ಒಂದಲ್ಲಾ..ಎರಡಲ್ಲಾ..ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಹುಳುಗಳು
ಒಂದಲ್ಲಾ..ಎರಡಲ್ಲಾ.. ಮೂರಲ್ಲ.. ಮಹಿಳೆಯ ಮೂಗಿನೊಳಗೆ ಬರೋಬ್ಬರಿ 100ಕ್ಕೂ ಹೆಚ್ಚು ಜೀವಂತ ಹುಳುಗಳು ಅಥವಾ ಕೀಟಗಳು ಇದ್ದವು ಎಂದರೆ ನೀವು ನಂಬುತ್ತೀರಾ..? ಆದರೆ ನಂಬಲೇಬೇಕು. 59 ವರ್ಷದ ಮಹಿಳೆಯೊಬ್ಬರ ಮೂಗಿನ ಸಮಸ್ಯೆ ಬಗೆಹರಿಸಲು ಹೋದ ವೈದ್ಯರಿಗೆ ಅಚ್ಚರಿಯೇ ಕಾದಿದ್ದು, ವೈದ್ಯಲೋಕವನ್ನೇ ಅಚ್ಚರಿಗೊಳಿಸುವ ಘಟನೆಯೊಂದು ಥೈಲ್ಯಾಂಡ್ನಲ್ಲಿ ನಡೆದಿದೆ.
59 ವರ್ಷದ ಮಹಿಳೆಯೊಬ್ಬರು ಕೆಲವು ಸಮಯದಿಂದ ಮೂಗಿನ ಸಮಸ್ಯೆ ಅಂದರೆ ಮೂಗಿನಲ್ಲಿ ಕಿರಿಕಿರಿ, ನೋವುನಿಂದ ಬಳಲುತ್ತಿದ್ದರು. ಆದರೆ ಅವರು ಈ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ, ಶೀತ ಇರಬಹುದು ಎಂದುಕೊಂಡಿದ್ದವರಿಗೆ ಸ್ವಲ್ಪ ದಿನದ ನಂತರ ನೋವು ಹೆಚ್ಚಾಗ ತೊಡಗಿತು.

ಮಹಿಳೆಗೆ ಮೂಗು ಆಗಾಗ ಕಟ್ಟುತ್ತಿತ್ತು. ಇದರಿಂದ ಉಸಿರಾಟ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ನೋವು ಕೂಡ ಹೆಚ್ಚಾಗಿ ರಕ್ತಸ್ರಾವ ಆರಂಭವಾಗಿದೆ. ಹೀಗಾಗಿ ಆಸ್ಪತ್ರೆಗೆ ಬಂದು ವೈದ್ಯರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಾಕಾರ್ನ್‌ಪಿಂಗ್ ಆಸ್ಪತ್ರೆಯ ಡಾ.ಪಾಟಿಮೋನ್ ತಂಚೈಖಾನ್ ಅವರು ಮಹಿಳೆಯ ಎಕ್ಸ್-ರೇ ನಂತರ ಮೂಗಿನ ಎಂಡೋಸ್ಕೋಪಿ ಮಾಡಿದಾಗ ಮಹಿಳೆಯ ಮೂಗಿನೊಳಗೆ ನೂರಾರು ಜೀವಂತ ಹುಳುಗಳು ಸುತ್ತುತ್ತಿರುವುದು ಕಂಡು ಬಂದಿದೆ.
ತಕ್ಷಣ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಲಾಗಿದ್ದು, ವೈದ್ಯರು ಎಲ್ಲಾ ಜೀವಂತ ಹುಳಗಳನ್ನು ಮೂಗಿನಿಂದ ಹೊರತೆಗೆದಿದ್ದಾರೆ. ಒಂದು ವೇಳೆ ಮಹಿಳೆ ಆಸ್ಪತ್ರೆಗೆ ಬರಲು ತಡ ಮಾಡುತ್ತಿದ್ದರೆ, ಅವರ ಜೀವಕ್ಕೆ ಕುತ್ತು ಬರುತ್ತಿತ್ತು. ಈ ಸಮಸ್ಯೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ ಮೂಗಿನ ಮೂಲಕ ಕೀಟಗಳು ಮೆದುಳಿಗೆ ಸೇರುತ್ತಿದ್ದು, ಇದು ಕೊನೆಗೆ ಪಾರ್ಶ್ವವಾಯು ಆಗಲು ಕಾರಣವಾಗುತ್ತಿತ್ತು. ಸದ್ಯ ಮೂಗಿನಲ್ಲಿದ್ದ ಎಲ್ಲಾ ಜೀವಂತ ಹುಳುಗಳನ್ನು ಹೊರಗೆ ತೆಗೆಯಲಾಗಿದ್ದು, ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications