ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Punyakoti Dattu Yojana : ಕರ್ನಾಟಕದಲ್ಲಿ ಗೋಶಾಲೆಗಳಿಂದ ಹಸುವನ್ನು ದತ್ತು ಪಡೆಯುವುದು ಹೇಗೆ?

|
Google Oneindia Kannada News

ಭಾರತದಲ್ಲಿ ಗೋಶಾಲೆಗಳು ವಿಭಿನ್ನ ಸಂಸ್ಕೃತಿಯ ಸಂಕೇತವಾಗಿವೆ. ಆದರೆ ಅಕ್ರಮವಾಗಿ ಜಾನುವಾರುಗಳ ಹತ್ಯೆ ಮತ್ತು ಆರ್ಥಿಕ ಸಮಸ್ಯೆಯಿಂದ ಹಸು ಸಾಕಾಣಿಕೆಯಿಂದ ರೈತರು ವಿಮುಖವಾಗುತ್ತಿದ್ದು, ದೇಶೀಯ ತಳಿಗಳು ಕಣ್ಮರೆಯಾಗುತ್ತಿವೆ. ಇದನ್ನು ಅರಿತುಕೊಂಡಿರುವ ಕರ್ನಾಟಕ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆಯನ್ನು ಪರಿಚಯಿಸುವುದಕ್ಕೆ ಮುಂದಾಗಿದೆ.

ಕರ್ನಾಟಕದಲ್ಲಿ "ಪುಣ್ಯಕೋಟಿ ದತ್ತು ಯೋಜನೆ" ಮೂಲಕ ನಮ್ಮ ಗೋ-ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸರ್ಕಾರದ ಈ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಗೋವುಗಳನ್ನು ನೋಡಿಕೊಳ್ಳಲು ಮತ್ತು ಗೋಶಾಲೆಗಳನ್ನು ನಿರ್ವಹಿಸುವುದಕ್ಕೆ ಸರ್ಕಾರದೊಂದಿಗೆ ಜನರೂ ಸಹ ಕೈಜೋಡಿಸಲು ಅವಕಾಶ ತೆರೆದುಕೊಳ್ಳುತ್ತದೆ.

ರಾಜ್ಯದಲ್ಲಿ ಜುಲೈ 28ರಿಂದಲೇ ಜಾರಿಗೆ ಬರಲಿರುವ ಕರ್ನಾಟಕ ಸರ್ಕಾರವು ಪುಣ್ಯಕೋಟಿ ದತ್ತು ಯೋಜನೆ ಎಂದರೇನು? ಈ ಯೋಜನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಪುಣ್ಯಕೋಟಿ ದತ್ತು ಯೋಜನೆ ಅಡಿಯಲ್ಲಿ ಹಸುವನ್ನು ದತ್ತು ಪಡೆಯುವುದು ಹೇಗೆ? ಕರ್ನಾಟಕ ಹಸು ದತ್ತು ಯೋಜನೆಗೆ ಏನೆಲ್ಲಾ ಅರ್ಹತೆಗಳಿಬೇಕು? ಹಸುವಿನ ದತ್ತು ಮೊತ್ತ ಎಷ್ಟು ಎಂಬುದರ ಜೊತೆಗೆ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕಾಸು ಸಂಪಾದಿಸುವ ಕನಸಿದೆಯೇ?: ಕರ್ನಾಟಕದಲ್ಲಿ ನಿಮಗಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಕಾಸು ಸಂಪಾದಿಸುವ ಕನಸಿದೆಯೇ?: ಕರ್ನಾಟಕದಲ್ಲಿ ನಿಮಗಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ

ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆ ಬಗ್ಗೆ ತಿಳಿಯಿರಿ

ಕರ್ನಾಟಕ ಪುಣ್ಯಕೋಟಿ ದತ್ತು ಯೋಜನೆ ಬಗ್ಗೆ ತಿಳಿಯಿರಿ

* ಪುಣ್ಯಕೋಟಿ ದತ್ತು ಯೋಜನೆ ಎಂಬ ಗೋವಿನ ಕಾರ್ಯಕ್ರಮಕ್ಕೆ ಜುಲೈ 28ರಂದು ಕರ್ನಾಟಕದ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಚಾಲನೆ ನೀಡಲಿದ್ದಾರೆ

* ಈ ಕಾರ್ಯಕ್ರಮ ಅಡಿಯಲ್ಲಿ ಗೋಶಾಲೆಗಳಲ್ಲಿನ ಹಸುಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ದತ್ತು ಪಡೆದುಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ಗೋಶಾಲೆಗಳಲ್ಲಿರುವ ಹಸುಗಳಿಗೆ ಉತ್ತಮ ಸೌಕರ್ಯ ಮತ್ತು ಸೌಲಭ್ಯ ಒದಗಿಸುವಂತೆ ಸಾರ್ವಜನಿಕರನ್ನು ಉತ್ತೇಜಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

* ಕರ್ನಾಟಕದಲ್ಲಿ ಸರ್ಕಾರವೇ ನಿರ್ಮಿಸಿದ ಸುಮಾರು 215 ಗೋಶಾಲೆಗಳಿದ್ದು, ಗೋವುಗಳ ಆರೈಕೆಯೇ ಅವುಗಳ ಮುಖ್ಯ ಧ್ಯೇಯವಾಗಿದೆ.

* ಈ ಕಾರ್ಯಕ್ರಮವು ಹಸುಗಳ ಸಂತಾನೋತ್ಪತ್ತಿಗೆ ಮಾತ್ರವಲ್ಲದೆ ಹಿಂಡಿನ ಸಂರಕ್ಷಣೆಗೆ ಸಹಾಯವಾಗುತ್ತದೆ.

* ಪಶುಸಂಗೋಪನೆಯಲ್ಲಿ ತೊಡಗಿರುವ ಹಲವಾರು ಖಾಸಗಿ ಸಂಸ್ಥೆಗಳು ವಿವಿಧ ಕಾರಣಗಳಿಂದ ತಮ್ಮ ಹಸುಗಳನ್ನು ಬಿಡುತ್ತವೆ. ಆದ್ದರಿಂದ, ಗೋವುಗಳನ್ನು ರಕ್ಷಿಸಲು ಮತ್ತು ಪೋಷಿಸಲು ರಾಜ್ಯ ಸರ್ಕಾರವೇ ಗೋವಿನ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಿದೆ.

* ಸರ್ಕಾರಿ ಗೋಶಾಲೆಗಳ ಅಡಿಯಲ್ಲಿ ನಿರ್ಗತಿಕ ಹಸುಗಳು, ಪರಿತ್ಯಕ್ತ ಹಸುಗಳು, ಗಂಡು ಕರುಗಳು, ವೃದ್ಧ ಮತ್ತು ಅನಾರೋಗ್ಯಕ್ಕೆ ತುತ್ತಾಗಿರುವ ಹಸುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತದೆ. ಈ ಉದ್ದೇಶದಿಂದಲೇ ರಾಜ್ಯ ಸರ್ಕಾರ ಗೋಶಾಲೆಗಳ ಅಡಿಯಲ್ಲಿ ಅವುಗಳನ್ನು ದತ್ತು ಪಡೆದು ಆರೈಕೆ ಮಾಡುತ್ತದೆ.

* ಒಂದು ಹಸುವನ್ನು ದತ್ತು ಪಡೆದುಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯು ವಾರ್ಷಿಕ 11 ಸಾವಿರ ರೂಪಾತಿ ಪಾವತಿಸಬೇಕಾಗುತ್ತದೆ. 3 ರಿಂದ 5 ವರ್ಷಗಳ ಅವಧಿಗೆ ಹಸು ದತ್ತು ಪಡೆದುಕೊಳ್ಳುವುದಕ್ಕೆ ಈ ಯೋಜನೆಯಡಿ ಅವಕಾಶವಿದೆ.

* ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಯಾವುದೇ ವ್ಯಕ್ತಿಯು ಗೋಶಾಲೆಯಿಂದ ಹಸುವನ್ನು ದತ್ತು ಪಡೆಯಬಹುದು. ಇದರ ಜೊತೆಗೆ ಗೋವುಗಳನ್ನು ಪೋಷಿಸಬಹುದು ಮತ್ತು ಗೋಶಾಲೆಗಳಿಗೆ ಹಣ ದಾನ ಮಾಡಬಹುದು.

ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ಉದ್ದೇಶವೇನು?

ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆ ಉದ್ದೇಶವೇನು?

ಗೋಶಾಲೆಗಾಗಿ ಜಾನುವಾರುಗಳನ್ನು ದತ್ತು ಪಡೆಯಲು ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವುದು ಪುಣ್ಯಕೋಟಿ ದತ್ತು ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಹಾಗೆ ಮಾಡುವುದರಿಂದ ಈ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಅನೇಕ ಹಸುಗಳನ್ನು ಉಳಿಸಿದಂತೆ ಆಗುತ್ತದೆ.

ಪುಣ್ಯಕೋಟಿ ಯೋಜನೆಯಡಿ ಹಸುಗಳನ್ನು ದತ್ತು ಪಡೆಯುವುದು

ಪುಣ್ಯಕೋಟಿ ಯೋಜನೆಯಡಿ ಹಸುಗಳನ್ನು ದತ್ತು ಪಡೆಯುವುದು

* ದತ್ತು ಪಡೆದ ಹಸುಗಳನ್ನು ಪೋಷಣೆ ಮಾಡುವುದು

* ಹಸುಗಳಿಗೆ ಮೇವು ಒದಗಿಸುವುದು

* ನಿಯಮಿತ ತಪಾಸಣೆ ಮತ್ತು ಔಷಧಿಗಳನ್ನು ನೀಡುವುದು

* ಒಂದು ಹಸುವಿನ ಪೋಷಣೆಗೆ ಒಂದು ವರ್ಷದ ಅವಧಿಗೆ 11 ಸಾವಿರ ರೂಪಾಯಿ ನೀಡುವುದು

* ಮೂರು ತಿಂಗಳು, ಆರು ತಿಂಗಳು, ಒಂಬತ್ತು ತಿಂಗಳು ಅಥವಾ ಒಂದು ವರ್ಷದಿಂದ ಐದು ವರ್ಷಗಳವರೆಗೆ ನೀವು ದತ್ತು ಪಡೆಯುವ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ

ಪುಣ್ಯಕೋಟಿ ದತ್ತು ಯೋಜನೆ ಲಾಭವೇನು?

ಪುಣ್ಯಕೋಟಿ ದತ್ತು ಯೋಜನೆ ಲಾಭವೇನು?

* ಈ ಕಾರ್ಯಕ್ರಮದ ಅಡಿಯಲ್ಲಿ ಸಾಮಾನ್ಯ ಜನರು ಸಹ ಗೋಶಾಲೆಗಳನ್ನು ಸಂರಕ್ಷಿಸಲು ಸರ್ಕಾರದಿಂದ ಪ್ರೋತ್ಸಾಹ ನೀಡುತ್ತದೆ. ಆ ಮೂಲಕ ಗೋಶಾಲೆಗಳಿಗೆ ಮೂಲಭೂತ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸಲಾಗುವುದು

* ರಾಜ್ಯದ ಯಾವುದೇ ಸ್ಥಳದ ನಿವಾಸಿ ಆಗಿದ್ದರೂ, ಪುಣ್ಯಕೋಟಿ ದತ್ತು ಪೋರ್ಟಲ್‌ನಲ್ಲಿ ಇರುವ ಗೋಶಾಲೆಯಿಂದ ಪ್ರತಿ ಪ್ರಾಣಿಗೆ 11 ಸಾವಿರ ರೂಪಾಯಿಗಳನ್ನು ಪಾವತಿಸುವ ಮೂಲಕ ಜಾನುವಾರುಗಳನ್ನು ದತ್ತು ಪಡೆಯಬಹುದು

* ಪುಣ್ಯಕೋಟಿ ದತ್ತು ಪೋರ್ಟಲ್ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ಯಾವುದೇ ಗೋಮೂತ್ರಕ್ಕಾಗಿ ಸುಮಾರು 10 ರೂಪಾಯಿಗಳ ಕೊಡುಗೆ ನೀಡಬಹುದು.

* ಆನ್‌ಲೈನ್ ಪೋರ್ಟಲ್ ಮೂಲತಃ ಮೂರು ಪ್ರಯೋಜನಗಳನ್ನು ಹೊಂದಿದೆ. ಅದರಲ್ಲಿ ಹಸುವನ್ನು ದತ್ತು ಪಡೆಯುವುದು, ಹಸುವಿಗೆ ಆಹಾರ ನೀಡುವುದು ಮತ್ತು ಗೋಶಾಲೆಗಳಿಗೆ ತಮ್ಮ ಹಸುವನ್ನು ದಾನ ಮಾಡುವುದಕ್ಕೆ ಸಹಕಾರಿಯಾಗಿದೆ.

ಪುಣ್ಯಕೋಟಿ ದತ್ತು ಯೋಜನೆಗೆ ಯಾವೆಲ್ಲ ದಾಖಲೆಗಳು ಅಗತ್ಯ?

ಪುಣ್ಯಕೋಟಿ ದತ್ತು ಯೋಜನೆಗೆ ಯಾವೆಲ್ಲ ದಾಖಲೆಗಳು ಅಗತ್ಯ?

* ಗುರುತಿನ ಚೀಟಿ(ಐಡಿ ಕಾರ್ಡ್)

* ಆಧಾರ್ ಕಾರ್ಡ್

* ವಿಳಾಸದ ಪುರಾವೆಯುಳ್ಳ ದಾಖಲೆ (ಅಡ್ರೆಸ್ ಪ್ರೂಫ್)

* ಮೊಬೈಲ್ ಸಂಖ್ಯೆ

ಗೋವುಗಳನ್ನು ದತ್ತು ಪಡೆಯುವ ವಿಧಾನ ಹೇಗೆ?

ಗೋವುಗಳನ್ನು ದತ್ತು ಪಡೆಯುವ ವಿಧಾನ ಹೇಗೆ?

* ಹಸು ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಆಸಕ್ತಿ ಹೊಂದಿರುವವರು ಮೊದಲು ಪುಣ್ಯಕೋಟಿ ದತ್ತು ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು

* ಈ ವೆಬ್‌ಸೈಟ್‌ನ ಮುಖಪುಟದಲ್ಲಿ ಹಸುವನ್ನು ದತ್ತು ತೆಗೆದುಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು

* ಹಸು ದತ್ತು ತೆಗೆದುಕೊಳ್ಳುವ ಆಯ್ಕೆ ಕ್ಲಿಕ್ ಮಾಡುತ್ತಿದ್ದಂತೆ ಹೊಸ ಪುಟ ತೆರೆದುಕೊಳ್ಳುತ್ತದೆ

* ಈ ವೆಬ್‌ಸೈಟ್ ತೋರಿಸುವ ಅರ್ಜಿಯನ್ನು ನೀವು ಭರ್ತಿ ಮಾಡಬೇಕು

* ಆರಂಭದಲ್ಲಿ ನೀವು ದತ್ತು ಪಡೆದುಕೊಳ್ಳಲು ಬಯಸುವ ಹಸುವಿನ ಪ್ರಕಾರವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು

* ಹಸುವಿನ ಪ್ರಕಾರವನ್ನು ಆಯ್ಕೆ ಮಾಡಿದ ನಂತರ, ನೀವು ತಳಿಯನ್ನು ಆರಿಸಬೇಕು.

* ನಂತರ ಅನುಗುಣವಾದ ಪೆಟ್ಟಿಗೆಯನ್ನು ಗುರುತಿಸುವ ಮೂಲಕ ಹಸುವಿನ ವಯಸ್ಸು ಆಯ್ಕೆಮಾಡಿ

* ಹಸುವಿನ ಪ್ರಕಾರ ಅಥವಾ ಬಯಸಿದ ಹಸುವಿನ ಆಯ್ಕೆಯನ್ನು ಮಾಡಿಕೊಳ್ಳಬೇಕು

* ಹುಟ್ಟಿನಿಂದಲೂ ಪ್ರಾಣಿಯು ಗೋಶಾಲೆಯಲ್ಲಿದೆಯೇ, ಸುರಕ್ಷಿತವಾಗಿದೆಯೇ, ವಶಪಡಿಸಿಕೊಂಡಿದ್ದೇ ಅಥವಾ ರೈತನಿಂದ ತೆಗೆದುಕೊಂಡಿರುವುದೇ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು

* ದತ್ತು ವಿಭಾಗದ ಕೆಳಗಿರುವ ಚೆಕ್‌ಬಾಕ್ಸ್ ಅನ್ನು ಆಯ್ಕೆಮಾಡಿ, ಜಿಲ್ಲೆಯನ್ನು ಆಯ್ಕೆ ಮಾಡಿದ ನಂತರ, ನೀವು ಹುಡುಕಾಟ(Search) ಬಟನ್ ಅನ್ನು ಕ್ಲಿಕ್ ಮಾಡಬಹುದು

* ಆಗ ನಿಮಗೆ ಹಸುಗಳ ಪಟ್ಟಿಯನ್ನು ನೀಡಲಾಗುವುದು, ಚಿತ್ರದ ಕೆಳಗಿರುವ ದತ್ತು ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು

* ಛಾಯಾಚಿತ್ರವನ್ನು ಆಯ್ಕೆ ಮಾಡಿದ ನಂತರ, ವೆಬ್‌ಸೈಟ್ ಹಸುವಿನ ತಳಿ, ಲಿಂಗ, ವಯಸ್ಸು, ಹುಟ್ಟಿದ ದಿನಾಂಕ ಮತ್ತು ಪ್ರವೇಶದ ಪ್ರಕಾರ ಮತ್ತು ಗೋಶಾಲೆಯ ಹೆಸರು ಒಳಗೊಂಡಂತೆ ಮಾಹಿತಿಯನ್ನು ತೋರಿಸುತ್ತದೆ

* ನೀವು ಮೂರು ತಿಂಗಳ ಅವಧಿಗೆ, ಆರು ತಿಂಗಳ ಒಂಬತ್ತು ತಿಂಗಳು ಅಥವಾ ಒಂದರಿಂದ ಐದು ವರ್ಷಗಳವರೆಗೆ ಹಸುವನ್ನು ದತ್ತು ತೆಗೆದುಕೊಳ್ಳುವ ಆಯ್ಕೆಯನ್ನು ಮಾಡಿಕೊಳ್ಳಬಹುದು

* ವರ್ಷಗಳಲ್ಲಿ ಒಂದನ್ನು ಆಯ್ಕೆ ಮಾಡುವುದರಿಂದ ಕೆಳಗಿನ ಬಾಕ್ಸ್‌ನಲ್ಲಿ ದತ್ತು ಮೊತ್ತವನ್ನು ನೀಡಲಾಗುತ್ತದೆ

* ನಂತರದಲ್ಲಿ ನಿಮ್ಮ ಮೊಬೈಲ್ ಫೋನ್ ಸಂಖ್ಯೆ, ಸಂಪೂರ್ಣ ಹೆಸರು ಮತ್ತು ಇ-ಮೇಲ್ ವಿಳಾಸದಂತಹ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಬೇಕು

* ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಬೇಕು

* ನೀವು ಹಸುವನ್ನು ಇಷ್ಟಪಟ್ಟರೆ, ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ಮುಂದುವರೆಯಿರಿ ಬಟನ್ ಅನ್ನು ಕ್ಲಿಕ್ ಮಾಡಿ

* ಪಾವತಿ ಬಟನ್ ಅನ್ನು ಆಯ್ಕೆ ಮಾಡಿದ ನಂತರ, ನಿಮ್ಮ ಎದುರು ಹೊಸ ಪುಟ ತೆರೆದುಕೊಳ್ಳುವುದು, ಅಲ್ಲಿ ನಿಮಗೆ ವಿವಿಧ ಪಾವತಿ ಆಯ್ಕೆ ನೀಡಲಾಗುತ್ತದೆ

* ಈ ಪಾವತಿ ಮಾಡಿದ ನಂತರ, ನೀವು PDF ಅಥವಾ ಪ್ರಿಂಟ್ ಆಗಿ ಉಳಿಸಬಹುದಾದ ರಸೀದಿಯನ್ನು ಸ್ವೀಕರಿಸುತ್ತೀರಿ

* ನೀವು ಹಸು ವಾಸಿಸುವ ಗೋಶಾಲೆಗೆ ಭೇಟಿ ನೀಡಬೇಕು ಮತ್ತು ಅಲ್ಲಿ ನೀವು ಗೋಶಾಲೆ ಅಥವಾ ಪ್ರಾಧಿಕಾರಕ್ಕೆ ರಸೀದಿಯನ್ನು ತೋರಿಸಬೇಕು

* ಗೋಶಾಲೆಯಲ್ಲಿ ರಶೀದಿ ತೋರಿಸಿದ ನಂತರದಲ್ಲಿ ಅವರು ನಿಮಗೆ ಹಸುವನ್ನು ನೀಡುತ್ತಾರೆ

English summary
Karnataka Government is going to launch a scheme called Punyakoti Dattu Yojana on July 28, 2022. Read on to know Cow Adoption Scheme overview, objectives, benefits, documents required, adoption amount and other details in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X