ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Karnataka Assembly Election 2023: ದ.ಕನ್ನಡ ಜಿಲ್ಲೆಯ ಟಿಕೆಟ್ ಆಕಾಂಕ್ಷಿಗಳು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಚುನಾವಣೆಯ ರಂಗೇರಲು ಕರುನಾಡು ಸಿದ್ಧವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯೂ ಚುನಾವಣೆಯಲ್ಲಿ ಮತ ಬೇಟೆಯಾಡಿ ಅಧಿಕಾರಕ್ಕೇರಲು ಪಕ್ಷಗಳು ಸಿದ್ಧತೆ ಮಾಡಿದೆ. ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದ ಬಿಜೆಪಿ ಈ ಬಾರಿಯೂ ಕಮಾಲ್ ಮಾಡುವ ನಿರೀಕ್ಷೆಯಲ್ಲಿದೆ.

ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರದ ವಿಫಲತೆಗಳನ್ನು ಪಟ್ಟಿ ಮಾಡಿ ಜನವಿರೋಧವನ್ನೇ ಮೆಟ್ಟಿಲ್ಲನ್ನಾಗಿಸಿ ಅಧಿಕಾರವನ್ನೇರುವ ತಂತ್ರಗಾರಿಕೆಯಲ್ಲಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದರೆ ಬಿಜೆಪಿ ಏಳು ಕ್ಷೇತ್ರವನ್ನು ತನ್ನದಾಗಿಸಿಕೊಂಡಿತ್ತು. ಜೆಡಿಎಸ್ ಎಂದಿನಂತೆ 2018ರಲ್ಲೂ ಖಾತೆ ತೆರೆಯಲು ವಿಫಲವಾಯಿತು.

Karnataka Assembly Election 2023: ಉಡುಪಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳುKarnataka Assembly Election 2023: ಉಡುಪಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು

ಈ ಬಾರಿ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟಿಗಾಗಿ ಭಾರಿ ಪೈಪೋಟಿಯಿರುವುದು, ಅರ್ಜಿ ದಾಖಲಾತಿ ಆಗಿರುವುದನ್ನು ಆಧರಿಸಿ ಹೇಳಬಹುದಾಗಿದೆ. ಬಿಜೆಪಿಯಲ್ಲೂ ಹಾಲೀ ಶಾಸಕರಲ್ಲಿ ಕೆಲವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಮ್ಮಿ ಎನ್ನುವ ಮಾತು ಕೇಳಿ ಬರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಳೆದ ವಿಧಾನಸಭಾ ಚುನಾವಣೆಯಯಲ್ಲಿ ಹಾಲಿ ಶಾಸಕರು ಪಡೆದ ಮತವೇನು? ಈ ಬಾರಿ ಚುನಾವಣಾ ಕಣದಲ್ಲಿರುವವರು ಯಾರು? ಈ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ..

 ಮಂಗಳೂರು ವಿಧಾನಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ ಮೋಡಿ ಮಾಡಿತೇ?

ಮಂಗಳೂರು ವಿಧಾನಸಭಾ ಕ್ಷೇತ್ರ ಮತ್ತೆ ಕಾಂಗ್ರೆಸ್ ಮೋಡಿ ಮಾಡಿತೇ?

ಮಂಗಳೂರು ವಿಧಾನಸಭಾ ಕ್ಷೇತ್ರ ಕಳೆದ ಬಾರಿ ಕಾಂಗ್ರೆಸ್ ನ ಅಸ್ತಿತ್ವ ವನ್ನು ಉಳಿಸಿದ ಏಕೈಕ ವಿಧಾನಸಭಾ ಕ್ಷೇತ್ರವಾಗಿತ್ತು. ಪ್ರಸ್ತುತ ಶಾಸಕರು ಮಾಜಿ ಸಚಿವ ಯು.ಟಿ. ಖಾದರ್. ಈ ಬಾರಿಯೂ ಶಾಸಕ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅಭ್ಯರ್ಥಿ ಯುಟಿ ಖಾದರ್ ಎನ್ನುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯಿಂದ ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಸಂತೋಷ್ ಶೆಟ್ಟಿ ಬೋಳಿಯಾರ್ ಹೆಸರೂ ಅಭ್ಯರ್ಥಿ ಸ್ಥಾನದ ರೇಸ್ ನಲ್ಲಿದೆ. ಉಳಿದಂತೆ ಸ್ಥಳೀಯ ಬಿಜೆಪಿ ಮುಖಂಡರಾದ ಸತೀಶ್ ಕುಂಪಲ, ಚಂದ್ರಹಾಸ್ ಪಂಡಿತ್ ಹೌಸ್ ಹೆಸರೂ ಮುಂಚೂಣಿಯಲ್ಲಿದೆ. ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ ವೆಲ್ ಹೆಸರೂ ಈ ಬಾರಿಯ ಚುನಾವಣಾ ರೇಸ್ ನಲ್ಲಿದೆ..

2018ರಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ:
ಒಟ್ಟು ಮತಗಳು
1,49,358

ಯುಟಿ ಖಾದರ್
80,813

ಸಂತೋಷ್ ಬೋಳಿಯಾರ್
61,074

ಯುಟಿ ಖಾದರ್ ವಿಜಯದ ಅಂತರ
19739 ಮತಗಳು

ಮುಸ್ಲಿಂ ಬಾಹುಳ್ಯ ವಿಧಾನಸಭಾ ಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಯು.ಟಿ.ಖಾದರ್ ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ.ಎಸ್ ಡಿ ಪಿ ಐ ಕಾಂಗ್ರೆಸ್ ನ ಮತ ವಿಭಜನೆ ಮಾಡುವ ಆತಂಕವೂ ಈ ಬಾರಿ ಕಾಂಗ್ರೆಸ್ ಗೆ ಇದೆ. ಇದರ ನಡುವೆ ಬಿಜೆಪಿ ಹೊಸ ಮತದಾರರನ್ನೇ ನಂಬಿ ಕುಳಿತಿದೆ. ಜೆಡಿಎಸ್ಸಿನಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ.

 ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕಾಮತ್ ಮತ್ತೆ ಟಿಕೆಟ್ ಆಕಾಂಕ್ಷಿ

ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಕಾಮತ್ ಮತ್ತೆ ಟಿಕೆಟ್ ಆಕಾಂಕ್ಷಿ

ಡಿ.ವೇದವ್ಯಾಸ ಕಾಮತ್,ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಿಂದ ಈ ಬಾರಿಯೂ ವೇದವ್ಯಾಸ್ ಹೆಸರೇ ಅಂತಿಮ ವಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ ನಿಂದ ಐವಾನ್ ಡಿಸೋಜಾ, ಜೆ.ಆರ್.ಲೋಬೋ ಹೆಸರು ಅಭ್ಯರ್ಥಿ ಸ್ಥಾನದಲ್ಲಿದೆ. ಇನ್ನುಳಿದಂತೆ ಬಿಲ್ಲವ ಮುಖಂಡ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಹೆಸರೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿದೆ. ಜೆಡಿಎಸ್ಸಿನಿಂದ ಸ್ಪಷ್ಟತೆಯಿಲ್ಲ.

2018ರಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಫಲಿತಾಂಶ:
ಒಟ್ಟು ಮತಗಳು
1,63,387

ವೇದವ್ಯಾಸ ಕಾಮತ್
86,545

ಜೆ.ಆರ್ ಲೋಬೋ
70,470

ವೇದವ್ಯಾಸ ಕಾಮತ್ ವಿಜಯದ ಅಂತರ
16,075

ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಕೆಲಸ ಭರದಿಂದ ನಡೆಯುತ್ತಿದೆ. ಸ್ಮಾರ್ಟ್ ಸಿಟಿ ಕೆಲಸವನ್ನೇ ಚುನಾವಣೆಯಲ್ಲಿ ಮತಗಳಿಕೆಯನ್ನಾಗಿ ಮಾಡಲು‌ ಬಿಜೆಪಿ ಪ್ಲಾನ್ ಮಾಡಿದೆ‌‌. ಕಾಂಗ್ರೆಸ್ ಅಲ್ಪ ಸಂಖ್ಯಾತ ಅಭ್ಯರ್ಥಿ ಯನ್ನು ನಿಲ್ಲಿಸಿ ಮತವಿಭಜನೆ ಮಾಡುವ ಯೋಜನೆಯಲ್ಲಿದೆ.

 ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಭರತ್ ಶೆಟ್ಟಿಗೆ ಟಿಕೆಟ್ ಸಿಗುತ್ತಾ

ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ ಭರತ್ ಶೆಟ್ಟಿಗೆ ಟಿಕೆಟ್ ಸಿಗುತ್ತಾ

ಮಂಗಳೂರು ನಗರ ಉತ್ತರ ಕ್ಷೇತ್ರದ ಹಾಲಿ ಶಾಸಕ ಡಾ.ವೈ ಭರತ್ ಶೆಟ್ಟಿಯ ಹೆಸರು 2023ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೇಸ್ ನಲ್ಲಿದೆ. ಇನ್ನೂ ಕಾಂಗ್ರೆಸ್ ನಿಂದ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಹೆಸರು ಪ್ರಬಲವಾಗಿದೆ. ಇದರ ಜೊತೆಗೆ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೆಸರೂ ಕೇಳಿ ಬರುತ್ತಿದೆ.

2018ರಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಫಲಿತಾಂಶ
ಒಟ್ಟು ಮತಗಳು
1,76,104

ಡಾ.ವೈ ಭರತ್ ಶೆಟ್ಟಿ
98,648

ಬಿ.ಎ ಮೊಹಿದ್ದೀನ್ ಬಾವ
72,000

ಭರತ್ ಶೆಟ್ಟಿ ವಿಜಯದ ಅಂತರ
26,648

ಅತೀ ಹೆಚ್ಚು ಕೋಮು ಗದ್ದಲವನ್ನು ಹೊಂದಿದ ಸುರತ್ಕಲ್ ನಲ್ಲಿ ಈ ಬಾರಿಯೂ ಮತದ ಆಧಾರದಲ್ಲೇ ಚುನಾವಣೆ ನಡೆಯಲಿದೆ. ಬಿಜೆಪಿ ಹಿಂದುತ್ವವನ್ನು ಪ್ರಯೋಗಿಸಿದರೆ, ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕಲಿದೆ. ಜೆಡಿಎಸ್ಸಿನಿಂದ ಇಲ್ಲೂ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.

 ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ

ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ

ಕ್ಷೇತ್ರದ ಹಾಲಿ ಶಾಸಕ ಉಮನಾಥ್ ಕೋಟ್ಯಾನ್ ಹೆಸರು ಅಭ್ಯರ್ಥಿ ಸ್ಥಾನದಲ್ಲಿದೆ. ಇದರ ಜೊತೆ ಸದ್ಯದ ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಸ್ಥಳೀಯ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಈ ಬಾರಿ ಚುನಾವಣಾ ಆಕಾಂಕ್ಷಿಗಳಾಗಿದ್ದಾರೆ. ಅಲ್ಲಲ್ಲಿ ಹಾಲೀ ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರೂ ಕೂಡಾ ಇಲ್ಲಿಂದ ಕೇಳಿ ಬರುತ್ತಿದೆ.

ಕಾಂಗ್ರೆಸ್ ನಿಂದ ಕಾಂಗ್ರೆಸ್ ನ ಯುವ ಮುಖಂಡ ಮಿಥುನ್ ರೈ ಮತ್ತು ಬಿಲ್ಲವ ಮುಖಂಡ ರಾಜಶೇಖರ್ ಕೋಟ್ಯಾನ್ ಸದ್ಯದ ಆಕಾಂಕ್ಷಿಗಳಾಗಿದ್ದಾರೆ

2018ರಲ್ಲಿ ಮೂಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಫಲಿತಾಂಶ:
ಒಟ್ಟು ಮತಗಳು
1,52,247

ಉಮಾನಾಥ್ ಕೋಟ್ಯಾನ್
87,444

ಅಭಯಚಂದ್ರ ಜೈನ್
57,645

ಉಮಾನಾಥ್ ಕೋಟ್ಯಾನ್ ಗೆಲುವಿನ ಅಂತರ
29,799

ಉಮಾನಾಥ್ ಕೋಟ್ಯಾನ್ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿ ಜೊತೆಗೆ ಕಾಂಗ್ರೆಸ್ ನ ಸೀಟುಗಾಗಿ ರೇಸ್ ನ ಲಾಭ ಪಡೆಯುವ ತಂತ್ರಗಾರಿಕೆಯಲ್ಲಿ ಬಿಜೆಪಿ ಯಿದೆ. ಕಾಂಗ್ರೆಸ್ ಬಿಜೆಪಿಯ ಸೀಟು ರಾಜಕಾರಣ, ಭಿನ್ನಾಭಿಪ್ರಾಯದ ಜೊತೆ ಯುವ ನಾಯಕ ಮಿಥುನ್ ರೈ ವರ್ಚಸ್ಸು ಲಾಭವಾಗುವ ನಿರೀಕ್ಷೆಯಲ್ಲಿದೆ‌..

 ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ರೈ ಮೋಡಿ ಮಾಡಿಯಾರೇ?

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ರೈ ಮೋಡಿ ಮಾಡಿಯಾರೇ?

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕರು ಬಿಜೆಪಿಯ ರಾಜೇಶ್ ನಾಯಕ್. ರಾಜೇಶ್ ನಾಯಕ್ ಈ ಬಾರಿಯ ಏಕೈಕ ಬಿಜೆಪಿಯ ಏಕೈಕ ಟಿಕೆಟ್ ಆಕಾಂಕ್ಷಿ.

ಕಾಂಗ್ರೆಸ್ ನಿಂದ ಮಾಜಿ ಶಾಸಕ ಬಿ.ರಮಾನಾಥ ರೈ ಅವರ ಹೆಸರು ಪ್ರಬಲವಾಗಿದೆ. ಬಿಲ್ಲವ ಮುಖಂಡ ಪದ್ಮರಾಜ್ ಆರ್ ಬಂಟ್ವಾಳದಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ..

2018ರಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಫಲಿತಾಂಶ
ಒಟ್ಟು ಮತಗಳು
1,09,256

ರಾಜೇಶ್ ನಾಯಕ್ ಉಳಿಪಾಡಿಗುತ್ತು
97,802

ಬಿ.ರಮಾನಾಥ ರೈ
81,831

ರಾಜೇಶ್ ನಾಯಕ್ ವಿಜಯದ ಅಂತರ
15,971

ದ.ಕ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಬಂಟ್ವಾಳದಲ್ಲಿ ಬಿಜೆಪಿ ಈ ಬಾರಿಯೂ ಹಿಂದೂ ಮತಗಳನ್ನೇ ನೆಚ್ಚಿಕೊಂಡಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಮತದ ಜೊತೆಗೆ ರಮಾನಾಥ್ ರೈ ಅವರ ಪ್ರಾಬಲ್ಯದಿಂದ ಮತ್ತೆ ಕ್ಷೇತ್ರ ಹಿಂಪಡೆಯುವ ನಿರೀಕ್ಷೆಯಲ್ಲಿದೆ..

 ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಸಾಧ್ಯತೆ

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಸಾಧ್ಯತೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕರು ಸಂಜೀವ ಮಠಂದೂರು. ಸದ್ಯ ಈ ಬಾರಿಯೂ ಬಿಜೆಪಿಯಿಂದ ಮಠಂದೂರು ಹೆಸರು ಕೇಳಿಬರುತ್ತಿದೆ. ಇದರ ಜೊತೆಗೆ ಸ್ಥಳೀಯ ಮುಖಂಡರಾದ ಆರ್.ಸಿ ನಾರಾಯಣ್, ಅರುಣ್ ಕುಮಾರ್ ಪುತ್ತಿಲ ಹೆಸರೂ ಕಾರ್ಯಕರ್ತರ ವಲಯದಲ್ಲಿದೆ‌..

ಇನ್ನು ಕಾಂಗ್ರೆಸ್ ನಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೆಸರೂ ಅಭ್ಯರ್ಥಿ ಸ್ಥಾನದಲ್ಲಿದೆ..

2018ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ

ಒಟ್ಟು ಮತಗಳು
1,66,271

ಸಂಜೀವ ಮಠಂದೂರು
90,073

ಶಕುಂತಲಾ ಶೆಟ್ಟಿ
70,596

ಸಂಜೀವ ಮಠಂದೂರು ವಿಜಯದ ಅಂತರ
19,477

ಬಿಜೆಪಿ ಶಾಸಕ ಮಠಂದೂರು ಮೇಲಿರುವ ಕಾರ್ಯಕರ್ತರ ಅಸಮಾಧಾನ ದ ಲಾಭ ಪಡೆಯಲು ಕಾಂಗ್ರೆಸ್ ಯೋಜನೆ ಹಾಕಿದೆ. ಅಭ್ಯರ್ಥಿ ಆಯ್ಕೆಯ ಮೊದಲೇ ಬಣ ರಾಜಕೀಯ ಕಾಂಗ್ರೆಸ್ ನಲ್ಲಿ ಜೋರಾಗಿರೋದರಿಂದ ರಾಜ್ಯ ನಾಯಕರಿಗೆ ಪುತ್ತೂರು ಕಾಂಗ್ರೆಸ್ ನ ಬಿಕ್ಕಟ್ಟು ಸವಾಲಾಗಿದೆ..

 ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂಗಾರ ಮತ್ತೆ ಕಣದಲ್ಲಿ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಂಗಾರ ಮತ್ತೆ ಕಣದಲ್ಲಿ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಶಾಸಕರಾದವರು ಸಚಿವರಾದ ಎಸ್. ಅಂಗಾರ ಅವರು. ಈ ಬಾರಿಯೂ ಬಿಜೆಪಿಯಿಂದ ಅಂಗಾರರ ಹೆಸರೇ ಮುಂಚೂಣಿಯಲ್ಲಿದೆ. ಮೀಸಲಾತಿ ಕ್ಷೇತ್ರವಾದ ಸುಳ್ಯದಲ್ಲಿ ಬಿಜೆಪಿಯಿಂದ ಚನಿಯ ಕಲ್ತಡ್ಕ ಅವರ ಹೆಸರೂ ಆಕಾಂಕ್ಷಿ ಪಟ್ಟಿಯಲ್ಲಿದೆ..

ಇನ್ನು ಕಾಂಗ್ರೆಸ್ ನಿಂದ ಡಾ.ರಘು, ಎಚ್.ಎಂ.ನಂದಕುಮಾರ್ ಶಾಸಕ ಕಣದ ಆಕಾಂಕ್ಷಿಗಳಾಗಿದ್ದಾರೆ.

2018ರಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಫಲಿತಾಂಶ

ಒಟ್ಟು ಮತಗಳು
1,68,412

ಎಸ್. ಅಂಗಾರ
95,205

ಡಾ.ರಘು
69,137

ಎಸ್ ಅಂಗಾರ ವಿಜಯದ ಅಂತರ 26,068

ಎಸ್. ಅಂಗಾರ ಮೂವತ್ತು ವರ್ಷಗಳಿಂದ ಶಾಸಕರಾದರೂ ಅಭಿವೃದ್ಧಿ ಆಗಿಲ್ಲ ಅನ್ನೋದು ಕ್ಷೇತ್ರದ ಕಾರ್ಯಕರ್ತರ ಅಸಮಾಧಾನ ವಾಗಿದೆ. ಆದರೆ ಪಕ್ಷ ಸಂಘಟನೆ, ಹಿಂದೂ ಸಂಘಟನೆಗಳು ಪ್ರಬಲವಾಗಿರೋದರಿಂದ ಕಾಂಗ್ರೆಸ್ ಗೆಲುವಿಗಾಗಿ ಹೋರಾಟ ಮಾಡಬೇಕಿದೆ.

 ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪೂಂಜಾ ಜನಪ್ರಿಯತೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪೂಂಜಾ ಜನಪ್ರಿಯತೆ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕರು ಬಿಜೆಪಿಯ ಹರೀಶ್ ಪೂಂಜಾ. ಈ ಬಾರಿಯೂ ಹರೀಶ್ ಪೂಂಜಾ ಹೆಸರೇ ಬಿಜೆಪಿಯಲ್ಲಿ ಪ್ರಬಲವಾಗಿದೆ. ಕಾಂಗ್ರೆಸ್ ನಿಂದ ಮಾಜಿ ಶಾಸಕ ವಸಂತ್ ಬಂಗೇರ, ರಕ್ಷಿತ್ ಶಿವರಾಂ, ಗಂಗಾಧರ ಗೌಡ, ರಂಜನ್ ಗೌಡ ಆಕಾಂಕ್ಷಿಗಳಾಗಿದ್ದಾರೆ.‌

2018ರಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಫಲಿತಾಂಶ

ಒಟ್ಟು ಮತಗಳು
1,79,550

ಹರೀಶ್ ಪೂಂಜಾ
98,417

ವಸಂತ ಬಂಗೇರ
75,442

ಹರೀಶ್ ಪೂಂಜಾ ವಿಜಯದ ಅಂತರ
22,974

ಯುವ ಶಾಸಕ ಹರೀಶ್ ಪೂಂಜಾ ವರ್ಚಸ್ಸು ಬಿಜೆಪಿಗೆ ಬಹುದೊಡ್ಡ ಜಯ ತರಬಹುದೆಂಬ ವಿಶ್ವಾಸ ಬಿಜೆಪಿ ಗಿದೆ. ಕಾಂಗ್ರೆಸ್ ಸಂಘಟನಾ ಪ್ರಯತ್ನ ನಡೆಸಿದರೆ ಗೆಲುವು ಕಠಿಣವಲ್ಲ. ಅನ್ನೋದು ಕ್ಷೇತ್ರದ ಮತದಾರರ ಅಭಿಪ್ರಾಯ..

English summary
Karnataka Assembly Elections 2023 : Here are the list of probables will get Dakshina Kannada District constituencies ticket from BJP, Congress, JDS and Other Parties. Take a look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X