ಸಿ-ವೋಟರ್ ಸಮೀಕ್ಷೆ: ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಬೆಂಗಳೂರು, ಮೇ 19: ಸಿ-ವೋಟರ್ ಮತ್ತು ನ್ಯೂಸ್ ಎಕ್ಸ್ ಸಂಸ್ಥೆ ಮಾಡಿರುವ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಯೇ ಬಾಸ್ ಆಗಿ ಮೆರೆಯಲಿದೆ.
ಸಿ-ವೋಟರ್ ಸಮೀಕ್ಷೆ ಪ್ರಕಾರ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷವು 7 ಸ್ಥಾನಗಳಲ್ಲಿ ಗೆದ್ದರೆ ಜೆಡಿಎಸ್ ಪಕ್ಷವು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ಆದರೆ ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಯು ಕಳೆದ ಬಾರಿಗಿಂತಲೂ ಶಕ್ತಿ ಹೆಚ್ಚಿಸಿಕೊಂಡು ಒಂದು ಸ್ಥಾನವನ್ನು ಹೆಚ್ಚು ಗೆಲ್ಲಲಿದೆ.

ಆದರೆ ಕಾಂಗ್ರೆಸ್ ಪಕ್ಷವು ಕೇವಲ ಆರು ಸ್ಥಾನಗಳಿಗೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದರು. ಜೆಡಿಎಸ್ ಕೇವಲ ಎರಡು ಸ್ಥಾನಗಳನ್ನು ಗೆಲ್ಲಲಿದೆ. ಇದರನ್ವಯ ಜೆಡಿಎಸ್‌ನ ದೇವೇಗೌಡ, ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಗೆಲ್ಲಬಹುದು ಎಂದು ಅಂದಾಜಿಸಬಹುದಾಗಿದೆ.
ನ್ಯೂಸ್ ಎಕ್ಸ್ ಮತ್ತು ನೇತಾ ಸಮೀಕ್ಷೆಯ ಅಂಕಿ-ಅಂಶದ ಪ್ರಕಾರ ಬಿಜೆಪಿಯು ರಾಜ್ಯದಲ್ಲಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದರೆ, ಕಾಂಗ್ರೆಸ್ 10, ಜೆಡಿಎಸ್ ಎರಡು ಮತ್ತು ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲ್ಲುತ್ತಾರೆ ಎನ್ನಲಾಗಿತ್ತು.











Click it and Unblock the Notifications