ಸಂಯುಕ್ತ ರಂಗದ ಸೃಷ್ಟಿ ಹಿಂದೆ ಕೆಸಿಆರ್ ಪ್ರಧಾನಿ ಪಟ್ಟದ ಕನಸು...
ನವದೆಹಲಿ, ಮೇ 07: ಕಳೆದ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಕೆಲದಿನ ಸುದ್ದಿಯಾಗಿ, ನಂತರ ಮರೆತೇ ಹೋಗಿದ್ದ ಸಂಯುಕ್ತ ರಂಗದ ಪರಿಕಲ್ಪನೆ ಇದೀಗ ಮತ್ತೆ ಚಿಗುರೊಡೆಯುತ್ತಿದೆ.
ಚುನಾವಣೆಯ ಫಲಿತಾಂಶದ ಹೊತ್ತಲ್ಲಿ ಇದೊಂದು ಪೂರ್ಣ ಚಿತ್ರಣ ಪಡೆದರೆ ಅಚ್ಚರಿಯಿಲ್ಲ. ಆದರೆ ಪರೋಕ್ಷವಾಗಿ ಎನ್ ಡಿಎ ಗೆ ಬೆಂಬಲ ನೀಡಬಹುದು ಎಂದುಕೊಂಡಿದ್ದ ಕೆಸಿಆರ್ ಇದೀಗ ಸಂಯುಕ್ತ ರಂಗಕ್ಕೆ ಕೈಹಾಕಿದ್ದು ಏಕೆ? ಇದರಿಂದ ಬಿಜೆಪಿ ಭಾರೀ ಸವಾಲು ಎದುರಿಸಬೇಕಾದೀತಾ?
ಸಂಯುಕ್ತ ರಂಗದ ಸೃಷ್ಟಿಯ ಹಿಂದೆ ಕೆ.ಚಂದ್ರಶೇಖರ್ ರಾವ್ ಅವರ ಪ್ರಧಾನಿಪಟ್ಟದ ಕನಸೂ ಸೇರಿದೆಯಾ ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ. ಅಷ್ಟಕ್ಕೂ ಇಷ್ಟು ದಿನ ಸುಮ್ಮನಿದ್ದು ಇದೀಗ ಕೆಸಿಆರ್ ಸಂಯುಕ್ತ ರಂಗದ ಸೃಷ್ಟಿಗೆ ಓಡಾಡುತ್ತಿರುವುದೇಕೆ?

ದಕ್ಷಿಣ ಭಾರತಕ್ಕೆ ಪ್ರಧಾನಿ ಪಟ್ಟ
ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಲ್ಲಿ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂಬುದು ಎಂದಿನ ದೂರು. ಆದ್ದರಿಂದ ದಕ್ಷಿಣ ಭಾರತೀಯ ಅಭ್ಯರ್ಥಿಯೊಬ್ಬರು ಪ್ರಧಾನಿ ಪಟ್ಟಕ್ಕೆ ಏರುವುದಾದರೆ ಅದಕ್ಕೆ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗಬಹುದು ಎಂಬುದು ಕೆಸಿಆರ್ ಲೆಕ್ಕಾಚಾರ. ಆದ್ದರಿಂದಲೇ ಅವರು ಈಗಾಗಲೇ ಪ್ರಾದೇಶಿಕ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ.

ಎಚ್ಡಿಕೆ, ಪಿಣರಾಯಿ ಜೊತೆ ಮಾತುಕತೆ
ಈಗಾಗಲೇ ಕೆಸಿಆರ್ ಅವರು ಕರ್ನಾಟಕ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಕೇರಳ ಮುಖ್ಯಮಂತ್ರಿ ಸಿಪಿಐಎಂ ನಾಯಕ ಪಿಣರಾಯಿ ವಿಜಯ್ ಅವರನ್ನೂ ಭೇಟಿಯಾಗಿದ್ದಾರೆ. ಸದ್ಯದಲ್ಲೇ ತಮಿಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರನ್ನೂ ಕೆಸಿಆರ್ ಭೇಟಿಯಾಗಲಿದ್ದಾರೆ.

ಟಿಡಿಪಿ ಸೋಲಿನ ಸೂಚನೆ?
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡು ನಡೆದ ನಂತರ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಎನ್ ಚಂದ್ರಬಾಬು ನಾಯ್ಡು ತಾವು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿ ಒಂದೂ ಹೇಳೆಕ ನೀಡಿಲ್ಲ. ಬದಲಾಗಿ ಇವಿಎಂ, ವಿವಿಪ್ಯಾಟ್ ದೋಷದ ಬಗ್ಗೆ ನಿರಂತರವಾಗಿ ದೂರು ನೀಡುತ್ತಿದ್ದಾರೆ. ಸಮೀಕ್ಷೆಗಳೂ ನಾಯ್ಡು ಅವರು ಸೋಲುವ ಸೂಚನೆಯನ್ನು ನೀಡಿರುವುದರಿಂದ ಮಹಾಘಟಬಂಧನದ ಮುಂದಾಳತ್ವ ವಹಿಸಿದ್ದ ನಾಯ್ಡು ತಣ್ಣಗಾಗಿದ್ದಾರೆ. ನಾಯ್ಡು ತಣ್ಣಗಾಗಿರುವುದು ಕೆಸಿಆರ್ ಅವರ ಸಂಯುಕ್ತ ರಂಗದ ಆಸೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

1996 ರ ಸನ್ನಿವೇಶ ಮರುಸೃಷ್ಟಿ?
1996 ರಲ್ಲಿ ಕಾಂಗ್ರೆಸ್-ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ಸೃಷ್ಟಿಯಾಗಿ ಎಚ್ ಡಿ ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿಯಾದ ಹಾಗೆಯೇ ಈ ಬಾರಿಯೂ ಆದರೆ, ತಾವೂ ಪ್ರಧಾನಿಯಾಗುವ ಪ್ರಬಲ ಆಕಾಂಕ್ಷಿ ಎಂಬ ಸೂಚನೆಯನ್ನು ಕೆಸಿಆರ್ ಈ ಮೂಲಕ ತಿಳಿಸಿದ್ದಾರೆ. ಇದರಿಂದ ಟಿಆರ್ ಎಸ್ ಬೆಂಬಲ ಪಕ್ಕಾ ಎಂದುಕೊಂದಿದ್ದ ಬಿಜೆಪಿಗೂ ಕೊಂಚ ಆಘಾತವಾಗಿದೆ. ಎಲ್ಲಕ್ಕೂ ಮೇ 23 ರಂದು ಉತ್ತರ ದೊರಕಲಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications