• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುರೇಕಾ! ಭೂಮಿಗೆ ಪಾರ್ಸಲ್ ಬರಲಿದೆ ಕ್ಷುದ್ರಗ್ರಹದ ತುಣುಕು!

|
Google Oneindia Kannada News

ಬ್ರಹ್ಮಾಂಡದಲ್ಲಿ ಮನುಷ್ಯ ಅತಿಚಿಕ್ಕ ಜೀವಿಯೇ ಆದರೂ, ಮಾನವನ ಸಾಧನೆ ಮಾತ್ರ ಅಪಾರ. ಎಲ್ಲೋ ಕೂತು ಸಾವಿರಾರು ಕೋಟಿ ಕಿಲೋ ಮೀಟರ್ ದೂರದ ವಸ್ತುಗಳನ್ನು ಗುರುತಿಸಬಲ್ಲ ತಂತ್ರಜ್ಞಾನ ಮಾನವರ ಭವಿಷ್ಯ ಬದಲಿಸುತ್ತಿದೆ. ಇದೇ ರೀತಿ ಬಹುದೊಡ್ಡ ಸಾಧನೆಗಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಸಿದ್ಧವಾಗಿದೆ. 'ನಾಸಾ' ಸಂಸ್ಥೆ ಬಾಹ್ಯಾಕಾಶದಲ್ಲಿ ಒಂದಲ್ಲಾ ಒಂದು ಸಾಹಸ ಮಾಡುತ್ತಲೇ ಇರುತ್ತದೆ.

ಇದೀಗ ಕ್ಷುದ್ರಗ್ರಹ ಬಗೆಯಲು ನಾಸಾ ಕಳಿಸಿದ್ದ ಒಸಿರಿಸ್‌-ರೆಕ್ಸ್‌(OSIRIS-REx) ಹೆಸರಿನ ಬಾಹ್ಯಾಕಾಶ ನೌಕೆ ಭೂಮಿಯತ್ತ ಧಾವಿಸುತ್ತಿದೆ.

'ಬೆನ್ನು' ಹೆಸರಿನ ಕ್ಷುದ್ರಗ್ರಹದ ಸ್ಯಾಂಪಲ್ ಹೊತ್ತು ತರಲು ಈ ನೌಕೆಯನ್ನು ನಾಸಾ ಉಡಾಯಿಸಿತ್ತು. ನೌಕೆ 'ಬೆನ್ನು' ಕ್ಷುದ್ರಗ್ರಹದ ಬೆನ್ನುಹತ್ತಿ 2018ರಲ್ಲಿ ಅತ್ಯಂತ ಸಮೀಪಕ್ಕೆ ತಲುಪಿ, 2 ವರ್ಷ ಕಾಲ ಅಲ್ಲೇ ಸುತ್ತಾಡಿತ್ತು. ಇದೀಗ 'ಬೆನ್ನು' ಕ್ಷುದ್ರಗ್ರಹದ ಮೇಲ್ಮೈನಿಂದ ಕಲ್ಲು, ಮಣ್ಣನ್ನು ಹೊತ್ತು ಒಸಿರಿಸ್‌-ರೆಕ್ಸ್‌ ಭೂಮಿಯತ್ತ ಮರಳಿ ತನ್ನ ಬರುತ್ತಿದೆ. ಭವಿಷ್ಯವನ್ನೇ ಬದಲಿಸಬಲ್ಲ ಈ ನೌಕೆ 2023ರ ಸೆಪ್ಟೆಂಬರ್‌ 24ರಂದು ಭೂಮಿಗೆ ಮರಳಲಿದೆ ಎಂದು ನಾಸಾ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಜಪಾನ್ ಸಾಲಿಗೆ ನಾಸಾ..!

ಜಪಾನ್ ಸಾಲಿಗೆ ನಾಸಾ..!

2020ರ ಡಿಸೆಂಬರ್‌ನಲ್ಲಿ ಇಡೀ ಜಗತ್ತು ತಿರುಗಿ ನೋಡುವಂತಹ ಸಾಧನೆ ಮಾಡಿದ್ದು ಜಪಾನ್. ಇಡೀ ಜಗತ್ತು ಕ್ಷುದ್ರಗ್ರಹದ ಮೇಲೆ ಗಣಿಗಾರಿಕೆ ನಡೆಸುವ ಮಾತು ಆಡುತ್ತಿದ್ದರೆ ಜಪಾನ್ ಅದಾಗಲೇ ಕ್ಷುದ್ರಗ್ರಹ ಸ್ಯಾಂಪಲ್ ತಂದುಬಿಟ್ಟಿತ್ತು. ಈ ಮೂಲಕ ಕ್ಷುದ್ರಗ್ರಹದ ತುಣುಕನ್ನು ಯಶಸ್ವಿಯಾಗಿ ಭೂಮಿಗೆ ತಂದ ಮೊಟ್ಟ ಮೊದಲನೇ ದೇಶವೆಂಬ ಹೆಗ್ಗಳಿಕೆಗೂ ಜಪಾನ್ ಪಾತ್ರವಾಗಿತ್ತು. ಜಪಾನ್ ಸಾಧನೆ ಸಾಲಿಗೆ ಈಗ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ' ಕೂಡ ಸೇರ್ಪಡೆಯಾಗುತ್ತಿದೆ. ಆದರೆ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಇನ್ನೂ 2 ವರ್ಷ ಕಾಯಬೇಕು.

‘ಬೆನ್ನು’ ಕ್ಷುದ್ರಗ್ರಹವೇ ಅಚ್ಚರಿ..!

‘ಬೆನ್ನು’ ಕ್ಷುದ್ರಗ್ರಹವೇ ಅಚ್ಚರಿ..!

ನಮ್ಮ ಬ್ರಹ್ಮಾಂಡದಲ್ಲಿ ನೂರಾರು ಬಿಲಿಯನ್ ನಕ್ಷತ್ರಗಳಿವೆ, ಹಾಗೇ ಸಾವಿರಾರು ಬಿಲಿಯನ್ ಗ್ರಹಗಳು ಇವೆ. ಇನ್ನು ಕ್ಷುದ್ರಗ್ರಹಗಳ ಲೆಕ್ಕ ಹಾಕುವುದು ತುಂಬಾನೆ ಕಷ್ಟ ಬಿಡಿ. ಏಕೆಂದರೆ ಲೆಕ್ಕಕ್ಕೇ ಸಿಗದಷ್ಟು ಕ್ಷುದ್ರಗ್ರಹಗಳು ನಮ್ಮ ಬ್ರಹ್ಮಾಂಡದಲ್ಲಿ ಅಲೆದಾಡುತ್ತಿವೆ. ಹಾಗಂತಾ ಬಾಹ್ಯಾಕಾಶ ವಿಜ್ಞಾನಿಗಳು ಪ್ರತಿಯೊಂದು ಕ್ಷುದ್ರಗ್ರಹಗಳ ಹಿಂದೆ ಬಿದ್ದಿಲ್ಲ. ಕೆಲವೇ ಕೆಲವು ಕ್ಷುದ್ರಗ್ರಹಗಳು ವಿಜ್ಞಾನಿಗಳ ತಲೆ ಕೆಡಿಸಿವೆ. ಇದರಲ್ಲಿ ‘ಬೆನ್ನು' ಕ್ಷುದ್ರಗ್ರಹವೂ ಒಂದಾಗಿದ್ದು, ಬೆನ್ನು' ಅಚ್ಚರಿಗಳ ಅಕ್ಷಯಪಾತ್ರೆ ಎನ್ನಬಹುದು. ಬೆನ್ನು ಕ್ಷುದ್ರಗ್ರಹ 1,600 ಅಡಿ ಅಗಲವಿದ್ದು, 4.5 ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ‘ಬೆನ್ನು' ಕ್ಷುದ್ರಗ್ರಹ ಭೂಮಿಯಿಂದ ಸುಮಾರು 287 ದಶಲಕ್ಷ ಕಿಲೋಮೀಟರ್‌ ದೂರದಲ್ಲಿದೆ.

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಸಿಕ್ಕರೆ ಫುಲ್ ರಿಚ್..!

ಕ್ಷುದ್ರಗ್ರಹ ಕೇವಲ ಬಂಡೆಯ ತುಣುಕಲ್ಲ ಬದಲಾಗಿ ಕ್ಷುದ್ರಗ್ರಹ ಅಪಾರ ಪ್ರಮಾಣದ ಸಂಪತ್ತು ಹೊಂದಿರುತ್ತೆ. ಈ ರೀತಿ ಕ್ಷುದ್ರಗ್ರಹದ ಮೇಲೆ ಮೈನಿಂಗ್ ಮಾಡುವ ಆಲೋಚನೆ ಕೂಡ ಮಾನವರಲ್ಲಿ ಇದ್ದು, ಈಗಾಗಲೇ ಕ್ಷುದ್ರಗ್ರಹ ಗಣಿಗಾರಿಕೆಗೆ ಹಲವು ಪ್ರಯತ್ನಗಳು ಸಾಗಿವೆ. ಕೆಲವು ದೇಶಗಳು ಅದರಲ್ಲಿ ಯಶಸ್ಸು ಕಾಣುತ್ತಿವೆ. ಹೀಗಾಗಿ ಕ್ಷುದ್ರಗ್ರಹ ಅಧ್ಯಯನಕ್ಕೆ ಶ್ರೀಮಂತ ರಾಷ್ಟ್ರಗಳು ಒಂದೊಂದು ದೊಡ್ಡ ವಿಜ್ಞಾನಿಗಳ ತಂಡ ರಚಿಸಿ, ಬಾಹ್ಯಾಕಾಶದಲ್ಲಿ ಇಣುಕಿ ನೋಡುತ್ತಿದ್ದಾರೆ. ಅದರಲ್ಲೂ ಮಂಗಳ ಹಾಗೂ ಗುರು ಗ್ರಹದ ಮಧ್ಯೆ ಇರುವಂತಹ ಕ್ಷುದ್ರಗ್ರಹ ಹೊನಲು ಅಥವಾ ಕ್ಷುದ್ರಗ್ರಹ ಸಾಲಿನಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ವಜ್ರ ಅಡಗಿದೆ.

ಊಹೆಗೂ ನಿಲುಕದಷ್ಟು ಸಂಪತ್ತು..!

ಊಹೆಗೂ ನಿಲುಕದಷ್ಟು ಸಂಪತ್ತು..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

English summary
NASA's OSIRIS-REx spacecraft started journey towards Earth along with asteroid samples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X