• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡದ 'ಅರ್ನಬ್' ಚಂದನ್ ಶರ್ಮ ಬ್ಯಾಕ್ ವಿತ್ 'ಪವರ್'

By ಜೇಮ್ಸ್ ಮಾರ್ಟಿನ್
|

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ. BARC ರಿಪೋರ್ಟ್ ನಲ್ಲಿ ಯಾವ ಸುದ್ದಿ ವಾಹಿನಿ ಮುಂದಿದೆ.ಯಾವ ಹೊಸ ಚಾನೆಲ್ ಬರುತ್ತಿದೆ ಎಲ್ಲದರ ಸಂಕ್ಷಿಪ್ತ ಸುದ್ದಿ ನಿಮಗಿಲ್ಲಿ ಸಿಗಲಿದೆ.

ಸ್ಟಾರ್ ಆಂಕರ್ ಎನಿಸಿಕೊಂಡಿದ್ದ ಚಂದನ್ ಶರ್ಮಾ ಮತ್ತೆ ಟಿವಿ ಮಾಧ್ಯಮದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಸದ್ಯದ ಚರ್ಚಿತ ಸುದ್ದಿ. ಬಿ.ಟಿವಿಯಲ್ಲಿದ್ದ ಚಂದನ್ ಶರ್ಮಾ ಅವರು ಅಲ್ಲಿ ಇದ್ದಷ್ಟು ಕಾಲ ಟಿಆರ್ ಪಿ ಮೀಟರ್ ಮೇಲೇರುವಂತೆ ನೋಡಿಕೊಂಡಿದ್ದರು.

ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ

ಆನಂತರ ಒಳ್ಳೆ ಆಫರ್ ಸಿಕ್ತು ಅಂತಾ ಬೇರೆಡೆ ಹೋಗಿದ್ದರು. ಆದರೆ, ಸರಿ ಸುಮಾರು 9-10 ತಿಂಗಳು ಟಿವಿಯಲ್ಲಂತೂ ಕಾಣಿಸಿಕೊಂಡಿರಲಿಲ್ಲ. ಈಗ ಎಲ್ಲಿದ್ದಾರೆ? ಯಾವ ಚಾನೆಲ್ ನಲ್ಲಿ ಬರ್ತಾರೆ ವಿವರಗಳಿಗೆ ಮುಂದೆ ಓದಿ..

ಸುದ್ದಿ ವಾಹಿನಿಗಳಿಂದ ವಲಸೆ ಸದ್ಯಕ್ಕೆ ಕಡಿಮೆಯಾಗಿದೆ. ಫಿಕ್ಷನ್ ಟೀಮ್ ಗಳ ಪುನರ್ ರಚನೆಯಾಗುತ್ತಿದೆ. ಧಾರಾವಾಹಿಗಳ ಭರಾಟೆಯ ನಡುವೆ ರಿಯಾಲಿಟಿ ಶೋ, ಟಾಕ್ ಶೋ, ಗೇಮ್ ಶೋಗಳು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಸುವರ್ಣ ಪ್ಲಸ್ , ಜೀ ಕನ್ನಡ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಗಳ ಉದಯ ಟಿವಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ.

 'ನೋ ನಾನ್ಸೆಸ್ ' ಎಂಬ ಟ್ಯಾಗ್ ಲೈನ್ ಯಳ್ಳ ಪವರ್

'ನೋ ನಾನ್ಸೆಸ್ ' ಎಂಬ ಟ್ಯಾಗ್ ಲೈನ್ ಯಳ್ಳ ಪವರ್

ಚಂದನ್ ಶರ್ಮಾ ಅವರ ನೇತೃತ್ವದಲ್ಲಿ 'ಪವರ್ ಟಿವಿ' ಗೆ 'ನೋ ನಾನ್ಸೆಸ್ ' ಇದರ ಟ್ಯಾಗ್ ಲೈನ್ ಇದೆ. ನಮ್ಮ ಚಾನೆಲ್ ಗೆ ಯಾವುದೇ ರಾಜಕಾರಣಿಯ ಸಂಬಂಧವಿಲ್ಲ, ನಾವು ಕ್ರೈಂ ನ್ಯೂಸ್ ನ ವೈಭವೀಕರಿಸಲ್ಲ, ಕಂಡ್ ಕಂಡವರ ಮನೆ ಬೀದಿ ಜಗಳಾನ ಇಟ್ಕೊಂಡು ಎಳೆದಾಡಲ್ಲ. ಒಟ್ನಲ್ಲಿ ನಮ್ಮಲ್ಲಿ ನ್ಯೂಸ್ ಸೆನ್ಸ್ ಗೆ ಮಾತ್ರ ಸ್ಪೇಸ್, ನಾನ್ ಸೆನ್ಸ್ ಗೆ ಜಾಗವಿಲ್ಲ, ನೋ ನ್ಯೂಡಿಟಿ, ನೋ ನೆಗೆಟಿವಿಟಿ, ನೋ ನೆಗ್ಲಿಜೆನ್ಸಿ ಎನ್ನುತ್ತಿದ್ದಾರೆ.

ಅಕ್ಟೋಬರ್ 19 ರಂದು ಲಾಂಚ್ ಆಗಲಿದೆ

ಅಕ್ಟೋಬರ್ 19 ರಂದು ಲಾಂಚ್ ಆಗಲಿದೆ

ಚಂದನ್ ಅವರು ಜನಶ್ರೀ ಚಾನೆಲ್ ನಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದರು. ವರ್ಷದ ಹಿಂದೆ ಬಿ.ಟಿವಿಯಲ್ಲಿದ್ದರು ಆ ಚಾನೆಲ್ ಬಿಟ್ಟು, ಟಿವಿ9 ಸ್ಕ್ರೀನ್ ನಲ್ಲಿ ಸ್ವಲ್ಪದಿನ ಕಾಣಿಸಿಕೊಂಡಿದ್ದರು. ಈಗ ಹೊಸ ಚಾನಲ್ ನ ಸಾರಥ್ಯ ವಹಿಸಿಕೊಂಡು ಕಮ್ ಬ್ಯಾಕ್ . ಬೆಂಗಳೂರಿನ ಇನ್ ಫ್ರೆಂಟ್ರಿ ರೋಡಲ್ಲಿರೋ ಎಂಬಿಸಿ ಪಾಯಿಂಟ್ ನ ಮೂರನೇ ಮಹಡಿಯಲ್ಲಿದೆ ಪವರ್ ಸಂಸ್ಥೆ ಕಚೇರಿಯಿದೆ. ಇತ್ತೀಚೆಗೆ ಪವರ್ ಕನ್ನಡ ಚಾನೆಲ್ ನ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಸಂಸ್ಥೆ ಹೇಳಿದೆ.

BARC : ವರದಿ ಟಾಪ್ ನ್ಯೂಸ್ ಚಾನೆಲ್

BARC : ವರದಿ ಟಾಪ್ ನ್ಯೂಸ್ ಚಾನೆಲ್

39ನೇ ವಾರದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ ಕನ್ನಡ ಸುದ್ದಿ ವಾಹಿನಿಗಳು, ಕರ್ನಾಟಕ(KTK), ಬೆಂಗಳೂರು(BLR), ನಗರ(Urban) ಹಾಗೂ ಗ್ರಾಮೀಣ(Rural) ವಿಭಾಗದ ವರದಿ ಆಧಾರಿತ

Channel-KTK-BLR-Urban-Rural (ratings)

1. ಟಿವಿ9 ಕನ್ನಡ 127-171-128-113

2. ಪಬ್ಲಿಕ್ ಟಿವಿ : 69-88-66-65

3. ಸುವರ್ಣ 24/7 :53-66-58-46

4. ನ್ಯೂಸ್18 ಕನ್ನಡ :37-36-34-39

5. ದಿಗ್ವಿಜಯ :24-23-22-25

6. ಬಿಟಿವಿ : 18-40-18-12

7 ಟಿವಿ 5 ಕನ್ನಡ : 14-11-20-12

8 ಪ್ರಜಾ ಟಿವಿ :12-15-12-11

9 ಉದಯ ಟಿವಿ : 9-9-8-9

10 ಕಸ್ತೂರಿ :9-9-8-9

11. ರಾಜ್ ನ್ಯೂಸ್ ಕನ್ನಡ : 8-8-7-9

12. ಟಿವಿ1 ನ್ಯೂಸ್ 24 ‍X 7 : 5-7-6-4

13. ನ್ಯೂಸ್ ಎಕ್ಸ್ ಕನ್ನಡ : 4-7-3-4

ಮಾಧ್ಯಮ ಲೋಕದ ಇನ್ನಷ್ಟು ಸುದ್ದಿ

ಮಾಧ್ಯಮ ಲೋಕದ ಇನ್ನಷ್ಟು ಸುದ್ದಿ

* ಟಿವಿ9 ಸಂಸ್ಥೆಗೆ ಹೊಸ ಹೂಡಿಕೆದಾರರು ಸಿಕ್ಕಿದ್ದಾರೆ. ಆದರೆ, ಮ್ಯಾನೇಜ್ಮೆಂಟ್ ನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಸಿನೆಸ್ ಲೈನ್ ವರದಿ ಮಾಡಿದೆ.

* ಬೆಂಗಳೂರಿನಲ್ಲಿ ಸುದ್ದಿ ಟಿವಿ ಎಷ್ಟೋ ಕಡೆ ಪ್ರಸಾರವಾಗುತ್ತಿಲ್ಲ. ಈ ಚಾನೆಲ್ ಮೇಲೆ ಜೀ ಸಂಸ್ಥೆ ಕಣ್ಣು ಹಾಕಿದ್ದು, ಖರೀದಿ ಮಾತುಕತೆ ನಡೆದಿದೆ.

* ಸ್ವರಾಜ್ ಇಂಡಿಯಾ ಬಂದ್ ಆಗಿದ್ದು, ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದ ಎಂಇಪಿಯ ನೌಹೀರಾ ಶೇಖ್, ಮಾಧ್ಯಮ ಮುಖ್ಯಸ್ಥರಾಗಿದ್ದ ಸಮೀಯುಲ್ಲಾ,ಸಂಸ್ಥೆಯ ಸಂಪಾದಕಿ ನಾಝಿಯಾ ಕೌಸರ್ ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. 200 ಕ್ಕೂ ಅಧಿಕ ಸಿಬ್ಬಂದಿ ವೇತನ ಸಿಗದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿಂದೆ ಜನಶ್ರೀ ಸೇರಿದಂತೆ ಕೆಲವು ಚಾನೆಲ್ ಗಳ ಹಣೆಬರಹವೂ ಇದೇ ರೀತಿ ಆಗಿತ್ತು.

English summary
Kannada electronic media developments : Star Anchor Chandan Sharma back in avatar with new channel Power Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X