ತಾಯಿಗೆ ಚಿನ್ನದ ಹಾರ ಗಿಫ್ಟ್ ಮಾಡಿದ ವೈರಲ್ ಹುಡುಗಿ ಮೊನಾಲಿಸಾ
ಸಾಮಾಜಿಕ ಜಾಲತಾಣ ಎಂತವರನ್ನೂ ಕೂಡ ರಾತ್ರಿ ಬೆಳಗಾಗುವಷ್ಟರಲ್ಲಿ ಜೀರೋದಿಂದ ಹೀರೋ ಮಾಡುತ್ತದೆ. ಇದಕ್ಕೆ ನೂರಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಅದೇ ಸಾಲಿಗೆ ಮಹಾ ಕುಂಭ ಮೇಳದ ಸುಂದರ ಕಣ್ಣಿನ ಹುಡುಗಿ ಮೊನಾಲಿಸಾ ಕೂಡ ಸೇರಿದ್ದಾಳೆ. ಮಹಾ ಕುಂಭ ಮೇಳದಲ್ಲಿ ಎಲ್ಲರ ಗಮನ ಸೆಳೆದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅದೃಷ್ಟವೇ ಬದಲಾಗಿ ಹೋಗಿದೆ.
ಮಹಾ ಕುಂಭ ಮೇಳ ಆರಂಭವಾಗ ಮೊದಲೆರಡು ದಿನಗಳು ವ್ಯಾಪಾರ ಮಾಡಿಕೊಂಡಿದ್ದ ಮೊನಾಲಿಸಾ ಅದ್ಯಾವಾಗ ಒಬ್ಬ ವಿಡಿಯೋ ಕಂಟೆಂಟ್ ಕ್ರಿಯೇಟರ್ ಕಣ್ಣಿಗೆ ಬಿದ್ದಳೋ ಅಂದಿನಿಂದ ಸಾಮಾಜಿಕ ಜಾಲತಾಣದಲ್ಲಿ ಆಕೆಯದ್ದೇ ಹವಾ. ಮುಗ್ಧ ನಗು, ಆಕರ್ಷಕ ಕಣ್ಣುಗಳು, ಕೈಯಲ್ಲಿ- ಕುತ್ತಿಗೆಯಲ್ಲಿ ಒಂದಿಷ್ಟು ಮಣಿಗಳು, ಜೊತೆಗೆ ರುದ್ರಾಕ್ಷಿ ಹಾಗೂ ಮಣಿ ಸರಗಳ ಮಾರಾಟ ಮಾಡುತ್ತಿದ್ದ ಮೊನಾಲಿಸಾ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದಳು.

ಜನಪ್ರಿಯತೆ ಹೆಚ್ಚುತ್ತಿದ್ದಂತೆ ಮಣಿ ಸರಗಳ ಮಾರಾಟ ಮಾಡಲಾಗದೇ ಮೊನಾಲಿಸಾ ಪ್ರಯಾಗ್ ರಾಜ್ ತೊರೆದು ತನ್ನ ಊರಿಗೆ ಸೇರಿದಳು. ಆದರೆ ಮೊನಾಲಿಸಾ ಮಹಾ ಕುಂಭಮೇಳದಿಂದ ನಿರ್ಗಮಿಸಿದರೂ ಆಕೆಯ ಹವಾ ಮಾತ್ರ ಕಮ್ಮಿ ಆಗಲಿಲ್ಲ. ಆಕೆಯ ಫೋಟೋಶೂಟ್ ವಿಡಿಯೋಗಳು, ಮೇಕಪ್ ವಿಡಿಯೋಗಳು ಹೀಗೆ ಸಾಲು ಸಾಲು ವಿಡಿಯೋಗಳು ವೈರಲ್ ಆಗುತ್ತಲೇ ಇದ್ದವು.
ಸದ್ಯ ಮೊನಾಲಿಸಾ ಕೇರಳದ ಜನಪ್ರಿಯ ಚೆಮ್ಮನೂರ್ ಜ್ಯೂವೆಲ್ಲರಿಯ ಪ್ರಚಾರದ ರಾಯಭಾರಿಯಾಗಿದ್ದು, ಇತ್ತೀಚಿಗೆ ಕೇರಳಕ್ಕೆ ಕೂಡ ಭೇಟಿ ನೀಡಿದ್ದರು. ಈ ವೇಳೆ ಮೊನಾಲಿಸಾಗೆ ವಜ್ರದ ಹಾರವನ್ನು ನೀಡಲಾಗಿತ್ತು. ಸದ್ಯದ ತನ್ನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಂಡ ಮೊನಾಲಿಸಾ ಬದುಕು ನಡೆಸಲು ಪ್ರಚಾರದ ಕಾರ್ಯ, ಮೇಕ್‌ಓವರ್ ಫೋಟೋಶೂಟ್‌ಗಳಲ್ಲಿ ಭಾಗಿಯಾಗುತ್ತಿದ್ದು, ಇದೀಗ ತಾವು ದುಡಿದ ಹಣದಲ್ಲಿ ತಮ್ಮ ತಾಯಿಗೆ ಭರ್ಜರಿ ಗಿಫ್ಟ್‌ವೊಂದನ್ನು ನೀಡಿದ್ದಾರೆ.

ಹೌದು ಮೊನಾಲಿಸಾ ತಮ್ಮ ತಾಯಿಗೆ ಚಿನ್ನದ ಚೈನ್ ಒಂದನ್ನು ಗಿಫ್ಟ್ ಆಗಿ ನೀಡಿದ್ದು, ತಾಯಿಗೆ ಸರವನ್ನು ಕೊರಳಿಗೆ ಹಾಕಿ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋವನ್ನು ಮೊನಾಲಿಸಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 8 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಮೊನಾಲಿಸಾ ವಿಡಿಯೋಗೆ ಲೈಕ್ ಮಾಡಿದ್ದಾರೆ.












Click it and Unblock the Notifications