ತಾಯಿ ಪ್ರೀತಿ ಅಂದ್ರೆ ಇದೆನಾ?: ಮಗು ಹೊತ್ತ ಮಹಿಳೆಯನ್ನು ನೋಡಿ ತನ್ನ ಮಗುವನ್ನು ಮುದ್ದಾಡಿದ ಚಿಂಪಾಂಜಿ
ಸಾಮಾನ್ಯವಾಗಿ ಚಿಂಪಾಂಜಿಯನ್ನ ನೀವೆಲ್ಲಾ ನೋಡಿರುತ್ತೀರಾ. ಅದನ್ನು ನೋಡಲು ಹಲವಾರು ಜನ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಪ್ರಾಣಿ ಸಂಗ್ರಹಾಲಯಕ್ಕೆ ಹೋಗಿ ಅದನ್ನು ನೋಡುವುದು ತುಂಬಾ ಖುಷಿ ನೀಡುತ್ತದೆ. ಅದು ಪ್ರಾಣಿಯೇ ಆಗಿದ್ದರು ಕೆಲವೊಮ್ಮೆ ಮನುಷ್ಯರಂತೆ ವರ್ತಿಸುತ್ತದೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಬಹುಬೇಗ ವೈರಲ್ ಆಗಿಬಿಡುತ್ತವೆ.
It stays cute, but it’s 2 clips. See community note to it:
— zaji-daFella (@ZajicekDavid) December 24, 2023
“The video is edited and shows two different scenarios at two different zoos. The first clip was recorded at Franklin Park Zoo in Boston, and the latter at Calgary Zoo in Canada.
First clip: https://t.co/nFHorLYQ5P…
ಪ್ರಾಣಿ ಪ್ರಿಯರು ನಮ್ಮ ನಡುವೆ ಹೆಚ್ಚಾಗಿದ್ದಾರೆ. ನಾಯಿ, ಬೆಕ್ಕು, ನಾನಾ ಹಕ್ಕಿಗಳನ್ನು ಸಾಕುವುದರೊಂದಿಗೆ ಕಾಡು ಪ್ರಾಣಿಗಳನ್ನೂ ಅವರು ಇಷ್ಟಪಡುತ್ತಾರೆ. ವಿಶೇಷವಾಗಿ ಪುಟ್ಟ ಮಕ್ಕಳು ಸಾಕು ಪ್ರಾಣಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಹೀಗಾಗಿ ಕೆಲ ಪ್ರಾಣಿಗಳನ್ನು ಕಾಡಿನಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಅವುಗಳನ್ನು ನಾಡಿಗೆ ತಂದು ಅವುಗಳಿಗೆ ಬೇಕಾದ ವ್ಯವಸ್ಥೆ ಮಾಡಿ ಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗುತ್ತದೆ.

ಇಂತಹ ಕಾಡು ಪ್ರಾಣಿಗಳನ್ನು ನೋಡುವುದು ಅವುಗಳ ವರ್ತನೆಯನ್ನು ಕಣ್ತುಂಬಿಕೊಳ್ಳುವುದು ಒಂದು ರೀತಿಯ ಖುಷಿ ನೀಡುತ್ತದೆ. ಹೀಗೆ ಚಿಂಪಾಂಜಿಯೊಂದು ತನ್ನ ಮಗುವಿಗೆ ತಾಯಿ ಪ್ರೀತಿ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದರಲ್ಲಿ ಏನು ವಿಶೇಷ ಅಂತಿರಾ? ಇದರಲ್ಲಿ ವಿಶೇಷತೆ ಇದೆ.
ಚಿಂಪಾಂಜಿ ಮನುಷ್ಯರಂತೆ ತನ್ನ ಮಗುವಿಗೆ ತಾಯಿ ಪ್ರೀತಿ ನೀಡಿದೆ. ತಾಯಿಯೊಬ್ಬಳು ಚಿಂಪಾಂಜಿಯನ್ನು ನೋಡಲು ವಿಂಡೋ ಪಕ್ಕದಲ್ಲಿ ಕುಳಿತಿರುತ್ತಾರೆ. ತಾಯಿಯ ಮಡಿಲಲ್ಲಿ ಪುಟ್ಟ ಮಗು ಮಲಗಿರುತ್ತದೆ. ಆಗ ಚಿಂಪಾಂಚಿಯೊಂದು ವಿಂಡೋ ಬಳಿ ಬಂದು ತಾಯಿ ಹಾಗೂ ಮಗುವನ್ನು ನೋಡುತ್ತದೆ.
ಮಗುವನ್ನು ಮಲಗಿಸಿಕೊಂಡ ತಾಯಿ ಚಿಂಪಾಂಚಿಯನ್ನು ನೋಡಿ ಮಾತನಾಡುವಾಗ ತಕ್ಷಣ ಚಿಂಪಾಂಜಿ ತನ್ನ ಮಗುವನ್ನು ಎತ್ತಿಕೊಂಡು ಬರುತ್ತದೆ. ತನ್ನ ಮಗುವನ್ನು ಚಿಂಪಾಂಜಿ ಮನುಷ್ಯರಂತೆ ಎತ್ತಿ ಆಡಿಸುತ್ತದೆ. ಈ ವಿಡಿಯೋ ತಾಯಿ ಹೃದಯವನ್ನು ಮಿಡಿಯುವಂತೆ ಮಾಡಿದೆ. ಚಿಂಪಾಂಜಿಗಳು ಪ್ರಾಣಿಗಳೇ ಆಗಿದ್ದರೂ ಅದರ ವರ್ತನೆ ಕೆಲವೊಂದು ಬಾರಿ ಮನುಷ್ಯರಂತೆ ಇರುತ್ತದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ.
ವಿಶೇಷವಾಗಿ ಚಿಂಪಾಂಜಿ ತನ್ನ ಮಗುವಿಗೆ ಮನುಷ್ಯರಂತೆ ಮುತ್ತಿಡುತ್ತದೆ. ಎತ್ತಿಕೊಂಡು ಅಪ್ಪಿಕೊಳ್ಳುತ್ತದೆ. ಇದೆಲ್ಲವೂ ಅದದ್ದು ವಿಂಡೋ ಬಳಿ ಕುಳಿತಿದ್ದ ಮಹಿಳೆಯನ್ನು ನೀಡಿ. ಚಿಂಪಾಂಜಿ ಕೆಲವೊಮ್ಮೆ ಮನುಷ್ಯರು ಏನು ಮಾಡುತ್ತಾರೋ ಅದನ್ನೇ ಮಾಡುತ್ತದೆ. ಆದರೆ ತಾಯಿ ಪ್ರೀತಿ ತೋರಿಸಬೇಕು ಅನ್ನೋದು ಯಾರೂ ಕೂಡ ಹೇಳಿ ಕೊಟ್ಟಾಗ ಬರುವಂತದ್ದಲ್ಲ. ಹಾಗೆ ತಾಯಿ ಮಗುವನ್ನು ನೋಡಿದಾಗ ಚಿಂಪಾಂಜಿಗೆ ತನ್ನ ಮಗು ನೆನಪಾಗಿದೆ. ತಕ್ಷಣ ಅದನ್ನು ತಂದು ಅದೇ ವಿಂಡೋ ಬಳಿ ನಿಂತು ಅದಕ್ಕೆ ತಾಯಿ ಪ್ರೀತಿ ತೋರಿದೆ. ಇದು ನಿಜಕ್ಕೂ ನೋಡಗರ ಮನ ಗೆದ್ದಿದೆ.












Click it and Unblock the Notifications