ಕೋಟಿ ದೇವರ ಹಿಂದಿಕ್ಕಿ ಕಾಣುವ ದೇವತೆ...ನನ್ನವ್ವ
ಕೋಟಿ ದೇವರ ಹಿಂದಿಕ್ಕಿ ಕಾಣುವ ದೇವತೆ... ತನ್ನ ಕರುಳ ಕತ್ತರಿಸಿ ಜನ್ಮವಿಟ್ಟ ಜನುಮದಾತೇ.. ನಿನ್ನ ಮಡಲಿಗೆ ಆ ಸ್ವರ್ಗವು ಸಮನಾದಿತೇ.. ನಿನ್ನ ಋಣ ತೀರಿಸಲು ಈ ಜನುಮ ಸಾಕಾದಿತೇ... ಅವ್ವ
ಹೌದು ನನ್ನ ಅವ್ವನನ್ನು ಎಷ್ಟೊಂದು ವರ್ಣಿಸಲು ಸೀಮಿತವಲ್ಲದ ಪದ. ಇಂದು ತಾಯಂದಿಯರ ದಿನಾಚರಣೆ.. ಆದರೆ ಈ ದಿನಕ್ಕೆ ಒಂದು ದಿನ ಆಚರಣೆ ಮಾಡುವುದು ಸರಿಯಲ್ಲ. ಏಕೆಂದರೆ ಪ್ರತಿ ದಿನವೂ ತ್ಯಾಗ ಮೂರ್ತಿ ಮಾತೆಯನ್ನು ಯಾವಾಗಲೂ ಖುಷಿಯಿಂದ, ನೆಮ್ಮದಿಯಿಂದ ಅವಳ ಮನಸ್ಸಿಗೆ ನೋವುಂಟು ಮಾಡದೇ, ಸಮಾಜದಲ್ಲಿ ನನ್ನ ಮಕ್ಕಳು ಗೌರವದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದೇ ಸಾಕು. ಅಮ್ಮನ ಸಂತೋಷಕ್ಕೆ ಮೀತಿ ಇರಲ್ಲ. ಅಮ್ಮಂದಿರ ಪ್ರೀತಿಯ ಮಕ್ಕಳಾಗಿ ಸಮಾಜದಲ್ಲಿ ಬದುಕು ಸಾಗಿಸೋಣ.
ದಿನೇ ದಿನೇ ಜೀವನದ ಜಂಜಾಟದಲ್ಲಿ, ಸಂಪಾದನೆಯತ್ತ ಮುಖ ಮಾಡಿ ಬೆಂಗಳೂರಿಗೆ ಪಯಣ ಮಾಡಿರುವ ನಮ್ಮಂತಹ ಮಕ್ಕಳು ದಿನವೀಡಿ ನೆನಪಿಕೊಳ್ಳುವ ಪರಿ ಸಾಕಷ್ಟಿದೆ ಎಂದರೆ ತಪ್ಪಾಗಲಾರದು. ಎಲ್ಲೂ ಓದಿ, ಎಲ್ಲೂ ಬೆಳೆದು, ಜೀವನಕ್ಕೆ ಸರಿದೂಗುವ ಕೆಲಸದತ್ತ ಬದುಕು ಸಾಗಿಸಲು ನಾನಾ ಕಡೆಗಳಲ್ಲಿ ಕೆಲಸ ಮಾಡಿ, ಇಂದು ಅಮ್ಮಂದಿರ ದಿನಾಚರಣೆಯಂದು ಶುಭಾಶಯ ಹೇಳದೆ ಇರುವ ಮಕ್ಕಳು, ಅಮ್ಮಂದಿರ ದಿನಾಚರಣೆ ಇಂದು ಎಂದು ಅಮ್ಮನಿಗೆ ಶುಭಾಶಯ ತಿಳಿಸಿದರು. ಇದೆಲ್ಲ ನನಗೆ ಗೊತ್ತಾಗಲ್ಲ ಮಗ ಎಂದು ನಸುನಕ್ಕಿ ನೀನು ಎಲ್ಲಿ ಇದ್ದರೂ ಚೆನ್ನಾಗಿರಿ, ಚೆನ್ನಾಗಿ ಕೆಲಸ ಮಾಡಿ, ಸಮಾಜದಲ್ಲಿ ಒಳ್ಳೇಯವರಾಗಿ ಗೌರವದಿಂದ ಇದ್ದರೇ ಆದೇ ನನಗೆ ನೀವು ಕೊಟ್ಟ ಊಡುಗೊರೆ ಎಂದು ತಮಗೆ ವಿಶ್ ಮಾಡುವ ನನ್ನ ಅವ್ವ. ನನ್ನ ಅವ್ವನೆಂಬ ಬೆರಳಿನ ಅಡಿಯಲ್ಲಿ ನಾನೊಂದು ಚಿಗುರು. ಈ ಬದುಕು ಕೊಟ್ಟ ದೇವತೆಗೆ ಕರೆಯೋದು ಅವ್ವ, ಅಮ್ಮ,

ಎಲ್ಲರಿಗೂ ತಾಯಿ ಏಕೆ ವಿಶೇಷ:
ಮಕ್ಕಳನನ್ನು ಕಣ್ಣಿನಲ್ಲಿ ಕಣ್ಣಿಟ್ಟು ಸಂರಕ್ಷಿಸುವ ಅಮ್ಮ ಶೇಷ್ಠ ಮಕ್ಕಳ ಪಾಲಿಗೆ ರಕ್ಷಿಕಿಯಾಗಿದ್ದಾಳೆ. ಏನೇ ಕಷ್ಟ ಬಂದರೂ ಕಣ್ಣಿರು ಹಾಕಿದರು ಮರುಗುವ ಹೃದಯ, ಎಲ್ಲಾ ಕಷ್ಟಗಳನ್ನು ನಿಭಾಯಿಸುವ ಧೈರ್ಯ ತುಂಬುವ ಏಕೈಕ ತಾಯಿ, ತನ್ನ ಮಕ್ಕಳಿಗೆ ಕಿಂಚಿತ್ತು ಪ್ರೀತಿ ಕಡಿಮೆ ಮಾಡದೇ ಪ್ರೀತಿಯನ್ನು ತೋರುವ ಜೀವ ನನ್ನವ್ವ. ತಾನು ಹಸಿವಿನಿಂದ ಇದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡಿಕೊಳ್ಳುತ್ತಾ, ತಾನು ಎಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳು ಸುಖದಿಂದ ಇರಲಿ ಎಂದು ದೇವರಲ್ಲಿ ಹಗಲು-ಇರುಳು ಬೇಡುವ ನನ್ನವ್ವ. ಅವ್ವ ಎಂದರೆ ಕರುಣೆ, ಅವ್ವ ಎಂದರೆ ವಾತ್ಸಲ್ಯದ ಮಮಕಾರ, ಆಸರೆಯಾಗಿ, ಬದುಕಿನ ಬಂಡಿಯಲ್ಲಿ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾಳೆ. ಮನೆಯಲ್ಲಿ ಏನೇ ಸಮಸ್ಯೆ ಬಂದರೂ ಸರಿದೂಗಿಸುವ ಅವ್ವನ ಶ್ರಮ ಹೇಳತೀರದು. ಕೋಟಿ ದೇವರು ಎದುರಿಗಿದ್ದರೂ ನಿನ್ನ ಸಮ ಯಾರಿಲ್ಲ ಅವ್ವ..ನನ್ನವ್ವನಿಗೆ ಯಾರು ಸಾಟಿನೇ ಇಲ್ಲ ಎಂದು ಹೆಮ್ಮೆಪಡುವ ಮಕ್ಕಳು...ತನ್ನೆದೆಲ್ಲವೂ ತನ್ನದಾಗಿದರೂ ತನ್ನದಲ್ಲದ ಸ್ಥಿತಿ ನನ್ನವ್ವನದು.. ಏಕೆಂದರೆ ಯಾವುದರಲ್ಲಿ ಆಸೆಪಡೆದ ತಾಯಿ.ಮಕ್ಕಳ ಸಂತೋಷವೇ ಅವಳಿಗೆ ಎಲ್ಲಿಲ್ಲದ ಆನಂದ..

ಮಗುವಿನ ತೊದಲು ನುಡಿಗೆ ಅಮ್ಮನ ಮುನ್ನುಡಿ:
ಮಕ್ಕಳಾಗಿ, ಹೆಂಡಿತಿಯಾಗಿ, ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ ಎಲ್ಲ ಸ್ಥಾನವನ್ನು ತುಂಬುವ ಏಕೈಕ ಮಹಿಳೆಯಾಗಿದ್ದಾಳೆ. ಮನೆಯ ಆಗುಹೋಗುಗಳಿಗೆ ಸ್ಪಂದಿಸುವ ಮನೋಭಾವಯುಳ್ಳವಳು.
ವೈದೈ, ವಕೀಲೆಯಾಗಿ ನನ್ನವ್ವ:
ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಬಾಧಿಸಿದಾಗ ಪ್ರಾಥಮಿಕ ಚಿಕಿತ್ಸೆ ನೀಡಿ ಶ್ರೇಷ್ಠ ವೈದ್ಯೆಯಾಗಿ ಕಾಣುತ್ತಾಳೆ. ಮಕ್ಕಳು ಏನೇ ತಪ್ಪು ಮಾಡಿದರೂ ಮನೆಯಲ್ಲಿ, ಹೊರಗೆ ಮಕ್ಕಳ ಪರವಾಗಿ ಮಾತನಾಡಿ ವಕೀಲೆಯಾಗುತ್ತಾಳೆ. ಮಕ್ಕಳು ತಪ್ಪು ಮಾಡಿದರೂ ತಮ್ಮ ಮಕ್ಕಳ ಬಗ್ಗೆ ಬಿಟ್ಟುಕೊಡದ ತಾಯಿಯಾಗಿ ತಮ್ಮ ಬೆನ್ನುಲುಬುಯಾಗಿ ನಿಲ್ಲುತ್ತಾಲೆ ಎಂದರೆ ತಪ್ಪಾಗಲಾರದು. ಅಲ್ಲಿ ತಂದೆಯ ಜೊತೆ ವಕೀಲೆಯಂತೆ ನಿಂತು ಜಯಪಡುತ್ತಾಳೆ.

ಮಕ್ಕಳು ಮನೆಗೆ ಬೇಗ ಬಾದರೇ ಇದ್ದರೆ ಏನಾಯಿತು ಎಂದು ಪರಿತಪಿಸುತ್ತ ಬರುವ ದಾರಿಯನ್ನೇ ನೋಡುತ್ತಾಳೆ. ನಿದ್ದೆ ಮಾಡದೇ ಮಕ್ಕಳ ಬರುವಿಕೆಗಾಗಿಯೇ ಕಾಯುತ್ತಾಳೆ. ತಾನು ಹಸಿವಿನಲ್ಲಿ ಇದ್ದರೂ ತನ್ನ ಮಕ್ಕಳಿಗೆ ಹಸಿವಾಗದಂತೆ ನೋಡಿಕೊಳ್ಳುತ್ತಾ, ತಾನು ಎಷ್ಟೇ ಕಷ್ಟ ಅನುಭವಿಸಿದರೂ ಮಕ್ಕಳು ಸುಖದಿಂದ ಇರಲಿ ಎಂದು ಆಶಿಸುತ್ತಾ, ಆಕೆ ಅಕ್ಷರ ಕಲಿಯದಿದ್ದರೂ, ತನ್ನ ಮಗು ವಿದ್ಯಾಭ್ಯಾಸದಿಂದ ವಂಚಿತವಾಗಬಾರೆಂದು ಹಗಲು ರಾತ್ರಿ ಎನ್ನದೇ, ಸಮಯದ ಪರಿವಿಲ್ಲದೇ ಮನೆ ಒಳಗೆ ಮತ್ತು ಮನೆ ಹೊರಗೆ ಪ್ರತಿ ನಿತ್ಯ ತನ್ನವರಿಗೆ, ತನ್ನ ಮಕ್ಕಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ದುಡಿಮೆ ಮಾಡಿ ತನ್ನೆಲ್ಲ ಆಸೆ ಕನಸುಗಳನ್ನು ಬದಿಗೊತ್ತಿ ಮಕ್ಕಳ ಹಾರೈಕೆಯಲ್ಲಿ ತಾಯಿ ಬದುಕುತ್ತಾಳೆ. ಇಂದು ಎಲ್ಲರಿಗೂ ವಿಶ್ವತಾಯಂದಿರ ದಿನದ ಶುಭಾಶಯಗಳು.











Click it and Unblock the Notifications