4ನೇ ಹಂತದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಆಸ್ತಿ ಮೌಲ್ಯ ಕೇವಲ 500 ರು

ನವದೆಹಲಿ, ಏಪ್ರಿಲ್ 25: ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಚುನಾವಣೆ ಏಪ್ರಿಲ್ 29ರಂದು ನಡೆಯಲಿದೆ. 4ನೇ ಹಂತದಲ್ಲಿ 9 ರಾಜ್ಯಗಳ 71 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.ಈ ಹಂತದಲ್ಲಿ ಅತ್ಯಂತ ಕಡಿಮೆ ಆಸ್ತಿ ಘೋಷಿಸಿಕೊಂಡ ಅಭ್ಯರ್ಥಿಗಳ ಪೈಕಿ ಪ್ರಿನ್ಸ್ ಕುಮಾರ್ ಕೂಡಾ ಒಬ್ಬರು.

ಲೋಕಸಭಾ ಚುನಾವಣೆ ವಿಶೇಷ ಪುಟ

4ನೇ ಹಂತದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಆಸ್ತಿ ಸರಾಸರಿ 4.53 ಕೋಟಿ ರು ನಷ್ಟಿದೆ ಎಂದು ವರದಿ ಹೇಳಿದೆ. ಶೂನ್ಯ ಸಂಪಾದನೆ ಉಳ್ಳ ಮೂವರು ಪಕ್ಷೇತರರ ಅಭ್ಯರ್ಥಿಗಳನ್ನು ಹೊರತುಪಡಿಸಿದರೆ, 500 ರು ಆಸ್ತಿ ಘೋಷಿಸಿಕೊಂಡಿರುವ ರಾಜಸ್ಥಾನದ ಪ್ರಿನ್ಸ್ ಕುಮಾರ್ ಅವರು ಅತ್ಯಂತ ಕಡಿಮೆ ಆಸ್ತಿವಂತ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ ವರದಿ ಹೇಳಿದೆ.

ರಾಜಸ್ಥಾನದ ಝಲವಾರ್ ಭವನ್ ಕ್ಷೇತ್ರದಿಂದ ಪ್ರಿನ್ಸ್ ಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಅತ್ಯಂತ ಕಡಿಮೆ ಆಸ್ತಿ ಘೋಷಿಸಿಕೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರಾಜಸ್ಥಾನದ ಚಿತ್ತೋರ್ ಗಢದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಷಂಶುದ್ದೀನ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಮುಂಬೈ ಉತ್ತರ ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಪಾನ್ ಸೊಪಾನ್ ಥೊಕೆ ಅವರಿದ್ದು, ಅವರು ಚರಾಸ್ತಿ ಮೌಲ್ಯ 1,100 ರು ಎಂದು ಘೋಷಿಸಿಕೊಂಡಿದ್ದು, ಚರಾಸ್ತಿ ಇಲ್ಲ ಎಂದು ಘೋಷಿಸಿದ್ದಾರೆ.

LS polls 4th phase: Prince Kumar, with Rs 500 candidate has lowest assets

ಇನ್ನಿತರ ಆಸಕ್ತಿಗಳ ಸಂಗತಿಗಳು:
* ಒಟ್ಟು 1 ಕೋಟಿ ರು ಆಸ್ತಿ ಹೊಂದಿದವರು: 303(33%)
ಪಕ್ಷವಾರು ವಿವರ:
* ಕಾಂಗ್ರೆಸ್ಸಿನ 57 ಅಭ್ಯರ್ಥಿಗಳ ಪೈಕಿ 50(88%)
* ಬಿಜೆಪಿಯ 57 ಅಭ್ಯರ್ಥಿಗಳ ಪೈಕಿ (88%)
* ಬಿಎಸ್ಪಿಯ 54 ಅಭ್ಯರ್ಥಿಗಳ ಪೈಕಿ 20(37%)
* ಎಸ್ಎಚ್ಎಸ್ ನ 21 ಅಭ್ಯರ್ಥಿಗಳ ಪೈಕಿ 13(62%)
* ಎಸ್ಪಿಯ 10 ಅಭ್ಯರ್ಥಿಗಳ ಪೈಕಿ 8(80%)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+