• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಗರ ಹಾವಿಗೆ ಸಾಬೂನಿನಿಂದ ಸ್ನಾನ: ವಿಡಿಯೋ ಕಂಡು ಬೆಚ್ಚಿಬಿದ್ದ ಜನ

|
Google Oneindia Kannada News

ವಿಶ್ವದ ಅತ್ಯಂತ ಅಪಾಯಕಾರಿ ಜೀವಿಗಳ ಪಟ್ಟಿ ಮಾಡಿದರೆ, ಕಿಂಗ್ ಕೋಬ್ರಾ ಅಗ್ರಸ್ಥಾನದಲ್ಲಿದೆ. ಇದರ ವಿಷವು ಆನೆಯಂತಹ ಬೃಹತ್ ಪ್ರಾಣಿಯನ್ನೂ ನಿದ್ದೆಗೆಡಿಸುತ್ತದೆ. ಮನುಷ್ಯರು ಅವನೊಂದಿಗೆ ಮುಖಾಮುಖಿಯಾದಾಗ, ಅವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಾರೆ. ಆದರೆ ಈಗ ವಿಡಿಯೊ ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು ಇದನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ.

ವೈರಲ್ ಆಗಿರುವ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ತಿಳಿದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಬಾತ್ರೂಮ್ನಲ್ಲಿ ನಾಗರ ಹಾವು ಕುಳಿತಿರುವುದು ಕಾಣುತ್ತದೆ. ಅದರ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತಿದ್ದಾನೆ. ಮೊದಲು ನಾಗರಹಾವಿನ ಮೇಲೆ ವ್ಯಕ್ತಿ ನೀರು ಸುರಿಯುತ್ತಾನೆ. ಇದಾದ ನಂತರ ಅದಕ್ಕೆ ಸಾಬೂನು ಹಚ್ಚಲು ಆರಂಭಿಸುತ್ತಾನೆ. ಆತ ಬಹಳ ಹೊತ್ತು ನಾಗರ ಹಾವಿಗೆ ನೀರಿನಿಂದ ಸ್ನಾನ ಮಾಡಿಸುತ್ತಾನೆ.

ವಿಡಿಯೋ: 4,500 ರೂ. ಸೂಟ್‌ ಹಾಕಿಕೊಂಡು 350 ಅತಿಥಿಯೊಂದಿಗೆ ಜನ್ಮದಿನ ಆಚರಿಸಿಕೊಂಡ ನಾಯಿವಿಡಿಯೋ: 4,500 ರೂ. ಸೂಟ್‌ ಹಾಕಿಕೊಂಡು 350 ಅತಿಥಿಯೊಂದಿಗೆ ಜನ್ಮದಿನ ಆಚರಿಸಿಕೊಂಡ ನಾಯಿ

ನಾಗರಹಾವಿಗೆ ಸ್ನಾನ

ಈ ವಿಡಿಯೊವನ್ನು SAKHT LOGG ಹೆಸರಿನ Instagram ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಅದರೊಂದಿಗೆ ಶೀರ್ಷಿಕೆ ಹೀಗಿದೆ - 'ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಾರೆ' ಎಂದು ಬರೆಯಲಾಗಿದೆ.

ಈ ವಿಡಿಯೋವನ್ನು ಜನರು ಕೂಡ ತುಂಬಾ ಆನಂದಿಸಿದ್ದಾರೆ. ಜೊತೆಗೆ ಕಾಮೆಂಟ್ ಮಾಡಿದ್ದಾರೆ. 'ಸಹೋದರ, ನೀವು ಸೋಪಿನಿಂದ ಸ್ನಾನ ಮಾಡಿಸಲು ಅದು ನಿಮ್ಮ ಮಗು ಅಲ್ಲ' ಎಮದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ 'ಸಹೋದರ, ಸುರಕ್ಷಿತವಾಗಿರಿ, ಇಲ್ಲದಿದ್ದರೆ ಜನರು ನಿಮ್ಮ ಅಂತ್ಯಕ್ರಿಯೆಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಬಂದೊದಗಬಹುದು' ಎಂದು ಬರೆದಿದ್ದಾರೆ. 'ಇದನ್ನು ನೋಡಿದ ನನಗೆ ನನ್ನ ಮಾಜಿ ಗೆಳೆಯ ನೆನಪಾಯಿತು' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಅಂದಹಾಗೆ, ಹಲವೆಡೆ ಹಾವುಗಳನ್ನು ಸಾಕುವ ಪದ್ಧತಿ ಇದೆ. ಇದರಲ್ಲಿ ಮಹಾರಾಷ್ಟ್ರದ ಶೆಟ್ಪಾಲ್ ಗ್ರಾಮವೂ ಸೇರಿದೆ. ಅಲ್ಲಿ ಪ್ರತಿ ಮನೆಯಲ್ಲೂ ನಾಗರ ಹಾವು ಸಾಕುತ್ತಾರೆ. ಜನರು ಆರಾಮವಾಗಿ ವಾಸಿಸುವ ಮನೆಯಲ್ಲಿ ಹಾವುಗಳಿಗಾಗಿ ವಿಶೇಷ ಸ್ಥಳವನ್ನು ಮಾಡಿರುತ್ತಾರೆ. ಹಾವುಗಳು ಮನೆಯಲ್ಲಿ ಶಾಂತವಾಗಿ ವಾಸಿಸುತ್ತವೆ ಮತ್ತು ಯಾರಿಗೂ ಹಾನಿ ಮಾಡಿಲ್ಲ ಎಂದು ಹೇಳಲಾಗುತ್ತದೆ. ಈ ವಿಶೇಷತೆಯಿಂದಾಗಿ ಅನೇಕ ಜನರು ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ.

ನಾಗರಹಾವು ಎಷ್ಟು ಅಪಾಯಕಾರಿ?

ನಾಗರಹಾವು ಹಾವುಗಳ ರಾಜ ಎಂದು ಪರಿಗಣಿಸಲ್ಪಟ್ಟಿದೆ. ಅದಕ್ಕಾಗಿಯೇ ಅವನಿಗೆ ಕಿಂಗ್ ಕೋಬ್ರಾ ಎಂಬ ಹೆಸರು ಬಂದಿದೆ. ಇವು 10 ಅಡಿಯಿಂದ 13 ಅಡಿ ಎತ್ತರದವರೆಗೆ ಬೆಳೆಯುತ್ತವೆ. 20 ನೇ ಶತಮಾನದಲ್ಲಿ 18 ಅಡಿ 9 ಇಂಚುಗಳ ನಾಗರಹಾವು ಮಲೇಷ್ಯಾದಲ್ಲಿ ಕಂಡುಬಂದಿದೆ. ಇದರ ವಿಷವು ಮಾನವರು ಮತ್ತು ಇತರ ಜೀವಿಗಳ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕಚ್ಚುವುದರಿಂದ ಮೂರ್ಛೆ, ಮಂದ ದೃಷ್ಟಿ, ಪಾರ್ಶ್ವವಾಯು ಮುಂತಾದ ಪರಿಣಾಮಗಳು ತಕ್ಷಣವೇ ಕಂಡುಬರುತ್ತವೆ. ನಾಗರಹಾವು 5400 ಕೆಜಿ ತೂಕದ ಆನೆಯನ್ನು 3 ಗಂಟೆಗಳಲ್ಲಿ ಕೊಲ್ಲಬಲ್ಲದು.

English summary
King cobra snake bathing with soap and People were shocked to see the viral video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X