ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಂಗಲ್ ಹನುಮಂತಯ್ಯ ಸಂಪುಟ ಸಚಿವರ ಶೈಕ್ಷಣಿಕ ಅರ್ಹತೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 15: ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಬಹದೂರ್ ಅವರು 'ರಾಜಪ್ರಮುಖ'ರಾಗಿದ್ದ ಕಾಲದಲ್ಲಿ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು.

ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

1957 ರಿಂದ 1963ರ ತನಕ ಮಹಾರಾಜರು ರಾಜ್ಯಪಾಲರಾಗಿದ್ದರು. ರಾಜಪ್ರಮುಖ ಹಾಗೂ ರಾಜ್ಯಪಾಲ ಹುದ್ದೆಯನ್ನು ಅಲಂಕರಿಸಿದ್ದು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರೊಬ್ಬರೆ.

Karnataka Kengal Hanumanthaiah Cabinet Ministers Qualification

1952ರ ಮಾರ್ಚ್ 30 ರಿಂದ 1956ರ ಆಗಸ್ಟ್ 19ರ ತನಕ ಕೆ ಹನುಮಂತಯ್ಯ ಅವರು ಮುಖ್ಯಮಂತ್ರಿಗಳಾಗಿದ್ದರು. ವಿಧಾನಸೌಧ ನಿರ್ಮಾತೃ ಹನುಮಂತಯ್ಯ ಅವರ ಸಂಪುಟದಲ್ಲಿ ಎ.ಜಿ ರಾಮಚಂದ್ರರಾಯರು, ಟಿ ಚನ್ನಯ್ಯ ಕಡಿದಾಳ್ ಮಂಜಪ್ಪ, ಸಿದ್ದವೀರಪ್ಪ, ಆರ್ ನಾಗನಗೌಡರು, ಎಚ್ಎ ಚನ್ನಬಸಪ್ಪನವರು ಇದ್ದರು. ಸಚಿವ ಸಂಪುಟ ಸದಸ್ಯರ ವಿದ್ಯಾರ್ಹತೆ ಇರುವ ಚಿತ್ರವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್-ಮೈತ್ರಿ ಸರ್ಕಾರ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ ಕಾಂಗ್ರೆಸ್-ಮೈತ್ರಿ ಸರ್ಕಾರ ಸಚಿವರ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

ಈಗ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೆ ಶಿಕ್ಷಣ ಸಚಿವ ಖಾತೆ ಸಿಕ್ಕಿರುವ ಬಗ್ಗೆ ಭಾರಿ ಚರ್ಚೆ ನಡೆದಿದೆ. ಇಂದಿನ ಸಚಿವರುಗಳಿಗೆ ಹೋಲಿಸಿದರೆ ಅಂದಿನ ಸಚಿವ ಸಂಪುಟದಲ್ಲಿ ಉನ್ನತ ವ್ಯಾಸಂಗ ಮಾಡಿದವರೇ ಇದ್ದರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

Karnataka Kengal Hanumanthaiah Cabinet Ministers Qualification

ರಾಜಕೀಯದಲ್ಲಿ ವಿದ್ಯಾರ್ಹತೆ ಜತೆಗೆ ಅನುಭವವೂ ಲೆಕ್ಕಕ್ಕೆ ಬರುವುದರಿಂದ ಕಡಿಮೆ ಓದಿದ ಶಾಸಕರು ಕೂಡಾ ಕ್ಯಾಬಿನೆಟ್ ದರ್ಜೆ ಸ್ಥಾನ ಮಾನ ಪಡೆದು ಉನ್ನತ ಖಾತೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಉದಾಹರಣೆಗಳಿವೆ.

ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?ನಮ್ಮನ್ನಾಳುವ ಮಂತ್ರಿಗಳಲ್ಲಿ ಪಿಯುಸಿ ಪಾಸಾದವರು ಎಷ್ಟು ಜನ?

ಕೆಂಗಲ್ ಹನುಮಂತಯ್ಯ ಸಚಿವ ಸಂಪುಟ ಸದಸ್ಯರು-ವಿದ್ಯಾರ್ಹತೆ ಹಾಗೂ ಖಾತೆ
* ಕೆ ಹನುಮಂತಯ್ಯ, ಬಿ.ಎ., ಎಲ್ ಎಲ್ ಬಿ, ಮುಖ್ಯಮಂತ್ರಿ
* ಎ.ಜಿ ರಾಮಚಂದ್ರರಾಯರು, ಬಿ.ಎ., ಎಲ್.ಎಲ್ ಬಿ, ನ್ಯಾಯಾಂಗ ಮತ್ತು ವಿದ್ಯಾಭ್ಯಾಸ ಶಾಖೆಗಳ ಮಂತ್ರಿಗಳು
* ಟಿ. ಚನ್ನಯ್ಯನವರು, ಬಿ.ಎಸ್ ಸಿ.,- ಸ್ಥಳೀಯ ಪ್ರಜಾಧಿಕಾರ ಮತ್ತು ಜನಾರೋಗ್ಯ ರಕ್ಷಣೆ ಶಾಖೆಗಳ ಮಂತ್ರಿಗಳು
* ಕಡಿದಾಳ್ ಮಂಜಪ್ಪನವರು, ಬಿ.ಎ., ಎಲ್ ಎಲ್ ಬಿ., -ರೆವಿನ್ಯೂ ಮತ್ತು ಮರಾಮತ್ ಶಾಖೆಗಳ ಮಂತ್ರಿಗಳು.
* ಎಚ್ ಸಿದ್ದವೀರಪ್ಪನವರು, ಬಿ.ಎ., ಎಲ್ ಎಲ್ ಬಿ., -ಒಳಾಡಳಿತ ಮತ್ತು ವಾರ್ತಾ ಶಾಖೆಗಳ ಮಂತ್ರಿಗಳು.
* ಡಾ. ಆರ್ ನಾಗನಗೌಡರು, ಎಂ.ಎಸ್ ಸಿ., ಪಿಎಚ್. ಡಿ (ಅಮೆರಿಕ), ವ್ಯವಸಾಯ ಶಾಖೆಯ ಮಂತ್ರಿಗಳು
* ಎಚ್. ಎಂ ಚನ್ನಬಸಪ್ಪನವರು, ಬಿ.ಎಸ್ .ಸಿ., ಕೈಗಾರಿಕಾ ಶಾಖೆ ಮಂತ್ರಿಗಳು

English summary
Maharaja Jayachamarajendra Wadiyar was the first and onlu Rajpramukh Mysore state and also was first governor of the Mysore (Kanataka) State. Kengal was the Second Chief Minister of Karnataka (the then Mysore) State. Here is look at Kengal Hanumanthaiah's Cabinet Ministers Qualification
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X