ಕೇರಳ ಚುನಾವಣೆ: ಬಿಜೆಪಿ ಸಿಕ್ಕಿದ್ದು ಸಿಹಿಯೋ? ಕಹಿಯೋ?
ತಿರುವನಂತಪುರಂ, ಡಿಸೆಂಬರ್ 18: ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಎಡಪಂಥೀಯ ರಾಜ್ಯದಲ್ಲಿ ತನ್ನ ಛಾಪು ಮೂಡಿಸುವ ಪ್ರಯತ್ನದಲ್ಲಿ ಸಿಹಿ-ಕಹಿ ಎರಡೂ ಅನುಭವಗಳನ್ನು ಪಡೆದುಕೊಂಡಿದೆ. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂಬವರುವ ವಿಧಾನಸಭೆ ಚುನಾವಣೆ ವೇಳೆಗೆ ತಳಮಟ್ಟದಲ್ಲಿ ಬುನಾದಿಯನ್ನು ಭದ್ರಪಡಿಸುವ ಬಿಜೆಪಿಯ ಬಯಕೆಗೆ ತಣ್ಣೀರು ಚೆಲ್ಲಿದಂತೆ ಆಗಿದೆ.
ಹಾಗೆಂದು ಈ ಬಾರಿಯ ಚುನಾವಣೆಯಲ್ಲಿನ ಬಿಜೆಪಿ ಪ್ರದರ್ಶನವನ್ನು ಅದರ ಸೋಲು ಎಂದು ಹೇಳಲು ಕೂಡ ಆಗುವುದಿಲ್ಲ. ಅಸ್ತಿತ್ವವೇ ಇಲ್ಲದಿದ್ದ ರಾಜ್ಯದಲ್ಲಿ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಮತಗಳನ್ನು ಪಡೆದಿರುವುದು ಕೂಡ ಸಾಮಾನ್ಯ ಸಂಗತಿಯಲ್ಲ.
ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ 1,236 ಸೀಟುಗಳಲ್ಲಿ ಜಯಗಳಿಸಿತ್ತು. ಒಟ್ಟಾರೆ ದಾಖಲಾದ ಮತಗಳಲ್ಲಿ ಶೇ 14ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಈ ಬಾರಿ ಅದು 2,500ಕ್ಕೂ ಹೆಚ್ಚಿನ ಸೀಟುಗಳನ್ನು ಗೆಲ್ಲುವ ಗುರಿ ಹೊಂದಿತ್ತು. ಆದರೆ 1,800ರಷ್ಟು ವಾರ್ಡ್‌ಗಳಲ್ಲಿ ಜಯಗಳಿಸಿದೆ. ಆದರೆ ಕಳೆದ ಚುನಾವಣೆಯಲ್ಲಿ ಗೆದ್ದು, ಅಧಿಕಾರಕ್ಕೆ ಬಂದಿದ್ದ ಕನಿಷ್ಠ 600 ಹಾಲಿ ಸೀಟುಗಳನ್ನು ಕಳೆದುಕೊಂಡಿದೆ. ಮುಂದೆ ಓದಿ.

ಅಸ್ತಿತ್ವ ಕಡಿಮೆ ಇರುವಲ್ಲಿ ಉತ್ತಮ ಮತ
ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಎಲ್‌ಡಿಎಫ್ ಮತ್ತು ಯುಡಿಎಫ್ ವ್ಯಾಪಕವಾಗಿ ಅಡ್ಡಮತದಾನಗಳನ್ನು ನಡೆಸಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್ ಆರೋಪಿಸಿದ್ದಾರೆ. ಎಲ್ಲಿ ತೀರಾ ಕಡಿಮೆ ಅಸ್ತಿತ್ವ ಇದೆಯೋ ಅಂತಹ ಅನೇಕ ಪ್ರದೇಶಗಳಲ್ಲಿ ಬಿಜೆಪಿ ಉತ್ತಮ ಮತಗಳನ್ನು ಗಳಿಸಿದೆ.

ಎರಡನೆ ಸ್ಥಾನವೇ ಅಧಿಕ
ಒಟ್ಟಾರೆ ಫಲಿತಾಂಶವನ್ನು ಗಮನಿಸಿದಾಗ ಕಳೆದ ಚುನಾವಣೆಗಿಂತ ಬಿಜೆಪಿ 600 ಹೆಚ್ಚುವರಿ ಸೀಟುಗಳನ್ನು ತನ್ನ ಖಾತೆಗೆ ಪಡೆದುಕೊಂಡಿದೆ. ಜತೆಗೆ ಸುಮಾರು 600 ವಾರ್ಡ್‌ಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ. 100 ವಾರ್ಡ್‌ಗಳ ತಿರುವನಂತಪುರಂ ನಗರ ಪಾಲಿಕೆಯಲ್ಲಿ 32ರಲ್ಲಿ ಎರಡನೆಯ ಸ್ಥಾನ ಪಡೆದಿದೆ.

ಕಳೆದುಕೊಂಡಿದ್ದು ಮತ್ತು ಗೆದ್ದಿದ್ದು
ತಿರುವನಂತಪುರಂನಲ್ಲಿ ಸುಧಾರಣೆ ಕಾಣಲು ಬಿಜೆಪಿಗೆ ಸಾಧ್ಯವಾಗಿಲ್ಲ. ಆದರೆ ತನ್ನ 10 ಹಾಲಿ ಸೀಟುಗಳನ್ನು ಸಿಪಿಎಂ ಅಭ್ಯರ್ಥಿಗಳಿಗೆ ಕಳೆದುಕೊಂಡರೂ 35 ಸೀಟುಗಳನ್ನು ಉಳಿಸಿಕೊಂಡಿದೆ. ಕೋಯಿಕ್ಕೋಡ್‌ನಲ್ಲಿಯೂ ಇದೇ ರೀತಿಯ ಸನ್ನಿವೇಶವಿದೆ. ಏಳು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡರೂ, ತನ್ನ ಕೈಯಲ್ಲಿದ್ದ ಏಳು ಸೀಟುಗಳನ್ನು ಕಳೆದುಕೊಂಡಿದೆ.

ವಿವಿಧೆಡೆ ಗಮನಾರ್ಹ ಪ್ರದರ್ಶನ
ಯುಡಿಎಫ್ ಮತ್ತು ಎಲ್‌ಡಿಎಫ್‌ಗಳ ವಿರುದ್ಧ ಬಿಜೆಪಿಯು ಅಡ್ಡ ಮತದಾನದ ಆರೋಪ ಮಾಡಿದೆ. ಕೇಂದ್ರ ಟ್ರ್ಯಾವಂಕೋರ್ ಮತ್ತು ದಕ್ಷಿಣ ಭಾಗಗಳಲ್ಲಿ ಬಿಜೆಪಿ ಎಳವ ಮತ್ತು ನಾಯರ್ ಸಮುದಾಯಗಳ ವಿಶ್ವಾಸ ಗೆದ್ದಿರುವುದು ಸ್ಪಷ್ಟವಾಗುತ್ತದೆ.
ವರ್ಕಲ ಮತ್ತು ಅಟ್ಟಿಂಗಳ್‌ಗಳಲ್ಲಿ ಎನ್‌ಡಿಎ ಕೆಲವು ಸೀಟುಗಳಲ್ಲಿ ನಿರ್ಣಾಯಕ ಗೆಲುವು ಪಡೆದಿದ್ದರೆ, ಪಟ್ಟಣಂತಿಟ್ಟ ಹಾಗೂ ಕೊಟ್ಟಾಯಂ ಜಿಲ್ಲೆಯ ವಿವಿಧೆಡೆ ಗಮನಾರ್ಹ ಸಾಧನೆ ತೋರಿದೆ. ಹೀಗಾಗಿ ಒಂದು ಕಡೆ ಸೋತರೂ ಇನ್ನೊಂದರಲ್ಲಿ ಗೆಲ್ಲುವ ಮೂಲಕ ವೈಫಲ್ಯವನ್ನು ಸರಿದೂಗಿಸಿದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications