• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಚುನಾವಣೆ: ಆಸ್ತಿ ವಿವರ ಮುಂದಿಟ್ಟ ಪಾಪ್ ಗಾಯಕ ಕಾನ್ಯೆ ವೆಸ್ಟ್

|

ಕೊರೊನಾವೈರಸ್ ಸೋಂಕಿನಿಂದ ತತ್ತರಿಸಿರುವ ವಿಶ್ವದ ದೊಡ್ಡಣ್ಣ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಪ್ರಖ್ಯಾತ ಹಿಪ್ ಹಾಪ್ ಸ್ಟಾರ್ ಎನಿಸಿರುವ ಕಾನ್ಯೆ ವೆಸ್ಟ್ ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ.

ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧ್ವನಿಯಾಗಿ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ಕಾನ್ಯೆ ವೆಸ್ಟ್ ದಿಢೀರ್ ನಿರ್ಧಾರವು ದೇಶದ ಮನರಂಜನೆ, ವ್ಯಾಪಾರ ಹಾಗೂ ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಪತ್ನಿ ಕಿಮ್ ಕದರ್ಶಿಯಾನ್ ಜೊತೆ ವಿರಸ, ಅನಗತ್ಯ ಭಾವುಕ ಭಾಷಣಗಳ ಮೂಲಕ ಗಮನ ಸೆಳೆದಿದ್ದ ಕಾನ್ಯೆ ವೆಸ್ಟ್ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬ ನಂಬಿಕೆ ಮತದಾರರಿಗೆ ಬಂದ ಹಾಗೆ ಕಾಣುತ್ತಿಲ್ಲ.

ಯುಎಸ್ ಎಲೆಕ್ಷನ್: ಹಿನ್ನಡೆ ಅನುಭವಿಸಿದ ಗಾಯಕ ಕಾನ್ಯೆ ವೆಸ್ಟ್

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯು ನವೆಂಬರ್.03, 2020ರಲ್ಲಿ ನಡೆಯಲಿದೆ. ಈ ದಿನಾಂಕದೊಳಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆಯಾಗುವುದಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಯುಎಸ್ ಉಪಾಧ್ಯಕ್ಷ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬಿಡೆನ್ ಕಣದಲ್ಲಿದ್ದಾರೆ.

ಅಕ್ಟೋಬರ್ ತಿಂಗಳ ಐಟಿ ವಿವರ ಸಲ್ಲಿಕೆ

ಅಕ್ಟೋಬರ್ ತಿಂಗಳ ಐಟಿ ವಿವರ ಸಲ್ಲಿಕೆ

ಯುಎಸ್ ಸರ್ಕಾರಕ್ಕೆ ಸಲ್ಲಿಸಿರುವ ಇತ್ತೀಚಿನ ಆದಾಯ, ಸಾಲ ವಿವರ ಪ್ರಕಾರ, ಕಾನ್ಯೆ ಅವರ ಫ್ಯಾಷನ್ ಕಂಪನಿ ಯಿಜಿ(yeezy) ಎಲ್ಎಲ್ ಸಿ 50 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಕಳೆದ ವರ್ಷ ಇದೇ ಕಂಪನಿ ಮೌಲ್ಯ 3 ಮಿಲಿಯನ್ ಡಾಲರ್ ನಷ್ಟಿತ್ತು ಎಂದು ಬ್ಯಾಂಕ್ ಆಫ್ ಅಮೆರಿಕಾ ಕಾರ್ಪ್ ವರದಿ ಮಾಡಿದೆ. ಅಡಿಡಾಸ್ ಎಜಿ ಹಾಗೂ ನೈಕಿ ಐಎನ್ ಸಿಯಲ್ಲಿರುವ ಪಾಲಿ ಕ್ರಮವಾಗಿ 50 ಮಿಲಿಯನ್ ಡಾಲರ್ ಹಾಗೂ 25 ಮಿಲಿಯನ್ ಡಾಲರ್ ನಷ್ಟಿದೆ. ಒಟ್ಟಾರೆ, 3.15 ಬಿಲಿಯನ್ ಡಾಲರ್ ಆಸ್ತಿ ಹೊಂಡಿದ್ದು, 100 ಮಿಲಿಯನ್ ಸಾಲವನ್ನು ಹೊತ್ತುಕೊಂಡಿದ್ದಾರೆ.

ಕಾನ್ಯೆ ವೆಸ್ಟ್ ಅಮೆರಿಕಾದ ಪ್ರಖ್ಯಾತ ಪಾಪ್ ಸಿಂಗರ್

ಕಾನ್ಯೆ ವೆಸ್ಟ್ ಅಮೆರಿಕಾದ ಪ್ರಖ್ಯಾತ ಪಾಪ್ ಸಿಂಗರ್

1977ರ ಜೂನ್.08ರಂದು ಜನಿಸಿದ ಕಾನ್ಯೆ ವೆಸ್ಟ್ ಅಮೆರಿಕಾದ ಪ್ರಖ್ಯಾತ ಪಾಪ್ Rapper ಸಿಂಗರ್ ಆಗಿದ್ದಾರೆ. ಅಷ್ಟಲ್ಲದೇ ಗಾಯಕ, ಗೀತ ರಚನೆಕಾರ, ಸಂಗೀತ ನಿರ್ಮಾಪಕ, ಉದ್ಯಮಿ, ಫ್ಯಾಷನ್ ಡಿಸೈನರ್ ಹಾಗೂ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ವೆಸ್ಟ್ ಅವರ ಕಾಲದ ಸಂಗೀತಗಾರರನ್ನು ಹೆಚ್ಚು ಅನುಸರಿಸಿದ, ಮೆಚ್ಚಿದ, ಪ್ರಭಾವ ಬೀರಿದವರಲ್ಲಿ ಒಬ್ಬರು. ಕಾನ್ಯೆ ವೆಸ್ಟ್ ಬಹುಮುಖ ಕಲಾವಿದರಾಗಿದ್ದು, ಅವರ ಹಾಡುಗಳು ಹಿಪ್ ಹಾಪ್, ಆತ್ಮ, ಬರೊಕ್ ಪಾಪ್, ಎಲೆಕ್ಟ್ರೋ, ಇಂಡೀ ರಾಕ್, ಸಿಂಥ್-ಪಾಪ್, ಕೈಗಾರಿಕಾ ಮತ್ತು ಸುವಾರ್ತೆ ಸೇರಿದಂತೆ ಪ್ರತಿಯೊಂದು ಪ್ರಕಾರದಲ್ಲೂ ಸೇವೆ ಸಲ್ಲಿಸಿದ್ದಾರೆ.

ಕಾನ್ಯೆ ವೆಸ್ಟ್ ವಾರ್ಷಿಕ ಆದಾಯ 9708 ಕೋಟಿ ರೂ

ಕಾನ್ಯೆ ವೆಸ್ಟ್ ವಾರ್ಷಿಕ ಆದಾಯ 9708 ಕೋಟಿ ರೂ

ಕಾನ್ಯೆ ವೆಸ್ಟ್ ವಾರ್ಷಿಕ ಆದಾಯ 9708 ಕೋಟಿ ರೂ. ಅಮೆರಿಕಾದ ಪ್ರಸಿದ್ಧ Rapper ಸಿಂಗರ್ ಆಗಿರುವ ಕಾನ್ಯೆ ವೆಸ್ಟ್ ವಾರ್ಷಿಕ ಆದಾಯವು ಫೋರ್ಬ್ಸ್ ವರದಿಯ ಪ್ರಕಾರ 1.3 ಬಿಲಿಯನ್ ಡಾಲರ್(97,08, 32,85,000 ರೂ.) ವಾರ್ಷಿಕ ಆದಾಯವನ್ನು ಹೊಂದಿದ್ದಾರೆ. ಇನ್ನು, 2020 ಪ್ರಕಾರ ಒಟ್ಟು 3.3 ಬಿಲಿಯನ್ ಡಾಲರ್(2,46,44,21,85,000 ರೂ.) ಆಸ್ತಿಯನ್ನು ಹೊಂದಿದ್ದಾರೆ. ಇನ್ನು, ಕಾನ್ಯೆ ವೆಸ್ಟ್ ಜೊತೆಗೆ ಅವರ ಪತ್ನಿ ಕಿಮ್ ಕರ್ದಾಶಿಯಾನ್ ವೆಸ್ಟ್ ಆಸ್ತಿಮೌಲ್ಯವನ್ನು ಸೇರ್ಪಡೆಗೊಳಿಸಿದ್ದಲ್ಲಿ ದಂಪತಿಯ ಒಟ್ಟು ಆಸ್ತಿ ಮೌಲ್ಯವು 4.1 ಬಿಲಿಯನ್ ಡಾಲರ್ (3,06,18,57,45,000 ರೂ.) ಆಗುತ್ತದೆ.

ದಕ್ಷಿಣ ಕರೊಲಿನಾದಲ್ಲಿ ಕಾನ್ಯೆಗೆ ಹಿನ್ನಡೆ

ದಕ್ಷಿಣ ಕರೊಲಿನಾದಲ್ಲಿ ಕಾನ್ಯೆಗೆ ಹಿನ್ನಡೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿ, ಕಣಕ್ಕಿಳಿದಿರುವ ಜನಪ್ರಿಯ ಗಾಯಕ ಕಾನ್ಯ್ ವೆಸ್ಟ್ ಆರಂಭಿಕ ಆಘಾತ ಎದುರಾಗಿತ್ತು. ದಕ್ಷಿಣ ಕರೋಲಿನಾದಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಬೇಕಾದ ಕಡ್ಡಾಯ 10,000 ಸಹಿಗಳನ್ನು ಪಡೆದುಕೊಳ್ಳುವುದರಲ್ಲಿ ಕಾನ್ಯೆ ವಿಫಲರಾಗಿದ್ದಾರೆ ಎಂದು ದಕ್ಷಿಣ ಕರೊಲಿನಾ ರಾಜ್ಯದ ಚುನಾವಣಾ ಅಧಿಕಾರಿ ಕ್ರಿಸ್ ವ್ಹಿಟ್ ಮಿಟ್ ಹೇಳಿದ್ದಾರೆ.

ಟೆಕ್ಸಾಸ್ ನಲ್ಲೂ ಇದೇ ರೀತಿ ಅವಕಾಶ ತಪ್ಪಿಸಿಕೊಂಡ ಕಾನ್ಯೆಗೆ ಒಕ್ಲಾಹೋಮಾ ಸೇರಿದಂತೆ ಕನಿಷ್ಠ 12 ರಾಜ್ಯಗಳಲ್ಲಿ ಬ್ಯಾಲೆಟ್ ಸಿಕ್ಕಿದೆ. ಈ ಮುನ್ನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಕಾನ್ಯೆ ತಾವು ಕೂಡಾ ಅಭ್ಯರ್ಥಿ ಎಂದು ಜುಲೈ 4ರಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Kanye West reported his financial assets and liabilities in an October filing to the U.S. Office of Government Ethics as part of his run for president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X