Government employee; ಒಳ, ಹೊರ ರೋಗಿ ಚಿಕಿತ್ಸೆ, ಪಾವತಿ ವ್ಯವಸ್ಥೆ

ಸರ್ಕಾರಿ ನೌಕರರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನ್ವಯ ಹೊರ ಮತ್ತು ಒಳರೋಗಿಯಾಗಿ ಯಾವ ಚಿಕಿತ್ಸೆ ಪಡೆಯಬಹುದು.

ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗಾಗಿ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು ಜಾರಿಗೊಳಿಸಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯನ್ನು ಶೀಘ್ರದಲ್ಲೇ ಉದ್ಘಾಟಿಸಲಿದ್ದಾರೆ. ಸರ್ಕಾರ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು ಜಾರಿಗೊಳಿಸುವ ಕಾರ್ಯನೀತಿ ಬಗ್ಗೆ ಕೆಲವು ಆರಂಭಿಕ ಸೂಚನೆಗಳನ್ನು ನೀಡಿದೆ. ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಈ ಯೋಜನೆ ಮೂಲಕ ಅನುಕೂಲವಾಗಲಿದೆ.

'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ' ಅನ್ವಯ ಒಳರೋಗಿ, ಹೊರರೋಗಿ, ಖಾಸಗಿ ಆಸ್ಪತ್ರೆಗಳಲ್ಲಿ ಹೇಗೆ ಚಿಕಿತ್ಸೆ ಪಡೆಯಬೇಕು? ಎಂದು ಕಾರ್ಯನೀತಿ ರೂಪಿಸಲಾಗಿದೆ. ಯೋಜನೆ ಜಾರಿಗೆ ಬಂದ ಬಳಿಕ ಇದರ ಕುರಿತು ವಿವರ ಮಾಹಿತಿ ತಿಳಿಯಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಈಗ ಸರ್ಕಾರ ರೂಪಿಸಿರುವ ಕಾರ್ಯ ನೀತಿಯನ್ನು ಬಿಡುಗಡೆ ಮಾಡಿದೆ. ಒಳರೋಗಿ ಚಿಕಿತ್ಸೆಗಳು ಈ ಕೆಳಕಂಡ ಚಿಕಿತ್ಸೆಗಳನ್ನು ಒಳಗೊಂಡಿರುತ್ತವೆ. ಆದರೆ ಅವುಗಳಿಗೆ ಸೀಮಿತವಾಗಿರುವುದಿಲ್ಲ ಎಂದು ಕಾರ್ಯ ನೀತಿ ಸ್ಪಷ್ಟಪಡಿಸಿದೆ.

Karnataka Arogya Sanjeevini Scheme Treatment Details As Inpatient And Outpatient

ಶಸ್ತ್ರ ಚಿಕಿತ್ಸಾ ವಿಧಾನಗಳು, ತುರ್ತು ಚಿಕಿತ್ಸೆ ಮತ್ತು ಅಪಘಾತದ ಸಂದರ್ಭಗಳಲ್ಲಿ ಪಡೆಯುವ ಚಿಕಿತ್ಸೆಗಳು ಹೆರಿಗೆ ಮತ್ತು ಶಿಶು ಆರೈಕೆ, ಈ ಯೋಜನೆಗೆ ಒಳಪಡುವ ಔಷಧೋಪಚಾರ, ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸಾ ವಿಧಾನಗಳು, ಹಗಲು ಚಿಕಿತ್ಸಾ ಕೇಂದ್ರಗಳಲ್ಲಿ ಪಡೆಯಲಾಗುವ ಚಿಕಿತ್ಸೆಗಳನ್ನು ಒಳಗೊಂಡಿರುತ್ತವೆ. ಕಿಮೊಥೆರಫಿ, ಹೆಮೊಡಯಾಲಿಸಿಸ್, ಪರಂತು, ಲಘು ವೈದ್ಯಕೀಯ ವಿಧಾನಗಳು, ಬಯಾಪ್ಸಿ, ಅವುಗಳಿಗೆ ಲಘು ಶಸ್ತ್ರ ಚಿಕಿತ್ಸೆಗಳು, ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳು ಲಭ್ಯವಿದೆ. ಕೆಲವು ವೈದ್ಯಕೀಯ ಉಪಕರಣಗಳ ಖರೀದಿ (ಉದಾಹರಣೆ ಕನ್ನಡಕ, ಶ್ರವಣ ಸಾಧನ, ಇತ್ಯಾದಿಗಳು).

ಅತಿ ವಿಶೇಷ, ವಿರಳ ಹಾಗೂ ಭಾರಿ ಚಿಕಿತ್ಸಾ ವೆಚ್ಚವನ್ನು ಒಳಗೊಂಡ ಚಿಕಿತ್ಸೆಗಳು. ಉಪಶಾಮಕ ಆರೈಕೆ (ಮಾರಣಾಂತಿಕ ಖಾಯಿಲೆಯಿಂದಾಗಿ ಅಂತಿಮ ಹಂತ ತಲುಪಿದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆ). ಆಯುರ್ವೇದ ಪ್ರಕೃತಿ ಚಿಕಿತ್ಸೆ, ಯೋಗ, ಯುನಾನಿ, ಹೋಮಿಯೋಪತಿ ಚಿಕಿತ್ಸೆಗಳು, ಪ್ರಾಯೋಗಿಕ ಚಿಕಿತ್ಸೆಗಳು, ಮಿದುಳು ನಿಷ್ಕ್ರಿಯಗೊಂಡ ನಂತರದ ಚಿಕಿತ್ಸೆ. ಒಳರೋಗಿ ವೈದ್ಯಕೀಯ ಚಿಕಿತ್ಸೆ ಯೋಜನೆಯಡಿ ನೋಂದಾಯಿಸಲಾಗಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಒಳರೋಗಿ ಚಿಕಿತ್ಸೆಗಳು ನಗದು ರಹಿತವಾಗಿರುತ್ತವೆ.

ಸರ್ಕಾರಿ ನೌಕರ ಹಾಗೂ ಆತನ ಕುಟುಂಬದ ಸದಸ್ಯರು ಯಾವುದೇ ಉಲ್ಲೇಖ (Referral) ಇಲ್ಲದೇ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೋಗಿಯು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಗೆ ಒಳಪಡುವ ಸಂದರ್ಭದಲ್ಲಿ ಪೂರ್ವ ಮಂಜೂರಾತಿಯನ್ನು ವಿಳಂಬವಿಲ್ಲದೇ ನೀಡಲಾಗುವುದು. ಒಳರೋಗಿ ಪ್ರಕರಣಗಳಲ್ಲಿ ಔಷಧೋಪಚಾರವು ಪ್ಯಾಕೇಜುಗಳಲ್ಲಿ ಒಳಗೊಂಡಂತೆ ಸೀಮಿತವಾಗಿ ಇರುತ್ತದೆ. ಇಂತಹ ಪುಕರಣಗಳಲ್ಲಿ ಮುಂದುವರೆದ ಚಿಕಿತ್ಸೆಯನ್ನು ಹೊರರೋಗಿಯಾಗಿ ಪಡೆಯಬಹುದಾಗಿದೆ.

Karnataka Arogya Sanjeevini Scheme Treatment Details As Inpatient And Outpatient

ಹೊರರೋಗಿ ವೈದ್ಯಕೀಯ ಚಿಕಿತ್ಸೆ: ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯಂತೆ ಹೊರರೋಗಿ ಚಿಕಿತ್ಸಾ ವೆಚ್ಚ ಮರುಪಾವತಿ ಪಡೆಯಲು ನಿರ್ಧಿಷ್ಟಪಡಿಸಿರುವ ಹಾಗೂ ವೈದ್ಯರ ಸಲಹೆಯಂತೆ ನಿರಂತರ ಔಷಧೋಪಚಾರ ಅಗತ್ಯವಿರುವ ಸರ್ಕಾರದಿಂದ ನಿರ್ಧಿಷ್ಟವಾಗಿ ಗುರುತಿಸಲಾಗಿರುವ 19 ದೀರ್ಘಕಾಲಿಕ ಖಾಯಿಲೆಗಳಿಗೆ ಹಾಗೂ ಸರ್ಕಾರವು ಕಾಲಕಾಲಕ್ಕೆ ನಿರ್ಧಿಷ್ಟಪಡಿಸುವ ಇತರೆ ಖಾಯಿಲೆಗಳ ಸಂಬಂಧ ಸರ್ಕಾರಿ ನೌಕರ ಸ್ವಂತಕ್ಕೆ ಹಾಗೂ ಅವಲಂಬಿತ ಕುಟುಂಬದ ಸದಸ್ಯರ ಚಿಕಿತ್ಸೆಗೆ ನೋಂದಾಯಿತ ಖಾಸಗಿ ವೈದ್ಯಕೀಯ ಸಂಸ್ಥೆಯಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಸಂಸ್ಥೆಯಲ್ಲಿ ಪಡೆದ ಹೊರರೋಗಿ ಚಿಕಿತ್ಸೆಗೆ ಸಂಬಂಧಿಸಿದಂತೆ ವೈದ್ಯರ ಸಮಾಲೋಚನಾ ಶುಲ್ಕ, ವೈದ್ಯಕೀಯ ತಪಾಸಣೆಗಳಿಗಾಗಿ ಹಾಗೂ ಔಷಧೋಪಚಾರಕ್ಕಾಗಿ ಭರಿಸಲಾದ ವೆಚ್ಚವನ್ನು ಸಂಬಂಧಪಟ್ಟ ಸರ್ಕಾರಿ ನೌಕರರ ನಿಯಂತ್ರಣಾಧಿಕಾರಿಗಳು 1963ರ ನಿಯಮಗಳಲ್ಲಿನ ಅವಕಾಶಗಳಂತೆ ಸರ್ಕಾರಿ ನೌಕರನಿಗೆ ಹಿಂಬರಿಸಲು ಅವಕಾಶವಿದೆ.

ಸರ್ಕಾರಿ ವೈದ್ಯಕೀಯ ಸಂಸ್ಥೆಯ ವೈದ್ಯರ ಶಿಫಾರಸ್ಸಿನಂತೆ ಕೈಗೊಳ್ಳಲಾದ ವೈದ್ಯಕೀಯ ತಪಾಸಣೆ ಹಾಗೂ ಔಷಧೋಪಚಾರ ವೆಚ್ಚದ ಮರುಪಾವತಿಗೆ ಕೂಡ ಅವಕಾಶವಿದೆ. ಸಿಜಿಎಚ್‌ಎಸ್‌ ವೈದ್ಯಕೀಯ ಚಿಕಿತ್ಸಾ ವಿಧಾನಗಳಲ್ಲಿ ಹೊರರೋಗಿ ಚಿಕಿತ್ಸೆಗಳು ಕೂಡ ಒಳಗೊಂಡಿರುತ್ತವೆ. ಹೀಗೆ ಸಿಜಿಎಚ್‌ಎಸ್‌ ಯೋಜನೆಯಡಿ ಗುರುತಿಸಲಾಗಿರುವ ಹೊರರೋಗಿ ಚಿಕಿತ್ಸೆಗಳು ಸೇರಿದಂತೆ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಈ ಯೋಜನೆಯಡಿ‌ ನೊಂದಾಯಿಸ್ಪಟ್ಟಿರುವ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆಯುವ ಇತರೆ ಯಾವುದೇ ಹೊರರೋಗಿ ಚಿಕಿತ್ಸೆಯಲ್ಲಿ ನೋಂದಾವಣೆ ಶುಲ್ಕ, ವೈದ್ಯರ ಸಮಾಲೋಚನಾ ಶುಲ್ಕ, ವೈದ್ಯರ ಶಿಫಾರಸ್ಸಿನ ಮೇರೆಗೆ ನಡೆಸಲಾಗುವ ರೋಗ ನಿರ್ಧಾರ ವಿಧಾನಗಳು ಒಳಗೊಂಡಿರುತ್ತವೆ ಹಾಗೂ ಇವು ನಗದುರಹಿತವಾಗಿರುತ್ತವೆ.

ಆದರೆ ಯಾವುದೇ ಹೊರರೋಗಿ ಚಿಕಿತ್ಸೆಗೆ ಭರಿಸುವ ಔಷಧೋಪಚಾರವು ನಗದು ರಹಿತವಾಗಿರುವುದಿಲ್ಲ. ಔಷಧೋಪಚಾರಕ್ಕಾಗಿ ಸರ್ಕಾರಿ ನೌಕರನು ಭರಿಸಿದ ವೆಚ್ಚವನ್ನು ಪ್ರಸ್ತುತ ಅನುಸರಿಸಲಾಗುತ್ತಿರುವ ಕ್ರಮದಲ್ಲಿ ಸಂಬಂಧಪಟ್ಟ ನೌಕರರ ನಿಯಂತ್ರಣಾಧಿಕಾರಿಗಳು ಸರ್ಕಾರಿ ನೌಕರರಿಗೆ ಹಿಂಬರಿಸುವುದು. ಪ್ರಸ್ತುತ 1963 ನಿಯಮಗಳಡಿ ನೀಡಲಾಗುತ್ತಿರುವ ಕನ್ನಡಕ, ಶ್ರವಣ ಸಾಧನ, ಕೃತಕ ವೈದ್ಯಕೀಯ ಸಾಧನ ಮುಂತಾದ ಸೌಲಭ್ಯಗಳಿಗೆ ಭರಿಸಲಾದ ವೆಚ್ಚವನ್ನು ನಿಯಮಾನುಸಾರ ಹಿಂಬರಿಸಲಾಗುವುದು.

ವಾರ್ಷಿಕ ವೈದ್ಯಕೀಯ ತಪಾಸಣೆ (Annual Health Checkup) 40 ವರ್ಷ ಮೀರಿದ ಸರ್ಕಾರಿ ನೌಕರರು ಮಾತ್ರ ಐಚ್ಛಿಕವಾಗಿ ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ಸರ್ಕಾರ ನಿಗದಿಪಡಿಸುವ ಮಿತಿಯಲ್ಲಿ ಕೆಲವು ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ಕೈಗೊಳ್ಳಬಹುದು. ಈ ತಪಾಸಣೆಗಳು ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಉಚಿತವಾಗಿರುತ್ತವೆ. ಸರ್ಕಾರಿ ಸಂಸ್ಥೆಗಳಲ್ಲಿ ಅಂತಹ ತಪಾಸಣಾ ಸೌಲಭ್ಯಗಳು ಲಭ್ಯವಿಲ್ಲದಿದ್ದಲ್ಲಿ ಅಧಿಸೂಚಿತ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಂತಹ ತಪಾಸಣೆಗಳನ್ನು ಕೈಗೊಂಡಲ್ಲಿ ಅಂತಹ ವೆಚ್ಚವನ್ನು ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+