• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಶಕದ ಕೊನೆಯ ಚಂದ್ರಗ್ರಹಣ ಇಂದು ಗೋಚರ: ಎಲ್ಲಿ? ಯಾವ ಸಮಯ?

|

ನವದೆಹಲಿ, ನವೆಂಬರ್ 23: 2020ರ ಮತ್ತು ಈ ದಶಕದ ಕೊನೆಯ ಚಂದ್ರಗ್ರಹಣ ನವೆಂಬರ್ 30ರಂದು ಸಂಭವಿಸಲಿದೆ. ಈ ಬಾರಿ ಉಪಛಾಯಾ ಚಂದ್ರಗ್ರಹವು ನವೆಂಬರ್ 30ರ ಸೋಮವಾರದಂದು ಕಾರ್ತಿಕ ಪೂರ್ಣಿಮೆಯಂದು ಜರುಗಲಿದೆ.

ಖಗೋಳ ತಜ್ಞರ ಪ್ರಕಾರ ಮುಂದಿನ ವಾರ ನಡೆಯಲಿರುವ ಚಂದ್ರ ಗ್ರಹಣವು 2020ರ ದಶಕದ ಕೊನೆಯ ಚಂದ್ರಗ್ರಹಣವಾಗಲಿದೆ. ಈ ಬಾರಿಯ ಚಂದ್ರ ಗ್ರಹಣವು ವೃಷಭರಾಶಿ ಮತ್ತು ರೋಹಿಣಿ ನಕ್ಷತ್ರದವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹಾಗೆಯೇ ಇತರೆ ಎಲ್ಲ ರಾಶಿಯವರ ಮೇಲೆಯೂ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ

ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಇದಕ್ಕೆ ಯಾವುದೇ ಧಾರ್ಮಿಕ ಮಹತ್ವದ ಹಿನ್ನಲೆಯಿಲ್ಲ. ಪ್ರತಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಂತ್ರ ಪಠಣ ಮತ್ತು ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಉಪಛಾಯಾ ಚಂದ್ರಗ್ರಹಣವಾಗಿರುವುದರಿಂದ ಸೂತಕ ಇರುವುದಿಲ್ಲ.

ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್‌ವರ್ಕ್

ಚಂದ್ರಗ್ರಹಣದ ದಿನಾಂಕ, ಸಮಯ:

ಚಂದ್ರಗ್ರಹಣದ ಸಮಯ: ನವೆಂಬರ್ 30ರಂದು ಮಧ್ಯಾಹ್ನ 1.04ಕ್ಕೆ

ಗ್ರಹಣದ ಮಧ್ಯಭಾಗ: ಮಧ್ಯಾಹ್ನ 3.13

ಗ್ರಹಣ ಬಿಡುವ ಸಮಯ: ಸಂಜೆ 5.22

ಕಾಣಿಸುವ ದೇಶಗಳು: ಭಾರತ, ಆಸ್ಟ್ರೇಲಿಯಾ, ಅಮೆರಿಕ, ಪೆಸಿಫಿಕ್ ಸಾಗರ ಮತ್ತು ಏಷ್ಯಾ.

English summary
Last Lunar Eclipse of 2020 Date, Time, Sutak Kaal, Significance And other details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X