ಮೈಸೂರ್ ಪಾಕ್ ಅಂದರೆ ಕೋಲಾರದ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್
ಬೆಂಗಳೂರಿನಲ್ಲಿ ಸಿಗದೇ ಇರುವ ಸ್ವೀಟ್ ಇದೆಯಾ? ಇಲ್ಲಿ ಸಿಗದೆ ಇರುವ ರುಚಿ ಇದೆಯಾ? - ಹೀಗೇನಾದರೂ ನಿಮಗೆ ನೀವೇ ಅಂದುಕೊಂಡು ಹೆಮ್ಮೆ- ಗರ್ವ ಪಡುತ್ತಿದ್ದರೆ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಈ ಲೇಖನ ಓದಿ. ಕೋಲಾರ ನಗರದಲ್ಲಿ ಎಂ. ಜಿ. ರಸ್ತೆಯಲ್ಲಿ ಶ್ರೀ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಇದೆ. ಅಲ್ಲಿನ ಮೈಸೂರ್ ಪಾಕ್ ಬಗ್ಗೆ ಬರೆದರೆ ಅದಷ್ಟೇ ದೊಡ್ಡ ಲೇಖನ ಆಗುತ್ತದೆ.
ಆದರೆ, ನಮ್ಮ ಉದ್ದೇಶ ಆ ಮಳಿಗೆಯನ್ನು ಪರಿಚಯಿಸುವುದು ಅಷ್ಟೇ. ಕೋಲಾರದ ಸ್ಥಳೀಯರಲ್ಲಿ ವಿಳಾಸ ಕೇಳಿದರೆ ಬಹಳ ಸುಲಭಕ್ಕೆ ಹೇಳುತ್ತಾರೆ. ದಶಕಗಳಿಂದ ಇರುವ ಈ ಅಂಗಡಿಗೆ ಅಕ್ಕಪಕ್ಕದ ಜಿಲ್ಲೆಯವರೂ ಬಂದು, ಸಿಹಿ- ಖಾರದ ತಿನಿಸನ್ನು ಖರೀದಿಸಿ ಹೋಗುತ್ತಾರೆ. ಮುಖ್ಯವಾಗಿ ಮೈಸೂರ್ ಪಾಕ್. ಬಿಸ್ಸಿ- ಬಿಸಿ ಮೈಸೂರ್ ಪಾಕ್ ಅಲ್ಲೇ ಸ್ವಲ್ಪ ತಿನ್ನುವುದಕ್ಕೆ ರುಚಿಗೆ ಕೊಡುತ್ತಾರೆ. ಹಾ, ಅಬ್ಬಾ ಅಂಥ ರುಚಿ ಮರೆಯುವುದಕ್ಕೆ ಕಷ್ಟ- ಕಷ್ಟ.
ಬೆಲೆ ವಿಚಾರಕ್ಕೆ ಬಂದರೆ ಸ್ವಲ್ಪ ದುಬಾರಿ ಅನ್ನಿಸಬಹುದು. ಆದರೆ ಶುದ್ಧ ತುಪ್ಪದಲ್ಲೇ ಮಾಡಿದ್ದು ಎಂಬುದಕ್ಕೆ ಯಾವ ಅನುಮಾನವೂ ಪಡುವ ಅಗತ್ಯ ಇಲ್ಲ. ಸರಿಯಾದ ಪದಾರ್ಥ ಹಾಕದೆ, ಉತ್ತಮ ಗುಣಮಟ್ಟ ಇಲ್ಲದಿದ್ದರೆ ಮೈಸೂರ್ ಪಾಕ್ ತಿಂದ ಸ್ವಲ್ಪ ಹೊತ್ತಿಗೆ ಗಂಟಲಿನಲ್ಲಿ ಹಿಂಸೆ ಆಗಲು ಆರಂಭಿಸುತ್ತದೆ. ಆದರೆ ಇಲ್ಲಿ ನೀವು ಪರೀಕ್ಷೆ ಮಾಡಿ, ಖರೀದಿ ಮಾಡಬಹುದು.

ಮೊದಲೇ ಹೇಳಿದ ಹಾಗೆ, ಇಲ್ಲಿಗೆ ಹುಡುಕಿಕೊಂಡು ಬಂದು ಮೈಸೂರ್ ಪಾಕ್ ತಿಂದು ಹೋಗ್ತಾರೆ. ಖರೀದಿಸಿ ಹೋಗ್ತಾರೆ. ಇದರ ಜತೆಗೆ ಕಾಜು ಬರ್ಫಿ, ಕಾಜು ಕಟ್ಲಿ, ಹುರಿದ ಗೋಡಂಬಿ, ಚೌಚೌ ಹೀಗೆ ವಿವಿಧ ಖಾರ- ಸಿಹಿ ತಿನಿಸುಗಳು ಸಿಗುತ್ತವೆ. ಆದರೆ ಎಲ್ಲಕ್ಕಿಂತ ಚಂದ ಅಂದರೆ ಅದು ಮೈಸೂರ್ ಪಾಕ್.
ಬೆಳಗ್ಗೆ ಒಂಬತ್ತರಿಂದ ರಾತ್ರಿ ಒಂಬತ್ತರ ತನಕ ಈ ಅಂಗಡಿ ತೆರೆದಿರುತ್ತದೆ. ಅಂತರಗಂಗೆ, ಆವನಿ ಬೆಟ್ಟ, ಕುರುಡುಮಲೆ, ನರಸಿಂಹ ತೀರ್ಥ.. ಹೀಗೆ ಕೋಲಾರ ಜಿಲ್ಲೆ ಪ್ರವಾಸಿ ತಾಣದ ರೀತಿ ವೆಂಕಟೇಶ್ವರ ಸ್ವೀಟ್ ಸ್ಟಾಲ್ ಕೂಡ ಹೆಸರುವಾಸಿ. ಸ್ಥಳೀಯರು ಹೇಳುವ ಹಾಗೆ ಐವತ್ತು- ಅರವತ್ತು ವರ್ಷಗಳಿಂದಲೂ ಈ ಅಂಗಡಿ ಇದೆ. ದೇಶದಾದ್ಯಂತ ವಿವಿಧೆಡೆಗೆ ಈ ಅಂಗಡಿಯಿಂದ ಸಿಹಿ- ಖಾರದ ತಿನಿಸು ಖರೀದಿಸುತ್ತಾರೆ.
ಇಲ್ಲಿ ಸಿಹಿ- ಖಾರ ತಿನಿಸು ತಿಂದ ಮೇಲೆ ಆ ಮಾತುಗಳ ಬಗ್ಗೆ ಯಾವ ಅನುಮಾನ ಕೂಡ ಬರುವುದಿಲ್ಲ. ನಗರದ ಒಳ ಭಾಗದಲ್ಲಿ ಈ ಅಂಗಡಿ ಇರುವುದರಿಂದ ಲಕ್ಷ್ಮೀವೆಂಕಟೇಶ್ವರ ಸ್ವೀಟ್ಸ್ ಬಗ್ಗೆ ಗೊತ್ತಿಲ್ಲದ ಹೆಚ್ಚಿನ ಮಂದಿ ಇಲ್ಲಿ ರುಚಿ ನೋಡುವುದಕ್ಕೆ ಪ್ರಯತ್ನ ಪಟ್ಟಿರಲಿಕ್ಕಿಲ್ಲ. ಇದನ್ನು ಓದುತ್ತಿರುವ ನಿಮಗೆ ಕೋಲಾರದಲ್ಲೇ ಸ್ನೇಹಿತರಿದ್ದರೆ ಈ ಬಗ್ಗೆ ವಿಚಾರಿಸಿ ನೋಡಿ. ಸ್ವತಃ ನೀವೇ ಇಲ್ಲಿ ರುಚಿ ನೋಡಿದ್ದರೆ ನಿಮಗೆ ಅನಿಸಿದ್ದನ್ನು ಇತರರ ಜತೆ ಹಂಚಿಕೊಳ್ಳಿ.
ಬೆಂಗಳೂರಿಗೆ ಅರವತ್ತೈದು- ಎಪ್ಪತ್ತು ಕಿ.ಮೀ. ದೂರದ ಕೋಲಾರಕ್ಕೆ ಒಂದು ಲಾಂಗ್ ಡ್ರೈವ್ ಹೋಗಿ, ರುಚಿ ನೋಡಿ ಬರಬಹುದು. ನೀವು ಮೈಸೂರ್ ಪಾಕ್ ವಿಪರೀತ ಇಷ್ಟಪಡುವವರಾಗಿದ್ದರೆ ಒಮ್ಮೆ ಟ್ರೈ ಮಾಡಿ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications