ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶ ಗಳಿಸಿದ ಗ್ರಾಮಒನ್‌: ಒಂದು ಕೋಟಿ ಗಡಿ ದಾಟಿದ ಫಲಾನುಭವಿಗಳ ಸಂಖ್ಯೆ

|
Google Oneindia Kannada News

ಕರ್ನಾಟಕದ ಗ್ರಾಮೀಣ ಭಾಗದ ಜನತೆಗೆ ಒಂದೇ ಸೂರಿನಡಿ ವಿವಿಧ ಯೋಜನೆ, ನಾಗರೀಕ ಸೇವೆಗಳನ್ನು ಒದಗಿಸಲು ಸರ್ಕಾರ ಆರಂಭಿಸಿದ ಗ್ರಾಮ ಒನ್ ಯೋಜನೆ ಯಶಸ್ಸು ಕಂಡಿದೆ. ಮನೆ ಬಾಗಿಲಿಗೆ ನಾಗರಿಕ ಸೇವೆಗಳನ್ನು ತಲುಪಿಸುತ್ತಿರುವ ಕರ್ನಾಟಕ ಸರ್ಕಾರದ ಪ್ರಮುಖ ಕಾರ್ಯಕ್ರಮ ಗ್ರಾಮಒನ್‌ನ ಫಲಾನುಭವಿಗಳ ಸಂಖ್ಯೆ ಒಂದು ಕೋಟಿಯ ಗಡಿಯನ್ನು ದಾಟಿದೆ.

ಜನವರಿ ತಿಂಗಳಿನಲ್ಲಿ ಸುಮಾರು 12 ಜಿಲ್ಲೆಗಳ 3,026 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್‌ ಭಾಷಣದಲ್ಲೂ ಗ್ರಾಮ ಒನ್ ಯೋಜನೆ ಮಹತ್ವ ಹಾಗೂ ಅಗತ್ಯದ ಬಗ್ಗೆ ಪ್ರಸ್ತಾಪಿಸಿ, ಈ ಯೋಜನೆಯನ್ನು ರಾಜ್ಯ ವ್ಯಾಪಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು. ಸರಿಯಾಗಿ ಜನವರಿ 17, 2022ರಲ್ಲಿ ಆರಂಭಿಸಲಾಗಿದ್ದು, ವರ್ಷದೊಳಗೆ ಉತ್ತಮ ಸಾಧನೆ ತೋರಿದೆ.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ 'ಗ್ರಾಮ ಒನ್' ಸೌಲಭ್ಯ ವಿಸ್ತರಣೆರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ 'ಗ್ರಾಮ ಒನ್' ಸೌಲಭ್ಯ ವಿಸ್ತರಣೆ

ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಯ ಜನತೆಗೂ ಸೇವೆ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತರು ಅರ್ಜಿಯನ್ನು ವೆಬ್‌ಸೈಟ್: ಅಥವಾ sevasindhu.karnataka.gov.in ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಈ ಯೋಜನೆ ಸಾಧನೆ ಬಗ್ಗೆ ಕರ್ನಾಟಕ ಸರ್ಕಾರದ ವಿದ್ಯುನ್ಮಾನ ಆಡಳಿತ ಇಲಾಖೆಯ ಕಾರ್ಯದರ್ಶಿ ವಿ. ಪೊನ್ನುರಾಜ್, ಗ್ರಾಮಒನ್‌ನ ಯೋಜನಾ ನಿರ್ದೇಶಕರಾದ ವರಪ್ರಸಾದರೆಡ್ಡಿ ಪ್ರತಿಕ್ರಿಯೆ ಮುಂದಿದೆ..

ಇಲಾಖೆಯ ಕಾರ್ಯದರ್ಶಿ ವಿ. ಪೊನ್ನುರಾಜ್

ಇಲಾಖೆಯ ಕಾರ್ಯದರ್ಶಿ ವಿ. ಪೊನ್ನುರಾಜ್

ಕರ್ನಾಟಕ ಸರ್ಕಾರದ ವಿದ್ಯುನ್ಮಾನ ಆಡಳಿತ ಇಲಾಖೆಯ ಕಾರ್ಯದರ್ಶಿ ವಿ. ಪೊನ್ನುರಾಜ್ ಅವರು ಒಂದು ಕೋಟಿ ಸೇವಾ ಸಾಧನೆ ಕುರಿತು ಮಾತನಾಡಿ, ''ಸರ್ಕಾರವನ್ನು ಜನರ ಮನೆಬಾಗಿಲಿಗೆ ಹತ್ತಿರವಾಗಿಸುವುದು ಗ್ರಾಮಒನ್ ಕಾರ್ಯಕ್ರಮದ ಉದ್ದೇಶವಾಗಿದೆ. ಇದಲ್ಲದೆ, ಬಹಳಷ್ಟು ಸಮಯದಲ್ಲಿ ಈ ನಾಗರಿಕರ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುವುದು ಅಸಾಧ್ಯವಾಗುತ್ತದೆ. ಆದ್ದರಿಂದ ಈ ಬಾರಿ ನಾವು ಸರಿಯಾದ ಸೇವೆಗಳ ಮಿಶ್ರಣವನ್ನು ಪೂರೈಸುವುದರೊಂದಿಗೆ ಜೊತೆಯಲ್ಲಿಯೇ ಸೇವೆಯ ಮೇಲೆ ಗಮನ ಕೇಂದ್ರೀಕರಿಸುವುದರೊಂದಿಗೆ ಇದು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವಂತೆ ಮಾಡಿದ್ದೇವೆ'' ಎಂದಿದ್ದಾರೆ

''ಗ್ರಾಮೀಣ ಜನರು ನಗರಗಳ ಜನರಷ್ಟು ಡಿಜಿಟಲ್ ಕಾರ್ಯಕ್ಕೆ ಸಂಬಂಧಿಸಿದಂತೆ ಸಜ್ಜಾಗುವವರೆಗೆ ಈ ಕಾರ್ಯಕ್ರಮ ಭವಿಷ್ಯದಲ್ಲಿ ಉಳಿಯುವುದನ್ನು ನಾನು ಮುನ್ಸೂಚನೆಯಾಗಿ ಹೇಳುತ್ತಿದ್ದೇನೆ. ಡಿಜಿಟಲ್ ವ್ಯವಸ್ಥೆಗಳನ್ನು ನಿಭಾಯಿಸುವಲ್ಲಿ ಗ್ರಾಮೀಣ ಜನರು ನಗರದವರಷ್ಟೇ ಸಮರ್ಥರಾದ ನಂತರ ಈ ವ್ಯವಸ್ಥೆಯ ಪ್ರಾಮುಖ್ಯತೆ ಬಹುಶಃ ಕಡಿಮೆಯಾಗಬಹುದು. ಆದರೂ, ಅದು ಸಾಗಬೇಕಾದ ದಾರಿ ದೂರವಿದೆ. ಅಲ್ಲಿಯವರೆಗೆ ಅದು ಸೇವಾ ವಿತರಣೆ ಅಥವಾ ಆಡಳಿತ ವ್ಯವಸ್ಥೆಯಾಗಿರಲಿ, ಈ ಕೇಂದ್ರ ಸರ್ವ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಮಳಿಗೆಯಾಗಬೇಕು. ನಾಗರಿಕರ ಸಂತಸವನ್ನು ಅದು ಸುಧಾರಿಸಲು ಸಾಧ್ಯವಾಗಬೇಕು'' ಎಂದರು.

ವರಪ್ರಸಾದರೆಡ್ಡಿ ಬಿ.ಎನ್. ಅವರು ಮಾತನಾಡಿ

ವರಪ್ರಸಾದರೆಡ್ಡಿ ಬಿ.ಎನ್. ಅವರು ಮಾತನಾಡಿ

ಗ್ರಾಮಒನ್‌ನ ಯೋಜನಾ ನಿರ್ದೇಶಕರಾದ ವರಪ್ರಸಾದರೆಡ್ಡಿ ಬಿ.ಎನ್. ಅವರು ಮಾತನಾಡಿ, ಗ್ರಾಮೀಣ ಜನತೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆದುಕೊಳ್ಳಬೇಕೆಂಬುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರಲ್ಲದೇ ''ಗ್ರಾಮ ಮಟ್ಟದಲ್ಲಿ ಎಲ್ಲ ನಾಗರಿಕ ಕೇಂದ್ರೀಕೃತ ಚಟುವಟಿಕೆಗಳಿಗೆ ಏಕಗವಾಕ್ಷ ನೆರವು ಕೇಂದ್ರವಾಗಿ ಕಲ್ಪಿಸಿಕೊಳ್ಳಲಾಗಿತ್ತು. ಒಂದು ಕೋಟಿ ಜನರು ಇದರ ಲಾಭ ಪಡೆಯುವುದರೊಂದಿಗೆ, ಯೋಜನೆ ರಾಜ್ಯ ಎಲ್ಲ 31 ಜಿಲ್ಲೆಗಳಲ್ಲಿ ಅಪಾರ ಯಶಸ್ಸು ಕಂಡಿದೆ" ಎಂದು ಹೇಳಿದರು.

"ವಾಸ್ತವವಾಗಿ ನಮ್ಮ ದೇಶದ ಪ್ರತಿ ನಾಗರಿಕರು ಸಬಲರಾಗಬೇಕೆಂಬ ಮಹಾತ್ಮಾ ಗಾಂಧಿಯವರ ಸ್ವರಾಜ್ಯ ಅಟಲ್ ಬಿಹಾರಿ ವಾಜ್‌ಪೇಯಿ ಅವರ ಸುರಾಜ್‌ಗಳ ಕನಸನ್ನು ಗ್ರಾಮಒನ್ ನಿಜವಾಗಿಸಿದೆ. ಈ ಇಬ್ಬರು ಮಹಾನ್ ದಾರ್ಶನಿಕರು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರು ಸಬಲರಾಗಬೇಕೆಂಬ ಇಚ್ಛೆ ಹೊಂದಿದ್ದರು. ಕರ್ನಾಟಕ ಸರ್ಕಾರದ ಸೇವಾ ಸಿಂಧು ಉಪಕ್ರಮದ ಮುಂಚೂಣಿಯಲ್ಲಿ ಈ ಯೋಜನೆ ಇದೆ''ಎಂದರು.

ಈ ಸಮಾಜಕಲ್ಯಾಣ ಯೋಜನೆ ಅಲ್ಪಕಾಲದಲ್ಲಿಯೇ ಅಪಾರ ಬೆಳವಣಿಗೆ ಸಾಧಿಸಿದ್ದರೂ, "ಬಹಳಷ್ಟು ಕೆಲಸ ಮಾಡಲಾಗಿದೆ, ಆದರೆ ಇನ್ನೂ ಬಹಳ ಕೆಲಸ ಮಾಡಬೇಕಾದ ಅಗತ್ಯವಿದೆ. ಪ್ರಸ್ತುತ 7112 ಕೇಂದ್ರಗಳಿಗೆ ಹೆಚ್ಚುವರಿಯಾಗಿ ಇನ್ನೂ 1,600 ಗ್ರಾಮಒನ್ ತೆರೆಯುವ ಯೋಜನೆ ಹೊಂದಿದೆ. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಠ ಒಂದು ಗ್ರಾಮಒನ್ ಕೇಂದ್ರ ಹೊಂದಿರುವುದು ನಮ್ಮ ಗುರಿಯಾಗಿದೆ" ಎಂದು ಒತ್ತಿ ಹೇಳಿದರು.

7112 ಕೇಂದ್ರಗಳು

7112 ಕೇಂದ್ರಗಳು

ಪ್ರಸ್ತುತ ಸುಮಾರು 800 ಸೇವೆಗಳಾದ - ಜಿ2ಸಿ(ಸರ್ಕಾರದಿಂದ ನಾಗರಿಕರಿಗೆ), ಬಿ2ಸಿ(ವ್ಯವಹಾರದಿಂದ ನಾಗರಿಕರಿಗೆ), ಬ್ಯಾಂಕಿಂಗ್ ಸೇವೆಗಳು ಮತ್ತು ಆರ್‌ಟಿಐ(ಮಾಹಿತಿ ಹಕ್ಕು) ವಿಚಾರಣೆಗಳನ್ನು ಎಲ್ಲ ಜಿಲ್ಲೆಗಳ 7112 ಕೇಂದ್ರಗಳ ಮೂಲಕ ಸಾದರಪಡಿಸಲಾಗುತ್ತಿದೆ.

ಮಾಹಿತಿ ಹಕ್ಕು ಕಾಯ್ದೆ ಸೇವೆ, ಮುಖ್ಯಮಂತ್ರಿಗಳ ಪರಿಹಾರ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ಕಾರ್ಮಿಕ ಇಲಾಖೆ ಸೇವೆಗಳು, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಒಳಗೊಂಡಂತೆ ಹಲವು ಸೇವೆಗಳು ಲಭ್ಯವಿದೆ.

ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡಲು ದೂರ ದೂರಕ್ಕೆ ಪ್ರಯಾಣ ಮಾಡಬೇಕಾದ ಅಗತ್ಯವಿಲ್ಲದೇ ಹಲವಾರು ಸರ್ಕಾರಿ ಸೇವೆಗಳನ್ನು ಪಡೆಯುವುದಕ್ಕೆ ಗ್ರಾಮಸ್ಥರಿಗೆ ನೆರವಾಗುವುದು. ಅದರೊಂದಿಗೆ ಹಣ ಮತ್ತು ಸಮಯದ ಉಳಿತಾಯ ಮಾಡುವುದು, ಸರ್ಕಾರ ಈ ಕಾರ್ಯಕ್ರಮ ಆರಂಭಿಸುವುದಕ್ಕೆ ಪ್ರಾಥಮಿಕ ಕಾರಣವಾಗಿದೆ.

ದೂರದ ಸ್ಥಳಗಳಿಗೆ ಪ್ರಯಾಣ ಮಾಡುವಲ್ಲಿ ಹೆಚ್ಚಿನ ಸಮಯ ವ್ಯಯಿಸದೇ ಮೂಲ ಸೇವೆಗಳನ್ನು ಪಡೆದುಕೊಳ್ಳುವುದು ಅವರಿಗೆ ದೊಡ್ಡ ಲಾಭದಾಯಕ ವಿಷಯವಾಗಿದೆ. ಅವರ ಉತ್ಪಾದಕತೆಯನ್ನು ಹೆಚ್ಚಿಸಬಹುದಲ್ಲದೇ ಅವರನ್ನು ಮತ್ತು ಅವರು ಕುಟುಂಬಗಳನ್ನೂ ಕೂಡ ಇದು ಯಶಸ್ವಿಗೊಳಿಸಬಹುದಾಗಿದೆ. ಇದರೊಂದಿಗೆ ಸಾರಿಗೆ ವೆಚ್ಚ, ಕಾಯಾಚರಣೆ ವೆಚ್ಚಗಳಲ್ಲಿ ಉಳಿತಾಯವಾಗುತ್ತದೆ

ಉದ್ಯೋಗಾವಕಾಶಗಳು

ಉದ್ಯೋಗಾವಕಾಶಗಳು

"ವಾರದ ಎಲ್ಲಾ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಈ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯಾಚರಣೆ ನಡೆಸುವುದಲ್ಲದೇ, ಮಧ್ಯವರ್ತಿಗಳ ಹಾವಳಿಯಿಂದ ನಾಗರಿಕರನ್ನು ಮುಕ್ತಗೊಳಿಸುತ್ತವೆ. ಜೊತೆಗೆ ಗುಣಮಟ್ಟದ ಸೇವೆಯನ್ನು ಸಮಯಕ್ಕೆ ಸರಿಯಾಗಿ ವಿತರಿಸುವುದರಿಂದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಚಾಲನೆ ಲಭಿಸುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ಉದ್ಯೋಗಾವಕಾಶಗಳು: ಈ ಉಪಕ್ರಮವು ವಿವಿಧ ಸಮುದಾಯಗಳು ಮತ್ತು ಗ್ರಾಮಒನ್ ಕೇಂದ್ರಗಳನ್ನು ನಡೆಸಲು ನೆರವಾಗುವ ಫ್ರಾಂಚೈಸಿಗಳನ್ನು ಒಳಗೊಂಡಿದ್ದು, ಇದರೊಂದಿಗೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಪೂರೈಸುತ್ತದೆ. ಶಶಿ ಅವರು ಮಾತನಾಡಿ, ''ನಾಗರಿಕರಿಗೆ ಎಲ್ಲ ಸೇವೆಗಳನ್ನು ಪೂರೈಸುವಲ್ಲಿ ಚಿಗುರುತ್ತಿರುವಂತಹ ಉದ್ಯಮಶೀಲರಿಗೆ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಕಾಲಕಾಲಕ್ಕೆ ಈ ಫ್ರಾಂಚೈಸಿಗಳಿಗೆ ತರಬೇತಿ ನೀಡುವುದರಿಂದ ಅವರು ತಮ್ಮ ಕೌಶಲ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮತ್ತು ನವೀಕರಿಸಿಕೊಳ್ಳಲು ನೆರವಾಗುವುದಲ್ಲದೆ, ನಾಗರಿಕರಿಗೆ ಹೆಚ್ಚು ಉತ್ತಮವಾದ ಸೇವೆಗಳನ್ನು ಪೂರೈಸಲು ಹಾಗೂ ಅವರು ಸ್ವತಃ ಸಂಪೂರ್ಣವಾಗಿ ಆರ್ಥಿಕವಾಗಿ ಸ್ವತಂತ್ರರಾಗಲು ನೆರವಾಗುತ್ತದೆ'' ಎಂದರು.

English summary
GramaOne – the Government of Karnataka’s flagship programme delivering citizen services at villagers’ doorsteps across the State – has crossed the one-crore mark
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X