ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ಚುನಾವಣೆ ನಡೆದರೆ ಫಲಿತಾಂಶ ಏನಾಗುತ್ತೆ? ಬಿಟಿವಿ ಸಮೀಕ್ಷೆ ನೋಡಿ

|
Google Oneindia Kannada News

ಬೆಂಗಳೂರು, ಸೆ. 22: ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷವೂ ಉಳಿದಿಲ್ಲವಾದ್ದರಿಂದ ರಾಜಕೀಯದ ಬಿಸಿ ಹೆಚ್ಚಾಗಿದೆ. ಒಂದೆಡೆ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದರೆ, ಇನ್ನೊಂದೆಡೆ ವಿವಿಧ ಸಂಸ್ಥೆಗಳು, ಮಾಧ್ಯಮಗಳು ಸಮೀಕ್ಷೆಗಳ ಮೂಲಕ ಜನಾಭಿಪ್ರಾಯ ಅಳೆಯುವ ಪ್ರಯತ್ನ ಮಾಡುತ್ತಿವೆ.

ಕಳೆದ ಮೂರ್ನಾಲ್ಕು ದಿನಗಳಿಂದ ಒನ್‌ಇಂಡಿಯಾದಲ್ಲಿ ವಿವಿಧ ಸಮೀಕ್ಷೆಗಳ ವಿವರಗಳನ್ನು ಪ್ರಕಟಿಸಿದ್ದೆವು. ಬಿಜೆಪಿಯ ಆಂತರಿಕ ಸಮೀಕ್ಷೆಯ ವರದಿಯನ್ನೂ ತಿಳಿಸಿದ್ದೆವು. ಇದೀಗ ಬಿಟಿವಿ ಸುದ್ದಿ ವಾಹಿನಿ ನಡೆಸಿದ ಸಮೀಕ್ಷೆ ವಿವರವೂ ಇಲ್ಲಿದೆ. ಬಿಟಿವಿ ನಿನ್ನೆ ಬುಧವಾರ ತನ್ನ ವಾಹಿನಿಯಲ್ಲಿ ಸಮೀಕ್ಷೆಯ ವಿವರಗಳನ್ನು ಪ್ರಕಟಿಸಿತ್ತು.

BJP Survey: ಬಹುಮತದ ಸನಿಹಕ್ಕೆ ಬಿಜೆಪಿ? ಆಂತರಿಕ ಸಮೀಕ್ಷೆ ಮಾಹಿತಿBJP Survey: ಬಹುಮತದ ಸನಿಹಕ್ಕೆ ಬಿಜೆಪಿ? ಆಂತರಿಕ ಸಮೀಕ್ಷೆ ಮಾಹಿತಿ

ಅದರಂತೆ, ಸದ್ಯ ಯಾವ ಪಕ್ಷಕ್ಕೂ ಬಹುಮತ ಸಿಗುವ ವಾತಾವರಣ ಇಲ್ಲ. ಈಗಲೇ ಚುನಾವಣೆ ನಡೆದರೆ ರಾಜ್ಯದ 224 ಸ್ಥಾನಗಳ ಪೈಕಿ ಬಿಜೆಪಿ 95-100 ಸ್ಥಾನಗಳನ್ನು ಗೆಲ್ಲಬಹುದು ಎಂದು ಬಿಟಿವಿ ವಾಹಿನಿಯ ಸಮೀಕ್ಷೆ ಅಂದಾಜು ಮಾಡಿದೆ. ಕಾಂಗ್ರೆಸ್ ಕೂಡ ಅಷ್ಟೇನೂ ಹಿಂದೆ ಬಿದ್ದಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಅಂತರ 1-10 ಸ್ಥಾನ ಇರಬಹುದು ಅಷ್ಟೇ ಎನ್ನಲಾಗಿದೆ.

ಬಿಟಿವಿ ಈ ಸಮೀಕ್ಷೆಗೆ ಹೆಚ್ಚು ಜನರನ್ನು ಆಯ್ಕೆ ಮಾಡಿಕೊಂಡಿಲ್ಲ. ಈ ವಿಚಾರವನ್ನು ವಾಹಿನಿಯೇ ಹೇಳಿಕೊಂಡಿದೆ. ಹಾಗೆಯೇ, ತಾನು ಸಮೀಕ್ಷೆಗೆ ಆರಿಸಿದ ವ್ಯಕ್ತಿಗಳಿಗೆ 15 ಪ್ರಶ್ನಾವಳಿಯನ್ನು ಕೊಟ್ಟು, ಅವರ ಆದ್ಯತೆಗಳೇನು ಎಂಬಿತ್ಯಾದಿ ವಿವರವನ್ನು ವಾಹಿನಿ ಕಲೆಹಾಕಿರುವುದು ತಿಳಿದುಬಂದಿದೆ.

ಬಿಟಿವಿ ಚುನಾವಣಾ ಸಮೀಕ್ಷೆ (ಈಗ ಚುನಾವಣೆ ನಡೆದರೆ)

ಬಿಟಿವಿ ಚುನಾವಣಾ ಸಮೀಕ್ಷೆ (ಈಗ ಚುನಾವಣೆ ನಡೆದರೆ)

ಒಟ್ಟು ಕ್ಷೇತ್ರ: 224
ಬಹುಮತಕ್ಕೆ: 113
ಬಿಜೆಪಿ: 95-100
ಕಾಂಗ್ರೆಸ್: 90-95
ಜೆಡಿಎಸ್: 25-30
ಇತರರು: 2

ಈ ಸಮೀಕ್ಷೆ ಪ್ರಕಾರ ಬಿಜೆಪಿ ಬಹುಮತದಿಂದ ತುಸು ಹಿಂದುಳಿಯಬಹುದು. ಬಿಜೆಪಿಗಿಂತ ಕಾಂಗ್ರೆಸ್ ತುಸು ಕಡಿಮೆ ಸ್ಥಾನ ಪಡೆಯಬಹುದು. ಜೆಡಿಎಸ್ ತನ್ನ ಕೈಯಲ್ಲಿ ರಿಮೋಟ್ ಕಂಟ್ರೋಲ್ ಇಟ್ಟುಕೊಳ್ಳುವಷ್ಟು ಸಂಖ್ಯೆಯಲ್ಲಿ ಕ್ಷೇತ್ರಗಳನ್ನು ಗೆಲ್ಲಬಹುದು. ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತದೆ ಅವರು ಸರಕಾರ ರಚನೆ ಮಾಡಬಹುದು ಎಂಬ ಸ್ಥಿತಿ ಇದೆ. ಇದೇ ಟ್ರೆಂಡ್ ಮುಂದುವರಿದರೆ 2023ರ ಚುನಾವಣೆ ಬಳಿಕ ಜೆಡಿಎಸ್ ಕಿಂಗ್ ಮೇಕರ್ ಅಥವಾ ಕಿಂಗ್ ಆಗುವುದು ಪಕ್ಕಾ ಎನ್ನುತ್ತದೆ ಬಿಟಿವಿ ಸಮೀಕ್ಷೆ.

ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಯಾರು? ಸಮೀಕ್ಷೆಗಳು ಹೇಳೋದೇನು?ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಯಾರು? ಸಮೀಕ್ಷೆಗಳು ಹೇಳೋದೇನು?

2018ರ ಚುನಾವಣೆಯಲ್ಲಿ

2018ರ ಚುನಾವಣೆಯಲ್ಲಿ

ಬಿಜೆಪಿ: 104
ಕಾಂಗ್ರೆಸ್: 80
ಜೆಡಿಎಸ್: 37
ಇತರರು: 3

ಶೇಕಡಾವಾರ ಮತ
ಬಿಜೆಪಿ: 36.2%
ಕಾಂಗ್ರೆಸ್: 38%
ಜೆಡಿಎಸ್: 18.3%
ಇತರರು: 7.5%

ಉಪಚುನಾವಣೆ ಬಳಿಕ ಈಗಿರುವ ಬಲಾಬಲ
ಬಿಜೆಪಿ: 119
ಕಾಂಗ್ರೆಸ್: 69
ಜೆಡಿಎಸ್: 34
ಇತರರು: 2

ಬಿಜೆಪಿ ಆಂತರಿಕ ಸಮೀಕ್ಷೆ ವಿವರ

ಬಿಜೆಪಿ ಆಂತರಿಕ ಸಮೀಕ್ಷೆ ವಿವರ

ಬಿಜೆಪಿ ಕೂಡ ಆಂತರಿಕವಾಗಿ ರಾಜ್ಯದ ಉದ್ದಗಲದಲ್ಲೂ ಸಮೀಕ್ಷೆ ನಡೆಸಿ ಜನರ ನಾಡಿಮಿಡಿ ಅರಿಯುವ ಪ್ರಯತ್ನ ಮಾಡಿದೆ. ಅದು ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗಳಿಸಬಹುದಾದರೂ ಬಹುಮತಕ್ಕೆ ಮೂರ್ನಾಲ್ಕು ಸ್ಥಾನ ಕಡಿಮೆ ಬೀಳಬಹುದು ಎಂದಿದೆ.

ಒಟ್ಟು ಕ್ಷೇತ್ರಗಳು: 224
ಬಿಜೆಪಿ: 110
ಕಾಂಗ್ರೆಸ್: 74
ಜೆಡಿಎಸ್: 49

ಇತರ ಸಮೀಕ್ಷೆಗಳಲ್ಲಿ ಕೈ ಮುಂದು?

ಇತರ ಸಮೀಕ್ಷೆಗಳಲ್ಲಿ ಕೈ ಮುಂದು?

ಕಳೆದ ಕೆಲ ತಿಂಗಳಿಂದ ವಿವಿಧ ಸಂಸ್ಥೆಗಳು ಸಮೀಕ್ಷೆ ಮತ್ತು ಅಧ್ಯಯನಗಳನ್ನು ನಡೆಸಿ ಜನಾಭಿಪ್ರಾಯ ಗುರುತಿಸುವ ಪ್ರಯತ್ನ ಮಾಡಿವೆ. ಅವುಗಳೆಲ್ಲದರ ಅಂದಾಜನ್ನು ಸರಾಸರಿಯಾಗಿ ಗಣಿಸಿದರೆ ಕಾಂಗ್ರೆಸ್ ಪಕ್ಷ ತುಸು ಮುಂದಿದೆ. ಅದರ ಪ್ರಕಾರ ಕಾಂಗ್ರೆಸ್‌ಗೆ 100 ಸ್ಥಾನ ಸಿಗುವ ನಿರೀಕ್ಷೆ ಇದೆ. ಬಿಜೆಪಿಗೆ 95 ಸ್ಥಾನ ಬರುವ ಸಾಧ್ಯತೆ ತೋರಿತ್ತು. ಜೆಡಿಎಸ್ ಪಕ್ಷಕ್ಕೆ 20 ಸ್ಥಾನ ಸಿಗಬಹುದು ಎಂದು ಆ ಸಮೀಕ್ಷೆಗಳು ಅಭಿಪ್ರಾಯಪಟ್ಟಿದ್ದವು.

ಬಿಜೆಪಿ: 95
ಕಾಂಗ್ರೆಸ್: 100
ಜೆಡಿಎಸ್: 20

(ಒನ್ಇಂಡಿಯಾ ಸುದ್ದಿ)

English summary
Kannada news channel BTV on September 22nd telecasted its survey report on Karnataka elections. It has predicted BJP to get highest seats, but may fall short of majority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X