ವಡೋದರಾದಲ್ಲಿ ಕಮಲದ ಪ್ರಬಲ ಕೋಟೆಯನ್ನು ಭೇದಿಸಲು ಸಾಧ್ಯವೇ?
ವಡೋದರಾದಲ್ಲಿ ಬಿಜೆಪಿ ಯಾವಾಗಲೂ ಪ್ರಾಬಲ್ಯ ಮೆರೆದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಗುಜರಾತ್‌ನ ಈ ಪೂರ್ವ ನಗರ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರ ಅನೇಕರ ನಡುವೆ ಸ್ಪರ್ಧೆ ನಡೆದಿತ್ತು.
ಕಾಂಗ್ರೆಸ್‌ನ ಮಧುಸೂದನ್ ಮಿಸ್ತ್ರಿ, ಎಎಪಿಯ ಸುನಿಲ್ ದಿಗಂಬರ್ ಮತ್ತು ಜೆಡಿಯುದ ಜಾಧವ್ ಅಂಬಲಾಲ್ ಕಣಭಾಯ್ ಪ್ರಮುಖ ಎದುರಾಳಿಗಳಾಗಿದ್ದರು. 8,45,464 ಮತಗಳನ್ನು ಪಡೆದ ನರೇಂದ್ರ ಮೋದಿ, 5,70,128 ಮತಗಳಿಂದ ಮಧುಸೂದನ್ ಮಿಸ್ತ್ರಿ ಅವರನ್ನು ಮಣಿಸಿದರು. ಮೂರನೇ ಸ್ಥಾನ ಪಡೆದ ಸುನಿಲ್ ದಿಗಂಬರ್ ಗಳಿಸಿದ್ದು ಕೇವಲ 10,101 ಮತಗಳನ್ನು.
ಅತ್ತ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿಯೂ ಸ್ಪರ್ಧಿಸಿ ಜಯಗಳಿಸಿದ್ದ ಮೋದಿ, ವಡೋದರಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

ಇಲ್ಲಿ ಒಟ್ಟು 16,38,321 ಮತದಾರರಿದ್ದು, ಅವರಲ್ಲಿ 7,89,244 ಮಹಿಳೆಯರು ಮತ್ತು 8,49,077 ಪುರುಷರಿದ್ದಾರೆ ಎಂದು ಚುನಾವಣಾ ಆಯೋಗದ 2014ರ ಮಾಹಿತಿ ತಿಳಿಸುತ್ತದೆ.
2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲಕೃಷ್ಣ ಖಂಡೇರಾವ್ ಶುಕ್ಲಾ ಚಲಾವಣೆಯಾದ 7,47,129 ಮತಗಳಲ್ಲಿ 4,28,833 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಭಾರಿಸಿದ್ದರು.

1957ರಲ್ಲಿ ಇದು ಬರೋಡಾ ಲೋಕಸಭೆ ಕ್ಷೇತ್ರವಾಗಿತ್ತು. ಅಲ್ಲದೆ, ಆಗ ಬಾಂಬೆ ರಾಜ್ಯಕ್ಕೆ ಸೇರಿಕೊಂಡಿತ್ತು. 2009ರ ಚುನಾವಣೆಯಿಂದ ಇದು ವಡೋದರಾ ಎಂಬ ಹೆಸರು ಪಡೆದುಕೊಂಡಿತು.
ಗಾಯಕವಾಡ್ ರಾಜಮನೆತನದ ಬರೋಡಾ ಮಹಾರಾಜರಾಗಿದ್ದ ಫತೆಹ್ ಸಿಂಗ್ ರಾವ್ ಗಾಯಕ್‌ವಾಡ್ ಈ ಕ್ಷೇತ್ರದಿಂದ ಮೊದಲ ಸಂಸದರಾಗಿ ಕಾಂಗ್ರೆಸ್‌ನಿಂದ ಚುನಾಯಿತರಾದರು. 1962 ಚುನಾವಣೆಯಲ್ಲಿಯೂ ಅವರು ಮರು ಆಯ್ಕೆಯಾಗಿದ್ದರು.
1967ರಲ್ಲಿ ಸ್ವತಂತ್ರ ಪಕ್ಷದಿಂದ ಪಿ.ಸಿ. ಪಟೇಲ್ ಜಯಗಳಿಸಿದರು. 1971-80ರ ಅವಧಿಯಲ್ಲಿ ಫತೆಹ್ ಸಿಂಗ್ ಕ್ಷೇತ್ರವನ್ನು ಮರಳಿ ತಮ್ಮ ಹಿಡಿತಕ್ಕೆ ಪಡೆದುಕೊಂಡಿದ್ದರು. ಕಾಂಗ್ರೆಸ್‌ನಲ್ಲಿಯೇ ಇದ್ದ ಫತೆಹ್ ಸಿಂಗ್ ಅವರ ಸಹೋದರ ರಂಜಿತ್ ಸಿಂಗ್ ಗಾಯಕ್‌ವಾಡ್ 1980-89ರ ಅವಧಿಯಲ್ಲಿ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

1991ರಲ್ಲಿ ಇಲ್ಲಿ ಮೊದಲ ಬಾರಿಗೆ ಕಮಲ ಪಾಳೆಯ ಗೆಲುವಿನ ನಗೆ ಬೀರಿತು. ರಾಮಾಯಣ ಧಾರಾವಾಹಿಯಲ್ಲಿ ಸೀತಾ ಪಾತ್ರಧಾರಿಯಾಗಿ ಖ್ಯಾತಿ ಗಳಿಸಿದ್ದ ಕಿರುತೆರೆ ನಟಿ ದೀಪಿಕಾ ಚಿಖಾಲಿಯಾ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದರು. ಸತ್ಯಸಿಂಗ್ ದಿಲೀಪ್‌ಸಿಂಗ್ ಗಾಯಕ್‌ವಾಡ್ 1996ರಲ್ಲಿ ಕಾಂಗ್ರೆಸ್‌ಗೆ ಮತ್ತೆ ಗೆಲುವು ತಂದುಕೊಟ್ಟರು.
1998ರ ಚುನಾವಣೆಯಿಂದ ಇಲ್ಲಿಯವರೆಗೂ ಇಲ್ಲಿ ಬಿಜೆಪಿಯದ್ದೇ ಪಾರುಪತ್ಯ ಮುಂದುವರಿದಿದೆ. 1998-2009ರವರೆಗೆ ಮೂರು ಬಾರಿ ಜಯಾಬೆನ್ ಠಕ್ಕರ್ ಜಯಶಾಲಿಯಾಗಿದ್ದರು.
2014ರ ಚುನಾವಣೆಯಲ್ಲಿ ಗೆದ್ದಿದ್ದ ಮೋದಿ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿಯ ರಂಜನ್‌ಬೆನ್ ಧನಂಜಯ್ ಭಟ್ ಜಯಗಳಿಸಿದ್ದರು.

ರಂಜನ್‌ಬೆನ್ 5,26,763 ಮತಗಳನ್ನು ಪಡೆದುಕೊಂಡಿದ್ದರೆ, ಅವರ ಎದುರಾಳಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ನರೇಂದ್ರ ಅಂಬಲಾಲ್ ರಾವತ್ 1,97,256 ಮತಗಳನ್ನು ಗಳಿಸಿದ್ದರು.
ವಿಧಾನಸಭೆ ಕ್ಷೇತ್ರಗಳು: ವಡೋದರಾ ಲೋಕಸಭೆ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿವೆ. ಸಾಲ್ವಿ, ವಾಘೋಡಿಯಾ, ವಡೋದರಾ ಶಹೆರ್, ಸಯಾಜಿಗಂಜ್, ಅಕೋಟಾ, ರಾವ್‌ಪುರ ಮತ್ತು ಮಂಜಲ್‌ಪುರ.
ವಿಶ್ವಮಿತ್ರಿ ನದಿ ತಟದಲ್ಲಿರುವ ಬರೋಡಾಕ್ಕೆ ಚಂದ್ರಾವತಿ ಎಂಬ ಹೆಸರಿತ್ತು. ಬಳಿಕ ವೀರಾವತಿ ಎಂದು ಹೆಸರು ಬದಲಾಯಿತು. ನಂತರ ವಡಪಾತ್ರಾ ಎಂಬ ನಾಮಕರಣ ಮಾಡಲಾಗಿತ್ತು. ಕ್ರಮೇಣ ಅದು ವಡ್ (ಆಲದಮರ) ದರಾ (ಧರಿಸುವಿಕೆ) ಎಂದು ವಡೋದರಾ ಎಂದು ಹೆಸರು ಪಡೆದುಕೊಂಡಿತು.
ಜನಸಂಖ್ಯೆ ವಿವರ
22,98,052 ಸಂಖ್ಯೆಯ ಜನರು ಈ ಕ್ಷೇತ್ರದಲ್ಲಿದ್ದಾರೆ. 19.85% ಮಂದಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದರೆ, ನಗರ ಭಾಗಗಳಲ್ಲಿ 80.15% ಮಂದಿ ವಾಸವಿದ್ದಾರೆ. ಇವರಲ್ಲಿ ಒಟ್ಟು 6.37%ರಷ್ಟು ಪರಿಶಿಷ್ಟ ಜಾತಿ ಮತ್ತು 6.17%ಪರಿಶಿಷ್ಟ ಪಂಗಡದ ಜನರಿದ್ದಾರೆ.
2014ರ ಚುನಾವಣೆಯಲ್ಲಿ 11,61,577 (ಶೇ 71) ಮಂದಿ ಮತ ಚಲಾಯಿಸಿದ್ದರು. ಅವರಲ್ಲಿ 6,25,045 ಮಂದಿ ಪುರುಷರು ಮತ್ತು 5,36,532 ಮಂದಿ ಮಹಿಳೆಯರು ಇದ್ದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications