ABP News- CSDS exit poll : ಎನ್ ಡಿಎ ಅಶ್ವಮೇಧಕ್ಕೆ ಅಡ್ಡಿ, ಏನದು ಕೊರತೆ?
ಮೇ 19ಕ್ಕೆ ಲೋಕಸಭೆ ಚುನಾವಣೆಯ ಏಳು ಹಂತದ ಮತದಾನ ಮುಗಿದಿದೆ. 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶದ ಒಟ್ಟು 542 ಸ್ಥಾನಗಳಿಗೆ ಮತದಾನ ನಡೆದಿದೆ. ತಮಿಳುನಾಡಿನ ವೆಲ್ಲೂರು- 1 ಲೋಕಸಭಾ ಕ್ಷೇತ್ರದ ಚುನಾವಣೆ ರದ್ದಾಗಿದೆ. ಈ ಬಾರಿ ಚುನಾವಣೆಯಲ್ಲಿ ಯಾರಿಗೆ, ಎಷ್ಟು ಸ್ಥಾನ ಎಂಬುದರ ಚುನಾವಣೋತ್ತರ ಸಮೀಕ್ಷೆ ಎಬಿಪಿ- ಸಿಎಸ್ ಡಿಎಸ್ ಏನು ಹೇಳುತ್ತಿದೆ ಎಂಬ ವಿವರ ಇಲ್ಲಿದೆ.
ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರಕಾರ ಮತ್ತೊಂದು ಅವಧಿಗೆ ಅವಕಾಶಕ್ಕಾಗಿ ಎದುರು ನೋಡುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಒಂದು ಕಡೆ, ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಂದು ಕಡೆ ಇದ್ದರೆ, ಈ ಎರಡು ಗುಂಪಿನ ಹೊರತಾಗಿ ಇರುವ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ್ ಹಾಗೂ ತೃಣಮೂಲ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸುವುದು ನಿಶ್ಚಿತವಾಗಿದೆ.
2014ರ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳಲ್ಲಿ ಜಯಿಸುವ ಮೂಲಕ ಅದ್ಭುತವಾದ ಜಯ ದಾಖಲಿಸಿತ್ತು. 1984ರ ನಂತರ ಮೊದಲ ಬಾರಿಗೆ ಒಂದು ಪಕ್ಷಕ್ಕೆ ಬಹುಮತಕ್ಕೆ ಬೇಕಾದ 272 ಸ್ಥಾನಗಳು ದೊರೆತಿತ್ತು. ಬಿಜೆಪಿಯು ತನ್ನ ಇತರ ಸಹವರ್ತಿ ಪಕ್ಷಗಳ ಜತೆ ಸೇರಿ ಎನ್ ಡಿಎ ಮೈತ್ರಿ ಕೂಟಕ್ಕೆ 334 ಸ್ಥಾನಗಳು ದೊರೆತಿದ್ದವು.

ಹಾಗಿದ್ದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಗಳಿಸಬಹುದು ಎಂಬ ಲೆಕ್ಕಾಚಾರ ಇಲ್ಲಿದೆ:
ಬಿಜೆಪಿ ಮತ್ತು ಮಿತ್ರ ಪಕ್ಷಗಳು 267
ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು 127
ಇತರರು 148
ಉತ್ತರಪ್ರದೇಶದಲ್ಲಿ ಸ್ಥಾನಗಳ ಲೆಕ್ಕಾಚಾರ
ಒಟ್ಟು ಸ್ಥಾನಗಳು 80
ಬಿಜೆಪಿ+ 22
ಕಾಂಗ್ರೆಸ್+ 2
ಮಹಾಘಟಬಂಧನ್ 56












Click it and Unblock the Notifications