ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಕ್‌ನೊಳಗಿದ್ದ ವ್ಯಕ್ತಿಯ ಮೇಲೆ ಮಣ್ಣು ಸುರಿದ ಜೆಸಿಬಿ: ವಿಡಿಯೋ ವೈರಲ್

|
Google Oneindia Kannada News

ಕೆಲವು ಬೃಹತ್ ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುವಂತಹ ಸ್ಥಳಗಳಲ್ಲಿ ಬೆಚ್ಚಿಬೀಳಿಸುವಂತಹ ಘಟನೆಗಳು ನಡೆಯುತ್ತವೆ. ಅದಕ್ಕೆ ಈ ವೈರಲ್ ವಿಡಿಯೋವೊಂದು ಸಾಕ್ಷಿಯಾಗಿದೆ. ಟ್ರಕ್‌ನೊಳಗೆ ಮನುಷ್ಯನಿದ್ದಾನೆ ಎಂದು ತಿಳಿಯದೆ ಜೆಸಿಬಿ ಯಂತ್ರದಿಂದ ಆ ವ್ಯಕ್ತಿಯ ಮೇಲೆ ಮಣ್ಣು ಸುರಿಯಲಾಗಿದೆ. ಈ ಘಟನೆಯ ವೀಡಿಯೋ ಸಾಮಾಝಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತನ್ನ ಮೇಲೆ ಮಣ್ಣು ಬೀಳುತ್ತಿದ್ದಂತೆ ಟ್ರಕ್‌ನೊಳಗಿದ್ದ ವ್ಯಕ್ತಿ ಎದ್ದು ನಿಂತು ಕೂಗಿಕೊಂಡಿದ್ದಾನೆ.

'ನಿತೀಶ್ ರಾಮ, ಮೋದಿ ರಾವಣ': ಪಾಟ್ನಾ ಆರ್‌ಜೆಡಿ ಕಚೇರಿಯ ಹೊರಗೆ ಪೋಸ್ಟರ್ ವೈರಲ್'ನಿತೀಶ್ ರಾಮ, ಮೋದಿ ರಾವಣ': ಪಾಟ್ನಾ ಆರ್‌ಜೆಡಿ ಕಚೇರಿಯ ಹೊರಗೆ ಪೋಸ್ಟರ್ ವೈರಲ್

ಸಾಮಾನ್ಯವಾಗಿ ನಿರ್ಮಾಣ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಬಹಳಷ್ಟು ಕಾರ್ಮಿಕರು ಮತ್ತು ಯಂತ್ರಗಳನ್ನು ನಿಯೋಜಿಸಲಾಗುತ್ತದೆ. ಕಡಿಮೆ ಕಾರ್ಮಿಕರ ಕಾರ್ಯ ವೇಳೆ ಯಂತ್ರಗಳು ಹಾಗೂ ಯಂತ್ರಗಳು ಕಾರ್ಯ ನಿರ್ವಹಿಸದ ವೇಳೆ ಹೆಚ್ಚು ಕಾರ್ಮಿಕರು ಕಟ್ಟಡ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ. ಆದರಿಲ್ಲಿ ಯಂತ್ರ ವ್ಯಕ್ತಿ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಮೂಲಕ ಚಾಲಕನ ಅಜಾಗರೂಕತೆಯಿಂದಾಗಿ ಒಂದು ದುರಂತ ಸಂಭವಿಸಿದೆ.

JCB threw mud on the person inside the truck: Video goes viral

ಅದೃಷ್ಟವಶಾತ್ ವ್ಯಕ್ತಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಚಾಲಕನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ. ಈ ವೈರಲ್ ವಿಡಿಯೊವು ಜೆಸಿಬಿ ಯಂತ್ರ ಇರುವ ಸ್ಥಳದಲ್ಲಿ ಸಂಭವಿಸಿದ ಘಟನೆಯಾಗಿದ್ದು, ಸ್ಥಳೀಯರು ಇದನ್ನು ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋದಲ್ಲಿ ಟ್ರಕ್ಕೊಂದರಲ್ಲಿ ಜೆಸಿಬಿಯಿಂದ ಮಣ್ಣು ಹಾಕುವುದನ್ನು ಕಾಣಬಹುದು. ಮಣ್ಣು ಸಂಪೂರ್ಣವಾಗಿ ಸುರಿಯುತ್ತಿದ್ದಂತೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಎದ್ದು ನಿಲ್ಲುತ್ತಾನೆ. ಬಿಳಿ ಬಟ್ಟೆ ಹಾಕಿಕೊಂಡಿದ್ದ ವ್ಯಕ್ತಿಯ ದೇಹವೆಲ್ಲ ಮಣ್ಣು ಮೆತ್ತುಕೊಂಡಿರುತ್ತದೆ. ಪ್ಯಾಂಟ್ ಕೆಳಗೆ ಜರಿದಿರುತ್ತದೆ. ಈ ವೇಳೆ ಗಾಬರಿಗೊಂಡ ಆತ ಯಂತ್ರದ ಚಾಲಕನನ್ನು ಕೂಗುತ್ತಾನೆ. ಈ ವಿಡಿಯೋವನ್ನು EI Chiki ಎಂಬಾ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ವಿಡಿಯೋ 1.8k ಜನರು ವೀಕ್ಷಿಸಿದ್ದಾರೆ. ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.

English summary
A video of a driver throwing dirt on a person inside the truck with a JCB has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X