• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಟ್ರೋದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ 'ನಾಗವಲ್ಲಿ': ವಿಡಿಯೋ

ಮೆಟ್ರೋದಲ್ಲಿ ನಾಗವಲ್ಲಿ ಕಾಣಿಸಿಕೊಂಡಿದ್ದು ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
|
Google Oneindia Kannada News

ಕನ್ನಡ ಚಿತ್ರರಂಗದಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಸಿನಿಮಾದ ನಾಗವಲ್ಲಿ ಪಾತ್ರ ಇಂದಿಗೂ ಮರಿಯುವಂತದ್ದಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸೌಂದರ್ಯಾ ಅಭಿನಯದ 'ಆಪ್ತಮಿತ್ರ' (2004) ಚಿತ್ರದಲ್ಲಿ "ಸರಸಕು ರಾ...ರಾ..." ಎಂದು ಪ್ರೇಕ್ಷಕರನ್ನು ಸೆಳೆದ ಅಮೋಘ ಪಾತ್ರ ನಾಗವಲ್ಲಿಯದ್ದು. ಇಂದಿಗೂ ಜನರಲ್ಲಿ ಮಾತ್ರ ನಾಗವಲ್ಲಿ ಪಾತ್ರ ಅಚ್ಚಳಿಯದಂತೆ ಉಳಿದಿದೆ. ಈ ನಡುವೆ ನಾಗವಲ್ಲಿ ಮೆಟ್ರೋದಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದೆ. ನಾಗವಲ್ಲಿ ಅಂದಾಕ್ಷಣ ಶಾಕ್ ಆಗಬೇಡಿ. ನಾಗವಲ್ಲಿ ಉಡುಪುದಾರಿಣಿಯೊಬ್ಬಳು ಮೆಟ್ರೋದಲ್ಲಿ ಕಾಣಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಟ್ರೋದಲ್ಲಿ ಆಕೆ ನಾಗವಲ್ಲಿಯಂತೇ ನಟಿಸಿದ್ದಾಳೆ.

ನಿನ್ನೆಯಷ್ಟೇ ಯುವತಿಯೊಬ್ಬಳು ಗಾಜಿಯಾಬಾದ್‌ನಲ್ಲಿ ಹೆದ್ದಾರಿ ಮಧ್ಯೆ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಶುರು ಮಾಡಿದ್ದಳು. ಇದರಿಂದ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಆಕೆಗೆ 17 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ ನೋಯ್ಡಾದಲ್ಲಿ ಯುವತಿಯೊಬ್ಬಳು ನಾಗವಲ್ಲಿ ರೂಪ ತಾಳಿ ಪ್ರಯಾಣಿಕರನ್ನು ಬೆದರಿಸಿದ್ದಾಳೆ.

Vishnuvardhan memorial: ನಟ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ದಿನ ನಿಗದಿVishnuvardhan memorial: ನಟ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೆ ದಿನ ನಿಗದಿ

ತಲೆಗೂದಲು ಹರಡಿಕೊಂಡು, ಕಣ್ ಕಾಡಿಗೆಯನ್ನು ಕಣ್ಣು ತುಂಬಾ ಹಚ್ಚಿಕೊಂಡು, ಕಾಲಲ್ಲಿ ಗೆಜ್ಜೆ ಕಟ್ಟಿ, ದೊಡ್ಡ ಕಣ್ಣು ಬಿಡುತ್ತಾ, ಏನೇನೋ ಬಡಬಡಾಯಿಸುತ್ತಾ ಇರುವುದನ್ನು ಕಂಡು ಮೆಟ್ರೋದಲ್ಲಿ ಕೆಲವರು ಹೆದರಿಕೊಂಡು ಓಡಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ.

ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಜನರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಡಿಯೋದಲ್ಲಿ ಹುಡುಗಿ ನಡೆದುಕೊಳ್ಳುತ್ತಿರುವ ರೀತಿ ತುಂಬಾ ಭಯಾನಕವಾಗಿ ಕಾಣಿಸುತ್ತದೆ. ಮೆಟ್ರೋದಲ್ಲಿದ್ದ ಮಗು ಕೂಡ ಆಕೆಯನ್ನು ಕಂಡು ಹೆದರುತ್ತದೆ. ಅನೇಕ ಜನರು ಹುಡುಗಿಯ ಈ ಕಾರ್ಯಗಳನ್ನು ತುಂಬಾ ತಮಾಷೆಯಾಗಿ ಕಾಣುತ್ತಿದ್ದಾರೆ. ಆದರೆ ಅನೇಕ ಜನರು ಕೋಪಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Nagavalli appeared in the metro and created fear among people: video

ಈ ವಿಡಿಯೋಗೆ ಜನರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 'ವೇದಿಕೆಯ ಮೇಲೆ ಈ ಕೆಲಸ ಮಾಡಿದ್ದರೆ ಉತ್ತಮ ನಟಿಯಾಗಬಹುದಿತ್ತು' ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ನಾಟಕ ರಂಗಭೂಮಿಯಲ್ಲಿ ಚೆನ್ನಾಗಿ ಕಾಣುತ್ತದೆ. ಆದರೆ ನಿಜ ಜೀವನದಲ್ಲಿ ಅಲ್ಲ' ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಈ ಹುಡುಗಿ ಭದ್ರತಾ ತಪಾಸಣೆಯಿಂದ ಹೇಗೆ ಹೊರಬಂದಳು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. 'ಇದನ್ನು ನೋಡಲು ನನಗೆ ಆಶ್ಚರ್ಯವಾಗಿದೆ. ಅವರ ಓವರ್ ಆ್ಯಕ್ಟಿಂಗ್‌ಗೆ 50 ರೂಪಾಯಿ ಕಡಿತ ಮಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

English summary
A video of a naga appearing in the metro and creating fear among people has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X