ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ: ಇದು ಸಿಡಿಸುವ ಪಟಾಕಿ ಅಲ್ಲ, ತಿನ್ನುವ ಪಟಾಕಿ!

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಇಂದು ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಾಗಿ ಉಳಿದಿಲ್ಲ. ಬಹುತೇಕರು ದೀಪಾವಳಿ ಎಂದರೆ 'ಪಟಾಕಿ ಹಬ್ಬ' ಎಂದೇ ಭಾವಿಸಿದ್ದಾರೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಿಶೇಷ ಏನು ಗೊತ್ತಾ? ಇಲ್ಲಿ ಪಟಾಕಿಯನ್ನು ಸುಡುವುದಿಲ್ಲ ಬದಲಿಗೆ ತಿನ್ನುತ್ತಾರೆ!

ಆಶ್ಚರ್ಯವಾದರೂ ನಿಜ, ಸುರ್‌ಸುರ್ ಬತ್ತಿ, ಕೃಷ್ಣನ ಚಕ್ರ, ಬಾಂಬು, ರಾಕೆಟ್, ಲಕ್ಷ್ಮಿ ಪಟಾಕಿ ಎಲ್ಲವೂ ಇಲ್ಲಿ ಚಾಕೋಲೇಟ್ ರೂಪ ಪಡೆದುಕೊಂಡಿವೆ. ನಿಮಗಿಷ್ಟವಾದ ಪಟಾಕಿ ಮಾದರಿಯಲ್ಲಿ ಚಾಕೋಲೇಟ್ ಪಟಾಕಿ ಸಿಗುತ್ತದೆ. ಸಾಮಾನ್ಯವಾಗಿ ಉತ್ತರಭಾರತದಲ್ಲಿ ಪಟಾಕಿ ರೂಪದ ಚಾಕೋಲೇಟ್ ಹೆಚ್ಚು ಫೇಮಸ್. ದೀಪಾವಳಿ ಬಂದರೆ ಸಾಕು ಮಕ್ಕಳು ವಿನೂತನ ಬಗೆಯ ಚಾಕೋಲೇಟ್ ಪಟಾಕಿಯನ್ನು ಸವಿಯಲು ಇಷ್ಟಪಡುತ್ತಾರೆ.

ದೀಪಾವಳಿ 2021: ತಡರಾತ್ರಿ ಆಹಾರ ಸೇವಿಸುವ ಮುನ್ನ ಗಮನಿಸಿದೀಪಾವಳಿ 2021: ತಡರಾತ್ರಿ ಆಹಾರ ಸೇವಿಸುವ ಮುನ್ನ ಗಮನಿಸಿ

ನೆಲ ಚಕ್ರದ ಬರ್ಫಿ, ನಕ್ಷತ್ರ ಕಡ್ಡಿಯ ಚಾಕೋಲೇಟ್, ಸಿಹಿಸಿಹಿ ಸುರ್‌ಸುರ್ ಬತ್ತಿಯಿಂದ ಹಿಡಿದು ಎಲ್ಲ ಬಗೆಯ ತಿನಿಸುಗಳು ಬೇಕರಿಯಲ್ಲಿ ಸಿಗುತ್ತವೆ. ಪಟಾಕಿ ರೂಪ ಈ ತಿನಿಸುಗಳನ್ನು ನೋಡಿದವರು ಕ್ಷಣ ಕಾಲ ಆತಂಕಗೊಳ್ಳದೆ ಇರಲಾರರು. ಅಂತೆಯೇ ಅರಮನೆ ನಗರಿ ಮೈಸೂರಿನಲ್ಲೂ ಇದೀಗ ಪಟಾಕಿ ಚಾಕೋಲೇಟ್ ಮಕ್ಕಳ ಆಕರ್ಷಣೆ ಕೇಂದ್ರಬಿಂದುವಾಗಿವೆ. ಸುಡುಮದ್ದುಗಳೆಲ್ಲಾ ಇಲ್ಲಿ ಸಿಹಿತಿಂಡಿಯಾಗಿ ಪರಿವರ್ತನೆಯಾಗಿವೆ!

3 ವರ್ಷದಿಂದ ಚಾಕೊಲೇಟ್ ಪಟಾಕಿ

3 ವರ್ಷದಿಂದ ಚಾಕೊಲೇಟ್ ಪಟಾಕಿ

ಕಳೆದ ಎರಡು ದಶಕಗಳಿಂದ ಚಾಕೊಲೇಟ್ ಉದ್ಯಮದಲ್ಲಿ ಮೈಸೂರಿನ 'ಕೊಕೊ ವರ್ಕ್ಸ್' ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದೀಗ ಮೂರು ವರ್ಷದಿಂದ ಸಿಹಿತಿನಿಸಿನ ಚಾಕೋಲೇಟ್ ಪಟಾಕಿಗಳನ್ನು ಕೊಕೊ ವರ್ಕ್ಸ್ ತಯಾರಿಸುತ್ತಿದೆ. ಗೋಡಂಬಿ ಹಾಗೂ ಡ್ರೈ ಪ್ರೂಟ್ಸ್‌ಗಳನ್ನು ಬಳಸಿ ವಿವಿಧ ನಮೂನೆಯ ಚಾಕೋಲೇಟ್‌ಗಳನ್ನು ಮಾಡಲಾಗುತ್ತದೆ.

ಚಾಕೊಲೇಟ್ ಪಟಾಕಿ ತಯಾರಿಸುವ ವಿಧಾನ

ಚಾಕೊಲೇಟ್ ಪಟಾಕಿ ತಯಾರಿಸುವ ವಿಧಾನ

ಮೊದಲಿಗೆ ಚಾಕೊಲೇಟ್ ಕರಗಿಸಿ, ಅವುಗಳನ್ನು ಹದಗೊಳಿಸಿ ನಂತರ ಅವುಗಳನ್ನು ಪಟಾಕಿ ಆಕಾರದ ಅಚ್ಚುಗಳಾಗಿ ಅಚ್ಚು ಮಾಡಲಾಗುತ್ತದೆ. ಬಳಿಕ ಅದನ್ನು ಸುತ್ತಿ ಆಯಾ ಪಟಾಕಿಯ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ. ಜೊತೆಗೆ ಕ್ರ್ಯಾಕರ್‌ನಂತೆ ಕಾಣುವ ಹಾಗೆ ಮಾಡಲಾಗುತ್ತದೆ. ಈ ವರ್ಷ 1 ಸಾವಿರ ಬಾಕ್ಸ್ ಖಾಲಿಯಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊಕೊ ವರ್ಕ್ಸ್ ಮಾಲೀಕರಾದ ಪೂರ್ಣಿಮಾ

ಕೊಕೊ ವರ್ಕ್ಸ್ ಮಾಲೀಕರಾದ ಪೂರ್ಣಿಮಾ

''ನಾವು ಕಳೆದ 3 ವರ್ಷದಿಂದ ಚಾಕೋಲೇಟ್ ಪಟಾಕಿ ತಯಾರಿಸುತ್ತಿದ್ದೇವೆ. ಮೈಸೂರು ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ವಿವಿಧೆಡೆಗೂ ಕಳುಹಿಸಿಕೊಡುತ್ತೇವೆ. ಉತ್ತರ ಭಾರತದಲ್ಲಿ ಚಾಕೋಲೇಟ್‌ನಿಂದ ತಯಾರಿಸಿದ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಜನರ ಸ್ಪಂದನೆ ಚೆನ್ನಾಗಿದೆ,'' ಎನ್ನುತ್ತಾರೆ ಕೊಕೊ ವರ್ಕ್ಸ್ ಮಾಲೀಕರಾದ ಪೂರ್ಣಿಮಾ.

ಮಕ್ಕಳಿಗೆ ಅಚ್ಚುಮೆಚ್ಚು

ಮಕ್ಕಳಿಗೆ ಅಚ್ಚುಮೆಚ್ಚು

ಸಾಮಾನ್ಯವಾಗಿ ದೀಪಾವಳಿ ಬಂದರೆ ಸಾಕು ಮಕ್ಕಳು ಪೋಷಕರನ್ನು ಪಟಾಕಿ ತೆಗೆದುಕೊಡಿ ಎಂದು ಹಠ ಹಿಡಿಯುತ್ತಾರೆ. ಆದರೆ, ಪಟಾಕಿಯಿಂದ ಶಬ್ದ ಹಾಗೂ ವಾಯು ಮಾಲಿನ್ಯ ಉಂಟಾಗುತ್ತದೆ. ಇದು ಗೊತ್ತಿದ್ದರೂ ಮಕ್ಕಳು ಹಠಕ್ಕೆ ಬಿದ್ದಾಗ ಪೋಷಕರು ಅನಿವಾರ್ಯವಾಗಿ ಕೊಡಿಸುತ್ತಾರೆ. ಆದರೆ, ಮತ್ತೆ ಕೆಲವರು ಆಕಾಶ ಬುಟ್ಟಿ ತೆಗೆದುಕೊಟ್ಟು ಸಮಾಧಾನ ಮಾಡುತ್ತಾರೆ. ಆದರೆ, ಇದೀಗ ಪಟಾಕಿ ಹೋಲುವ ಚಾಕೊಲೇಟ್ ಇರುವುದರಿಂದ ಬಹುತೇಕರು ಪಟಾಕಿ ಬದಲು ಇದನ್ನೇ ಕೊಡಿಸುತ್ತಿದ್ದಾರೆ. ಇದು ಮಕ್ಕಳಿಗೂ ತುಂಬಾ ಇಷ್ಟವಾಗಿದ್ದು, ಬೇಡಿಕೆಯೂ ಸೃಷ್ಟಿಯಾಗಿದೆ.

ಬಾಲಕ ಮನೋಹರ್ ಖುಷಿ ವ್ಯಕ್ತಪಡಿಸಿದ್ದಾನೆ

ಬಾಲಕ ಮನೋಹರ್ ಖುಷಿ ವ್ಯಕ್ತಪಡಿಸಿದ್ದಾನೆ

''ವರ್ಷದಿಂದ ವರ್ಷಕ್ಕೆ ಪಟಾಕಿ ಸಿಡಿಸುವವರ ಮನಸ್ಥಿತಿ ಬದಲಾಗುತ್ತಿದೆ. ನಾನು ಕೂಡ ಕಳೆದ ಎರಡು ವರ್ಷದಿಂದ ಪಟಾಕಿ ಕೊಡಿಸಿ ಎಂದು ಅಪ್ಪಅಮ್ಮನನ್ನು ಕೇಳುವುದಿಲ್ಲ. ಪರಿಸರ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹಾಗಾಗಿ ಕಳೆದ ವರ್ಷದಿಂದ ನಾನು ಪಟಾಕಿ ಚಾಕೋಲೇಟ್ ತಿನ್ನುವುದನ್ನು ಇಷ್ಟಪಡುತ್ತಿದ್ದೇನೆ. ಈ ಚಾಕೋಲೇಟ್ ತಿಂದರೆ ಪಟಾಕಿ ಹೊಡೆದಷ್ಟೇ ಖುಷಿ ಸಿಗುತ್ತದೆ,'' ಎಂದು ವಿಜಯನಗರ ಬಾಲಕ ಮನೋಹರ್ ಖುಷಿ ವ್ಯಕ್ತಪಡಿಸಿದ್ದಾನೆ.

English summary
Mysuru based Coco works company manufacturing firecrackers shaped chocolates during Deepavali festival. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X