Lata Mangeshkar Birthday- ಲತಾ ಮಂಗೇಶ್ಕರ್ ಗೌರವಾರ್ಥ ಅಯೋಧ್ಯೆಯಲ್ಲಿ 40 ಅಡಿ ಬೃಹತ್ ವೀಣೆ ಸ್ಥಾಪನೆ
ನವದೆಹಲಿ, ಸೆ. 28: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ 94ನೇ ಜನ್ಮದಿನ ಇಂದು. ಈ ಸಂದರ್ಭದಲ್ಲಿ ಅವರ ಗೌರವಾರ್ಥವಾಗಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ 40 ಅಡಿ ಎತ್ತರದ ವೀಣೆಯ ಉದ್ಘಾಟನೆ ಮಾಡಲಾಗುತ್ತಿದೆ.
ಅಯೋಧ್ಯೆಯ ಪ್ರಮುಖ ವೃತ್ತವೊಂದಕ್ಕೆ ಲತಾ ಮಂಗೇಶ್ಕರ್ ಹೆಸರಿಡಲಾಗಿದೆ. ಅಲ್ಲಿಯೇ ಈ ಬೃಹತ್ ವೀಣೆಯ ಆಕೃತಿಯನ್ನು ನಿರ್ಮಿಸಲಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈ ವೀಣೆಯ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಸೇರಿದಂತೆ ಹಲವು ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮದ ವರ್ಚುವಲ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಿಗಳು ಈ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಅವರ ಜನ್ಮದಿನದಂದು ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

"ಲತಾ ದೀದಿ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇನೆ. ಅವರ ಬಗ್ಗೆ ನೆನಪು ಬಹಳ ಇದೆ. ಹಲವು ಬಾರಿ ನಡೆದ ಸಂವಾದದಲ್ಲಿ ಬಹಳ ಅಕ್ಕರೆ ತೋರಿದ್ದಾರೆ. ಇವತ್ತು ಅಯೋಧ್ಯೆಯಲ್ಲಿ ವೃತ್ತವೊಂದಕ್ಕೆ ಅವರ ಹೆಸರು ಇಡಲಾಗುತ್ತಿರುವುದು ಕಂಡು ಸಂತೋಷವಾಯಿತು. ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ ಅವರಿಗೆ ಸಿಗಬೇಕಿರುವ ಗೌರವ ಅದು" ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.












Click it and Unblock the Notifications