Rashtriya Ekta Diwas: ದೇಶದ ಸಮಗ್ರತೆ, ಐಕ್ಯತೆ ಸಾರುವ ರಾಷ್ಟ್ರೀಯ ಏಕತಾ ದಿವಸ್
ಭಾರತದ ಸ್ವಾತಂತ್ರ್ಯ ಹೋರಾಟಗಾರ, ಉಕ್ಕಿನ ಮನುಷ್ಯರೆಂದೇ ಪ್ರಸಿದ್ದರಾದ, ದೇಶೀಯ ಸಂಸ್ಥಾನಗಳನ್ನು ಒಟ್ಟುಗೂಡಿಸುವಲ್ಲಿ ಮುಂಚೂಣಿಯಲ್ಲಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ನೆನಪಿಗಾಗಿ ದೇಶಾದ್ಯಂತ ಅಕ್ಟೋಬರ್ 31ರಂದು 'ರಾಷ್ಟ್ರೀಯ ಏಕತಾ ದಿನಾಚರಣೆ' ಆಚರಿಸಲಾಗುತ್ತದೆ. ರಾಷ್ಟ್ರೀಯ ಏಕತಾ ದಿನದ ಆಚರಣೆಯು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ನೆರೆಹೊರೆಯನ್ನು ಎತ್ತಿಹಿಡಿಯುವ ಮೂಲಕ ರಾಷ್ಟ್ರದ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಚಿತ್ರಿಸುತ್ತದೆ.
ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆದ ನಂತರ ವಿವಿಧ ಪ್ರಾಂತ್ಯಗಳನ್ನು ಭಾರತ ಒಕ್ಕೂಟಕ್ಕೆ ಸೇರಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಎಲ್ಲಾ 565 ಸ್ವ-ಆಡಳಿತದ ರಾಜಪ್ರಭುತ್ವದ ರಾಜ್ಯಗಳನ್ನು ಯಶಸ್ವಿಯಾಗಿ ಮನವೊಲಿಸಿ ರಾಷ್ಟ್ರ ನಿರ್ಮಾಣ ಮಾಡಿದರು.

ಭಾರತವು ಆಂಗ್ಲರಿಂದ ಸ್ವಾತಂತ್ರ್ಯವನ್ನು ಪಡೆದುಕೂಳ್ಳುವುದಕ್ಕೆ ಎಷ್ಟು ಅಡಚಣೆಗಳು ಎದುರಾದವೋ, ಅದೇ ರೀತಿ ಸ್ವತಂತ್ರ ಭಾರತವನ್ನು ಎಲ್ಲಾ ದೇಶಿಯಾ ಸಂಸ್ಥಾನಗಳನ್ನು ಒಟ್ಟುಗೂಡಿಸಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದವರಲ್ಲಿ ಪ್ರಮುಖರು ಸರ್ದಾರ್ ವಲ್ಲಭಭಾಯ್ ಪಟೇಲರು. 1947 ರಿಂದ 1950ರವರೆಗೆ ಭಾರತದ ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಇವರನ್ನು ಹಿಂದಿ , ಉರ್ದು , ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಗಳಲ್ಲಿ 'ಮುಖ್ಯಸ್ಥ' ಎಂಬ ಅರ್ಥವನ್ನು ಹೊಂದಿರುವ ಸರ್ದಾರ್ ಎಂದು ಕರೆಯಲಾಗುತ್ತಿತ್ತು. ಪಟೇಲರು ಭಾರತದ ರಾಜಕೀಯ ಏಕೀಕರಣ ಮತ್ತು 1947ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದರು.
ಜೈಲುವಾಸವನ್ನು ಅನುಭವಿಸಿದರು: ಸರ್ದಾರ್ ವಲ್ಲಭಭಾಯ್ ಪಟೇಲ್ ಖೇಡಾ ಜಿಲ್ಲೆಯಲ್ಲಿ ಗ್ರಾಮ-ಗ್ರಾಮ ಪ್ರವಾಸವನ್ನು ಪ್ರಾರಂಭಿಸಿದರು. ಅಲ್ಲಿನ ಕುಂದುಕೊರತೆಗಳನ್ನು ದಾಖಲಿಸಿ ಮತ್ತು ತೆರಿಗೆ ಪಾವತಿಸುವುದನ್ನು ನಿರಾಕರಿಸುವ ಮೂಲಕ ರಾಜ್ಯಾದ್ಯಂತ ದಂಗೆಗೆ ಗ್ರಾಮಸ್ಥರನ್ನು ಬೆಂಬಲಿಸುವಂತೆ ಕೇಳಿದರು. ಈ ಮೂಲಕ ಗುಜರಾತಿನ ಸತ್ಯಾಗ್ರಹದಲ್ಲಿ ಪ್ರಮುಖರಾಗಿದ್ದರು.
ಸರ್ದಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಮೂಲಭೂತ ಹಕ್ಕುಗಳು ಮತ್ತು ಆರ್ಥಿಕ ನೀತಿ ನಿರ್ಣಯವನ್ನು ಕಾಂಗ್ರೆಸ್ 1931ರಲ್ಲಿ ಅಂಗೀಕರಿಸಿತು. ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕಾನೂನು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 9ರಂದು ಪಟೇಲ್ ಅವರನ್ನು ಬಂಧಿಸಲಾಯಿತು ಮತ್ತು 1942 ರಿಂದ 1945 ರವರೆಗೆ ಇಡೀ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯೊಂದಿಗೆ ಅಹಮದ್ ನಗರದ ಕೋಟೆಯಲ್ಲಿ ಜೈಲಿನಲ್ಲಿರಿಸಲಾಯಿತು. 1945ರ ಜೂನ್ 15ರಂದು ಬಂಧಿಖಾನೆಯಿಂದ ಬಿಡುಗಡೆಗೊಳಿಸಲಾಯಿತು.
ರಾಜತಾಂತ್ರಿಕ ನೀತಿಯಿಂದ 565 ದೇಶೀಯ ಸಂಸ್ಥಾನಗಳನ್ನು ಸೇರಿಸಲು ಸಂಪೂರ್ಣ ರಾಷ್ಟ್ರ ನಿರ್ಮಾಣದ ಕೆಲಸದ ಮುಖ್ಯಸ್ಥರಾಗಿದ್ದರು ಸರ್ದಾರ್ ವಲ್ಲಭಭಾಯ್ ಪಟೇಲ್. ಸ್ಥಳೀಯ ಸಂಸ್ಥಾನಗಳಲ್ಲಿ ದೇಶಪ್ರೇಮದಿಂದ ವರ್ತಿಸುವಂತೆ ಆಡಳಿತಗಾರರನ್ನು ಪ್ರೋತ್ಸಾಹಿಸಿದರು. ಪಟೇಲರು ರಾಜರುಗಳು ಭಾರತಕ್ಕೆ ಸದ್ಭಾವನೆಯಿಂದ ಸಮ್ಮತಿಸಬೇಕೆಂದು ಒತ್ತಿಹೇಳಿದರು. ರಾಜರುಗಳಿಗೆ 1947ರ ಆಗಸ್ಟ್ 15 ರೊಳಗೆ ಪ್ರವೇಶ ಪತ್ರಕ್ಕೆ ಸಹಿ ಹಾಕಲು ಗಡುವನ್ನು ನಿಗದಿಪಡಿಸಿದರು. ಮೂರು ಸಂಸ್ಥಾನಗಳು ಹೊರತುಪಡಿಸಿ ಎಲ್ಲಾ ಸಂಸ್ಥಾನಗಳು ಸ್ವಇಚ್ಛೆಯಿಂದ ಭಾರತೀಯ ಒಕ್ಕೂಟದಲ್ಲಿ ವಿಲೀನಗೊಂಡವು. ಜಮ್ಮು ಮತ್ತು ಕಾಶ್ಮೀರ , ಜುನಾಗಢ ಮತ್ತು ಹೈದರಾಬಾದ್ ಮಾತ್ರ ಒಪ್ಪಿಗೆ ನೀಡಿರಲಿಲ್ಲ, ಕಾಲಾಂತರದಲ್ಲಿ ಅವುಗಳು ಭಾರತದ ಒಕ್ಕೂಟಕ್ಕೆ ಸಹಿ ಹಾಕಿದವು.
ಸರ್ದಾರ್ ವಲ್ಲಭಭಾಯ್ ಪಟೇಲರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾತ್ರ ಅಲ್ಲದೆ ಸ್ವತಂತ್ರ ಪಡೆದ ನಂತರ ಭಾರತ ದೇಶ ರಚನೆ ಮಾಡುವ ಮೂಲಕ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಅಪಾರ ಕೊಡುಗೆಗಳನ್ನು ಗೌರವಿಸುವ ಸಲುವಾಗಿ, ಭಾರತ ಸರ್ಕಾರವು ಗುಜರಾತ್‌ನ ನರ್ಮದಾ ನದಿಯ ಬಳಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಇದನ್ನು 'ಏಕತೆಯ ಪ್ರತಿಮೆ' ಎಂದು ಕರೆಯಲಾಗುತ್ತದೆ ಮತ್ತು ಇದನ್ನು ವಿಶ್ವದ 8ನೇ ಅದ್ಭುತ ಎಂದೂ ಕರೆಯಲಾಗುತ್ತದೆ. ಭಾರತೀಯ ಶಿಲ್ಪಿ ರಾಮ್ ವಿ. ಸುತಾರ್ ಈ ಪ್ರತಿಮೆಯನ್ನು ವಿನ್ಯಾಸಗೊಳಿಸಿದ್ದಾರೆ.
ಏಕತೆಯ ಪ್ರತಿಮೆಯು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದು 182 ಮೀಟರ್ (597 ಅಡಿ) ಎತ್ತರವನ್ನು ಹೊಂದಿದೆ. ಈ ಪ್ರತಿಮೆಯು ಭಾರತದ ಗುಜರಾತ್‌ನ ನರ್ಮದಾ ನದಿಯ ಕೆವಾಡಿಯಾ ಕಾಲೋನಿಯಲ್ಲಿದೆ. ವಡೋದರಾ ನಗರದ ಆಗ್ನೇಯಕ್ಕೆ 100 ಕಿಲೋಮೀಟರ್ ಸರ್ದಾರ್ ಸರೋವರ್ ಅಣೆಕಟ್ಟಿಗೆ ಎದುರಾಗಿದೆ. ಇದರ ಒಟ್ಟು ನಿರ್ಮಾಣ ವೆಚ್ಚ 27 ಬಿಲಿಯನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2018ರ ಅಕ್ಟೋಬರ್ 31ರಂದು ಪಟೇಲ್ ಅವರ ಜನ್ಮದಿನದ 143ನೇ ವಾರ್ಷಿಕೋತ್ಸವದಂದು ಇದನ್ನು ಉದ್ಘಾಟಿಸಿದರು. ಈ ದಿನವನ್ನು ಆಚರಿಸಲು, ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ವ್ಯಕ್ತಿಗಳ ಅಮೂಲ್ಯ ಕೊಡುಗೆಗಳನ್ನು ಗೌರವಿಸಲು ಮತ್ತು ಗುರುತಿಸಲು ಸರ್ಕಾರವು ಸರ್ದಾರ್ ಪಟೇಲ್ ರಾಷ್ಟ್ರೀಯ ಏಕತಾ ಪ್ರಶಸ್ತಿಯನ್ನು ಸಹ ನೀಡುತ್ತಿದೆ.
ಭಾರತೀಯ ರಾಜನೀತಿ ತಜ್ಞ ಮತ್ತು ಸ್ವಾತಂತ್ರ‍್ಯ ಹೋರಾಟಗಾರ ವಲ್ಲಭಭಾಯಿ ಪಟೇಲ್ ಅವರು 1950ರ ಡಿಸೆಂಬರ್ 15ರಂದು ಹೃದಯಾಘಾತ ಮತ್ತು ಅನಾರೋಗ್ಯದಿಂದ ಕೊನೆಯುಸಿರೆಳೆದರು. ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಮತ್ತು ಭಾರತದ ರಾಜಕೀಯ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಟೇಲ್ ಅವರು ಭಾರತೀಯರಲ್ಲಿ ಏಕತೆಯ ಭಾವನೆ ಬಿತ್ತುವ ಮೂಲಕ ರಾಷ್ಟ್ರ ನಿರ್ಮಾಣ ಮಾಡಿದರು. ಅವರ ತತ್ವಗಳು, ಆದರ್ಶಗಳು, ಏಕತೆಯ ಭಾವನೆಯನ್ನು ಭಾರತೀಯರು ಅನುಸರಿಸಬೇಕಾಗಿದೆ. ಇದರ ಮೂಲಕ ವಿಭಿನ್ನ ಭಾಷೆ, ಪ್ರಾಂತ್ಯ, ಸಂಸ್ಕೃತಿ ಹೊಂದಿದ ನಮ್ಮ ದೇಶ ಏಕತೆಯಿಂದ ಅಭಿವೃದ್ದಿ ಹೊಂದಬೇಕು ಎಂಬುದು ಅವರ ಆಶಯವಾಗಿದೆ.
ಬರಹ ಕೃಪೆ: ಮನೋಜ್. ಎಂ. ಅಪ್ರೆಂಟೀಸ್, ವಾರ್ತಾ ಇಲಾಖೆ
-
Dhurandhar-2: ಸಕ್ಸಸ್ ಅಲೆಯಲ್ಲಿ ಧುರಂಧರ್ 2: ಫ್ಯಾನ್ಸ್ ಕುರಿತು ಸಾರಾ ಅರ್ಜುನ್ ಪೋಸ್ಟ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications