• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2018ರಲ್ಲಿ ಕೋಡಿಮಠದ ಶ್ರೀಗಳು ನುಡಿದ ಭವಿಷ್ಯದ ಸತ್ಯಾಸತ್ಯತೆಯ ಅವಲೋಕನ

|
   ಕೋಡಿ ಮಠದ ಶ್ರೀಗಳು 2018ರಲ್ಲಿ ನುಡಿದ ಭವಿಷ್ಯಗಳು | Oneindia Kannada

   ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಮುನ್ನ, 'ಕಿಂಗ್ ಆಫ್ ಪ್ರಿಡಿಕ್ಷನ್' ಎಂದೇ ಚೀನಾದಲ್ಲಿ ಕರೆಯಲ್ಪಡುವ 'ಗೆಡಾ' ಎನ್ನುವ ಮಂಗನಿಂದ ಅಮೆರಿಕಾದ ಅಧ್ಯಕ್ಷ ಚುನಾವಣೆಯ ಬಗ್ಗೆ ಭವಿಷ್ಯ ಕೇಳಲಾಗಿತ್ತು. ಇದಕ್ಕಾಗಿ ಎಡ ಭಾಗದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಬಲ ಭಾಗದಲ್ಲಿ ಹಿಲರಿ ಕ್ಲಿಂಟನ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಗೆಡಾ ಸ್ವಲ್ಪ ಹೊತ್ತು ಎರಡೂ ಅಭ್ಯರ್ಥಿಗಳ ಭಾವಚಿತ್ರಗಳನ್ನು ನೋಡಿ, ಡೊನಾಲ್ಡ್ ಟ್ರಂಪ್ ಚಿತ್ರಕ್ಕೆ ಮುತ್ತಿಕ್ಕಿತು.

   ಇದಲ್ಲದೇ, ಚಾಣಕ್ಯ ಎಂಬ ಮೀನು ಅಮೆರಿಕ ಅಧ್ಯಕ್ಷರು ಯಾರು ಆಗಲಿದ್ದಾರೆಂದು ಭವಿಷ್ಯ ನುಡಿದಿತ್ತು. ಚಾಣಕ್ಯನ ಆಯ್ಕೆಯಂತೆ ರಿಪಬ್ಲಿಕ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲ್ಲಲಿದ್ದಾರೆ ಎಂದು ಹೇಳಿತ್ತು. ಹಿಲರಿ ಕ್ಲಿಂಟನ್ ಜೊತೆ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದರು.

   ಜೆಡಿಎಸ್ -ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

   ರಾಜಕೀಯದಿಂದ ಹೊರತಾಗಿ, ವಿಶ್ವಕಪ್ ಫುಟ್ಬಾಲ್ ನಲ್ಲೂ ಈ ರೀತಿಯ ಭವಿಷ್ಯ ಕೇಳುವ ಪದ್ದತಿಯಿದೆ. ಈ ವಿಚಾರಗಳನ್ನು ಯಾಕಿಲ್ಲಿ ಪ್ರಸ್ತಾವಿಸಲಾಗುತ್ತಿದೆ ಎಂದರೆ, ಭವಿಷ್ಯ, ಜ್ಯೋತಿಷ್ಯ ಅನ್ನೋದು ಬರೀ ಭಾರತಕ್ಕೆ ಮಾತ್ರ ಸೀಮಿತವಲ್ಲ ಎನ್ನುವುದಕ್ಕೆ.

   ಈ ವರ್ಷ ಕೂಡಾ ಅರಸೀಕೆರೆ, ಹಾರನಹಳ್ಳಿ, ಕೋಡಿಮಠ ಸಂಸ್ಥಾನದ ಡಾ. ಶಿವನಾಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹಲವು ಭವಿಷ್ಯವನ್ನು ನುಡಿದಿದ್ದರು. ತಾಳೇಗರಿ ಆಧಾರಿತ, ಒಗಟಿನ ರೂಪದಲ್ಲಿ ಭವಿಷ್ಯ ನುಡಿಯುವ ಕೋಡಿಶ್ರೀಗಳು, ರಾಜಕೀಯ ಮತ್ತು ನೈಸರ್ಗಿಕ ವಿಕೋಪದ ವಿಚಾರದಲ್ಲೂ ಭವಿಷ್ಯವನ್ನು ನುಡಿದಿದ್ದರು.

   ನಿಗೂಢ ಮಹಿಳೆ ಬಾಬಾ ವಂಗಾ ನುಡಿದ 2019ರ ಭೀಕರ ಭವಿಷ್ಯ!

   ಸಂಕ್ರಾಂತಿ, ಯುಗಾದಿ, ವಿಜಯದಶಮಿಯ ಸಂದರ್ಭಗಳಲ್ಲಿ ಭವಿಷ್ಯ ನುಡಿಯುವ ಕೋಡಿಶ್ರೀಗಳು, ಈ ಬಾರಿ ಚಂದ್ರಗ್ರಹಣದ ಹಿನ್ನಲೆಯಲ್ಲೂ ಭವಿಷ್ಯವನ್ನು ನುಡಿದಿದ್ದರು. ಶ್ರೀಗಳು, 2018ರಲ್ಲಿ ನುಡಿದ ಭವಿಷ್ಯಗಳು ಮತ್ತು ಅದರ ಸತ್ಯಾಸತ್ಯತೆಯ ಬಗ್ಗೆ ಒಂದು ಅವಲೋಕನ, ಮುಂದಿನ ಸ್ಲೈಡಿನಲ್ಲಿ..

   ಬಿತ್ತಿದ ಬೆಳಸು ಪರರು ಕೊಯ್ದಾರು

   ಬಿತ್ತಿದ ಬೆಳಸು ಪರರು ಕೊಯ್ದಾರು

   "ಬಿತ್ತಿದ ಬೆಳಸು ಪರರು ಕೊಯ್ದಾರು" ಎಂದು ಕೋಡಿಶ್ರೀಗಳು ಹೇಳಿದ್ದರು. ಅದರಂತೆ, ಬಿತ್ತಿದ ಬೀಜ, ಬೆಳೆದು ಬಂದ ಪೈರು ಇದು ಮುಂದಿನ ಅಸೆಂಬ್ಲಿ ಚುನಾವಣೆಯ ಭವಿಷ್ಯ. ಇದರಂತೆ ಬಿಜೆಪಿ, ಕಾಂಗ್ರೆಸ್ಸಿಗೆ ಹೆಚ್ಚಾಗಿ ಒಲಿದಿದ್ದ ಬೆಳೆಯನ್ನು ಪರರು (ಜೆಡಿಎಸ್) ಕೊಯ್ದುಕೊಳ್ಳಲಿದ್ದಾರೆ ಎಂದು ಅರ್ಥೈಸಲಾಗಿತ್ತು. ಅದರಂತೆಯೇ, ಬಿಜೆಪಿ ಅತಿದೊಡ್ದ ಪಕ್ಷವಾಗಿ ಹೊರಹೊಮ್ಮಿದ್ದರೂ, ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಹೇಳುತ್ತಾ ಬರುತ್ತಿದ್ದಂತೆಯೇ ಅವರೇ ಕಿಂಗ್ ಮೇಕರ್ ಆದರು.

   ನೂರಕ್ಕೆ ನೂರು ಸತ್ಯವಾಯಿತು ಕೋಡಿಶ್ರೀಗಳ ಚುನಾವಣಾ ಭವಿಷ್ಯ

   ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಭ್ರಾತೃ ಬೆಂಕಿ ಹಿಡಿದಾನು

   ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಭ್ರಾತೃ ಬೆಂಕಿ ಹಿಡಿದಾನು

   "ಅರಸನ ಆಯಸ್ಸು ಉಸಿರಲ್ಲಿ ನಿಂತೀತು, ಪರಸಕ್ಕೆ ಭಂಗ, ಪ್ರಸಂಗಕ್ಕೆ ಹಾನಿ, ಭ್ರಾತೃ ಬೆಂಕಿ ಹಿಡಿದಾನು...' ಭ್ರಾತೃ ಬೆಂಕಿ ಹಿಡಿಯುತ್ತಾನೆ ಎಂಬುದಕ್ಕೆ ಕುಮಾರಸ್ವಾಮಿಯವರ ಸಹೋದರ ರೇವಣ್ಣ ಬಂಡಾಯ ಏಳುತ್ತಾರೆ ಎಂದು ಕೆಲವರು ವಿಶ್ಲೇಷಿಸಿದ್ದರು. ಆದರೆ, ಕುಮಾರಸ್ವಾಮಿ ಅವರು ಸಂಕಷ್ಟದಲ್ಲಿ ಸಿಲುಕಿದರೆ ಸೋದರನಾಗಿ ಬೆಳಕು ತೋರಿಸಿ ರಕ್ಷಿಸುತ್ತಾರೆ ಎಂದೂ ಅರ್ಥೈಸಲಾಗಿತ್ತು. ಇದು ಕುಮಾರಸ್ವಾಮಿ-ರೇವಣ್ಣ ಅವರ ಬದಲಿಗೆ ಜಾರಕಿಹೊಳಿ ಸೋದರರ ಬಗ್ಗೆ ನುಡಿದಿದ್ದು ಎನ್ನುವ ಸ್ಪಷ್ಟನೆ ನೀಡಲಾಗಿತ್ತು. ಜಾರಕಿಹೊಳಿ ಸಹೋದರರಿಂದ ಸರಕಾರಕ್ಕೆ ಆಗ ಮತ್ತು ಈಗ ಕಿರಿಕಿರಿಯಾಗುತ್ತಿರುವುದಂತೂ ನಿಜ.

   ವರ್ಷಾಂತ್ಯದ ವಿಶೇಷ : ಕರ್ನಾಟಕದ ಸರ್ಕಾರದ ಯೋಜನೆಗಳು

   ಜುಲೈ 27ರ ಚಂದ್ರಗ್ರಹಣ, ಆಗಸ್ಟ್ 11ರ ಸೂರ್ಯಗ್ರಹಣ

   ಜುಲೈ 27ರ ಚಂದ್ರಗ್ರಹಣ, ಆಗಸ್ಟ್ 11ರ ಸೂರ್ಯಗ್ರಹಣ

   ಜುಲೈ 27ರ ಚಂದ್ರಗ್ರಹಣ ನಂತರ ಆಗಸ್ಟ್ 11ರ ವೇಳೆಗೆ ಸಂಭವಿಸಿದ ಸೂರ್ಯಗ್ರಹಣದ ಪರಿಣಾಮದಿಂದಾಗಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದ್ದು, ಪ್ರಾಕೃತಿಕ ಸಂಪನ್ಮೂಲ ನಾಶ, ಭೂಕಂಪ, ಅತಿವೃಷ್ಟಿಯಾಗಲಿದೆ. ಈ ಬಾರಿ ವಿಶೇಷವಾಗಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ಒಟ್ಟಿಗೆ ಬಂದಿವೆ. ವಿಶೇಷವಾಗಿ ಬರುವ ದಿನಗಳು ಕಷ್ಟ ತರಲಿವೆ ಎಂದು ಅರ್ಥೈಸಲಾಗಿತ್ತು. ಅದರಂತೇ, ಕೊಡಗು, ಕೇರಳದಲ್ಲಿ ಕಂಡುಕೇಳರಿಯ ಪ್ರಾಕೃತಿಕ ವಿಕೋಪ ಉಂಟಾಗಿತ್ತು.

   2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದುರಂತಗಳ ಪಟ್ಟಿ

   ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆ

   ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆ

   ಚನ್ನರಾಯಪಟ್ಟಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಶ್ರೀಗಳು, ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯನ್ನು ಉಲ್ಲೇಖಿಸಿ, ಕಷ್ಟಪಟ್ಟು ದುಡಿಯುವವರು ಒಬ್ಬರು, ಅದರ ಲಾಭವನ್ನು ತೆಗೆದುಕೊಳ್ಳುವವರು ಇನ್ನೊಬ್ಬರು ಎಂದು ಹೇಳಿದ್ದರು. ಇದರರ್ಥ, ಇವಿಎಂ ಯಂತ್ರಗಳು ದೋಷಪೂರಿತ ಎನ್ನುವುದು ನನ್ನ ಮಾತಿನ ಉದ್ದೇಶ ಎಂದು ಶ್ರೀಗಳು ಹೇಳಿದ್ದರು. ಅದರಂತೆಯೇ, ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಇವಿಎಂ ಮೇಲೆ ಗೂಬೆ ಕೂರಿಸಿದ್ದವು.

   ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ

   ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ

   ಬಂಧು-ಮಿತ್ರರಲ್ಲಿ ವಿರಸ, ಸಾಮಾಜಿಕವಾಗಿ ಇವರಿಗಿಂತ ಕೆಳ ಸ್ಥಾನದಲ್ಲಿ ಇರುವವರಿಂದ ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ ಈ ಎಲ್ಲವೂ ಕಾಣುತ್ತಿದೆ. ಅದಕ್ಕೆ ಕಾರಣ ಆರನೇ ಮನೆಗೆ ಪ್ರವೇಶಿಸುವ ಗುರು ಹಾಗೂ ಚಂದ್ರನಿಗೆ ಏಳನೇ ಸ್ಥಾನ ಹಾಗೂ ಲಗ್ನಕ್ಕೆ ಎಂಟನೇ ಸ್ಥಾನದ ಶನಿಯ ಪ್ರಭಾವ. ಜತೆಗೆ ವಿಪತ್ ತಾರೆಯ ನಕ್ಷತ್ರದಲ್ಲಿ ನಡೆಯುತ್ತಿರುವ ಬುಧ ದಶೆ ಹಾಗೂ ರಾಹು ಭುಕ್ತಿಯ ಪ್ರಭಾವದಿಂದ ಇಷ್ಟೆಲ್ಲ ಅನುಭವಿಸಬೇಕಾಗುತ್ತದೆ. ಇನ್ನು ಇವರು ಒತ್ತಡಗಳಿಂದ ಸರಕಾರ ವಿಸರ್ಜಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ಆದರೆ, ಸರಕಾರ ವಿಸರ್ಜಿಸುವ ಯಾವುದೇ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ.

   2 ತಿಂಗಳು ಕಾದು ನೋಡಿ ಎಂದ ಕೋಡಿ ಶ್ರೀಗಳು

   2 ತಿಂಗಳು ಕಾದು ನೋಡಿ ಎಂದ ಕೋಡಿ ಶ್ರೀಗಳು

   ವರ್ಷಾಂತ್ಯದವರೆಗೂ ಮಳೆಯಾಗಲಿದೆ. ದ್ವೇಷ - ಅಸೂಯೆ ಹೆಚ್ಚಳವಾಗುತ್ತದೆ. 2 ತಿಂಗಳು ಕಾದು ನೋಡಿ ಎಂದು ಶ್ರೀಗಳು ತಿಳಿಸಿದರು .ರಾಜ್ಯ ಸರಕಾರದ ಸದ್ಯದ ಸ್ಥಿತಿಯ ಬಗ್ಗೆ ಹೇಳಬೇಕು ಅಂದರೆ, ಚಂದ್ರ ಗ್ರಹಣವು ಅಪಾಯದ ಮುನ್ಸೂಚನೆಯಂತೆ ಕಾಣುತ್ತಿದೆ. ಭಿನ್ನಾಭಿಪ್ರಾಯ ದೊಡ್ಡ ಮಟ್ಟದಲ್ಲಿ ಭುಗಿಲೆದ್ದು, ಸರಕಾರದ ಮುಖ್ಯ ವ್ಯಕ್ತಿಯೊಬ್ಬರ ಆರೋಗ್ಯದ ಮೇಲೂ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಸರಕಾರಕ್ಕೆ ಅಳಿವು- ಉಳಿವಿನ ಪ್ರಶ್ನೆ ಎದುರಾಗುತ್ತದೆ. ಮನಸ್ಸಿನ ಕಹಿ ನಿವಾರಿಸಿಕೊಳ್ಳಲಿಲ್ಲ ಅಂದರೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಶ್ರೀಗಳು ಕಳೆದ ಅಕ್ಟೋಬರ್ ತಿಂಗಳಲ್ಲಿ ಹೇಳಿದ್ದರು.

   English summary
   Arasikere Haranahalli Kodi Mutt Sri Shivananada Shivayogi Seer prediction 2018, how far it has come out true. Seer has predicted on Karnataka Assembly Elections 2018, Solar and Lunar eclipse effect, Kodau and Kerala flood etc.,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X