7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು

7ನೇ ರಾಜ್ಯ ವೇತನ ಆಯೋಗ ಪ್ರಶ್ನಾವಳಿಗಳಲ್ಲಿ ಸರ್ಕಾರಿ ನೌಕರರ ವೇತನ ಶ್ರೇಣಿ/ ಹೊಸ ವೇತನ ರಚನೆ ಕುರಿತು ವೇತನ ಆಯೋಗಗಳು ಸಾಮಾನ್ಯವಾಗಿ ಅಳವಡಿಸಿಕೊಂಡಿರುವ ಸಾಮಾನ್ಯ ಮಾನದಂಡಗಳ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಿ ನೌಕರರಿಗೆ ನೀಡಿದ್ದ ಭರವಸೆಯಂತೆ ಈಗಾಗಲೇ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷರಾಗಿರುವ ಆಯೋಗ ತನ್ನ ಕೆಲಸಗಳನ್ನು ಆರಂಭಿಸಿದೆ.

ಕರ್ನಾಟಕ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು 19/11/2022ರ ಸರ್ಕಾರಿ ಆದೇಶದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ ತ್ರಿಸದಸ್ಯ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಲಾಗಿದೆ.

7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪ್ರಶ್ನಾವಳಿ ಬಿಡುಗಡೆ ಮಾಡಿದೆ. ಆಯೋಗ ಕೇಳಿರುವ ಪ್ರಶ್ನೆಗಳಿಗೆ ಫೆಬ್ರವರಿ 10ರೊಳಗೆ ಉತ್ತರ ನೀಡುವಂತೆ ಈಗಾಗಲೇ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ವೇತನ ಆಯೋಗವು ಶೀಘ್ರವೇ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.

ಆಯೋಗ ಪ್ರಶ್ನಾವಳಿಗಳಲ್ಲಿ ವೇತನ ಆಯೋಗವು ಸರ್ಕಾರಿ ನೌಕರರ ವೇತನ ಶ್ರೇಣಿ/ ಹೊಸ ವೇತನ ರಚನೆ ಕುರಿತು ವೇತನ ಆಯೋಗಗಳು ಸಾಮಾನ್ಯವಾಗಿ ಅಳವಡಿಸಿಕೊಂಡಿರುವ ಸಾಮಾನ್ಯ ಮಾನದಂಡಗಳ ಬಗ್ಗೆಯೂ ಮಾಹಿತಿ ನೀಡಿದೆ. ಪ್ರಶ್ನಾವಳಿಗಳ ಅಂಶಗಳು ಈ ಕೆಳಗಿನಂತಿವೆ...

ಒಟ್ಟು 8 ಮಾನದಂಡಗಳು

ಒಟ್ಟು 8 ಮಾನದಂಡಗಳು

ಕರ್ನಾಟಕ ರಾಜ್ಯಪತ್ರದ ಮೂಲಕ ಈಗಾಗಲೇ 7ನೇ ರಾಜ್ಯ ವೇತನ ಆಯೋಗ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಪ್ರಶ್ನಾವಳಿಯನ್ನು ಪ್ರಕಟಿಸಿದೆ. ಇದರಲ್ಲಿ ವೇತನ ಶ್ರೇಣಿ/ ಹೊಸ ವೇತನ ರಚನೆ ಕುರಿತು ವೇತನ ಆಯೋಗಗಳು ಸಾಮಾನ್ಯವಾಗಿ ಅಳವಡಿಸಿಕೊಂಡಿರುವ 8 ಸಾಮಾನ್ಯ ಮಾನದಂಡಗಳ ಮಾಹಿತಿ ನೀಡಲಾಗಿದೆ.

* ಅಗತ್ಯ ವಿದ್ಯಾರ್ಹತೆ, ಕೌಶಲ್ಯ ಮತ್ತು ತರಬೇತಿ
* ಜವಾಬ್ದಾರಿಯ ಪ್ರಮಾಣ
* ಕಾರ್ಯವ್ಯಾಪ್ತಿಯ ಕ್ಷೇತ್ರ
* ವೃತ್ತಿ ಸಂಬಂಧಿ ತೊಂದರೆಗಳು
* ನಿರ್ಣಯ ಕೈಗೊಳ್ಳುವ ಹಂತ
* ಲಭ್ಯವಿರುವ ಬಡ್ತಿಯ ಅವಕಾಶಗಳು
* ವಿವಿಧ ಇಲಾಖೆಗಳಲ್ಲಿರುವ ಸಮಾನ ದರ್ಜೆಯ ಹುದ್ದೆಗಳ ತುಲನಾತ್ಮಕ ಸ್ವರೂಪ
* ಕಾಲ ಕಾಲಕ್ಕೆ ಸ್ಥಾಪಿಸಲಾದ ವೇತನ ಶ್ರೇಣಿಗಳ ಪರಸ್ಪರ ಅಂತರ/ ಹೋಲಿಕೆಗಳು

ಸರ್ಕಾರಿ ನೌಕರರು ಅಭಿಪ್ರಾಯ ನೀಡಬಹುದು

ಸರ್ಕಾರಿ ನೌಕರರು ಅಭಿಪ್ರಾಯ ನೀಡಬಹುದು

ಇನ್ನು ಸರ್ಕಾರಿ ನೌಕರರು ಅಭಿಪ್ರಾಯ ನೀಡಲು ಪ್ರಶ್ನಾವಳಿಗಳು. ಪ್ರಚಲಿತ ಪರಿಸ್ಥಿತಿಯಲ್ಲಿ ಮೇಲಿನ ಅಂಶಗಳು ಪ್ರಸ್ತುತ/ ಸಮರ್ಪಕವೆಂದು ಭಾವಿಸುತ್ತೀರಾ? ನಿಮ್ಮ ಅನಿಸಿಕೆಯಲ್ಲಿ ಪ್ರಸ್ತುತವೆನಿಸುವ ಇತರ ಯಾವುದೇ ಅಂಶಗಳಿದ್ದಲ್ಲಿ, ದಯವಿಟ್ಟು ನಮೂದಿಸಿ.

ಸರ್ಕಾರಿ ಸೇವೆಯಲ್ಲಿ ಹಾಲಿ ಜಾರಿಯಲ್ಲಿರುವ ಕೆಲಸದ ಅವಧಿ, ರಜಾ ಸೌಲಭ್ಯಗಳು ಮತ್ತು ಸಾರ್ವಜನಿಕ ರಜಾ ದಿನಗಳ ಬಗ್ಗೆ ನಿಮ್ಮ ದೃಷ್ಟಿ ಕೋನವೇನು?

ವೇತನ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ವೆಚ್ಚವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸರ್ಕಾರದ ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಯಾವುದಾದರೂ ನಿರ್ದಿಷ್ಟ ಸಲಹೆಗಳಿವೆಯೇ?

ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ ಬಗ್ಗೆ ಶಿಫಾರಸ್ಸು ಮಾಡುವಾಗ ಆಯೋಗವು ನೆರೆ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದಲ್ಲಿ ಜಾರಿಯಲ್ಲಿರುವ ವೇತನ ಶ್ರೇಣಿಗಳನ್ನು ಪರಿಗಣಿಸಬೇಕೆ?.

ಸಲಹೆಗಳನ್ನು ಸಮರ್ಥನೆಯೊಂದಿಗೆ ಒದಗಿಸುವುದು

ಸಲಹೆಗಳನ್ನು ಸಮರ್ಥನೆಯೊಂದಿಗೆ ಒದಗಿಸುವುದು

ಪ್ರಶ್ನಾವಳಿಗಳಲ್ಲಿ ಸರ್ಕಾರಿ ನೌಕರರಿಗೆ ಹೊಸ ವೇತನ ರಚನೆಯನ್ನು ಶಿಫಾರಸು ಮಾಡುವಾಗ ಆಯೋಗವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಹುದ್ದೆಗಳ ಸಮಾನತೆಯನ್ನು ನಿರ್ಧರಿಸುವ ಮೂಲಕ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ. ಅಂತಹ ಸಮಾನತೆಯ ಸಾಧ್ಯತೆ ಮತ್ತು ಸಮಂಜಸವೆನಿಸಬಹುದಾದ ಹುದ್ದೆಗಳ ಪ್ರವರ್ಗಗಳ ಕುರಿತು ದಯವಿಟ್ಟು ಸಲಹೆಗಳನ್ನು ಸಮರ್ಥನೆಯೊಂದಿಗೆ ಒದಗಿಸುವುದು ಎಂದು ಹೇಳಲಾಗಿದೆ.

ಸರ್ಕಾರವು ದಿನಾಂಕ 01/07/2017 ರಿಂದ ಜಾರಿಗೊಳಿಸಿರುವ ಮುಖ್ಯ ವೇತನ ಶ್ರೇಣಿ ಬಗ್ಗೆ ಹಾಗೂ ಈ ಮುಖ್ಯ ಶ್ರೇಣಿಯನ್ನು 25 ಪ್ರತ್ಯೇಕ ವೇತನ ಶ್ರೇಣಿಗಳಾಗಿ ವಿಭಾಗಿಸಿರುವ ಬಗ್ಗೆ ಅಭಿಪ್ರಾಯವೇನು? ನಿಮ್ಮ ಅಭಿಪ್ರಾಯದಲ್ಲಿ ಇದು ಸೂಕ್ತವೇ? ಈ ಬಗ್ಗೆ ನಿಮ್ಮ ಯಾವುದೇ ಅಭಿಪ್ರಾಯ ಮತ್ತು ಸಲಹೆಗಳಿದ್ದಲ್ಲಿ, ನೀಡುವುದು ಎಂದು ತಿಳಿಸಲಾಗಿದೆ.

ನೂತನ ವೇತನ ಶ್ರೇಣಿಯ ಬಿಂದು

ನೂತನ ವೇತನ ಶ್ರೇಣಿಯ ಬಿಂದು

ಪ್ರಶ್ನಾವಳಿಗಳಲ್ಲಿ ಸರ್ಕಾರಿ ನೌಕರರ ಪ್ರಸ್ತುತ ವೇತನ ಶ್ರೇಣಿಯನ್ನು ದಿನಾಂಕ 01/07/2017 ರಂದು ಇದ್ದ 12 ತಿಂಗಳ ಸರಾಸರಿ ಬಳಕೆದಾರರ ಬೆಲೆ ಸೂಚ್ಯಂಕದ 276.9 (AIACPI) ಸೂಚ್ಯಂಕದ ಆಧಾರದಲ್ಲಿ ರೂಪಿಸಲಾಗಿದೆ. ನಿಮ್ಮ ಅಭಿಪ್ರಾಯದಲ್ಲಿ, ನೂತನ ವೇತನ ಶ್ರೇಣಿಯನ್ನು AIACPI ಯ ಯಾವ ಬಿಂದುವಿನ ಆಧಾರದ ಮೇಲೆ ರೂಪಿಸಬೇಕು? ಎಂದು ಅಭಿಪ್ರಾಯ ಕೇಳಲಾಗಿದೆ.

ಈಗ ಜಾರಿಯಲ್ಲಿರುವ ವೇತನ ಶ್ರೇಣಿಗಳಲ್ಲಿ (ವೇತನ + ತುಟ್ಟಿ ಭತ್ಯೆ + ಮನೆಬಾಡಿಗೆ ಭತ್ಯೆ + ನಗರ ಪರಿಹಾರ ಭತ್ಯೆ ಸೇರಿ) ಮಾಹೆಯಾನ ಕನಿಷ್ಟ ವೇತನ ಬೆಂಗಳೂರಿನಲ್ಲಿ ರೂ. 26,850 ಮತ್ತು ಗ್ರಾಮಾಂತರ ಪ್ರದೇಶದಲ್ಲಿ ರೂ. 23,630 ಇರುತ್ತದೆ. ಹಾಲಿ ಜೀವನ ನಿರ್ವಹಣಾ ವೆಚ್ಚವನ್ನು ಪರಿಗಣಿಸಿದ್ದಲ್ಲಿ ವೇತನ ಎಷ್ಟಿರಬೇಕು? ಎಂದು ಸಲಹೆ ಕೇಳಲಾಗಿದೆ.

ಸೇವಾ ಅವಧಿ ಮುಂಬಡ್ತಿ ಕುರಿತು

ಸೇವಾ ಅವಧಿ ಮುಂಬಡ್ತಿ ಕುರಿತು

ಈಗ ಅತ್ಯಂತ ಕೆಳಗಿನ ವೇತನ ಶ್ರೇಣಿಯ ಕನಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಗರಿಷ್ಟ ವೇತನ ಇವುಗಳ ನಡುವಿನ ಅನುಪಾತ 1:8.86 ರಷ್ಟಿದ್ದು, ಅತ್ಯಂತ ಕೆಳಗಿನ ವೇತನ ಶ್ರೇಣಿಯ ಗರಿಷ್ಟ ವೇತನ ಮತ್ತು ಅತ್ಯಂತ ಮೇಲಿನ ವೇತನ ಶ್ರೇಣಿಯ ಗರಿಷ್ಟವೇತನ ಇವುಗಳ ನಡುವಿನ ಅನುಪಾತ 1:5.20 ರಷ್ಟಿದೆ. ಈ ಅನುಪಾತಗಳನ್ನು ಪುನರ್‌ಪರಿಶೀಲಿಸಬೇಕು/ ಮಾರ್ಪಡಿಸಬೇಕು ಎಂದು ನೀವು ಭಾವಿಸುತ್ತೀರಾ? ಎಂದು ಸಲಹೆ ಕೇಳಲಾಗಿದೆ.

ವಿವಿಧ ವೇತನ ಶ್ರೇಣಿಗಳ ನಡುವೆ ಈಗ ಇರುವ ಹೋಲಿಕೆಯು, ವಿವಿಧ ಹಂತಗಳಿಗೆ ಅನ್ವಯಿಸುವ ಜವಾಬ್ದಾರಿಗಳಿಗೆ ಅನುಗುಣವಾಗಿದೆಯೇ?. ಯಾವುದಾದರೂ ನಿರ್ದಿಷ್ಟ ಹಂತಗಳಲ್ಲಿ ವಿಷಯದಲ್ಲಿ ಬದಲಾವಣೆ ಅಗತ್ಯವಿದ್ದರೆ, ದಯವಿಟ್ಟು ಕಾರಣಗಳನ್ನು ತಿಳಿಸುವುದು.

ನಿಮ್ಮ ಅಭಿಪ್ರಾಯದಲ್ಲಿ ಸರ್ಕಾರಿ ನೌಕರರಿಗೆ ತಮ್ಮ ಸೇವಾ ಅವಧಿಯಲ್ಲಿ ಎಷ್ಟು ಮುಂಬಡ್ತಿಗೆ ಅವಕಾಶಗಳಿರಬೇಕು (30-35 ವರ್ಷಗಳ ಅವಧಿಯಲ್ಲಿ)? ಎಂದು ಅಭಿಪ್ರಾಯ ಕೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+