊಂದರೆಯಾಗುತ್ತಿರಲಿಲ್ಲ.. ಎಲ್ಲವೂ ಕಾಲಕ್ಕೆ ತಕ್ಕಂತೆ ಸರಿಯಾಗಿ ನಡೆಯುತ್ತಿತ್ತು. ಈಗ ಎಲ್ಲ ಹಾಳಾಗಿದೆ ಎಂದು ತಮ್ಮ ಗತವೈಭವವನ್ನು ತೆರೆದಿಡುತ್ತಾ ಇವತ್ತಿನ ದುಸ್ಥಿತಿಗೆ ಹಿಡಿಶಾಪ ಹಾಕುತ್ತಾರೆ. ಭೌಗೋಳಿಕವಾಗಿ ನೋಡುವುದಾದರೆ ದಿನದಿಂದ ದಿನಕ್ಕೆ ನಾವು ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಅದನ್ನು ಅಭಿವೃದ್ಧಿ ಎಂದು ಕೂಡ ಕರೆಯುತ್ತಿದ್ದೇವೆ. ನಮಗೆ ಮೂಲಭೂತ ಸೌಲಭ್ಯಗಳು ಬೇಕು. ಆ ಸೌಲಭ್ಯ ಕಲ್ಪಿಸಬೇಕೆಂದರೆ ಅಲ್ಲಿ ಒಂದಷ್ಟು ಬದಲಾವಣೆ ಆಗಲೇ ಬೇಕು.
ಇವತ್ತು ನಮಗೆಲ್ಲರಿಗೂ ಹಣದ ವ್ಯಾಮೋಹ.. ಪ್ರತಿಯೊಂದು ವಿಚಾರದಲ್ಲೂ ಲಾಭ ನಷ್ಟದ ಲೆಕ್ಕಚಾರ ಮಾಡುತ್ತೇವೆ. ಅಪ್ಪ ನೆಟ್ಟು ಬೆಳೆಸಿದ ಹಲಸಿನ ಮರದ ಹಣ್ಣನ್ನು ತಿಂದು ಬೆಳೆಯುವ ಮಗನಿಗೆ ಅದು ಕೊಡುವ ಹಣ್ಣಿಗಿಂತ ಅದನ್ನು ಕಡಿದು ಮಾರಿದರೆ ಸಿಗುವ ಹಣವೇ ಮುಖ್ಯವಾಗುತ್ತದೆ. ಇಲ್ಲಿ ಮರದ ಹಣ್ಣಿಗಿಂತ ಅದು ತಂದುಕೊಡುವ ಹಣವೇ ಕೆಲಸ ಮಾಡುತ್ತದೆ. ಇವತ್ತು ಎಲ್ಲ ಕಡೆಯೂ ಕಾಡು ನಾಶವಾಗಿದೆ. ಹೀಗಿರುವಾಗ ಬೇಸಿಗೆಯಲ್ಲಿ ಬೆಟ್ಟಕ್ಕೆ, ಕಾಡಿಗೆ ಬೆಂಕಿಯಿಡುವ ಕಿಡಿಗೇಡಿಗಳು ನಮ್ಮ ಮಧ್ಯೆ ಇರುವುದು ನಿಜಕ್ಕೂ ಬೇಸರದ ಸಂಗತಿಯೇ

ಲಾಭನಷ್ಟ ಲೆಕ್ಕಚಾರದಲ್ಲಿ ಕಳೆದು ಹೋಗುತ್ತಿದ್ದೇವೆ
ಇವತ್ತು ನಾವು ಎಲ್ಲವನ್ನೂ ಲಾಭನಷ್ಟ ಲೆಕ್ಕಾಚಾರದಿಂದ ನೋಡುತ್ತಿದ್ದೇವೆ. ಹೀಗಾಗಿ ಮಾವು, ಹಲಸು, ನೇರಳೆ ಸೇರಿದಂತೆ ಹಲವು ರೀತಿಯ ಪರಿಸರ ಸ್ನೇಹಿ ಗಿಡನೆಟ್ಟು ಅದರಿಂದ ಒಂದಷ್ಟು ಜೀವಿಗಳಿಗೆ ಬದುಕಲು ಅವಕಾಶ ಮಾಡಿಕೊಡುವ ಮನೋಭಾವವಿಲ್ಲ. ಇವತ್ತು ಗಿಡನೆಟ್ಟರೆ ಇನ್ನೊಂದು ಹತ್ತು ವರ್ಷ ಬಿಟ್ಟು ಕಡಿದರೆ ಅದರಿಂದ ಎಷ್ಟು ಆದಾಯ ಬರಬಹುದು ಎಂದು ಆಲೋಚಿಸುತ್ತಿದ್ದೇವೆ. ಜತೆಗೆ ಆದಾಯ ತಂದು ಕೊಡುವ ನೀಲಗಿರಿ, ಸಿಲ್ವರ್ ಓಕ್, ತೇಗದ ಮರಗಳನ್ನು ನೆಡುತ್ತೇವೆ. ಅವುಗಳಿಂದ ಹಸಿರುವ ಪ್ರಪಂಚವನ್ನು ಸೃಷ್ಠಿ ಮಾಡುತ್ತಿದ್ದೇವೆ.
ಮುಂದೆ ಆದಾಯವನ್ನು ನಿರೀಕ್ಷಿಸುತ್ತಿದ್ದೇವೆ. ಆದರೆ ಪರಿಸರ ಸ್ನೇಹಿ ಅರಣ್ಯವನ್ನು ಪಡೆಯಲು ಸಾಧ್ಯನಾ ಎಂದು ನಾವ್ಯಾರು ಯೋಚಿಸುತ್ತಿಲ್ಲ. ಹೀಗಾಗಿಯೇ ಬಿಸಿಲಧಗೆ ತಲೆ ಸುಡುತ್ತಿದೆ. ಇನ್ನಾದರೂ ಮನೆ ಮುಂದಿರುವ ಜಾಗದಲ್ಲಿ ಗಿಡನೆಟ್ಟು ಪೋಷಿಸುವ ಕೆಲಸ ಮಾಡೋಣ ಅದು ಒಂದಿಷ್ಟು ನೆರಳು ನೀಡಿದರೆ ನೆಮ್ಮದಿಯುಸಿರು ಬಿಡಬಹುದೇನೋ? ಆದರೆ ಆ ಕೆಲಸ ಮಾಡುವ ಮನಸ್ಸು ಎಷ್ಟು ಜನಕ್ಕಿದೆ?
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications