Viral Video: ಸಚಿವರ ಮನೆ ಮುಂದೆ ಬೆಳೆದ ಬೇವಿನ ಮರದಲ್ಲಿ ಮಾವಿನ ಹಣ್ಣು: ವಿಡಿಯೋ ವೈರಲ್
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ ಅಚ್ಚರಿಯ ಘಟನೆವೊಂದು ಬೆಳಕಿಗೆ ಬಂದಿದೆ. ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರ ಬಂಗಲೆಯಲ್ಲಿ ನೆಟ್ಟಿದ್ದ ಮರ ಸದ್ಯ ಭಾರೀ ಸುದ್ದಿಯಾಗುತ್ತಿದೆ.
ಅವರ ಮನೆಯ ಅಂಗಳದಲ್ಲಿ ಬೆಳೆದ ಬೇವಿನ ಮರದಲ್ಲಿ ಮಾವಿನ ಹಣ್ಣುಗಳು ಕಾಣಿಸಿಕೊಂಡಿವೆ. ಇದನ್ನು ಕಂಡು ಸ್ವತಃ ಸಚಿವರೇ ಅಚ್ಚರಿಗೊಂಡಿದ್ದು, ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ಸಚಿವರು ಶೇರ್ ಮಾಡಿರುವ ವಿಡಿಯೋದಲ್ಲಿ ಬೇವಿನ ಮರದಲ್ಲಿ ಮಾವಿನ ಹಣ್ಣುಗಳು ನೇತಾಡುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಪಟೇಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು ಅಚ್ಚರಿಯೊಂದಿಗೆ ಸಂಸತ ವ್ಯಕ್ತಪಡಿಸಿದ್ದಾರೆ. ತಮ್ಮ ಭೋಪಾಲ್ ನಿವಾಸದ ಬೇವಿನ ಮರದಲ್ಲಿ ಮಾವಿನ ಹಣ್ಣು ನೋಡಿದಾಗ, ಅವರು ಹರ್ಷಗೊಂಡಿರುವುದಾಗಿ ಬರೆದಿದ್ದಾರೆ. ಕೆಲವು ನುರಿತ ತೋಟಗಾರರು ವರ್ಷಗಳ ಹಿಂದೆ ಈ ಪ್ರಯೋಗವನ್ನು ಮಾಡಿರಬೇಕು, ಇದು ತುಂಬಾ ಅದ್ಭುತ ಹಾಗೂ ಅಚ್ಚರಿಯನ್ನು ಉಂಟು ಮಾಡಿದೆ ಎಂದಿದ್ದಾರೆ.
ಸತ್ಯ ಏನು?
ಬೇವಿನ ಮರ ಸುಮಾರು 25 ರಿಂದ 30 ವರ್ಷ ಹಳೆಯದಾಗಿದೆ. ಪ್ರಹ್ಲಾದ್ ಪಟೇಲ್ ಅವರಿಗೆ ಈ ವರ್ಷ ಈ ಬಂಗಲೆ ಸಿಕ್ಕಿದೆ. ಮುಖ್ಯಮಂತ್ರಿ ನಿವಾಸದ ನಂತರ, ರಾಜಧಾನಿಯ ಎಲ್ಲಾ ಬಂಗಲೆಗಳಲ್ಲಿ ಈ ಬಂಗಲೆ ತುಂಬಾ ದೊಡ್ಡದಾಗಿದೆ. B-7 ಬಂಗಲೆಯು ಭೋಪಾಲ್‌ನ ಪ್ರೊಫೆಸರ್ ಕಾಲೋನಿ ಬಳಿಯ ಸಿವಿಲ್ ಲೈನ್ಸ್‌ನಲ್ಲಿದೆ. ಈ ಬಂಗಲೆಯ ಸುತ್ತಲೂ ಹೆಚ್ಚಿನ ಸಂಖ್ಯೆಯ ಮರಗಳು ಮತ್ತು ಗಿಡಗಳು ಇವೆ.

ವಾಸ್ತವವಾಗಿ, ಪ್ರಸ್ತುತ ಈ ಬಂಗಲೆಯಲ್ಲಿ ಕೆಲ ದುರಸ್ಥಿ ಕಾರ್ಯ ನಡೆಯುತ್ತಿದೆ. ಇದನ್ನು ಪರಿಶೀಲಿಸಲು ಸಚಿವ ಪಹ್ಲಾದ್ ಪಟೇಲ್ ಶನಿವಾರ ಇಲ್ಲಿಗೆ ಆಗಮಿಸಿದ್ದರು. ಈ ವೇಳೆ ಮಾವಿನ ಹಣ್ಣುಗಳು ನೇತಾಡುತ್ತಿದ್ದ ಬೇವಿನ ಮರವೊಂದರ ಮೇಲೆ ಅವರ ಕಣ್ಣು ಬಿತ್ತು. ಬೇವಿನ ಮರದ ಮೇಲೆ ಮಾವಿನ ಕೊಂಬೆಯೂ ಇದೆ. ಹೀಗಾಗಿ ಅದು ಮಾವಿನ ಹಣ್ಣುಗಳನ್ನೂ ಹೊಂದಿದೆ. ಇದನ್ನು ನೋಡಿ ಅವರಿಗೂ ಸಾಕಷ್ಟು ಆಶ್ಚರ್ಯವಾಗಿದೆ.
ಇದು ಹೇಗೆ ಸಾಧ್ಯ?
ಸಸ್ಯಶಾಸ್ತ್ರಜ್ಞ ಪ್ರತಿಭಾ ಸಿಂಗ್ ಅವರ ಮಾಹಿತಿ ಪ್ರಕಾರ, ಬೇವಿನ ಮರದಲ್ಲಿ ಮಾವಿನ ಮರ ಬೆಳೆಯುವ ಸಾಧ್ಯತೆಯಿದೆ. ಬೇವಿನ ಮರದ ಬೀಜ ಹಾಗೂ ಮಾವಿನ ಬೀಜಗಳು ಒಟ್ಟಿಗೆ ಒಂದೆಡೆ ಹಾಕಿದಾಗ ಅಥವಾ ಸೇರಿದಾಗ ಎರಡು ಸಸ್ಯಗಳು ಒಟ್ಟಿಗೆ ಬೆಳೆದ ನಂತರ ಅವು ಫಲ ನೀಡಲು ಪ್ರಾರಂಭಿಸುತ್ತವೆ.
ಅದರಂತೆ ಇಲ್ಲಿಯೂ ಸಹ ನಡೆದಿದೆ. ಕೆಲ ವರ್ಷಗಳ ಹಿಂದೆ ಬೇವಿನ ಮರದೊಂದಿಗೆ ಮಾವಿನ ಬೀಜ ಕೂಡ ಇದ್ದು ಎರಡು ಸಸ್ಯಗಳು ಒಟ್ಟಿಗೆ ಬೆಳೆದಿವೆ. ಈಗ ದೊಡ್ಡ ಮರವಾಗಿ ಮಾವಿನ ಹಣ್ಣುಗಳೂ ಬೆಳೆದುಕೊಂಡಿವೆ ಎಂದರು.
आज भोपाल निवास पर नीम के वृक्ष पर आम के फल देखकर नज़दीक जाकर देखा तो मन गदगद हो गया ।किसी हुनरमंद बागवान ने वर्षों पहले यह प्रयोग किया होगा जो अचंभे से कम नहीं है । pic.twitter.com/TmZ2I0rfjT
— Prahlad Singh Patel (मोदी का परिवार) (@prahladspatel) May 24, 2024
ಒಟ್ಟಿನಲ್ಲಿ ಬೇವಿನ ಮರದಲ್ಲಿ ಮಾವಿನ ಹಣ್ಣು ಕಂಡು ಜನ ಅಚ್ಚರಿಗೊಂಡಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ವೈರಲ್ ಆಗಿದೆ.












Click it and Unblock the Notifications