ಮೈಸೂರು ಅರಮನೆಯಷ್ಟೇ ಜಗತ್ಪ್ರಸಿದ್ಧಿಯಾಗಿರುವ ಈ 11 ಫಿರಂಗಿಗಳ ಮಹತ್ವ ತಿಳಿಯಿರಿ

ಮೈಸೂರು, ಅಕ್ಟೋಬರ್‌, 15: ತನ್ನದೇ ಸಂಸ್ಕೃತಿ, ಸಂಪ್ರದಾಯದ ವೈಭವವನ್ನು ಜಗತ್ತಿಗೆ ಸಾರುತ್ತಾ ನಿಂತಿರುವ ಮೈಸೂರು ನಗರದ ಅರಮನೆ, ಕಟ್ಟಡ, ಪ್ರತಿಮೆ, ವೃತ್ತ, ರಸ್ತೆ, ಹೀಗೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ. ಹೀಗಿರುವಾಗ ಅರಮನೆಯಲ್ಲಿರುವ ಮತ್ತು ದಸರಾ ದಿನದಂದು ಜಂಬೂಸವಾರಿ ಹೊರಡುವ ವೇಳೆ ಕುಶಾಲತೋಪುಗಳನ್ನು ಸಿಡಿಸಲು ಬಳಸಲಾಗುವ 11 ಫಿರಂಗಿಗಳ ಬಗ್ಗೆಯೂ ಹೇಳಲೇ ಬೇಕಾಗುತ್ತವೆ.

ಈ ಫಿರಂಗಿಗಳು ಒಂದು ಕಾಲದ ಮೈಸೂರು ಸಂಸ್ಥಾನದ ರಾಜರ ಯುದ್ಧದ ಶಕ್ತಿಯ ಕೇಂದ್ರವಾಗಿದ್ದವಲ್ಲದೆ ಕುಶಾಲತೋಪು ಸಿಡಿಸಲು ಬಳಕೆಯಾಗುತ್ತಿದ್ದವು. ಅವತ್ತಿನ ಮಟ್ಟಿಗೆ ಸಂಸ್ಥಾನದ ಘನತೆ ಗೌರವಕ್ಕೆ ತಕ್ಕಂತೆ ಕುಶಾಲತೋಪುಗಳನ್ನು ಸಿಡಿಸಲಾಗುತ್ತಿತ್ತು. ಅದನ್ನು ಬ್ರಿಟೀಷರು ನಿರ್ಣಯಿಸುತ್ತಿದ್ದರು. ಮೈಸೂರು ಸಂಸ್ಥಾನದ ಹೆಮ್ಮೆಯ ಪ್ರತೀಕವಾಗಿರುವ ಫಿರಂಗಿಗಳು ದಸರಾ ಸಂದರ್ಭದಲ್ಲಿ ನಮಗೆ ನೋಡಲು ಸಿಗುತ್ತವೆ.

Mysuru palace cannons: Know speciality of Mysuru palace cannons

ಇತರೆ ದಿನಗಳಲ್ಲಿ ಅರಮನೆಯಲ್ಲಿ ಭದ್ರವಾಗಿರುವ ಫಿರಂಗಿಗಳನ್ನು ದಸರಾ ವೇಳೆ ಹೊರತೆಗೆದು ಸ್ವಚ್ಚಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸಿ ಬಳಿಕ ಗಜಪಡೆ ಮತ್ತು ಅಶ್ವರೋಹಿ ಪಡೆಗಳಿಗೆ ಸಿಡಿಮದ್ದಿನ ತಾಲೀಮಿಗೆ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಫಿರಂಗಿ ಹೊಂದಿದ ರಾಜರು ಯುದ್ಧದಲ್ಲಿ ಜಯಶೀಲರಾಗುತ್ತಿದ್ದರು. ರಾಜಾಡಳಿತ ಕೊನೆಗೊಂಡ ಬಳಿಕ ಅವು ಅರಮನೆ ಮ್ಯೂಸಿಯಂ ಸೇರಿವೆ ದಸರಾ ಸಂದರ್ಭದಲ್ಲಿ ಹೊರ ತೆಗೆದು ಸ್ವಚ್ಛಗೊಳಿಸಿ ವಿಜಯ ಗಣಪತಿ ಪೂಜೆ ಸಲ್ಲಿಸುವ ಮೂಲಕ ಕುಶಾಲ ತೋಪು ಸಿಡಿಸಲು ಮತ್ತು ಮೆರವಣಿಗೆಗೆ ಬಳಸಲಾಗುತ್ತದೆ.

ಕುಶಾಲತೋಪು ಸಿಡಿಸಲು ಬಳಕೆ

ಈಗಾಗಲೇ ಫಿರಂಗಿಗಳನ್ನು ಗಜಪಡೆ ಮತ್ತು ಕುದುರೆಗಳು ಬೆದರದಂತೆ ಸಿಡಿಮದ್ದು ತಾಲೀಮಿಗೆ ಬಳಸಿಕೊಳ್ಳಲಾಗಿದ್ದು, ಇನ್ನು ದಸರಾ ಜಂಬೂಸವಾರಿ ಹೊರಡುವ ಸಂದರ್ಭ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಗೆ ಪುರ್ಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಆರಂಭಿಸಿ ಅದು ಮುಗಿಯುವುದರೊಳಗಾಗಿ 21 ಕುಶಾಲ ತೋಪುಗಳನ್ನು ಇದೇ ಫಿರಂಗಿಯಿಂದ ಸಿಡಿಸಲಾಗುತ್ತದೆ.

ಫಿರಂಗಿ ಮೂಲಕ ಕುಶಾಲತೋಪು ಸಿಡಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ತರಬೇತಿ ಬೇಕಾಗುತ್ತದೆ. ಇದನ್ನು ಸಿಎಆರ್ ಪೊಲೀಸರು ಚಾಚುತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಫಿರAಗಿ ಸಿಡಿಸುವಾಗ ಬಹಳಷ್ಟು ಅವಘಡ ಸಂಭವಿಸಿದೆ ಹೀಗಾಗಿ ಸಿಬ್ಬಂದಿಗೆ ವಿಮೆ ಮಾಡಿಸುವ ಯೋಜನೆ ಜಾರಿಗೆ ಬಂದಿದೆ. ಇಷ್ಟಕ್ಕೂ ಫಿರಂಗಿಯಲ್ಲಿ ಕುಶಾಲತೋಪು ಸಿಡಿಸುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ತಿಳಿಯಿರಿ.

ಕುಶಾಲತೋಪು ಸಿಡಿಸುವುದು ಹೇಗೆ?

ಸುಮಾರು ಮೂರೂವರೆ ಅಡಿ ಉದ್ದದ ಫಿರಂಗಿ ಕೊಳವೆಗೆ ಹದಮಾಡಿದ ಸುಮಾರು ಮೂರು ಕಿಲೋ ಗ್ರಾಂನಷ್ಟು ರಂಜಕದ ಪುಡಿಯನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ ಆಯತಕಾರದ ಪೊಟ್ಟಣದಂತೆ ಮಾಡಲಾಗುತ್ತದೆ. ಅದನ್ನು ಕೊಳವೆಗೆ ಹಾಕಿ ನಂತರ ಕಬ್ಬಿಣದ ಸಾಧನವೊಂದರ ಮೂಲಕ ತಳ್ಳಿ ಗಟ್ಟಿಗೊಳಿಸಲಾಗುತ್ತದೆ. ನಂತರ ಅದಕ್ಕೆ ಬೆಂಕಿ ಹಚ್ಚಿದಾಗ ಅದು ಭಾರೀ ಶಬ್ದದೊಂದಿಗೆ ಸ್ಫೋಟಗೊಳ್ಳುತ್ತದೆ. ಆ ನಂತರ ಬಿಸಿಯಿರುವ ಕೊಳವೆಯನ್ನು ಸಿಂಬ ಎಂಬ ಸಾಧನದಿಂದ ಸ್ವಚ್ಛಗೊಳಿಸುತ್ತಾರೆ.

ನಾವು ಫಿರಂಗಿಗಳ ಇತಿಹಾಸವನ್ನು ಮೆಲುಕು ಹಾಕಿದರೆ ಅವುಗಳ ಬಳಕೆ ಸುಮಾರು 12ನೇ ಶತಮಾನದಿಂದ ಆರಂಭವಾದ ಬಗ್ಗೆ ಮಾಹಿತಿ ಸಿಗುತ್ತದೆ. ಇದನ್ನು ಮೊಟ್ಟ ಮೊದಲಿಗೆ 1260ರಲ್ಲಿ ಚೀನಿಯರು ಆವಿಷ್ಕರಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಲು ಆರಂಭಿಸಿದರು. 13ನೇ ಶತಮಾನದಲ್ಲಿ ಲಿಬಿಯಾ ದೇಶವು ಸ್ಪೇನ್ ದೇಶದ ವಿರುದ್ಧದ ಯುದ್ಧದಲ್ಲಿ ಪ್ರಪ್ರಥಮವಾಗಿ ಫಿರಂಗಿಯನ್ನು ಬಳಸಿತು ಎನ್ನಲಾಗುತ್ತಿದೆ.

ಮೈಸೂರು ರಾಜವೈಭವಕ್ಕೆ ಸಾಕ್ಷಿ

16ನೇ ಶತಮಾನದಲ್ಲಿ ಸುಧಾರಿತ ಫಿರಂಗಿಗಳ ನಿರ್ಮಾಣ ನಡೆಯಿತು. ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 10 ಅಡಿ ಉದ್ದ, 9,100 ಕೆ.ಜಿ.ತೂಕದ ಉಕ್ಕಿನ ಫಿರಂಗಿಗಳಿತ್ತು ಎನ್ನುವುದಕ್ಕೆ ಈಗಲೂ ಶ್ರೀರಂಗಟ್ಟಣದ ದರಿಯಾ ದೌಲತ್ ಅರಮನೆಯ ಮುಂಭಾಗದಲ್ಲಿರುವ ಫಿರಂಗಿ ಸಾಕ್ಷಿಯಾಗಿದೆ. ಅದು ಏನೇ ಇರಲಿ ಮೈಸೂರಿನ ಅರಮನೆಯಲ್ಲಿರುವ ಫಿರಂಗಿಗಳು ಇಂದಿಗೂ ಸುಸಜ್ಜಿತವಾಗಿದ್ದು, ಮೈಸೂರು ರಾಜವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+