Maruti Suzuki Car: ಗ್ರಾಹಕರನ್ನು ಆಯಸ್ಕಾಂತದಂತೆ ಸೆಳೆಯುತ್ತಲಿದೆ ಮಾರುತಿ ಸುಜುಕಿಯ ಹೊಸ ಕಾರು
Maruti Suzuki Car: ಮಾರುತಿ ಸುಜುಕಿ ಭಾರತದಲ್ಲಿ ಮೊದಲಿನಿಂದಲೂ ಸದ್ದು ಮಾಡುತ್ತಲೇ ಇದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯನ್ನು ಕಾರುಗಳನ್ನು ಮಾರುಕಟ್ಟೆಗೆ ತರುತ್ತಿದೆ. ಈ ಮೂಲಕ ಇತರ ವಾಹನ ತಯಾಕರ ಕಂಪನಿಗಳಿಗೆ ದೊಡ್ಡ ಸ್ಪರ್ಧಿಯಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಮಾರುತಿ ಸುಜುಕಿ ಹೊಸ ಮಾದರಿಯನ್ನು ಸ್ವಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಇದರ ದರ ಹಾಗೂ ವಿಶೇಷತೆಗಳ ಬಗ್ಗೆ ಇಲ್ಲಿ ತಿಳಿಯಿರಿ.
ಅತ್ಯಾಧುನಿಕ ಸೌಲಭ್ಯಗಳುಳ್ಳ ಕಾರುಗಳನ್ನು ಬಿಡುವ ದೊಡ್ಡ ದೊಡ್ಡ ಕಂಪನಿಗಳಿಗೆ ಇದು ಮಾರುತಿ ಸುಜುಕಿ ಇದೀಗ ಪ್ರತಿಸ್ಪರ್ಧಿಯಾಗಿದೆ. ಇದನ್ನು ಬಡವರಿಗಾಗಿಯೇ ಹೊಸ ವಿನ್ಯಾಸದ ಕಾರುಗಳನ್ನು ಕೈಗೆಟಕುವ ದರದಲ್ಲಿ ಮಾಡುತ್ತಿರುತ್ತದೆ. ಆದ್ದರಿಂದ ಈ ಕಂಪನಿಯ ಕಾರುಗಳನ್ನು ಅತೀ ಹೆಚ್ಚಾಗಿ ಮಧ್ಯಮ ವರ್ಗದವರೇ ಕೊಳ್ಳುತ್ತಿದ್ದರು. ಆದರೆ ಇದೀಗ ಶ್ರೀಮಂತರು ಕೂಡ ಈ ಕಂಪನಿ ಕಡೆ ಮುಖ ಮಾಡುತ್ತಿದ್ದಾರೆ.

ಹೊಸ ತಲೆಮಾರಿನ ವಿವಿಧ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿ ಕಂಪನಿಯು 2024ರ ಸ್ವಿಫ್ಟ್ ಬಿಡಯಗಡೆ ಮೂಲಕ ಭಾರೀ ಬೇಡಿಕೆ ಹೆಚ್ಚಿಸಿಕೊಂಡಿದೆ. ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಹೊಸ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರು ನೂತನ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಇದರಲ್ಲಿ ಎಪಿಕ್ ಎಡಿಷನ್‌ನಲ್ಲಿರುವ ಆಕ್ಸೆಸರಿಸ್‌ಗಳು ಪರ್ಫಾಮೆನ್ಸ್ ಪ್ರಿಯರನ್ನು ಆಕರ್ಷಿಸುತ್ತಿದೆ.
ಹೊಸ ಕಾರಿನ ವಿಶೇಷತೆಗಳೇನು?: ಈ ಹೊಸ ಕಾರಿನ ಎಲ್ಎಕ್ಸ್ಐ ವೆರಿಯೆಂಟ್‌ಗಳಿಗೂ ಅನ್ವಯಿಸುವಂತೆ ಎಪಿಕ್ ಎಡಿಷನ್ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗುತ್ತಿದ್ದು, ಈ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ರೇಸಿಂಗ್ ಸ್ಟ್ರೀಪ್ ಪ್ರಮುಖ ಆಕರ್ಷಣೆ ಆಗಿದೆ. ರೇಸಿಂಗ್ ಸ್ಟ್ರೀಪ್ ಇದರ ಬಾನೆಟ್‌ನಿಂದ ಹಿಡಿದು ರೂಫ್ ತನಕ ನೀಡಲಾಗಿದೆ.
ಗ್ಲಾಸ್ ಬ್ಲ್ಯಾಕ್ ಹೊಂದಿರುವ ರೇಸಿಂಗ್ ಸ್ಟ್ರೀಪ್ ಫ್ರಂಟ್ ಪ್ಲಕ್ಸ್ ಸ್ಕೀಡ್ ಪ್ಲೇಟ್ ಜೊತೆಗೆ ರಿಯರ್ ವ್ಯೂ ಮಿರರ್ ಮೇಲೂ ನೀಡಲಾಗಿದೆ. ಜೊತೆಗೆ ಕ್ರೋಮ್ ಆಕ್ಸೆಂಟ್ ಹೊಂದಿರುವ ಫಾಗ್ ಲ್ಯಾಂಪ್, ಡೋರ್ ಹ್ಯಾಂಡಲ್, ಬ್ಲ್ಯಾಕ್ ಔಟ್ ಹೊಂದಿರುವ 14 ಇಂಚಿನ ಸ್ಟೀಲ್ ಅಲಾಯ್ ವ್ಹೀಲ್ಸ್, ಡೋರ್ ವೀಸರ್‌ನಲ್ಲಿ ಕ್ರೋಮ್ ಗಾರ್ನಿಶ್ ಅನ್ನು ಸಹ ಒಳಗೊಂಡಿದೆ.
ಅಲ್ಲದೆ, ಇದರಲ್ಲಿರುವ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಗ್ಲಾಸ್ ಬ್ಲ್ಯಾಕ್ ರೂಫ್ ಮೌಂಟೆಡ್, ಕ್ರೋಮ್ ಆಕ್ಸೆಂಟ್ ಹೊಂದಿರುವ ರಿಯರ್ ಬಂಪರ್ ಮತ್ತು ಸ್ಮೋಕ್ಡ್ ಎಲ್ಇಡಿ ಟೈಲ್ ಲ್ಯಾಂಪ್ಸ್ ಹೊಂದಿದ್ದು, ಇನ್ನುಳಿದಂತೆ ಹಲವಾರು ತಾಂತ್ರಿಕ ಸೌಲಭ್ಯಗಳು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಇನ್ನು ಹೊಸ ಕಾರಿನಲ್ಲಿ ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ(ಆಪ್ಷನ್), ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್‌ಗಳು ಖರೀದಿ ಮಾಡಲು ಲಭ್ಯವಿದ್ದು, ಮೂಲಗಳ ಪ್ರಕಾರ, ಎಕ್ಸ್ ಶೋರೂಂ ಇದರ ದರ 6.49 ಲಕ್ಷದಿಂದ 9.50 ಲಕ್ಷ ಬೆಲೆ ರೂಪಾಯಿ ಇದೆ. ಇದರಲ್ಲಿ ಆಕ್ಸೆಸರಿಸ್ ಪ್ಯಾಕೇಜ್‌ಗಾಗಿ ಹೆಚ್ಚುವರಿ ಹಣ ಪಾವತಿಸಬೇಕಿದ್ದು, ಈ ಪ್ಯಾಕೇಜ್‌ನಲ್ಲಿ ಫೀಚರ್ಸ್ ಆಧರಿಸಿ ದರ ನಿಗದಿಯಾಗುತ್ತದೆ ಎಂದು ತಿಳಿದುಬಂದಿದೆ.
ಮೈಲೇಜ್ ವಿವರ: ಇನ್ನು ಈ ಹೊಸ ಕಾರಿನಲ್ಲಿ ಈ ಬಾರಿ ಮೂರು ಸಿಲಿಂಡರ್ ವೈಶಿಷ್ಟತೆಯ 1.2 ಲೀಟರ್ ಜೆಡ್ 12 ಇ ಪೆಟ್ರೋಲ್ ಎಂಜಿನ್ ನೀಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಈ ಮೂಲಕ ಇದು 82 ಹಾರ್ಸ್ ಪವರ್ ಮತ್ತು 112 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ಗೆ 24.8 ಕಿಲೋ ಮೀಟರ್ ಮೈಲೇಜ್ ನೀಡಿದರೆ, ಆಟೋಮ್ಯಾಟಿಕ್ ಮಾದರಿಯು 25.75 ಕಿಲೋ ಮೀಟರ್ ಮೈಲೇಜ್ ಕೊಡಲಿದೆ.
ಸುರಕ್ಷತೆ ದೃಷ್ಟಿಯಿಂದ ಆರಂಭಿಕ ಮಾದರಿಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್‌ಗಳು, ಐಸೋಫಿಕ್ಸ್ ಆ್ಯಂಕರ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಬಿಎಸ್ ಜೊತೆ ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಆಧುನಿಕ ಸೌಲಭ್ಯಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.
ಇದೀಗ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆಯೂ ಹಿಂದಿನಂತೆಯೇ ಮಾರುತಿ ಸುಜುಕಿ ಕಂಪನಿ ಮಾತ್ರ ಯಾವಾಗಲೂ ಗ್ರಾಹಕರನ್ನು ಬಿಟ್ಟುಕೊಡದೇ, ತನ್ನತ್ತ ಸೆಳೆಯುವಂತೆ ಹೊಸ ಹೊಸ ವಿನ್ಯಾಸದಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಬರುತ್ತಿದೆ.












Click it and Unblock the Notifications