Bajaj Pulsar NS 400: ಬಿಡುಗಡೆಯಾದ ಒಂದೇ ದಿನಕ್ಕೆ ಸಖತ್ ಟ್ರೆಂಡ್ ಸೃಷ್ಟಿಸಿದ ಪಲ್ಸರ್ NS 400-ಏನಿದರ ವಿಶೇಷತೆ?
Bajaj Pulsar NS 400: ಕಾಲ ಬದಲಾದಂತೆ ಜನರು ಕೂಡ ಬದಲಾಗಿಬಿಡುತ್ತಾರೆ. ಹಾಗೆಯೇ ವಾಹನಗಳ ವಿಭಾಗದಲ್ಲೂ ಸಹ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹೊಸ ಹೊಸ ಬದಲಾವಣೆಗಳನ್ನು ಕಾಣಬಹುದಾಗಿದೆ. ಹಾಗೆಯೇ ಇದೀದ ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಹೊಸ ಮಾಡೆಲ್‌ನ ಬೈಕ್‌ವೊಂದನ್ನು ಪರಿಚರಿಯಿಸಿದ. ಹಾಗಾದರೆ ಇದರ ವಿಶೇಷತೆಗಳು, ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಜಾಜ್ ಕಂಪನಿಯ ಪಲ್ಸರ್ ಅಂದರೆ ಇತ್ತೀನ ಯುಕವಕರಿಗೆ ಒಂಥರಾ ಕ್ರೇಜ್. ಇದೀಗ ಬಜಾಜ್ ಹೊಸ ಶಕ್ತಿಶಾಲಿ ಪಲ್ಸರ್ ಎನ್‌ಎಸ್ 400 ಬೈಕ್ ಅನ್ನು ಗುರುವಾರ (ಮೇ 03) ಬಿಡುಗಡೆ ಮಾಡಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 1.85 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ.

ಪಲ್ಸರ್ ಈಗಾಲೇ ರಸ್ತೆಯಲ್ಲಿ ದೂಳೆಬ್ಬಿಸುತ್ತಿದ್ದು, ಇದರ ಹೊಸ ಮಾಡೆಲ್ ಯಾವುದಾದರೂ ಬಿಡುಗಡೆ ಆಯಿತೆಂದರೆ ಸಾಕು ಯುವಕರ ಮನಸ್ಸೆಲ್ಲ ಅದರ ಕಡೆಯೇ ವಾಲಿಬಿಡುತ್ತದೆ. ಇದೀಗ ಹೊಸದಾಗಿ ಮಾರುಟ್ಟೆಗೆ ಬಂದಿರುವ ಎನ್‌ಎಸ್ 400 ಕೂಡ ತನ್ನ ಹೊಸ ಶೈಲಿಯ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ.
ಅತ್ಯಂತ ಶಕ್ತಿಶಾಲಿ ಬಜಾಜ್ ಪಲ್ಸರ್ ಈ ಹೊಸ ಬೈಕ್ 400 ಸಿಸಿ ಕೈಗೆಟಕುವ ಬೆಲೆಯದ್ದಾಗಿದೆ. ಸ್ಟ್ರೀಟ್ ನೇಕೆಡ್ ಮೋಟಾರ್ ಸೈಕಲ್ ಕೂಡಾ ಇದಾಗಿದ್ದು, ಈ ಬೈಕ್ ಅನ್ನು ಮುಂಗಡ 5,000 ರೂಪಾಯಿ ಮೊತ್ತವನ್ನು ಪಾವತಿಸಿ ಬುಕ್ ಮಾಡಿಕೊಳ್ಳಬಹುದಾಗಿದೆ. ಇನ್ನು ಆಸಕ್ತ ಗ್ರಾಹಕರು ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದಾಗಿದೆ.
NS 400 ವಿಶೇಷತೆಗಳು: ಈ ಬೈಕ್ 373 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಶಕ್ತಿಶಾಲಿ ಎಂಜಿನ್ ಅನ್ನು ಒಳಗೊಂಡಿದ್ದು, ಈ ಎಂಜಿನ್ 8,800 ಆರ್‌ಪಿಎಂನಲ್ಲಿ 39.4 ಬಿಎಚ್‌ಪಿ ಶಕ್ತಿ ಹಾಗೂ 6,5000 ಆರ್‌ಪಿಎಂನಲ್ಲಿ 35 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಆರು-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಬರುತ್ತದೆ. ಇನ್ನು ಇದೇ ಎಂಜಿನ್ ಬಜಾಜ್ ಡೊಮಿನಾರ್ 400ನಲ್ಲೂ ಇದೆ. ಆದ್ದರಿಂದ ಇದು ಡೊಮಿನಾರ್‌ಗೆ ಪ್ರತಿಸ್ಪರ್ಧಿ ಅಂತಲೇ ಕರೆಯುತ್ತಿದ್ದಾರೆ.
ಪಲ್ಸರ್ 400 ಬೈಕ್ ಪೆರಿಮೀಟರ್ ಫ್ರೇಮ್ ಅನ್ನು ಆಧರಿಸಿದ್ದು, ಸಸ್ಪೆನ್ಷನ್‌ಗಾಗಿ ಮುಂಭಾಗದಲ್ಲಿ 43 ಎಂಎಂ ಯುಎಸ್‌ಡಿ ಫೋರ್ಕ್ ಒಳಗೊಂಡಿದೆ. ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್, ಪ್ರಿಲೋಡ್ ಅಡ್ಜೆಸ್ಟೇಬಲ್ ಮೊನೊ-ಶಾಕ್ ಅನ್ನು ಹೊಂದಿದೆ. ಬ್ರೇಕಿಂಗ್ ಅನ್ನು ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ನಿಭಾಯಿಸುತ್ತದೆ.
ಈ ಬೈಕ್‌ನ ಮುಂಭಾಗದಲ್ಲಿ ಥಂಡರ್ಬೋಲ್ಟ್-ಶೈಲಿಯ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಪ್ರೊಜೆಕ್ಟರ್ ಲೈಟ್ ಅನ್ನು ಹೊಂದಿದೆ. ಅಲ್ಲದೆ, ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಒಳಬರುವ ಕರೆಗಳನ್ನು ತೋರಿಸಲು ಅಪ್ಲಿಕೇಶನ್, ಮಿಸ್ಡ್ ಕಾಲ್, ಎಸ್‌ಎಂಎಸ್ ನೋಟಿಫಿಕೇಷನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಸ್ವಿಚೇಬಲ್ ಟ್ರಾಕ್ಷನ್ ಕಂಟ್ರೋಲ್, ಡ್ಯುಯೆಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.
ಹಾಗೆಯೇ ಇದು ರಸ್ತೆ, ಮಳೆ, ಸ್ಪೋರ್ಟ್ಸ್ ಮತ್ತು ಆಫ್-ರೋಡ್ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳಿಗೂ ಹೊಂದಿಕರಯಾಗುತ್ತದೆ. ಹೀಗೆ ನಿನ್ನೆ (ಮೇ 03)ರಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ NS 400 ಶಖತ್ ಸದ್ದು ಮಾಡುತ್ತಿದ್ದು, ಯಾರ ಬಾಯಲ್ಲೂ ಬೈಕ್ ಬಗ್ಗೆ ಕೇಳಿದರೂ ಕೂಡ ಇದೇ ಹೆಸರೇ ಬರುತ್ತಿದೆ. ಅಷ್ಟರ ಮಟ್ಟಿಗೆ ರಿಲೀಸ್ ಆಗಿ ಒಂದೇ ದಿನಕ್ಕೆ ಟ್ರೆಂಟ್ ಸೃಷ್ಟಿಸಿದೆ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications