2024ರ ಲೋಕಸಭಾ ಚುನಾವಣೆಗೆ ಕರ್ನಾಟಕದ ಸರ್ವಪಕ್ಷ ಅಭ್ಯರ್ಥಿಗಳ ಪಟ್ಟಿ
ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26ರಂದು 14 ಕ್ಷೇತ್ರ ಮತ್ತು ಮೇ 7ರಂದು 14 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಕರ್ನಾಟಕದ ಪ್ರಮುಖ ಪಕ್ಷಗಳು ಮೂರು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್. ಆದರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆದ್ದರಿಂದ 28 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಎದುರಾಳಿಗಳು. ಕೆಲವು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ.

ಆಮ್ ಆದ್ಮಿ ಪಕ್ಷ, ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಹ ರಾಜ್ಯದಲ್ಲಿ ಚುನಾವಣಾ ಕಣದಲ್ಲಿದ್ದಾರೆ. ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ಈ ಪುಟದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಇದೆ. ನಿಮ್ಮ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು? ಇಲ್ಲಿದೆ ಮಾಹಿತಿ...
| ಕ್ಷೇತ್ರ | ಬಿಜೆಪಿ | ಕಾಂಗ್ರೆಸ್ | ಪಕ್ಷೇತರ |
| ಚಿಕ್ಕೋಡಿ | ಅಣ್ಣಾ ಸಾಹೇಬ್ ಜೊಲ್ಲೆ | ಪ್ರಿಯಾಂಕಾ ಜಾರಕಿಹೊಳಿ | |
| ಬೆಳಗಾವಿ | ಜಗದೀಶ್ ಶೆಟ್ಟರ್ | ಮೃಣಾಲ್ ಹೆಬ್ಬಾಳ್ಕರ್ | |
| ಬಾಗಲಕೋಟೆ | ಪಿ. ಸಿ. ಗದ್ದಿಗೌಡರ್ | ಸಂಯುಕ್ತ ಪಾಟೀಲ್ | |
| ವಿಜಯಪುರ | ರಮೇಶ್ ಜಿಗಜಿಣಗಿ | ಹೆಚ್. ಆರ್. ಅಲಗೂರು | |
| ಕಲಬುರಗಿ | ಡಾ. ಉಮೇಶ್ ಜಾಧವ್ | ರಾಧಾಕೃಷ್ಣ | |
| ರಾಯಚೂರು | ರಾಜಾ ಅಮರೇಶ್ವರ ನಾಯಕ | ಜಿ. ಕುಮಾರ್ ನಾಯ್ಕ್ | |
| ಬೀದರ್ | ಭಗವಂತ ಖೂಬಾ | ಸಾಗರ್ ಖಂಡ್ರೆ | |
| ಕೊಪ್ಪಳ | ಡಾ. ಬಸವರಾಜ ಕ್ಯಾವಟರ್ | ಕೆ. ರಾಜಶೇಖರ್ ಹಿಟ್ನಾಳ್ | |
| ಬಳ್ಳಾರಿ | ಬಿ. ಶ್ರೀರಾಮುಲು | ಇ. ತುಕಾರಾಂ | |
| ಹಾವೇರಿ | ಬಸವರಾಜ ಬೊಮ್ಮಾಯಿ | ಆನಂದಸ್ವಾಮಿ ಗುಡ್ಡದೇವರ ಮಠ | |
| ಧಾರವಾಡ | ಪ್ರಹ್ಲಾದ್ ಜೋಶಿ | ವಿನೋದ್ ಅಸೂಟಿ | ದಿಂಗಾಲೇಶ್ವರ ಸ್ವಾಮೀಜಿ |
| ಉತ್ತರ ಕನ್ನಡ | ವಿಶ್ವೇಶ್ವರ ಹೆಗಡೆ ಕಾಗೇರಿ | ಡಾ. ಅಂಜಲಿ ನಿಂಬಾಳ್ಕರ್ | |
| ದಾವಣಗೆರೆ | ಗಾಯತ್ರಿ ಸಿದ್ದೇಶ್ವರ | ಪ್ರಭಾ ಮಲ್ಲಿಕಾರ್ಜುನ್ | |
| ಶಿವಮೊಗ್ಗ | ಬಿ. ವೈ. ರಾಘವೇಂದ್ರ | ಗೀತಾ ಶಿವರಾಜ್ ಕುಮಾರ್ | ಕೆಎಸ್ ಈಶ್ವರಪ್ಪ |
| ಉಡುಪಿ-ಚಿಕ್ಕಮಗಳೂರು | ಕೋಟ ಶ್ರೀನಿವಾಸ ಪೂಜಾರಿ | ಡಾ. ಜಯಪ್ರಕಾಶ್ ಹೆಗ್ಡೆ | |
| ಹಾಸನ | ಪ್ರಜ್ವಲ್ ರೇವಣ್ಣ | ಎಂ. ಶ್ರೇಯಸ್ ಪಾಟೀಲ್ | |
| ದಕ್ಷಿಣ ಕನ್ನಡ | ಕ್ಯಪ್ಟನ್ ಬ್ರಿಜೇಶ್ ಚೌಟ | ಪದ್ಮರಾಜ್ | |
| ಚಿತ್ರದುರ್ಗ | ಗೋವಿಂದ ಕಾರಜೋಳ | ಬಿ. ಎನ್. ಚಂದ್ರಪ್ಪ | |
| ತುಮಕೂರು | ವಿ. ಸೋಮಣ್ಣ | ಎಸ್. ಪಿ. ಮುದ್ದಹನುಮೇಗೌಡ | |
| ಮಂಡ್ಯ | ಎಚ್. ಡಿ. ಕುಮಾರಸ್ವಾಮಿ | ವೆಂಕಟರಮಣೇ ಗೌಡ | |
| ಮೈಸೂರು | ಯದುವೀರ ಒಡೆಯರ್ | ಎಂ. ಲಕ್ಷ್ಮಣ್ | |
| ಚಾಮರಾಜನಗರ | ಎಸ್. ಬಾಲರಾಜ್ | ಸುನೀಲ್ ಬೋಸ್ | |
| ಬೆಂಗಳೂರು ಗ್ರಾಮಾಂತರ | ಡಾ. ಸಿ. ಎನ್. ಮಂಜುನಾಥ್ | ಡಿ. ಕೆ. ಸುರೇಶ್ | |
| ಬೆಂಗಳೂರು ಉತ್ತರ | ಶೋಭಾ ಕರಂದ್ಲಾಜೆ | ಪ್ರೊ. ಎಂ. ವಿ. ರಾಜೀವ್ ಗೌಡ | |
| ಬೆಂಗಳೂರು ಕೇಂದ್ರ | ಪಿ. ಸಿ. ಮೋಹನ್ | ಮನ್ಸೂರ್ ಅಲಿ ಖಾನ್ | |
| ಬೆಂಗಳೂರು ದಕ್ಷಿಣ | ತೇಜಸ್ವಿ ಸೂರ್ಯ | ಸೌಮ್ಯಾ ರೆಡ್ಡಿ | |
| ಚಿಕ್ಕಬಳ್ಳಾಪುರ | ಡಾ. ಕೆ. ಸುಧಾಕರ್ | ರಕ್ಷಾ ರಾಮಯ್ಯ | |
| ಕೋಲಾರ | ಮಲ್ಲೇಶ್ ಬಾಬು | ಕೆ. ವಿ. ಗೌತಮ್ |












Click it and Unblock the Notifications