Bajaj Pulsar: ಬಜಾಜ್​ ಪಲ್ಸರ್‌ನ​ ಹೊಸ ಬೈಕ್‌ಗಳ ವಿಶೇಷತೆ, ದರಗಳ ಮಾಹಿತಿ ತಿಳಿಯಿರಿ

Bajaj Pulsar NS 160: ಆಟೋಮೊಬೈಲ್‌ ಕ್ಷೇತ್ರದ ದ್ವಿಚಕ್ರ ವಾಹನ ವಿಭಾಗದಲ್ಲಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಭಾರೀ ಚೇಂಜಸ್‌ ಆಗುತ್ತಿವೆ. ಇನ್ನು ಮಾರುಕಟ್ಟೆಗೆ ಎಲೆಕ್ಟ್ರಿಕ್‌ ವಾಹನಗಳು ಬಂದಾಗಿನಿಂದ ಭಾರೀ ಪೈಪೋಟಿ ಏರ್ಪಟ್ಟಿದೆ. ಮತ್ತೊಂದೆಡೆ ತಾವೇನು ಕಡಿಮೆಯಿಲ್ಲ ಎಂಬಂತೆ ಕಡಿಮೆ ದರದಲ್ಲಿ ಉತ್ತಮ ಸೌಲಭ್ಯಗಳುಳ್ಳ ಬೈಕ್‌ಗಳನ್ನು ಬಿಡುವ ಮೂಲಕ ಇಂಧನ ವಾಹನಗಳ ಕಂಪನಿಗಳು ಕೂಡ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿವೆ. ಇದೀಗ ಬಜಾಜ್​ ಆಟೋ ಕಂಪನಿಯ ಜನಪ್ರಿಯ ಬೈಕ್​ ಬಜಾಜ್​ ಪಲ್ಸರ್​ ಎನ್​​ಎಸ್ ​160 ಹಾಗೂ ಎನ್​ಎಸ್​ ​200ನ 2023ರ ಆವೃತ್ತಿ ಭಾರತದಲ್ಲಿ ಬಿಡುಗಡೆ ಆಗಿದೆ.

ಬಜಾಜ್‌ ಪಲ್ಸರ್‌ ಕಂಪನಿಯ ಈ ಬೈಕ್‌​ಗಳು ಭಾರತ್​ ಸ್ಟೇಜ್​ 6ರ ಎರಡನೇ ಹಂತದ ಮಾನದಂಡಗಳನ್ನು ಪೂರೈಸುತ್ತಿವೆ. ಎನ್​​ಎಸ್ ​160ನ ಎಕ್ಸ್‌ಶೋರೂಂ ದರ 1.35 ಲಕ್ಷ ರೂಪಾಯಿ ಆಗಿದ್ದರೆ, ಎನ್​ಎಸ್​ ​200ನ ದರ 1.48 ಲಕ್ಷ ರೂಪಾಯಿ ಆಗಿದೆ. ಬಜಾರ್​ ಡೀಲರ್‌ಶಿಪ್‌ನಲ್ಲಿ ಈ ಹೊಸ ಬೈಕ್‌​ಗಳು ಲಭ್ಯವಿದೆ ಎಂದು ಕಂಪನಿ ಮಾಹಿತಿ ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Know Bajaj Pulsar New bikes Specialty and price

ಬಜಾಜ್​ ಎನ್​ಎಸ್​ 160 ಬೈಕ್‌ಗೆ 10,000 ರೂಪಾಯಿ ಹೆಚ್ಚಾದರೆ, ಎನ್​ಎಸ್​200 ಬೈಕ್‌ಗೆ 7000 ರೂಪಾಯಿ ಹೆಚ್ಚಳ ಆಗಿದೆ. ಇನ್ನು ಈ ಬೈಕ್‌ಗಳು ಗ್ಲಾಸಿ ಎಬೊನಿ ಬ್ಲ್ಯಾಕ್​, ಪ್ವೀಟರ್​ ಗ್ರೇ, ಸ್ಟೇನ್​ ರೆಡ್​ ಹಾಗೂ ಮೆಟಾಲಿಕ್​ ಪರ್ಲ್​ ವೈಟ್​ ಬಣ್ಣಗಳಲ್ಲಿ ಸಿಗಲಿವೆ ಎಂದು ತಿಳಿಸಿದೆ.

ಇನ್ನು ಹೊಸ ಬಜಾಜ್​ ಪಲ್ಸರ್​ ಎನ್​ಎಸ್ 160 ಹಾಗೂ 200 ಬೈಕ್‌ಗಳಲ್ಲಿ ಅಪ್​ಸೈಡ್​-ಡೌನ್​ ಫೋರ್ಕ್​ ಮತ್ತು ಡ್ಯುಯಲ್​- ಚಾನೆಲ್​ ಎಬಿಎಸ್​ ಒಳಗೊಂಡಿವೆ. ಆದ್ದರಿಂದ ತುಸು ತೂಕ ಇಳಿಕೆ ಆದಂತಾಗಿದೆ. ಎನ್​ಎಸ್​​ 158 ಕೆ.ಜಿ ಇದ್ದರೆ, 200 ಬೈಕ್​ 159.5 ಕೆ.ಜಿ ಇದೆ. ಕಂಪನಿಯ ಪ್ರಕಾರ, ಎನ್‌ಎಸ್‌ 160 ಬೈಕ್‌ನಲ್ಲಿ ದೊಡ್ಡ ಗಾತ್ರದ ಡಿಸ್ಕ್​ ಬ್ರೇಕ್‌ಗಳನ್ನು ಅಳವಡಿಸಲಾಗಿದೆ. ಅದೇ ರೀತಿ ಟೈಯರ್‌ ಗಾತ್ರವೂ ಕೂಡ ಹೆಚ್ಚಿಸಲಾಗಿದ್ದು, ಇದು ರೋಡ್‌ ಗ್ರಿಪ್‌ಗೆ ತುಂಬಾ ಸಹಕಾರಿಯಾಗಲಿದೆ. ಇನ್ನು ಮುಂದಿನ ಟೈಯರ್​ 100/80-17 ಗಾತ್ರದ್ದಾಗಿದ್ದರೆ, ಹಿಂದಿನ ಟೈಯರ್​ 130, 70-17 ಗಾತ್ರ ಇದೆ.

ಎನ್​ಎಸ್​​160ನಲ್ಲಿ 160.3 ಸಿಸಿಯ ಆಯಿಲ್​ ಕೂಲ್ಡ್​ ಎಂಜಿನ್‌ ಅನ್ನು ಬಳಕೆ ಮಾಡಲಾಗಿದ್ದು, 17 ಬಿಎಚ್‌ಪಿ ಪವರ್​ 9000 ಆರ್‌ಪಿಎಂ​ನಲ್ಲಿ ಬಿಡುಗಡೆ ಮಾಡಿದರೆ, 7250 ಆರ್‌ಪಿಎಂ​ನಲ್ಲಿ 14.6 ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್‌ ಗೇರ್​ ಬಾಕ್ಸ್​ ಇದೆ. ಇನ್ನು ಎನ್​ಎಸ್​200 ಬೈಕ್​​ 199.5 ಸಿಸಿಯ ಟ್ರಿಪಲ್​ ಸ್ಪಾರ್ಕ್​ ಎಂಜಿನ್ ಹೊಂದಿದ್ದು, ಇದು 9750 ಆರ್‌​ಪಿಎಂ​ನಲ್ಲಿ 24.1 ಬಿಎಚ್‌ಪಿ ಪವರ್​ ಹೊಂದಿದ್ದರೆ, 8000 ಆರ್‌​ಪಿಎಂ​ನಲ್ಲಿ 18.74 ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ 6 ಸ್ಪೀಡ್‌ ಗೇರ್​ ಬಾಕ್ಸ್ ಇದೆ. ಒಟ್ಟಿನಲ್ಲಿ ಈ ಬೈಕ್‌ಗಳು ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಾವುದದೇ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+