ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷದ ಕನಸು ನನಸಾಗಿ ನಾನು ಮೊದಲ ಕಾರು ಖರೀದಿಸಿದ ಆ ಕ್ಷಣ

By ಎಚ್.ಎಸ್.ವಿನಯ್, ಹೆಬ್ಬೂರು
|
Google Oneindia Kannada News

ಎಲ್ಲರಿಗೂ ಹಾಯ್, ಹಲೋ, ನಮಸ್ಕಾರ. ಮೊದಲಿಗೆ ನನ್ನ ಪರಿಚಯ ಹೇಳಿಕೊಂಡು ಬಿಡ್ತೀನಿ. ನನ್ನ ಹೆಸರು ವಿನಯ್. ತುಮಕೂರಿಗೆ ಹತ್ತಿರದಲ್ಲಿರುವ ಹೆಬ್ಬೂರು ನನ್ನೂರು. ಅಪ್ಪ-ಅಮ್ಮ ಹಾಗೂ ನಾನು... ಹೀಗೆ ಮೂರೇ ಜನ ಇರುವ ಪುಟ್ಟ ಕುಟುಂಬ ನಮ್ಮದು. ಊರಿಗೇ ಊರೇ ವಯಸ್ಸಾದವರಿಂದ ತುಂಬಿಹೋಗುತ್ತಿರುವ ಈ ದಿನಮಾನದಲ್ಲಿ ನಾನೂ ಸೇರಿದ ಹಾಗೆ ನನ್ನಂಥವರು ಒಂದಿಷ್ಟು ಜನ ಇಲ್ಲೇ ಉಳಿದಿದ್ದೀವಿ.

ಬೆಂಗಳೂರಿನಂಥ ದೊಡ್ಡ ನಗರಗಳಿಂದ ರಜಾ ದಿನಕ್ಕೋ ಅಥವಾ ಹಬ್ಬ-ಹರಿದಿನ, ಜಾತ್ರೆಗಳಿಗೆ ಬರುವ ನನ್ನ ಓರಗೆಯ ಅಥವಾ ಚಿಕ್ಕವಯಸ್ಸಿನವರ ಪಾಲಿಗೆ ಹೇಳಿಕೊಳ್ಳುವುದಕ್ಕೆ ಎಷ್ಟೊಂದು ವಿಚಾರಗಳು ಇರುತ್ತವೆ. ಮೆಟ್ರೋ ರೈಲಿನಿಂದ ಹೊಸ ಐಫೋನ್ ನ ತನಕ. ರಾಯಲ್ ಚಾಲೆಂಜರ್ಸ್ ಕ್ರಿಕೆಟ್ ಮ್ಯಾಚ್ ನಿಂದ ತಾವು ಕೆಲಸ ಮಾಡುವ ಕಂಪೆನಿ, ಪಡೆಯುವ ಸಂಬಳ, ಗರ್ಲ್ ಫ್ರೆಂಡ್...ಓಹ್, ಹೀಗೇ ಎಷ್ಟೊಂದು.

ಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆಬಾಂಬೆ ಟು ಬಾರ್ಸಿಲೋನಾ: 'ಬೀದಿ ಬಾಲಕ'ನೊಬ್ಬನ ಯಶೋಗಾಥೆ

ಈ ದಿನ ನನಗೂ ಒಂದು ವಿಚಾರ ಹೇಳಿಕೊಳ್ಳಬೇಕಿದೆ. ಇದು ಯಾವ ದೊಡ್ಡ ಸಾಧನೆ ಅಂತ ಬಹಳ ಜನರಿಗೆ ಅನ್ನಿಸಿದರೂ ಪರವಾಗಿಲ್ಲ. ಈ ದಿನಗಳಲ್ಲಿ 'ಅಲ್ಪಸಂಖ್ಯಾತ'ರಾಗುತ್ತಿರುವ ನನ್ನಂಥ ಕೆಲವರಿಗಾದರೂ ಈ ಅನುಭವ ಹಂಚಿಕೊಂಡಿರುವುದು ಇಷ್ಟವಾಗಬಹುದು ಅನ್ನೋ ಸಣ್ಣ ನಂಬಿಕೆ ನನ್ನದು.

My first car purchase experience

ಮೊನ್ನೆಯಷ್ಟೇ, ನನ್ನ ಜೀವನದ ಮೊದಲ ಕಾರು ತಗೊಂಡೆ. ನನ್ನದೇ ದುಡಿಮೆಯಲ್ಲಿ ತೆಗೆದುಕೊಂಡ ಆ ಕಾರಿನ ಕೀ ತೆಗೆದುಕೊಳ್ಳುವಾಗ ಒಂದು ಕಡೆ ಅದುಮಿಟ್ಟುಕೊಳ್ಳಲಾಗದ ಖುಷಿ, ಮತ್ತೊಂದು ಕಡೆ ಇದು ನಾನೇನಾ ಅನ್ನೋ ಅನುಮಾನ, ಇಷ್ಟು ಬೇಗ ನಾನಂದುಕೊಂಡ ಕನಸು ನೆರವೇರಿತಾ ಎಂಬ ಗುಮಾನಿ...ಹೀಗೆ ಎಲ್ಲ ಸೇರಿಕೊಂಡು, ಎರಡು ದಿನ ಏನೇನೂ ಮಾತನಾಡದಿರುವ ಹಾಗೆ ಆಗೋಯ್ತು.

ಕಾರು ಕೊಳ್ಳಬೇಕೆಂಬ ಕನಸಿನ ಕುದುರೆಯನೇರಿಕಾರು ಕೊಳ್ಳಬೇಕೆಂಬ ಕನಸಿನ ಕುದುರೆಯನೇರಿ

ಅದರಲ್ಲೂ ಅಪ್ಪ-ಅಮ್ಮನ ಜತೆಗೆ ಷೋ ರೂಮ್ ಗೆ ಹೋಗಿ ಕಾರು ಡೆಲಿವರಿ ತೆಗೆದುಕೊಂಡನಲ್ಲ, ಅದೊಂಥರ ಅದ್ಭುತ ಕ್ಷಣಗಳು. ಷೋರೂಮ್ ನವರು ಕಾರಿನ ಕೀ ಕೊಡಲು ಬಂದಾಗ, ನಾನು ಸ್ವಲ್ಪ ಮುಂದಕ್ಕೆ ಹೋದೆ. ಹಿಂದಿನಿಂದ ಒಂದು ಕೈ ಹಿಂದಕ್ಕೆ ಜಗ್ಗಿತು. ಅಚ್ಚರಿ ಹಾಗೂ ಗಾಬರಿಯಿಂದ ನೋಡಿದರೆ ಅಪ್ಪ. ನನ್ನ ಕೈ ಹಿಡಿದು ಜಗ್ಗುತ್ತಿದ್ದರು.

ಸಂದರ್ಶನ: ನೂರು ದೇಶ ಸುತ್ತುವಾಸೆ ಉಜಿರೆಯ ಈ ಕಲಾವಿಲಾಸಿಗೆ...ಸಂದರ್ಶನ: ನೂರು ದೇಶ ಸುತ್ತುವಾಸೆ ಉಜಿರೆಯ ಈ ಕಲಾವಿಲಾಸಿಗೆ...

ಒಂದು ಕ್ಷಣ ಆಶ್ಚರ್ಯದಿಂದ ಮುಹೂರ್ತ ಏನಾದರೂ ಸರಿ ಇಲ್ಲವಾ ಅಂತ ಮೆಲ್ಲಗಿನ ಧ್ವನಿಯಲ್ಲಿ ಕೇಳಿದೆ. "ಆ ಕಾರಿನ ಕೀ ಮೊದಲು ನಿನ್ನಮ್ಮನಿಗೆ ಕೊಡಿಸು. ಆಮೇಲೆ ಮಿಕ್ಕಿದ್ದು" ಅಂದರು ಅಪ್ಪ. ಅಯ್ಯೋ, ಈ ವಿಚಾರ ನನಗೆ ಹೊಳೆಯಲೇ ಇಲ್ಲವಲ್ಲಾ ಅಂತ ನಾಲಗೆ ಕಚ್ಚಿಕೊಳ್ಳುವಂತಾಯಿತು. ಆದರೆ ಅಮ್ಮನಿಗೆ ಹೊಸ ಕಾರಿನ ಕೀ ತೆಗೆದುಕೊಳ್ಳುವುದಕ್ಕೆ ಬಲು ಸಂಕೋಚ. ಕೊನೆಗೆ ನಮ್ಮ ಒತ್ತಾಯಕ್ಕೆ ಒಪ್ಪಿ, ತೆಗೆದುಕೊಂಡರು.

My first car purchase experience

ಆ ಕಾರಿನ ಕೀ ಎರಡೂ ಕೈನಲ್ಲಿ ಪಡೆದು, ಅದನ್ನು ಬಲು ಜೋಪಾನವಾಗಿ ನನಗೆ ಕೊಟ್ಟರು. ಆ ಮೇಲೆ ಇಡೀ ಷೋರೂಮ್ ನಲ್ಲಿನವರೆಲ್ಲ ಒಟ್ಟಿಗೆ ನಿಂತರು. ಓಹ್, ಇದೇನಪ್ಪ ಅಂತ ಗಾಬರಿ ಆಗಿಬಿಟ್ಟೆ. ನಾವು ಮೂರೂ ಜನ ಕಾರಿನ ಒಳಗೆ ಕೂತೆವು. ಕಾರು ಸ್ಟಾರ್ಟ್ ಮಾಡ್ತಿದ್ದ ಹಾಗೇ ಚಪ್ಫಾಳೆ. ಏನಾಯಿತು ಅಂತ ಹಿಂತಿರುಗಿ ನೋಡಿದೆ.

ನಿಮ್ಮ ಪಾಡಿಗೆ ಓಡಿಸಿ ಅಂತ ಕೈ ಸನ್ನೆ ಮಾಡಿದರು. ಹಾಗೆ ಕಾರನ್ನು ಷೋರೂಮ್ ನಿಂದ ಆಚೆ ತರುವ ತನಕ ಅಲ್ಲಿದ್ದವರು ಯಾರೂ ಕದಲಿರಲಿಲ್ಲ. ಇದಕ್ಕೂ ಮುಂಚೆ ಚಾಕೊಲೇಟ್ ಬಾಕ್ಸ್, ಅದೂ-ಇದೂ ಅಂತ ಏನೇನೋ ಕೊಟ್ಟರು. ಅಬ್ಬಾ, ಇಷ್ಟೆಲ್ಲ ನೋಡುವಾಗ ಮೈ ಜುಮ್ ಅಂತಿತ್ತು. ಸಣ್ಣಗೆ ಶಾಕ್ ಹೊಡೆದಂಥ ಅನುಭೂತಿ.

ವೈರಲ್ ವಿಡಿಯೋ:ರೈತರೂ ಕೋಟ್ಯಧಿಪತಿಗಳಾಗಬಹುದು ಅಂತಾರೆ ರಾಯಚೂರಿನ ಕವಿತಾವೈರಲ್ ವಿಡಿಯೋ:ರೈತರೂ ಕೋಟ್ಯಧಿಪತಿಗಳಾಗಬಹುದು ಅಂತಾರೆ ರಾಯಚೂರಿನ ಕವಿತಾ

ನನ್ನ ಹತ್ತು ವರ್ಷದ ಕನಸು ನಿಜವಾಗಿತ್ತು. ಹಿಂದಿನ ಸೀಟಿನಲ್ಲಿ ಅಪ್ಪ-ಅಮ್ಮ ಕೂತಿದ್ದರು. ನೋಡಿಕೊಂಡು ಓಡಿಸೋ ಅಂತ ಇಬ್ಬರೂ ಒಟ್ಟಿಗೇ ಹೇಳಿದರು. ಮುಂಭಾಗದ ಕನ್ನಡಿಯ ಮೂಲಕ ಅಪ್ಪ-ಅಮ್ಮನನ್ನು ಇನ್ನೊಂದು ಸಲ ನೋಡಿದೆ. ಅವರು ಹೇಳಿದ "ನೋಡಿಕೊಂಡು ಓಡಿಸೋ" ಅನ್ನೋದರ ಪ್ರೀತಿ ಅದೇ ಇರಬೇಕು ಅಂತ ಆ ಕ್ಷಣಕ್ಕೆ ನನಗನಿಸಿದ್ದು. ಇದು ನನ್ನ ಮೊದಲ ಕಾರು ಖರೀದಿ ವೃತ್ತಾಂತ.

English summary
Vinay, basically from Hebbur, Tumakuru district. He has shared the experience of first car purchase. Here is heart touching story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X