• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಲಸಿಕೆ! ಅಮೆರಿಕ ಕೊಟ್ಟಿತು ಈ ಎಚ್ಚರಿಕೆ

|

ಒಂದು ವರ್ಷಗಳ ಕಾಲ ಇಡೀ ವಿಶ್ವವನ್ನೇ ಕಾಡಿದ ಕೊರೊನಾ ಸೋಂಕಿನ ನಿವಾರಣೆಗೆ ಈಚೆಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಲವು ದೇಶಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮವೂ ಒಂದೆಡೆಯಿಂದ ನಡೆಯುತ್ತಿದೆ. ಆದರೆ ಇನ್ನೊಂದು ಕಡೆಯಿಂದ ಕೊರೊನಾ ಸೋಂಕಿನ ರೂಪಾಂತರಗಳೂ ಸೃಷ್ಟಿಯಾಗುವ ಆತಂಕ ಉಂಟಾಗಿದೆ. ಲಸಿಕೆ ಪಡೆಯುವುದು ಎಷ್ಟು ತಡವಾಗುತ್ತದೋ ಅಷ್ಟು ಅವಧಿಯಲ್ಲಿ ಸೋಂಕಿನ ರೂಪಾಂತರಗಳೂ ಹೆಚ್ಚುತ್ತವೆ ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಪ್ರಸ್ತುತ ಸೋಂಕಿಗೆ ಲಭ್ಯವಿರುವ ಲಸಿಕೆ, ಚಿಕಿತ್ಸೆ, ಪರೀಕ್ಷೆಗಳನ್ನು ಮೀರುವ ರೂಪಾಂತರ ಸೃಷ್ಟಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎನ್ನಲಾಗಿದೆ. ಕೊರೊನಾ ವೈರಸ್ ವಂಶವಾಹಿ ಭಿನ್ನ ಭಿನ್ನ ರೂಪ ತಳೆಯುತ್ತಿದ್ದು, ಹೊಸ ಪ್ರಕರಣಗಳನ್ನು ಹಿಡಿದಿಡದಿದ್ದರೆ ಅಪಾಯ ಗ್ಯಾರಂಟಿ. ಕೊರೊನಾ ನಿಯಂತ್ರಣಕ್ಕೆ ಇದುವರೆಗೂ ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ? ಕೊವ್ಯಾಕ್ಸಿನ್ ಬಗ್ಗೆ ಎಚ್ಚರ: ಲಸಿಕೆಯು ಯಾರಿಗೆ ಸೂಕ್ತ, ಯಾರಿಗೆ ಸೂಕ್ತವಲ್ಲ?

 ಹೊಸ ಪ್ರಕರಣಗಳನ್ನು ನಿಯಂತ್ರಿಸಲೇಬೇಕು

ಹೊಸ ಪ್ರಕರಣಗಳನ್ನು ನಿಯಂತ್ರಿಸಲೇಬೇಕು

ಸೋಂಕಿನ ರೂಪಾಂತರ ತಡೆಯಲು ಇರುವ ಒಂದೇ ಮಾರ್ಗವೆಂದರೆ ಹೊಸ ಪ್ರಕರಣಗಳನ್ನು ನಿಯಂತ್ರಿಸುವುದು. ಪ್ರತಿ ಹೊಸ ಪ್ರಕರಣವು ಬೇರೆ ರೂಪಾಂತರಕ್ಕೆ ದಾರಿ ಮಾಡಿಕೊಟ್ಟಂತೆ. ಇದುವರೆಗೂ ಸೋಂಕಿನ ನಿಯಂತ್ರಣಕ್ಕೆ ಮಾಡಿರುವ ಎಲ್ಲಾ ಪ್ರಯತ್ನಗಳು ವಿಫಲವಾಗುವಂತೆ ಮಾಡಲಿವೆ ಈ ರೂಪಾಂತರಗಳು ಎಂದು ತಿಳಿಸಿದೆ ಅಮೆರಿಕದ ರೋಗ ನಿಯಂತ್ರಣ ಹಾಗೂ ನಿರ್ಮೂಲನಾ ಸಂಸ್ಥೆ.

"ಅಮೆರಿಕದಲ್ಲಿ ಮಾರ್ಚ್ ನಲ್ಲಿ ರೂಪಾಂತರ ಸೋಂಕಿನ ಹೆಚ್ಚಳ"

ವಿಶ್ವ ಆರೋಗ್ಯ ಸಂಸ್ಥೆಯು ಈ ಹೊಸ ರೂಪಾಂತರಗಳ ಪತ್ತೆ ಮಾಡಲು ಸೂಚಿಸಿದ್ದು, ಬ್ರಿಟನ್ ನಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿನ ಪ್ರಮಾಣ ಮಾರ್ಚ್ ವೇಳೆಗೆ ಅಮೆರಿಕದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ನಿರ್ಮೂಲನಾ ಸಂಸ್ಥೆ ತಿಳಿಸಿದೆ. ಅತಿ ಗಂಭೀರ ಪರಿಣಾಮವಲ್ಲದಿದ್ದರೂ ಸೋಂಕಿನಿಂದ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚುತ್ತದೆ ಹಾಗೂ ವೇಗವಾಗಿ ಹರಡುವ ಕಾರಣ ಸಾವಿನ ಪ್ರಕರಣವೂ ಏರಿಕೆಯಾಗುತ್ತದೆ ಎಂದಿದೆ.

ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!

 ಘಾತಕ ಬೆಳವಣಿಗೆಯ ಹೊಸ ಹಂತ?

ಘಾತಕ ಬೆಳವಣಿಗೆಯ ಹೊಸ ಹಂತ?

ಈ ರೂಪಾಂತರಗಳು ಆರೋಗ್ಯಕ್ಕೆ ಘಾತಕವಾಗುವ ಹೊಸ ಹಂತವನ್ನೂ ತಲುಪಬಹುದು. ಆದ್ದರಿಂದ ಕೊರೊನಾ ರೂಪಾಂತರ ಸೋಂಕನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಅದನ್ನು ನಿಯಂತ್ರಿಸುವ ಎಲ್ಲಾ ಸಾಧ್ಯತೆಗಳ ಕುರಿತೂ ಯೋಚಿಸುತ್ತಿದ್ದೇವೆ ಎಂದು ಅಮೆರಿಕದ ವೈದ್ಯ ಡಾ. ಆಂಥೋನಿ ಫೌಸಿ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಹರಡುವಿಕೆ ತಡೆಯಲು ನಮ್ಮಿಂದ ಏನು ಸಾಧ್ಯವೋ ಆ ಎಲ್ಲಾ ಪ್ರಯತ್ನವನ್ನೂ ಮಾಡಬೇಕಿದೆ. ಹರಡುವಿಕೆ ತಡೆಗಟ್ಟುವುದೇ ರೂಪಾಂತರ ನಿರ್ಮೂಲನೆ ಮಾಡುವ ಏಕೈಕ ವಿಧಾನ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಡಾ. ಮೈಕಲ್ ಮೀನಾ ತಿಳಿಸಿದ್ದಾರೆ.

"ಲಸಿಕೆಗಳು ಉಪಯೋಗಕ್ಕೆ ಬರದೇ ಇರಬಹುದು"

ಕೊರೊನಾ ಸೋಂಕಿನ ವಿರುದ್ಧ ಪ್ರಸ್ತುತ ಇರುವ ಲಸಿಕೆಗಳು ಈ ಕೊರೊನಾ ರೂಪಾಂತರದ ಮೇಲೂ ಪರಿಣಾಮಕಾರಿ ಎಂದು ಇದುವರೆಗೆ ಹೇಳಲಾಗಿತ್ತು. ಆದರೆ ಈಗ ರೂಪಾಂತರ ಇನ್ನೂ ಅಪಾಯಕಾರಿ ಹಂತ ತಲುಪುತ್ತಿದೆ. ಲಸಿಕೆಯ ಪರಿಣಾಮವನ್ನೂ ತಗ್ಗಿಸುವ ಸಾಧ್ಯತೆ ವ್ಯಕ್ತವಾಗಿದೆ. "ನಾವು ಸಮಯದ ಜೊತೆಗೆ ರೇಸ್ ನಲ್ಲಿದ್ದೇವೆ. ಕೊರೊನಾ ತಡೆಯುವ ಕ್ಷಣ ಕ್ಷಣವೂ ನಮಗೆ ಮುಖ್ಯವಾಗುತ್ತದೆ. ಸೆಪ್ಟೆಂಬರ್ ನಿಂದ ಇದುವರೆಗೆ ಸುಮಾರು ಮೂರು ಕೊರೊನಾ ರೂಪಾಂತರಗಳು ಪತ್ತೆಯಾಗಿವೆ. ಬ್ರಿಟನ್ ನಲ್ಲಿ ಪತ್ತೆಯಾದ ಸೋಂಕು 30 ದೇಶಗಳಲ್ಲಿ ಹರಡಿದೆ. ದಕ್ಷಿಣ ಆಫ್ರಿಕಾ, ಬ್ರೆಝಿಲ್ ನಲ್ಲಿಯೂ ಪತ್ತೆಯಾಗಿದೆ. ಬ್ರಿಟನ್ ರೂಪಾಂತರದ ಸೋಂಕಿನ ಮತ್ತೂ ಒಂದು ರೂಪಾಂತರ ಓಹಿಯೋದಲ್ಲಿ ಇರುವುದಾಗಿ ತಿಳಿದುಬಂದಿದೆ. ಇವೆಲ್ಲವೂ ನಮಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

English summary
The coronavirus is becoming more genetically diverse, and health officials say the high rate of new cases is the main reason and if not detected, it may failure vaccine programme warned america disease controll and prevention centre,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X