ಮಂಗನ ಕಾಯಿಲೆಗೂ ಮಂಕಿಪಾಕ್ಸ್‌ಗೂ ಏನು ವ್ಯತ್ಯಾಸ? ಎರಡೂ ಒಂದೇ ಅಲ್ಲ
ಕೋವಿಡ್ ರುದ್ರ ನರ್ತನ ಇನ್ನೂ ನಡೆಯುತ್ತಿರುವ ಹೊತ್ತಲ್ಲೇ ಈಗ ಮಂಕಿಪಾಕ್ಸ್ ಕಾಯಿಲೆ ಹೆಡೆ ಎತ್ತಿದೆ. ಮಂಕಿಪಾಕ್ಸ್ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದಾಗಿದೆ.
ಭಾರತದಲ್ಲಿ ಈವರೆಗೆ ಕೇವಲ 4 ಪ್ರಕರಣಗಳು ಪತ್ತೆಯಾಗಿದ್ದಾವಾದರೂ ವಿಶ್ವಾದ್ಯಂತ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಆಫ್ರಿಕಾದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಮಂಕಿಪಾಕ್ಸ್ ಇದೀಗ 75 ದೇಶಗಳಿಗೆ ಹರಡಿಹೋಗಿದೆ.
ಮಂಕಿಪಾಕ್ಸ್ ಕಾಯಿಲೆಗೆ ಕೆಲ ಲಸಿಕೆಗಳನ್ನು ತಯಾರಿಸಲಾಗಿದೆ. ಭಾರತದಲ್ಲಿ ಲಸಿಕೆ ತಯಾರಿಕೆಗೆ ಪ್ರಯತ್ನ ನಡೆದಿದೆ. ಮಂಕಿಪಾಕ್ಸ್ ವೈರಸ್ ತಳಿಯನ್ನು ಬೇರ್ಪಡಿಸಿ ಲಸಿಕೆಗೆ ಸಂಶೋಧನೆ ನಡೆದಿದೆ.
ಭಾರತದಲ್ಲಿ ಈವರೆಗೆ 4 ಮಂದಿಗೆ ಮಂಕಿಪಾಕ್ಸ್ ಇರುವುದು ದೃಢಪಟ್ಟಿದೆ. ಇನ್ನೂ ಹಲವರಿಂದ ಸ್ಯಾಂಪಲ್ ಪಡೆದು ಪರೀಕ್ಷಿಸಲಾಗುತ್ತಿದೆ. ಮಂಕಿಪಾಕ್ಸ್ ಎದುರಿಸಲು ಬೇಕಾದ ವೈದ್ಯಕೀಯ ಸೌಲಭ್ಯ ಭಾರತದಲ್ಲಿ ಸದ್ಯದ ಮಟ್ಟಿಗೆ ಇದೆ.
ಇದೇ ವೇಳೆ, ಮಂಕಿ ಫಿವರ್ ಅಥವಾ ಮಂಗನ ಕಾಯಿಲೆಯಿಂದ ಮಹಾರಾಷ್ಟ್ರದಲ್ಲಿ 9 ಮಂದಿ ಆಸ್ಪತ್ರೆಗೆ ದಾಖಲಾಗಿರುವುದು ಬಹಳ ಮಂದಿಯನ್ನು ಗೊಂದಲಕ್ಕೆ ಕೆಡವಿದೆ. ಹಲವು ಕನ್ನಡ ಮಾಧ್ಯಮಗಳಲ್ಲಿ ಮಂಕಿಪಾಕ್ಸ್ ಅನ್ನು ಮಂಗನ ಕಾಯಿಲೆ ಎಂದೇ ಸಂಬೋಧಿಸಲಾಗುತ್ತಿರುವುದು ಗೊಂದಲ ಹೆಚ್ಚಿಸಿದೆ.
ಗಮನಿಸಬೇಕಾದ ಸಂಗತಿ ಎಂದರೆ ಮಂಗನ ಕಾಯಿಲೆ ಬೇರೆ ಮಂಕಿಪಾಕ್ಸ್ ಕಾಯಿಲೆಯೇ ಬೇರೆ. ಎರಡೂ ಕೂಡ ವೈರಸ್‌ಗಳಿಂದಲೇ ಬಾಧಿಸುವತ್ತವಾದರೂ ಪ್ರತ್ಯೇಕ ರೋಗಗಳೇ ಆಗಿವೆ.

ಮಂಗನ ಕಾಯಿಲೆ ಯಾವುದು?
ಮಂಗನ ಕಾಯಿಲೆ ಎಂಬುದು ಕ್ಯಾಸನೂರು ಅಡವಿ ರೋಗ, ಅಥವಾ ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ). ನಮ್ಮ ಮಲೆನಾಡು ಶಿವಮೊಗ್ಗದ ಕ್ಯಾಸನೂರು ಅರಣ್ಯ ಪ್ರದೇಶದಲ್ಲಿ 1957ರಲ್ಲಿ ಮೊದಲ ಬಾರಿಗೆ ಈ ಕಾಯಿಲೆ ಪತ್ತೆಯಾಗಿದ್ದು. Flaviviridae ಎಂಬ ಕುಟುಂಬಕ್ಕೆ ಸೇರಿದ ವೈರಸ್ ಈ ಕಾಯಿಲೆಗೆ ಕಾರಣವಾಗಿದೆ. ಕೆಎಫ್‌ಡಿ ವೈರಸ್ ಎಂದೇ ಇದನ್ನು ಕರೆಯಲಾಗುತ್ತಿದೆ. ಕೋತಿಯಲ್ಲಿ ಮೊದಲು ಈ ವೈರಸ್ ಪತ್ತೆಯಾದ್ದರಿಂದ ಮಂಗನ ಕಾಯಿಲೆ ಎಂದೇ ಗುರುತಿಸಲಾಗುತ್ತಿದೆ.
ಕರ್ನಾಟಕದ ಮಲೆನಾಡಿನ ಅರಣ್ಯಪ್ರದೇಶಗಳಲ್ಲಿ ಇದು ಪ್ರತೀ ವರ್ಷವೂ ಕಾಡುವ ಕಾಯಿಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದು ದೇಶದ ಬೇರೆ ಬೇರೆ ಭಾಗಗಳಿಗೂ ಹರಡಗೊಡಗಿದೆ.

ಮಂಗನ ಕಾಯಿಲೆ ಹೇಗೆ ಹರಡುತ್ತದೆ?
ಹೇನು, ಚಿಗಟ, ತಿಗಣೆ, ಸೊಳ್ಳೆ ಇತ್ಯಾದಿ ರಕ್ತ ಹೀರುಕ ಕೀಟಗಳು ಈ ವೈರಸ್‌ನ ಪ್ರವಾಹಕಗಳು. ಅರಣ್ಯ ಪ್ರದೇಶಗಳಲ್ಲಿ ಕೋತಿ, ಹೆಗ್ಗಣ ಇತ್ಯಾದಿ ಪ್ರಾಣಿಗಳಿಗೆ ವೈರಸ್ ಸೋಂಕು ತಗುಲಿದರೆ, ಹೇನು, ಚಿಗಟ ಇತ್ಯಾದಿ ಮೂಲಕ ಅದು ಬೇರೆ ಬೇರೆ ಪ್ರಾಣಿಗಳಿಗೆ ಸುಲಭವಾಗಿ ಹರಡುವ ಸಾಧ್ಯತೆ ಇರುತ್ತದೆ.
ಕೆಂಪು ಚಿಗಟ ಎಂಬ ಕೀಟ ಕೆಎಫ್‌ಎ ಅನ್ನು ಬಹಳ ವೇಗವಾಗಿ ಹರಡುತ್ತದೆ. ಈ ಕೀಟಕ್ಕೆ ವೈರಸ್ ಹೊಕ್ಕಿಬಿಟ್ಟರಂತೂ ಸಾಯುವವರೆಗೂ ಬಿಟ್ಟುಹೋಗುವುದಿಲ್ಲ. ಆ ಕೀಟ ಕಚ್ಚಿದ ಪ್ರಾಣಿ ಪಕ್ಷಗಳಿಗೆಲ್ಲಾ ವೈರಸ್ ಹರಡುವುದು ಶತಃಸಿದ್ಧ. ತನ್ನ ಜೀವಿತಾವಧಿಯಲ್ಲಿ ಒಂದು ಕೀಟ ಅದೆಷ್ಟು ಪ್ರಾಣಿ ಪಕ್ಷಿಗಳ ರಕ್ತ ಹೀರಬಹುದು ಯೋಚಿಸಿ... ವೈರಸ್ ಸೋಂಕು ತಗುಲಿದ ಸಣ್ಣ ಪುಟ್ಟ ಪ್ರಾಣಿಗಳು ಬೇಗನೇ ಸಾಯುತ್ತವೆ,

ಕೆಎಫ್‌ಡಿ ರೋಗಲಕ್ಷಣಗಳು
(hospital-1.jpg)
ಅತಿ ಸಾಮಾನ್ಯವಾಗಿ ಬರುವ ರೋಗಲಕ್ಷಣ ಎಂದರೆ ಜ್ವರ. ತಲೆನೋವು ಮತ್ತು ರಕ್ತ ಸ್ರಾವ.
ಇಲ್ಲಿ ರಕ್ತ ಸ್ರಾವ ಎಂದರೆ ಮೆದುಳುಸ್ರಾವದ ಲಕ್ಷಣಗಳು. ಅಂದರೆ ಮುಗಿನ ಒಳಗಿನ ಹೊಳ್ಳೆಯ ಮೇಲ್ಭಾಗದಿಂದ ರಕ್ತ ಸ್ರಾವವಾಗುವುದು. ಗಂಟಲು ಮತ್ತು ವಸಡುಗಳಿಂದ ರಕ್ತ ಸ್ರಾವವಾಗುವುದು, ಮಲವಿಸರ್ಜಿಸುವಾಗಲೂ ರಕ್ತಸ್ರಾವ ಆಗಬಹುದು.
ವಾಂತಿ, ಸ್ನಾಯು ಬಿಗಿತ ಮತ್ತು ನಡುಕ ಇವೂ ಕೂಡ ಕೆಎಫ್‌ಡಿಯ ಪ್ರಮುಖ ರೋಗಲಕ್ಷಣಗಳು. ಈ ಕಾಯಿಲೆ ಬಂದಾಗ ಮನಸಿಗೆ ಕಿರಿ, ಯಾತನೆ ಎನಿಸುತ್ತದೆ.

ಲಸಿಕೆ ಇದೆ
ಸಮಾಧಾನ ಎಂದರೆ, ಕ್ಯಾಸನೂರು ಅಡವಿ ಕಾಯಿಲೆಯ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ನೇರವಾಗಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಯಿಂದ ಇನ್ನೊಬ್ಬರಿಗೆ ಸೋಂಕು ಹರಡುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೆ, ಹುಳ ಹುಪ್ಪಟೆಗಳ ಮೂಲಕ ಇದು ಹರಡುತ್ತದೆ. ಸೊಳ್ಳೆ ಮೂಲಕವೂ ಹರಡಬಹುದು. ಆತಂಕದ ಸಂಗತಿ ಎಂದರೆ ಮಂಗನ ಕಾಯಿಲೆಗೆ ಒಳಪಟ್ಟವರಲ್ಲಿ ಶೇ 5-10 ಮಂದಿ ಸಾವನ್ನಪ್ಪುತ್ತಾರಂತೆ. ಅಂದರೆ ಸಾವಿನ ದರ ತುಸು ಅಧಿಕವೇ ಇದೆ.
ಹಾಗೆಯೇ, ಮಂಗನ ಕಾಯಿಲೆಗೆ ಚುಚ್ಚುಮದ್ದು ಕೂಡ ಲಭ್ಯ ಇದೆ. ನೀವು ಕಾಡು ಪ್ರದೇಶಗಳ ಬಳಿ ವಾಸಿಸುತ್ತಿದ್ದರೆ ಅಥವಾ ಕಾಡುಪ್ರದೇಶಗಳಿಗೆ ಪ್ರವಾಸ ಹೋಗುತ್ತಿದ್ದರೆ ಮೊದಲು ಈ ಲಸಿಕೆ ಹಾಕಿಸಿಕೊಳ್ಳುವುದು ಒಳ್ಳೆಯದರು.

ಮಂಕಿಪಾಕ್ಸ್ ಏನು?
ಮಂಗನ ಕಾಯಿಲೆ ಮೊದಲು ಪತ್ತೆಯಾಗಿದ್ದು 1957ರಲ್ಲಿ. ಕಾಕತಾಳೀಯವೆಂಬಂತೆ ಸರಿಸುಮಾರು ಅದೇ ಸಮಯದಲ್ಲಿ, 1958ರಲ್ಲಿ ಆಫ್ರಿಕಾದಲ್ಲಿ ಮಂಕಿಪಾಕ್ಸ್ ವೈರಸ್ ಮೊದಲು ಬೆಳಕಿಗೆ ಬಂದಿದ್ದು. ಸಂಶೋಧನೆಗೆಂದು ಇಟ್ಟುಕೊಳ್ಳಲಾಗಿದ್ದ ಮಂಗಗಳಲ್ಲಿ ಈ ವೈರಸ್ ಇದ್ದದ್ದು. 1970ರಲ್ಲಿ ಕಾಂಗೋದಲ್ಲಿ ಮೊದಲ ಬಾರಿಗೆ ಮನುಷ್ಯನಿಗೆ ಮಂಕಿಪಾಕ್ಸ್ ವೈರಸ್ ಹರಡಿದ್ದು. ಅಲ್ಲಿಂದ ಇದು ಆಫ್ರಿಕಾದ ಕೆಲವೇ ಪ್ರದೇಶಗಳಲ್ಲಿ ಎಂಡೆಮಿಕ್ ರೋಗವಾಗಿ ನೆಲೆ ನಿಂತಿತ್ತು.
2003ರಲ್ಲಿ ಅಮೆರಿಕದಲ್ಲಿ ಈ ವೈರಸ್ ಕಾಣಿಸಿತು. ಆಫ್ರಿಕಾ ಹೊರಗೆ ಮಂಕಿಪಾಕ್ಸ್ ವೈರಸ್ ಕಾಣಿಸಿದ್ದು ಅದೇ ಮೊದಲು.

ಮಂಕಿಪಾಕ್ಸ್ ಹರಡುವುದು ಸುಲಭ
ಮಂಕಿಪಾಕ್ಸ್ ಒಂದು ರೀತಿ ಸಿಡುಬು ರೋಗಕ್ಕೆ ಹೋಲಿಕೆ ಇದೆ. ಸಿಡುಬು ರೋಗಕ್ಕೆ ಕಾರಣವಾಗುವ ವೈರಸ್‌ನ ಜಾತಿಗೆ ಸೇರಿದ ವೈರಸ್‌ನಿಂದ ಮಂಕಿಪಾಕ್ಸ್ ರೋಗ ಬರುತ್ತದೆ. ಸಿಡುಬಿನ ಗುಣಲಕ್ಷಣಗಳನ್ನು ಹೊಂದಿದೆಯಾದರೂ ಆ ರೋಗದಷ್ಟು ಭೀಕರತೆ ಹೊಂದಿಲ್ಲ ಎಂಬುದೇ ಸಣ್ಣ ಸಮಾಧಾನ.
ಅದೇನೇ ಇದ್ದರೂ ಮಂಕಿಪಾಕ್ಸ್ ರೋಗ ಹರಡುವುದು ಸುಲಭ. ಕೋತಿ, ಹೆಗ್ಗಣ ಇತ್ಯಾದಿ ಪ್ರಾಣಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ಮನುಷ್ಯನಿಗೆ ಬಂದರೆ ಅದು ಕೋವಿಡ್‌ನಂತೆ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ.
ಕೋವಿಡ್ ಹೇಗೆ ಹರಡುತ್ತದೋ ಬಹುತೇಕ ಅದೇ ರೀತಿಯಲ್ಲೇ ಮಂಕಿಪಾಕ್ಸ್ ಕೂಡ ಹರಡುತ್ತದೆ. ಉಸಿರಾಟ, ಮೈ ಮುಟ್ಟುವುದು, ಎಂಜಲು ಇತ್ಯಾದಿಯಿಂದ ಇದು ಹರಡುತ್ತದೆ. ಹೀಗಾಗಿ, ನೀವು ಕೋವಿಡ್ ವೇಳೆ ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೀರೋ ಅಂಥವೇ ಕ್ರಮಗಳನ್ನು ಮಂಕಿಪಾಕ್ಸ್‌ಗೂ ಕೈಗೊಳ್ಳಬೇಕು. ಜೊತೆಗೆ, ಸೊಳ್ಳೆ ಇತ್ಯಾದಿ ಕೀಟಗಳು ಬರದ ರೀತಿಯಲ್ಲಿ ಮಲಗುವಾಗ ಸೊಳ್ಳೆ ಪರದೆ ಇತ್ಯಾದಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು.
ಮಂಗನ ಕಾಯಿಲೆಯಂತೆ ಮಂಕಿಪಾಕ್ಸ್‌ಗೂ ಚುಚ್ಚುಮದ್ದು ಇದೆ. ಕೆನಡಾ, ಅಮೆರಿಕ ಇತ್ಯಾದಿ ದೇಶಗಳಲ್ಲಿ ಫಾರ್ಮಾ ಕಂಪನಿಗಳು ಲಸಿಕೆಯನ್ನು ತಯಾರಿಸಿವೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಈ ಲಸಿಕೆಗೆ ಮಾನ್ಯತೆ ಕೊಟ್ಟಿಲ್ಲ. ಆದರೂ ಅಲ್ಲೆಲ್ಲಾ ಚುಚ್ಚುಮದ್ದು ಬಳಕೆಯಾಗುವ ಸಾಧ್ಯತೆ ಇದೆ. ಭಾರತದಲ್ಲೂ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಅಷ್ಟರೊಳಗೆ ರೋಗ ಎಲ್ಲೆಡೆ ವ್ಯಾಪಿಸದಂತೆ ಜನರೇ ನಿಗಾವಹಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.
(ಒನ್ಇಂಡಿಯಾ ಸುದ್ದಿ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications