‘ಅಮೆರಿಕ, ದ.ಕೊರಿಯಾ ವಿರುದ್ಧ ರಕ್ಷಿಸಿಕೊಳ್ಳಲು ನಮಗೆ ಶಸ್ತ್ರಾಸ್ತ್ರ ಬೇಕಿದೆ!’
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತನ್ನ ವಿರೋಧಿಗಳ ವಿರುದ್ಧ ಮತ್ತೆ ಗುಡುಗಿದ್ದಾನೆ. ಈ ಬಾರಿ ಅಮೆರಿಕ, ದಕ್ಷಿಣ ಕೊರಿಯಾಗೆ ನೇರವಾಗಿಯೇ ವಾರ್ನಿಂಗ್ ಕೊಟ್ಟಿರುವ ಕಿಮ್ ಜಾಂಗ್ ಉನ್, ಅಮೆರಿಕ ಹಾಗೂ ದಕ್ಷಿಣ ಕೊರಿಯಾದಿಂದ ರಕ್ಷಣೆ ಪಡೆಯಲು ನಮಗೆ ಶಸ್ತ್ರಾಸ್ತ್ರಗಳು ಅತ್ಯಗತ್ಯ ಎಂದಿದ್ದಾನೆ.
ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ನಮಗೆ ಈ ರಾಷ್ಟ್ರಗಳಿಂದಲೇ ದೊಡ್ಡ ಬೆದರಿಕೆ ಇದೆ. ಹೀಗಾಗಿ ನಮ್ಮ ರಕ್ಷಣೆಗೆ ಅಗತ್ಯ ಇರುವ ಶಸ್ತ್ರಾಸ್ತ್ರ ತಯಾರಿಸಿಕೊಳ್ಳುವ ಹಕ್ಕು ನಮಗಿದೆ ಎಂದಿದ್ದಾನೆ ಕಿಮ್.
ಇತ್ತೀಚೆಗೆ ಉತ್ತರ ಕೊರಿಯಾದ ನ್ಯೂಕ್ಲಿಯರ್ ಘಟಕಗಳು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದವು. ಅಮೆರಿಕ ಸೇರಿದಂತೆ ಉತ್ತರ ಕೊರಿಯಾ ಶತ್ರು ರಾಷ್ಟ್ರಗಳ ಎದೆಯಲ್ಲಿ ಈ ಘಟನೆ ಸಂಚಲನ ಸೃಷ್ಟಿಸಿತ್ತು. ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡವಾಗಿದೆ.
ಆದರೆ ಇಂತಹ ಹೊತ್ತಲ್ಲೇ ಉತ್ತರ ಕೊರಿಯಾ ಸರ್ವಾಧಿಕಾರಿ ಮತ್ತೆ ಅಮೆರಿಕ ಹಾಗೂ ದ.ಕೊರಿಯಾ ವಿರುದ್ಧ ಗುಡುಗಿದ್ದಾನೆ. ಅಲ್ಲದೆ ಅಮೆರಿಕ ಹಾಗೂ ದ.ಕೊರಿಯಾ ಶಸ್ತ್ರಾಸ್ತ್ರಗಳ ಮೂಲಕ ಶಾಂತಿಗೆ ಬೆದರಿಕೆ ಒಡ್ಡುತ್ತಿವೆ ಎಂದು ಕಿಮ್ ಆರೋಪಿಸಿದ್ದಾನೆ.

ಮುಂದೈತಾ ಮಾರಿ ಹಬ್ಬ?
ಉತ್ತರ ಕೊರಿಯಾ ದಿಢೀರ್ ಇಷ್ಟೊಂದು ರೊಚ್ಚಿಗೇಳಲು ಕಾರಣವಿದೆ. ಅದೇನೆಂದರೆ ತನ್ನ ಮೇಲೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸೇರಿ ಹೇರಿರುವ ನಿರ್ಬಂಧಗಳು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ನ ರೊಚ್ಚಿಗೆಬ್ಬಿಸಿದೆ. ಎಷ್ಟುದಿನ ಅಂತಾ ಬಡತನದಲ್ಲೇ ಸಾಯೋದು..? ತಮ್ಮ ಬಗ್ಗೆ ಶತ್ರುಗಳಿಗೆ ಒಂದಷ್ಟು ಭಯ ಇರಲಿ ಅನ್ನೋ ರೀತಿ ಪದೇ ಪದೆ ಮಿಸೈಲ್ ಟೆಸ್ಟ್ ಮಾಡಿಸುತ್ತಿದ್ದಾನೆ ಕಿಮ್ ಜಾಂಗ್ ಉನ್. ಇದಕ್ಕೆ ಕಿಮ್‌ನ ತಂಗಿ ಕೂಡ ಸಾಥ್ ನೀಡುತ್ತಿದ್ದು, ಅಮೆರಿಕನ್ನರಿಗೆ ಹೊಸ ತಲೆನೋವು ಶುರುವಾಗಿದೆ.

ಪರಮಾಣು ಸ್ಥಾವರ ಬ್ಯುಸಿ!
ಪರಮಾಣು ಸ್ಥಾವರ ಅಂದ್ರೆ ನ್ಯೂಕ್ಲಿಯರ್ ರಿಯಾಕ್ಟರ್‌ಗಳಲ್ಲಿ ರಿಯಾಕ್ಟರ್ ಬಿಸಿ ಹೆಚ್ಚಾಗದಂತೆ ತಂಪಾಗಿಸಲು ನೀರು ಬಳಸಲಾಗುತ್ತದೆ. ಹೀಗೆ ಯೊಂಗ್‌ಬಿಯಾನ್ ಪರಮಾಣು ಸ್ಥಾವರದಿಂದ ನೀರನ್ನು ಹೊರಹಾಕುತ್ತಿರುವ ಚಿತ್ರಗಳು ಉಪಗ್ರಹದ ಕಣ್ಣಿಗೆ ಕಳೆದ ತಿಂಗಳಷ್ಟೇ ಬಿದ್ದಿದ್ದವು. ಯೊಂಗ್‌ಬಿಯಾನ್ 5 ಮೆಗಾವ್ಯಾಟ್ ವಿದ್ಯುತ್ ತಯಾರಿಕೆ ಸಾಮರ್ಥ್ಯ ಹೊಂದಿರುವ ಪರಮಾಣು ಸ್ಥಾವರ. ಇದೀಗ ಇದೇ ಸ್ಥಾವರದ ಅಕ್ಕಪಕ್ಕ ಹರಡಿರುವ ಮರಗಳನ್ನೂ ಕಿಮ್ ಗ್ಯಾಂಗ್ ಕಡಿದು ಹಾಕಿದೆ. ಹಾಗೇ ಫೌಂಡೇಷನ್ ಕೆಲಸ ಕೂಡ ವೇಗವಾಗಿ ಸಾಗುತ್ತಿದ್ದು, ಇನ್ನೇನು ಕೆಲ ದಿನಗಳಲ್ಲಿ ಕೆಲಸ ಕಂಪ್ಲೀಟ್ ಆಗಿ, ಹೊಸ ಅಣುಬಾಂಬ್ ಅಥವಾ ಬಾಂಬ್ ಹೊತ್ತೊಯ್ಯಬಲ್ಲ ಕ್ಷಿಪಣಿಗಳು ತಯಾರಾಗುವ ಬಗ್ಗೆ ಸುಳಿವು ಸಿಕ್ಕಿದೆ.

2018ರಲ್ಲಿ ಬಾಗಿಲು ಮುಚ್ಚಿದ್ದರು..!
2018ರಲ್ಲಿ ಟ್ರಂಪ್ ಭೇಟಿ ಬಳಿಕ ಕಿಮ್ ಯೊಂಗ್‌ಬಿಯಾನ್ ಅಣುಸ್ಥಾವರವನ್ನು ಕಿಮ್ ಬಂದ್ ಮಾಡಿಸಿದ್ದ. 2018ರಿಂದ ಈವರೆಗೆ ಅಣುಸ್ಥಾವರದಲ್ಲಿ ಯಾವುದೇ ಚಟುವಟಿಕೆ ನಡೆದಿರಲಿಲ್ಲ. ಆದರೆ 2021ರ ಜುಲೈವರೆಗೆ 5 ತಿಂಗಳ ಕಾಲ ಅಣುಸ್ಥಾವರ ಸಿಕ್ಕಾಪಟ್ಟೆ ಆಕ್ಟಿವ್ ಆಗಿತ್ತು ಎಂದಿದ್ದರು ತಜ್ಞರು. ಹೀಗೆ ಇಷ್ಟುದಿನ ಕದ್ದುಮುಚ್ಚಿ ನಡೆಯುತ್ತಿದ್ದ ಕಾಮಗಾರಿ ಈಗ ಜಗತ್ತಿಗೇ ಗೊತ್ತಾಗುವಂತೆ ಮುಂದುವರಿದಿದೆ. ನಾವು ಸುಮ್ಮನೆ ಕೂರೋದಿಲ್ಲ ಅನ್ನೋದನ್ನ ಅಮೆರಿಕಗೆ ಉತ್ತರ ಕೊರಿಯಾ ತಿಳಿಸುತ್ತಿದೆ. ಆದರೆ ಇದು ಜಾಗತಿಕ ಮಟ್ಟದಲ್ಲಿ ಹೊಸ ತಿಕ್ಕಾಟ ಶುರುವಾಗಲು ಕಾರಣವಾಗುತ್ತಿದೆ.

ಬಾಂಬ್ ಪರೇಡ್ ನಡೆಸಿದ್ದರು..!
ಉ. ಕೊರಿಯಾ ಜನವರಿ 14ರಂದು ನಡೆಸಿದ್ದ ಮಿಸೈಲ್ ಪರೇಡ್ ಜಗತ್ತಿನ ಗಮನ ಸೆಳೆದಿತ್ತು. ಖುದ್ದು ಕಿಮ್ ಮಿಸೈಲ್ ಪರೇಡ್ ವೀಕ್ಷಿಸಿದ್ದ. ಜನವರಿ 20ರಂದು ಬೈಡನ್ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದ್ದರೆ, ಜೋ ಬೈಡನ್ ಆಗಮನಕ್ಕೂ ಒಂದು ವಾರ ಮುನ್ನ ಮಿಸೈಲ್‌ಗಳನ್ನ ಪ್ರದರ್ಶನ ಮಾಡಿದ್ದ ಕಿಮ್ ಜಾಂಗ್ ಉನ್. ಅಲ್ಲದೆ ಈ ಪರೇಡ್ ವೇಳೆ ಮಾತನಾಡಿದ್ದ ಕಿಮ್ ಜಾಂಗ್ ಉನ್, ಏಷ್ಯಾದಲ್ಲಿರುವ ಉ.ಕೊರಿಯಾ ಶತ್ರು ರಾಷ್ಟ್ರಗಳಿಗೂ ಹಾಗೂ ಅಮೆರಿಕಕ್ಕೆ ತಕ್ಕ ಉತ್ತರ ನೀಡುವ ಸಲುವಾಗಿ ಮಿಲಿಟರಿ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸುತ್ತೇವೆ ಹಾಗೂ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ವೇಗ ನೀಡಲಾಗುವುದು ಎಂದಿದ್ದ.

ಅಮೆರಿಕ ನೆಲೆಗಳೇ ಟಾರ್ಗೆಟ್..?
ಕಿಮ್ ಕ್ಷಿಪಣಿ ಯಾರನ್ನು ಟಾರ್ಗೆಟ್ ಮಾಡಿದೆ ಎಂಬ ಪ್ರಶ್ನೆ ಇದೀಗ ಜಗತ್ತನ್ನ ಕಾಡುತ್ತಿದೆ. ಆದರೆ ತಜ್ಞರು ಹೇಳುವಂತೆ ಕಿಮ್ ಕ್ಷಿಪಣಿಗಳು ಕಣ್ಣಿಟ್ಟಿರುವುದು ಅಮೆರಿಕದ ಕ್ಷಿಪಣಿ ಕೇಂದ್ರಗಳ ಮೇಲೆ. ಅಲಾಸ್ಕಾ ಸೇರಿ ಹಲವು ಪ್ರಾಂತ್ಯಗಳಲ್ಲಿ ಅಮೆರಿಕದ ಕ್ಷಿಪಣಿ ಕೇಂದ್ರಗಳಿವೆ. ಇದನ್ನೇ ಟಾರ್ಗೆಟ್ ಮಾಡಿ, ನ್ಯೂಕ್ಲಿಯರ್ ವೆಪನ್ ಉತ್ಪಾದನೆ ಮಾಡುತ್ತಿದೆ ಉತ್ತರ ಕೊರಿಯಾ. ಆದರೆ ಆದ್ರೆ ಅದು ಅಷ್ಟು ಸುಲಭವಲ್ಲ, ಆದರೂ ಕಿಮ್ ಜಾಂಗ್ ಉನ್ ಭಂಡತನ ಪ್ರದರ್ಶಿಸಲು ಮುಂದಾಗಿದ್ದಾನೆ. ಇದು ಅಮೆರಿಕ ನಾಯಕರಲ್ಲೂ ಆತಂಕ ಮೂಡಿಸಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications