ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

143 ವರ್ಷ ಹಳೆಯ ಮೊರ್ಬಿ ತೂಗು ಸೇತುವೆ ನಿರ್ಮಿಸಿದವರು ಯಾರು?

|
Google Oneindia Kannada News

ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು ದುರಂತ ನಡೆದಿದೆ. ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕೇಬಲ್ ಸೇತುವೆಯ ಇತಿಹಾಸವು ಸಾಕಷ್ಟು ಹಳೆಯದು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಈ ಸೇತುವೆಯನ್ನು ನಿರ್ಮಿಸಿದ್ದರು. ಆ ಕಾಲದ ಅತ್ಯುತ್ತಮ ಇಂಜಿನಿಯರಿಂಗ್ ವಿಭಾಗವು ಇದರ ನಿರ್ಮಾಣದ ಕಾರ್ಯದಲ್ಲಿ ತೊಡಗಿತ್ತು. ಈ ಸೇತುವೆ ನಿರ್ಮಾಣಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಬ್ರಿಟನ್‌ನಿಂದಲೇ ಆಮದು ಮಾಡಿಕೊಳ್ಳಲಾಗಿದೆ.

ಇದು ನೇತಾಡುವ ಸೇತುವೆಯಾಗಿದ್ದು, ಎರಡು ತುದಿಗಳಿಂದ ಮಾತ್ರ ಸಂಪರ್ಕ ಹೊಂದಿದೆ. ಮಾಹಿತಿಯ ಪ್ರಕಾರ ಭಾನುವಾರ ನಡೆದ ದುರಂತದಲ್ಲಿ 141 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸೇತುವೆ ಹೊಸದಲ್ಲ, ಆದರೆ ಅದರ ಇತಿಹಾಸವು 100 ವರ್ಷಗಳಿಗಿಂತ ಹೆಚ್ಚು ಹಳೆಯದು.

ಮೊರ್ಬಿ ದುರಂತ: ಸೇತುವೆ ಅಲುಗಾಡಿ ಕುಸಿದುಬಿದ್ದ ಭಯಾನಕ ದೃಶ್ಯ ಹೇಗಿದೆ ನೋಡಿ.. ಮೊರ್ಬಿ ದುರಂತ: ಸೇತುವೆ ಅಲುಗಾಡಿ ಕುಸಿದುಬಿದ್ದ ಭಯಾನಕ ದೃಶ್ಯ ಹೇಗಿದೆ ನೋಡಿ..

ಈ ತೂಗು ಸೇತುವೆ ನಿರ್ಮಾಣವು 1880ರಲ್ಲಿ ಪೂರ್ಣಗೊಂಡಿತು. ಈ ಸೇತುವೆಯು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ ಭಾರತದ ಉಜ್ವಲ ಭವಿಷ್ಯವನ್ನೂ ಕಂಡಿತು. ಅತ್ಯುತ್ತಮ ಎಂಜಿನಿಯರಿಂಗ್ ಮಾದರಿ, ಕಲೆ ಮತ್ತು ಹಳೆಯದಾಗಿರುವ ಕಾರಣ, ಇದನ್ನು ಗುಜರಾತ್‌ನ ಅತ್ಯುತ್ತಮ ಪ್ರವಾಸಿ ಸ್ಥಳದಲ್ಲಿ ಸೇರಿಸಲಾಗಿದೆ. ಮಚ್ಚು ನದಿಯ ಮೇಲಿನ ಈ ಸೇತುವೆಯು ಮೊರ್ಬಿಯ ಜನರಿಗೆ ಪ್ರಮುಖ ಪ್ರವಾಸಿ ತಾಣವಾಗಿತ್ತು.

 ಮೊರ್ಬಿ ಸೇತುವೆಯ ಇತಿಹಾಸ

ಮೊರ್ಬಿ ಸೇತುವೆಯ ಇತಿಹಾಸ

ಈ ಸೇತುವೆಯು 1.25 ಮೀಟರ್ ಅಗಲ ಮತ್ತು 233 ಮೀಟರ್ ಉದ್ದವಿತ್ತು. ಆ ಸಮಯದಲ್ಲಿ ಯುರೋಪಿನಲ್ಲಿ ಆ ದಿನಗಳಲ್ಲಿ ಲಭ್ಯವಿರುವ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಮೊರ್ಬಿಗೆ ವಿಶಿಷ್ಟವಾದ ಗುರುತನ್ನು ನೀಡಲು ಇದನ್ನು ನಿರ್ಮಿಸಲಾಗಿದೆ. ದರ್ಬಾರ್‌ಗಢ ಅರಮನೆಯನ್ನು ನಜರ್‌ಬಾಗ್ ಅರಮನೆಯೊಂದಿಗೆ ಸಂಪರ್ಕಿಸಲು ಸೇತುವೆಯನ್ನು ನಿರ್ಮಿಸಲಾಗಿದೆ.

ಈ ಸೇತುವೆಯನ್ನು 1880ರಲ್ಲಿ ಪೂರ್ಣಗೊಳಿಸಲಾಯಿತು. ಈ ಸೇತುವೆಯನ್ನು ಮುಂಬೈ ನಗರದ ಗವರ್ನರ್ ರಿಚರ್ಡ್ ಟೆಂಪಲ್ ಅವರು ಉದ್ಘಾಟಿಸಿದ್ದರು. ಈ ಸೇತುವೆಯ ನಿರ್ಮಾಣಕ್ಕೆ ಸುಮಾರು 3.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಆ ಸಮಯದಲ್ಲಿ ಈ ಸೇತುವೆಯನ್ನು ನಿರ್ಮಿಸಲು ಸಂಪೂರ್ಣ ವಸ್ತುಗಳನ್ನು ಇಂಗ್ಲೆಂಡ್‌ನಿಂದ ಸಂಗ್ರಹಿಸಲಾಯಿತು. ಕಳೆದ ಎರಡು ವರ್ಷಗಳಿಂದ ಸೇತುವೆ ಮುಚ್ಚಲಾಗಿತ್ತು ಮತ್ತು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಅಕ್ಟೋಬರ್ 26ರಂದು ನವೀಕರಣದ ನಂತರ ಪುನಃ ತೆರೆಯಲಾಯಿತು.

 ಈ ಹಿಂದೆ ಮಚ್ಚು ಅಣೆಕಟ್ಟು ದುರಂತ

ಈ ಹಿಂದೆ ಮಚ್ಚು ಅಣೆಕಟ್ಟು ದುರಂತ

ಗುಜರಾತ್‌ನ ಮಚ್ಚು ನದಿ ಈಗಾಗಲೇ ದೊಡ್ಡ ದುರಂತವನ್ನು ಕಂಡಿದೆ. ಆಗಸ್ಟ್ 11, 1979ರಂದು, ಮಚ್ಚು ನದಿಯ ಮೇಲಿನ ಅಣೆಕಟ್ಟು ಕುಸಿದು 1,500 ಜನರು ಮತ್ತು 13,000 ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿದವು. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗೆ ನೀರು ಹರಿದು ಬಂದಿದ್ದು, ಬಳಿಕ ಅಣೆಕಟ್ಟು ಒಡೆದಿತ್ತು.

ಇತ್ತೀಚೆಗೆ ಸೇತುವೆಯ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ನಂತರ ಅಕ್ಟೋಬರ್ 25 ರಂದು ಸಾರ್ವಜನಿಕರಿಗೆ ಮತ್ತೆ ತೆರೆಯಲಾಯಿತು. ಇದಾದ 5 ದಿನಗಳಲ್ಲಿ ಇಷ್ಟು ದೊಡ್ಡ ದುರಂತ ಸಂಭವಿಸಿದೆ. ಈ 1.25 ಮೀಟರ್ ಅಗಲದ ಸೇತುವೆಯು ದರ್ಬಾರ್ ಗಢ್ ಅರಮನೆ ಮತ್ತು ಲಖ್ಧಿರ್ಜಿ ಇಂಜಿನಿಯರಿಂಗ್ ಕಾಲೇಜನ್ನು ಸಂಪರ್ಕಿಸುತ್ತದೆ.

 ಮಚ್ಚು ನದಿಯ ಮೇಲೆ 1880ರಲ್ಲಿ ನಿರ್ಮಾಣ

ಮಚ್ಚು ನದಿಯ ಮೇಲೆ 1880ರಲ್ಲಿ ನಿರ್ಮಾಣ

ಮೊರ್ಬಿಯಲ್ಲಿ ಮಚ್ಚು ನದಿಯ ಮೇಲೆ ಈ ಸೇತುವೆಯ ನಿರ್ಮಾಣವು 1880ರಲ್ಲಿ ಪೂರ್ಣಗೊಂಡಿತು. ಈ ಸೇತುವೆಯನ್ನು ಮುಂಬೈನ ಗವರ್ನರ್ ರಿಚರ್ಡ್ ಟೆಂಪಲ್ ಅವರು 20 ಫೆಬ್ರವರಿ 1879 ರಂದು ಉದ್ಘಾಟಿಸಿದರು. ಆಗ ಇದರ ನಿರ್ಮಾಣಕ್ಕೆ ಸುಮಾರು 3.5 ಲಕ್ಷ ರೂಪಾಯಿ ವೆಚ್ಚವಾಗಿತ್ತು. ಇಷ್ಟು ಮಾತ್ರವಲ್ಲದೆ ಸೇತುವೆ ನಿರ್ಮಾಣಕ್ಕೆ ಬೇಕಾದ ಎಲ್ಲ ಸಾಮಗ್ರಿಗಳನ್ನು ಬ್ರಿಟನ್‌ನಿಂದ ಆಮದು ಮಾಡಿಕೊಳ್ಳಲಾಗಿತ್ತು. ಅಂದಿನಿಂದ ಇದು ಹಲವಾರು ಬಾರಿ ದುರಸ್ತಿಯಾಗಿದೆ.

ಈ ಬಾರಿಯ ದುರಸ್ತಿ ಬಳಿಕ ದೀಪಾವಳಿಯ ಮರುದಿನ ಅಂದರೆ ಅಕ್ಟೋಬರ್ 25ರಂದು ಬಳಕೆಗೆ ಪುನಃ ತೆರೆಯಲಾಯಿತು. ಅದರ ದುರಸ್ತಿಗೆ ಈ ಬಾರಿ ಸುಮಾರು ಎರಡು ಕೋಟಿ ರೂ. ಖರ್ಚು ಮಾಡಲಾಗಿತ್ತು. ಗುಜರಾತ್‌ನ ಮೋರ್ಬಿ ಸೇತುವೆಯ ಇತಿಹಾಸವು ಬಹಳ ಹಳೆಯದು. ಈ ಸೇತುವೆಯನ್ನು 143 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಮೊರ್ಬಿಯ ಮಚ್ಚು ನದಿಯ ಮೇಲೆ ಈ ಸೇತುವೆಯ ನಿರ್ಮಾಣವನ್ನು 19ನೇ ಶತಮಾನದ ಸರ್ ವಾಘ್ಜಿ ಠಾಕೋರ್ ಅವರು 1922ರವರೆಗೆ ಮೊರ್ಬಿಯನ್ನುಆಳಿದರು ಇವರ ಆಳ್ವಿಕೆಯಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಲಾಯಿತು.

 ಈ 765 ಅಡಿ ಉದ್ದದ ತೂಗು ಸೇತುವೆ ಐತಿಹಾಸಿಕ

ಈ 765 ಅಡಿ ಉದ್ದದ ತೂಗು ಸೇತುವೆ ಐತಿಹಾಸಿಕ

ಅಪಘಾತಕ್ಕೀಡಾದ ಮೋರ್ಬಿಯ ಈ ಸೇತುವೆ ಸುದೀರ್ಘ ಇತಿಹಾಸಕ್ಕೂ ಸಾಕ್ಷಿಯಾಗಿದೆ. ಇದು ಸ್ವಾತಂತ್ರ್ಯಕ್ಕಾಗಿ ಭಾರತೀಯರ ಹೋರಾಟ ಮತ್ತು ನಂತರ ಭಾರತದ ಉಜ್ವಲ ವರ್ತಮಾನವನ್ನೂ ಕಂಡಿತು. ಇದು ಗುಜರಾತ್‌ಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಐತಿಹಾಸಿಕ ಪರಂಪರೆಯಾಗಿತ್ತು. ಈ ಸೇತುವೆಯ ಉದ್ದ 765 ಅಡಿ, ಅಷ್ಟೇ ಅಲ್ಲ, ಈ ಸೇತುವೆಗೆ ಹೋಗಲು 15 ರೂಪಾಯಿ ಶುಲ್ಕ ವಿಧಿಸಲಾಗುತ್ತಿತ್ತು. ಮೊರ್ಬಿಯಲ್ಲಿರುವ ಈ ಸೇತುವೆಯನ್ನು ಇತ್ತೀಚೆಗೆ ಸಾರ್ವಜನಿಕರಿಗೆ ತೆರೆಯಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ, ದುರಸ್ತಿ ಮಾಡಿದರೂ ಇಲ್ಲಿ ನೆರೆದಿದ್ದ ಜನಸಾಗರದ ಭಾರಕ್ಕೆ ಸೇತುವೆ ಕುಸಿದಿದೆ.

ಸೇತುವೆ ಕುಸಿದಾಗ ಮಹಿಳೆಯರು ಮತ್ತು ಮಕ್ಕಳು ಅದರ ಕೇಬಲ್‌ಗೆ ನೇತಾಡುತ್ತಿರುವುದನ್ನು ನೋಡಿದ್ದೇವೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಂದಿರುವ ಮಾಹಿತಿಯ ಪ್ರಕಾರ, ಈ ಸೇತುವೆಯ ಸಾಮರ್ಥ್ಯವು ಸುಮಾರು 100 ಜನರಷ್ಟಿದೆ, ಆದರೆ ಇಂದು ಭಾನುವಾರದ ರಜೆಯ ಕಾರಣ, ಸೇತುವೆಯ ಮೇಲೆ ಅಪಾರ ಸಂಖ್ಯೆಯ ಜನರು ಸೇರಿದ್ದರು. ಘಟನೆಯ ಸಮಯದಲ್ಲಿ ಸುಮಾರು 400 ರಿಂದ 500 ಜನರು ಸೇತುವೆಯ ಮೇಲೆ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನಸಾಗರದ ಹೊರೆಯನ್ನು ತಾಳಲಾರದೆ ಸೇತುವೆ ಕುಸಿದಿದೆ.

English summary
Morbi suspension bridge: All about the 143-year-old British era structure that collapsed in Gujarat Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X