ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸು ಸಂಪಾದಿಸುವ ಕನಸಿದೆಯೇ?: ಕರ್ನಾಟಕದಲ್ಲಿ ನಿಮಗಾಗಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ

|
Google Oneindia Kannada News

ಕರ್ನಾಟಕದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2022 ಅನ್ನು ಪರಿಚಯಿಸಿದೆ. ಅಸಲಿಗೆ ಈ ಯೋಜನೆಯು ಸಾರ್ವಜನಿಕರಿಗೆ ಹೇಗೆ ಉಪಯುಕ್ತಕರ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಿದೆ.

ರಾಜ್ಯದ ಮಹಾನಗರಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿನಿತ್ಯ ಕಚೇರಿ, ಮನೆ ಎಂದು ಪ್ರಯಾಣಿಸುವ ಜನರಿಗೆ ಯೋಜನೆ ಸಹಾಯ ಸೇತುವೆಯಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳಿಗೆ ಸಂಚರಿಸುವ ಪ್ರಯಾಣದ ಸಮಯ ಮತ್ತು ಅನಾನುಕೂಲತೆಯನ್ನು ಕಡಿಮೆ ಮಾಡುತ್ತದೆ.

ರ್‍ಯಾಪಿಡೋ ಬೈಕ್ ಸವಾರರು ಮತ್ತು ಆಟೋ ಚಾಲಕರ ನಡುವೆ ಜಟಾಪಟಿರ್‍ಯಾಪಿಡೋ ಬೈಕ್ ಸವಾರರು ಮತ್ತು ಆಟೋ ಚಾಲಕರ ನಡುವೆ ಜಟಾಪಟಿ

'ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2022' ಎಂಬುದರ ಅರ್ಥವೇನು? ಈ ಯೋಜನೆಯಿಂದ ನಗರ ಪ್ರದೇಶಗಳಲ್ಲಿ ಜನರಿಗೆ ಆಗುವ ಲಾಭಗಳೇನು?, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವುದು ಹೇಗೆ? ಮತ್ತು ರಾಜ್ಯದಲ್ಲಿ ಯೋಜನೆ ಪರಿಣಾಮ ಹೇಗಿದೆ ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಬಗ್ಗೆ ತಿಳಿಯಿರಿ

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಬಗ್ಗೆ ತಿಳಿಯಿರಿ

ಕರ್ನಾಟಕದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2022ರ ಮುಖ್ಯ ಉದ್ದೇಶ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಾಗಿದೆ. ವಿಶೇಷವಾಗಿ ಬೆಂಗಳೂರಿನಂತಹ ನಗರದಲ್ಲಿ ಜನರು ತಮ್ಮ ಮನೆಗಳಿಂದ ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಮೆಟ್ರೋ ಸೇವೆಗಳಿಗೆ ಪ್ರಯಾಣಿಸುವ ಪ್ರಯಾಣದ ಸಮಯ ಮತ್ತು ಅನಾನುಕೂಲತೆಯನ್ನು ಕಡಿಮೆ ಮಾಡಬೇಕಾಗಿದೆ. 'ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2022'ಯು ಸಾರ್ವಜನಿಕ ಸಾರಿಗೆ ಮತ್ತು ದೈನಂದಿನ ಪ್ರಯಾಣಿಕರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ.

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಿಂದ ಏನು ಲಾಭ?

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಿಂದ ಏನು ಲಾಭ?

ಹೊಸ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ, ಇಂಧನ ಸಂರಕ್ಷಣೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದಕ್ಕೆ ಸಹಕಾರಿ ಆಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗೆ ಸಂಬಂಧಿಸಿದ ಕೈಗಾರಿಕೆಗಳ ಸ್ಥಾಪನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಹೊಸ ಯೋಜನೆಯು ವ್ಯಕ್ತಿಗಳು ಮತ್ತು ಸಂಸ್ಥೆಗಳು ಮತ್ತು ಕಂಪನಿಗಳ ನಡುವಿನ ಪಾಲುದಾರಿಕೆಗೆ ಅವಕಾಶವನ್ನು ನೀಡುತ್ತದೆ.

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ನೋಂದಣಿ ಮಾಡುವುದು ಹೇಗೆ?

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ನೋಂದಣಿ ಮಾಡುವುದು ಹೇಗೆ?

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯಡಿ ನೋಂದಣಿಯಾದ ವಾಹನಗಳು ಸಾರಿಗೆ ವರ್ಗಕ್ಕೆ ಬರುತ್ತವೆ. ಈ ಉದ್ದೇಶಕ್ಕಾಗಿ, ಪ್ರತಿ ವಾಹನ ಮಾಲೀಕರು ವಾಹನ ನೋಂದಣಿ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸರ್ಕಾರದಿಂದ ಪರವಾನಗಿ, ತೆರಿಗೆಯಂತಹ ಹಲವು ವಿನಾಯಿತಿ ನೀಡುತ್ತದೆ. ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಎಲೆಕ್ಟ್ರಿಕ್ ಬೈಕ್‌ಗಳ ಹೊಸ ನೀತಿಯ ಅಡಿಯಲ್ಲಿ, ಸಂಸ್ಥೆಗಳು ಅಥವಾ ವ್ಯಕ್ತಿಗಳು ತಮ್ಮ ಇ-ಬೈಕ್‌ಗಳನ್ನು ಟ್ಯಾಕ್ಸಿಗಳಾಗಿ ನೋಂದಾಯಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಇ-ಬೈಕ್ ಟ್ಯಾಕ್ಸಿ ಸ್ಥಿತಿಯನ್ನು ಸ್ವೀಕರಿಸಲು ಬೈಕ್‌ಗಳು "ಬೈಕ್ ಟ್ಯಾಕ್ಸಿ" ಪದಗಳನ್ನು ಸ್ಪಷ್ಟವಾಗಿ ನಮೂದಿಸಬೇಕಾಗುತ್ತದೆ. ಇದಲ್ಲದೇ ಇ-ಬೈಕ್ ಟ್ಯಾಕ್ಸಿ ಕಂಪನಿಗಳು ಸವಾರ ಮತ್ತು ಮಾಲೀಕರಿಗೆ ವಿಮಾ ರಕ್ಷಣೆಯನ್ನು ಒದಗಿಸಬೇಕಾಗುತ್ತದೆ.

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಪ್ರಭಾವ ತಿಳಿಯಿರಿ

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಪ್ರಭಾವ ತಿಳಿಯಿರಿ

ರಾಜ್ಯದಲ್ಲಿ e2W ಅನ್ನು ವಾಣಿಜ್ಯ ಬೈಕ್ ಟ್ಯಾಕ್ಸಿಯಾಗಿ ನೋಂದಾಯಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಮಧ್ಯವರ್ತಿಗಳು ಸ್ವಾಗತಿಸಿದ್ದಾರೆ. ದೀರ್ಘಾವಧಿಯಲ್ಲಿ ತಮ್ಮ ವಾಹನಗಳಿಂದ ಮಾಲೀಕರು ಹಣ ಸಂಪಾದಿಸುವುದಕ್ಕೆ ಸರಿಯಾದ ಹೆಜ್ಜೆಯಾಗಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ಬೈಕ್ ಸೇವೆಯು ಯಶಸ್ವಿಯಾಗಿದ್ದು, ಬೆಂಗಳೂರಿನಲ್ಲೂ ಅಂಥದ್ದೇ ಯೋಜನೆಯನ್ನು ಜಾರಿಗೊಳಿಸುವುದಕ್ಕೆ ಸರ್ಕಾರ ಮುಂದಾಗಿದೆ.

ಸಾಮಾನ್ಯವಾಗಿ ಬೆಂಗಳೂರಿನ ಹೆಚ್ಚಿನ ನಾಗರಿಕರು ಪ್ರಸ್ತುತ ಇಂಧನ ಆಧಾರಿತ ಬೈಕ್ ಅನ್ನು ಹೊಂದಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗುವುದರ ಜೊತೆಗೆ ಪ್ರಯಾಣಕ್ಕೆ ಅನಾನುಕೂಲತೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವುದರ ಜೊತೆಗೆ ಆದಾಯ ಗಳಿಸುವ ನಿಟ್ಟಿನಲ್ಲಿ ಯೋಜನೆಯು ಹೆಚ್ಚು ಸಹಕಾರಿ ಆಗಿದೆ. ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿ ಸೇವೆಯಾಗಿ ಪರಿಗಣಿಸಲು ಮಧ್ಯವರ್ತಿಗಳು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. Rapido ಸೇವೆಯು ಈಗಾಗಲೇ ಮೂಲಸೌಕರ್ಯ ಮತ್ತು ಬಳಕೆದಾರರಿಂದ ಸಾಕಷ್ಟು ಬೇಡಿಕೆಯನ್ನು ಹೊಂದಿದೆ.

Recommended Video

5G ಭಾರತದಲ್ಲಿ ಬರ್ತಾ ಇದೆ , ಹಕ್ಕುಗಳಿಗಾಗಿ ಇಂದು ದೊಡ್ಡ ಮಟ್ಟದಲ್ಲಿ ಹರಾಜು | *India | OneIndia Kannada

English summary
Karnataka Electric Bike Taxi Scheme 2022 Apply Online; Know features, registration, eligibility, documents required and how to apply in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X