2018ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ

Posted By:
Subscribe to Oneindia Kannada

ಜುಲೈ 21, 2009ರಲ್ಲಿ ಸುದೀರ್ಘ ಸೂರ್ಯಗ್ರಹಣ ಸಂಭವಿಸಿತ್ತು. ಬೆಳಗ್ಗೆ 5.28ಕ್ಕೆ ಆರಂಭವಾಗಿದ್ದ ಗ್ರಹಣ 10.42ಕ್ಕೆ ಮುಕ್ತಾಯವಾಗಿತ್ತು. ಈ ರೀತಿಯ ಸುದೀರ್ಘ ಗ್ರಹಣ 2018ರಲ್ಲಿ ಸಂಭವಿಸಲಿದೆಯಾ? ಇಲ್ಲ..

ಈ ವರ್ಷ ಅಂದರೆ 2018ರಲ್ಲಿ ಒಟ್ಟು ಐದು ಗ್ರಹಣಗಳು ಸಂಭವಿಸಲಿವೆ. ಇದರಲ್ಲಿ ಮೂರು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ. ಮೂರೂ ಸೂರ್ಯಗ್ರಹಣಗಳು ಭಾಗಶ: ಗ್ರಹಣಗಳಾದರೆ, ಎರಡು ಖಗ್ರಾಸ ಚಂದ್ರ ಗ್ರಹಣಗಳು.

ಜನವರಿ 31ರಂದು ಖಂಡಗ್ರಾಸ ಚಂದ್ರಗ್ರಹಣ, ಯಾವ ರಾಶಿಗೆ ಏನು ಫಲ

ಕಳೆದ ವರ್ಷ ನಾಲ್ಕು ಗ್ರಹಣಗಳು ಸಂಭವಿಸಿತ್ತು, ಇದರಲ್ಲಿ ಎರಡು ಚಂದ್ರ ಗ್ರಹಣಗಳು ಮಾತ್ರ ಭಾಗಶಃ ಭಾರತದಲ್ಲಿ ಗೋಚರಿಸಿದ್ದವು. ಖಗೋಳ ಶಾಸ್ತ್ರಜ್ಞರಿಗೆ ಹೊಸ ಆವಿಷ್ಕಾರ ನಡೆಸಲು ಗ್ರಹಣ ಸೂಕ್ತ ದಿನವಾಗಿದ್ದರೆ, ಜ್ಯೋತಿಷಿಗಳಿಗೆ 'ಜ್ಯೋತಿಷ್ಯ ಪಾಂಡಿತ್ಯ' ಪ್ರದರ್ಶಿಸಲೂ ಈ ದಿನಗಳು ವೇದಿಕೆಯಾಗಲಿದೆ.

ಸಂಕ್ರಾಂತಿ ವಿಶೇಷ ಪುಟ

ಗ್ರಹಣ ಎನ್ನುವುದು ಸೌರಮಂಡಲದಲ್ಲಿ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಖಗೋಳ ಪ್ರಕ್ರಿಯೆವಾಗಿದ್ದು, ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ, ಹುಣ್ಣಿಮೆಯ ದಿನದಂದು ಚಂದ್ರ ಗ್ರಹಣ ಸಂಭವಿಸುತ್ತದೆ.

ಗ್ರಹಣ ಕಾಲದಲ್ಲಿ ಏನು ಮಾಡಬೇಕು, ಏನು ಮಾಡಬಾರದು

ಗ್ರಹಣದ ವೇಳೆ ಸಮುದ್ರ ಸ್ನಾನ, ಪವಿತ್ರ ಸ್ನಾನ ಒಂದೆಡೆಯಾದರೆ, ವಾಮಾಚಾರ ಮತ್ತು ಕಂದಾಚಾರವೂ ಈ ಅವಧಿಯಲ್ಲಿ ಹೆಚ್ಚಾಗಿ ನಡೆಯುತ್ತದೆ. ಈ ಎಲ್ಲಾ ಗ್ರಹಣಗಳು ಭಾರತದಲ್ಲೂ ಗೋಚರಿಸಲಿದೆಯಾ, ಸ್ಪರ್ಶ ಕಾಲವೇನು, ಮೋಕ್ಷ ಕಾಲವೇನು ಎನ್ನುವ ವಿವರವನ್ನು ಕೆಳಗಡೆ ನೀಡಲಾಗಿದೆ.

ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ

ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ

1. ಬುಧವಾರ - 31.01.2018

ಗ್ರಹಣ: ಖಗ್ರಾಸ ಚಂದ್ರ ಗ್ರಹಣ

ಗ್ರಹಣ ಗೋಚರಿಸುವ ಪ್ರದೇಶಗಳು: ಅಮೆರಿಕ, ಈಶಾನ್ಯ ಯುರೋಪ್, ರಷ್ಯಾ, ಏಷ್ಯಾ ಖಂಡದ ಹಲವು ಪ್ರದೇಶಗಳು, ಆಸ್ಟ್ರೇಲಿಯಾ. ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ.

ಗ್ರಹಣ ಸ್ಪರ್ಶ ಕಾಲ: ಸಂಜೆ 5.17 (ಭಾರತೀಯ ಕಾಲಮಾನ)

ಗ್ರಹಣ ಮೋಕ್ಷ ಕಾಲ: ರಾತ್ರಿ 8.43 (ಭಾರತೀಯ ಕಾಲಮಾನ)
ಪುಷ್ಯ - ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಚಂದ್ರನಿಗೆ ರಾಹು ಗ್ರಹಣ

ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ

ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ

2. ಗುರುವಾರ - 15.02.2018

ಗ್ರಹಣ: ಭಾಗಶ: ಸೂರ್ಯಗ್ರಹಣ

ಗ್ರಹಣ ಗೋಚರಿಸುವ ಪ್ರದೇಶಗಳು: ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಅಂಟಾರ್ಕಟಿಕ್

ಗ್ರಹಣ ಸ್ಪರ್ಶ ಕಾಲ: ಫೆ. 15ರ ತಡರಾತ್ರಿ 00.25 (ಭಾರತೀಯ ಕಾಲಮಾನ, 16.02.18)

ಗ್ರಹಣ ಮೋಕ್ಷ ಕಾಲ: 16ರ ಮುಂಜಾನೆ 4.17 (ಭಾರತೀಯ ಕಾಲಮಾನ)
ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರ

ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರ

3. ಶುಕ್ರವಾರ - 13.07.2018

ಗ್ರಹಣ: ಭಾಗಶ: ಸೂರ್ಯಗ್ರಹಣ

ಗ್ರಹಣ ಗೋಚರಿಸುವ ಪ್ರದೇಶಗಳು: ದಕ್ಷಿಣ ಆಸ್ಟ್ರೇಲಿಯಾ, ಪೆಸಿಫಿಕ್, ಹಿಂದೂ ಮಹಾಸಾಗರ

ಗ್ರಹಣ ಸ್ಪರ್ಶ ಕಾಲ: ಬೆಳಗ್ಗೆ 7.18 (ಭಾರತೀಯ ಕಾಲಮಾನ)

ಗ್ರಹಣ ಮೋಕ್ಷ ಕಾಲ: ಬೆಳಗ್ಗೆ 9.43 (ಭಾರತೀಯ ಕಾಲಮಾನ)

ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ಯುರೋಪ್, ಏಷ್ಯಾದ ಬಹುತೇಕ ಪ್ರದೇಶ

ಯುರೋಪ್, ಏಷ್ಯಾದ ಬಹುತೇಕ ಪ್ರದೇಶ

4. ಶನಿವಾರ - 27 - 28.07.2018

ಗ್ರಹಣ: ಖಗ್ರಾಸ ಚಂದ್ರಗ್ರಹಣ

ಗ್ರಹಣ ಗೋಚರಿಸುವ ಪ್ರದೇಶಗಳು: ಯುರೋಪ್, ಏಷ್ಯಾದ ಬಹುತೇಕ ಪ್ರದೇಶ, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ

ಗ್ರಹಣ ಸ್ಪರ್ಶ ಕಾಲ: ತಡರಾತ್ರಿ 11.54 (ಭಾರತೀಯ ಕಾಲಮಾನ, 27.02.18)

ಗ್ರಹಣ ಮೋಕ್ಷ ಕಾಲ: ಮುಂಜಾನೆ 3.49 (ಭಾರತೀಯ ಕಾಲಮಾನ, 28.02.18)

ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. ಯಾವ ರಾಶಿಯಲ್ಲಿ ಗ್ರಹಣ ಸಂಭವಿಸಲಿದೆ ಎನ್ನುವುದು ಹೊಸ ಪಂಚಾಂಗ ಬಂದನಂತರವಷ್ಟೇ ತಿಳಿಯಲಿದೆ.

 ಉತ್ತರ ಮತ್ತು ಪಶ್ಚಿಮ ಏಷ್ಯಾ, ಉತ್ತರ ಅಮೆರಿಕ, ಅಟ್ಲಾಂಟಿಕ್, ಅರ್ಕಾಟಿಕ್

ಉತ್ತರ ಮತ್ತು ಪಶ್ಚಿಮ ಏಷ್ಯಾ, ಉತ್ತರ ಅಮೆರಿಕ, ಅಟ್ಲಾಂಟಿಕ್, ಅರ್ಕಾಟಿಕ್

5. ಶನಿವಾರ - 11.08.2018

ಗ್ರಹಣ: ಭಾಗಶ: ಸೂರ್ಯಗ್ರಹಣ

ಗ್ರಹಣ ಗೋಚರಿಸುವ ಪ್ರದೇಶಗಳು: ಪೂರ್ವ ಮತ್ತು ಉತ್ತರ ಯುರೋಪ್, ಉತ್ತರ ಮತ್ತು ಪಶ್ಚಿಮ ಏಷ್ಯಾ, ಉತ್ತರ ಅಮೆರಿಕ, ಅಟ್ಲಾಂಟಿಕ್, ಅರ್ಕಾಟಿಕ್

ಗ್ರಹಣ ಸ್ಪರ್ಶ ಕಾಲ: ತಡರಾತ್ರಿ 1.32 (ಭಾರತೀಯ ಕಾಲಮಾನ)

ಗ್ರಹಣ ಮೋಕ್ಷ ಕಾಲ: ಸಂಜೆ 5.00 (ಭಾರತೀಯ ಕಾಲಮಾನ)

ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
List of Solar and Lunar eclipses world will witness in 2018. Three Solar and Two lunar eclipse will happen during 2018. Out of Five only two eclipses will be visible in India. On January 31 total lunar eclipse is happening. Astro enthusiasts can watch Super Blue Blood Moon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ